ಪಂಚಮಹಾಭೂತಗಳಾದ ಗಾಳಿ (ಆಮ್ಲಜನಕ), ಅಗ್ನಿ (ಸೂರ್ಯನ ಬೆಳಕು), ನೀರು, ಭೂಮಿ (ಮಣ್ಣು) ಹಾಗೂ ಆಕಾಶ (ಸ್ಥಳ) ಇವು ಶುದ್ಧವಿದ್ದಷ್ಟು ಸಕಲ ಜೀವಿಗಳಿಗೆ ಆದರ್ಶ ಆರೋಗ್ಯ ಹಾಗೂ ದೀರ್ಘಾಯುಷ್ಯವು ಪ್ರಾಪ್ತಿಯಾಗುತ್ತದೆ. ಪಂಚಮಹಾಭೂತಗಳ ಶುದ್ಧತೆಗೆ ಅನುಗಣವಾಗಿ ಪರಿಸರ ವ್ಯವಸ್ಥೆಯು ಸಕಲ ಜೀವರಾಶಿಗಳಿಗೆ ಬಾಳಿ ಬದುಕಲು ಬೆಂಬಲವಾಗಿ ನಿಲ್ಲುತ್ತದೆ. ಪಂಚಮಹಾಭೂತಗಳು ಅಶುದ್ಧವಾದ್ದಷ್ಟು ಪರಿಸರ ವ್ಯವಸ್ಥೆ ಕೆಟ್ಟು ಹೋಗುತ್ತದೆ ಹಾಗೂ ಇದರಿಂದ ನಾವು ಅನಾರೋಗ್ಯದಿಂದ ಬಳಲಬೇಕಾಗುತ್ತದೆ ಹಾಗೂ ಅಲ್ಪಾಯುಷಿಗಳಾಗುತ್ತೇವೆ ಎಂಬುದು ವಾಸ್ತವದ ಸಂಗತಿ. ಸಧ್ಯದ ಪರಿಸ್ಥಿತಿಯಲ್ಲಿ ಪರಿಸರ ಮಾಲಿನ್ಯವು ಉತ್ತುಂಗದ ಹಂತವನ್ನು ತಲುಪಿದೆ. ಕುಡಿಯಲು ಸಿಹಿನೀರು ಇಲ್ಲ. ನೀರಿನಲ್ಲಿ ಕರಗಿದ ಒಟ್ಟು ಘನ ವಸ್ತುಗಳ (Total dissolved solids) ಪ್ರಮಾಣ ಅಸಮತೋಲನವಾಗಿದೆ. ಹೀಗಾಗಿ ನಾವು ಅಶುದ್ಧವಾದ ನೀರನ್ನು ಕುಡಿಯುತ್ತಿದ್ದೇವೆ. ಇದೆ ರೀತಿ ಕೃಷಿ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಹಾಗೂ ಬೆಳೆಯುವ ಎಲ್ಲ ಬೆಳೆಗೂ ರಾಸಾಯನಿಕಯುಕ್ತ ಕ್ರಿಮಿನಾಶಕಗಳನ್ನು ಚಿಂಪಡಿಸಲಾಗುತ್ತಿದೆ. ಹೀಗಾಗಿ ತಿನ್ನುವ ಆಹಾರವು ಆರೋಗ್ಯಕರವಾಗಿಲ್ಲ. ಇನ್ನು ಓಝೋನ್ ಪದರದಲ್ಲಿ ರಂದ್ರಗಳಾಗಿರುವುದರಿಂದ ಸೂರ್ಯನ ಬೆಳಕಿನಲ್ಲಿ ವಿಕಿರಣಗಳು ತುಂಬಿಕೊಂಡಿವೆ. ಇನ್ನು ವಾಯು ಮಾಲಿನ್ಯದ ಕಾರಣಕ್ಕಾಗಿ ದಿನದಿಂದ ದಿನಕ್ಕೆ ಭೂಮಿಯ ಪರಿಸರ ವ್ಯವಸ್ಥೆಯಲ್ಲಿರುವ ಆಮ್ಲಜನಕದ ಶೇಕಡಾವಾರು ಕಡಿಮೆ ಆಗುತ್ತಿರುವುದು ಮನುಕುಲಕ್ಕೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಿಗೂ ಅತ್ಯಂತ ಆಘಾತಕಾರಿ ಆದದ್ದು. ಇದೇ ರೀತಿ ವಾಯು ಮಾಲಿನ್ಯ ಮುಂದುವರೆದರೆ ಪರಿಸರದಲ್ಲಿನ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿ ಜೀವಿಗಳು ಬಾಳಿ ಬದುಕಲು ಬೇಕಾಗುವ ಪರಿಸರ ವ್ಯವಸ್ಥೆ ಕೆಟ್ಟು ಹೋಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹೀಗಿರುವಾಗ ಆದರ್ಶವಾದ ಆರೋಗ್ಯ ಹೇಗೆ ತಾನೇ ಲಭಿಸಲು ಸಾಧ್ಯ? ಬ್ಲಡ್ ಪ್ರೆಶರ್, ಶುಗರ್, ಪೈಲ್ಸ್, ಹಾರ್ಟ್ ಅಟ್ಟ್ಯಾಕ್, ಕ್ಯಾನ್ಸರ್, ಕಿಡ್ನಿ ವೈಫಲ್ಯ, ಪಾರ್ಶ್ವವಾಯು ಹಾಗೂ ಇವುಗಳೆಲ್ಲವುಗಳಂತೆ ಪಲ್ಮನರಿ ಫೈಬ್ರೋಸಿಸ್ ಅಥವಾ ಶ್ವಾಸಕೋಶದ ಫೈಬ್ರೋಸಿಸ್ ಎನ್ನುವ ಮತ್ತೊಂದು ಕಾಯಿಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಪಲ್ಮನರಿ ಫೈಬ್ರೋಸಿಸ್ ಕಾಯಿಲೆಯು ಅಸ್ತಮಾದ ಹಾಗೆ ಸಮಾನರೂಪತೆಯನ್ನು ಹೊಂದಿದ ಕಾಯಿಲೆ. ವಾಯು ಮಾಲಿನ್ಯ ಹಾಗೂ ವಾಯು ಮಾಲಿನ್ಯದಿಂದ ಭೂಗ್ರಹದ ಪರಿಸರದಲ್ಲಿ ಇರುವ ಆಮ್ಲಜನಕದ ಶೇಕಡಾವಾರು ಕಡಿಮೆಯಾಗಿರುವುದೇ ಈ ಪಲ್ಮನರಿ ಫೈಬ್ರೋಸಿಸ್ ಕಾಯಿಲೆಗೆ ಮುಖ್ಯ ಕಾರಣ ಎನ್ನಲಾಗಿದೆ. ಅಸ್ತಮಾ ಕಾಯಿಲೆಗೆ ಇರುವ ಎಲ್ಲಾ ಲಕ್ಷಣಗಳು ಈ ಪಲ್ಮನರಿ ಫೈಬ್ರೋಸಿಸ್ ಕಾಯಿಲೆಗೆ ಇರುತ್ತವೆ. ಅಸ್ತಮಾ ಕಾಯಿಲೆಗೆ ಔಷಧಿ ಇದ್ದರೆ ಈ ಪಲ್ಮನರಿ ಫೈಬ್ರೋಸಿಸ್ ಕಾಯಿಲೆಗೆ ಅಲೋಪತಿ ಚಿಕಿತ್ಸಾ ವಿಧಾನದಲ್ಲಿ ಔಷಧಿ ಇಲ್ಲ. ಭಾರತದಲ್ಲಿನ ಹತ್ತು ಲಕ್ಷ ಪುರುಷರಲ್ಲಿ ಸುಮಾರು ಅರವತ್ನಾಲ್ಕು ಪುರುಷರು ಪಲ್ಮನರಿ ಫೈಬ್ರೋಸಿಸ್ ಕಾಯಿಲೆಗೆ ತುತ್ತಾಗಿ ಸವನ್ನೊಪ್ಪುತ್ತಿದ್ದಾರೆ ಹಾಗೂ ಅದೇ ರೀತಿ ಹತ್ತು ಲಕ್ಷ ಮಹಿಳೆಯರಲ್ಲಿ ಸುಮಾರು ಐವತ್ತೆಂಟು ಮಹಿಳೆಯರು ಈ ಪಲ್ಮನರಿ ಫೈಬ್ರೋಸಿಸ್ ರೋಗಕ್ಕೆ ತುತ್ತಾಗಿ ಸವನ್ನೊಪ್ಪುತ್ತಿದ್ದಾರೆ. ಇನ್ನು ಒರದಿ ಒಂದರ ಪ್ರಕಾರ ಅಮೆರಿಕ, ಇಂಗ್ಲೆಂಡ್ ಹಾಗೂ ಇನ್ನುಳಿದ ಹಲವು ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಜನರು ಪಲ್ಮನರಿ ಫೈಬ್ರೋಸಿಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಡೀ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 40 ಸಾವಿರ ಜನರು ಪಲ್ಮನರಿ ಫೈಬ್ರೋಸಿಸ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಅಸ್ತಮಾ ಹಾಗೂ ಶ್ವಾಸಕೋಶದ ಫೈಬ್ರೋಸಿಸ್ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಇತ್ತೀಚಿನ ಹತ್ತು ಹದಿನೈದು ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಕೇವಲ ಹತ್ತು ಹದಿನೈದು ವರ್ಷಗಳಿಗಿಂತ ಮೊದಲು ಆಸ್ಪತ್ರೆಗಳಲ್ಲಿ ಪಲ್ಮನರಿ ವಿಭಾಗ ಎಂಬುದೇ ಇರಲಿಲ್ಲ. ಅಸ್ತಮಾ ಹಾಗೂ ಶ್ವಾಸಕೋಶದ ಫೈಬ್ರೋಸಿಸ್ ರೋಗದಿಂದ ಬಳಲುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಕಾರಣಕ್ಕೆ ಪ್ರಸ್ತುತವಾಗಿ ಅಸ್ತಮಾ ಹಾಗೂ ಶ್ವಾಸಕೋಶದ ಫೈಬ್ರೋಸಿಸ್ ವಿಭಾಗವನ್ನು ಆಸ್ಪತ್ರೆಗಳಲ್ಲಿ ಹೊಸದಾಗಿ ತೆರೆಯಬೇಕಾಗುತ್ತಿದೆ.

ಸಾವಿರ ವರ್ಷಗಳ ಹಿಂದೆ ಹೋದರೆ ಪರಿಸರದಲ್ಲಿ ಆಮ್ಲಜನಕದ ಪ್ರಮಾಣ ಸುಮಾರು 26 ಪರ್ಸೆಂಟ್ ಇತ್ತು. ಆದರೆ ನಿರಂತರವಾದ ವಾಯು ಮಾಲಿನ್ಯದ ಕಾರಣಕ್ಕೆ ಹಾಗೂ ದಟ್ಟವಾದ ಕಾಡುಗಳನ್ನು ನಾಶ ಮಾಡಿರುವ ಕಾರಣಕ್ಕೆ 26 ಪರ್ಸೆಂಟ್ ಇದ್ದ ಆಮ್ಲಜನಕವು ಈಗ 21 ಪರ್ಸೆಂಟಿಗೆ ಕುಸಿದಿದೆ! ಈಗ ಇರುವ 21 ಪರ್ಸೆಂಟ್ ಏನಾದ್ರೂ 19.5 ಪರ್ಸೆಂಟಿಗಿಂತ ಕೆಳಕ್ಕೆ ಕುಸಿದರೆ ಇಡೀ ಭೂ ಗ್ರಹಕ್ಕೆ ಆಮ್ಲಜನಕದ ಕೊರತೆ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಪ್ರಸ್ತುತವಾಗಿ ಪರಿಸರದಲ್ಲಿ ಆಮ್ಲಜನಕದ ಪ್ರಮಾಣ ಜಸ್ಟ್ ಬಾರ್ಡರ್ ಲೆವೆಲ್ ಇದೆ! ವಾಯು ಮಾಲಿನ್ಯ ಹಾಗೂ ಕಾಡುಗಳ ನಾಶ ಹೀಗೆ ನಿರಂತರವಾಗಿ ಮುಂದುವರೆದರೆ ಇನ್ನೂ ಕೆಲವೇ ವರ್ಷಗಳಲ್ಲಿ ಭೂಮಿಯ ಮೇಲೆ ಆಮ್ಲಜನಕದ ಪ್ರಮಾಣವೂ 19.5 ಪರ್ಸೆಂಟಿಗಿಂತ ಕಡಿಮೆಯಾಗುತ್ತದೆ ಹಾಗೂ ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿರುವ ರೀತಿ ಆಮ್ಲಜನಕದ ಕೊರತೆಯಿಂದ ಜೀವಿಗಳು ಬಾಳಿ ಬದುಕಲು ಬೇಕಾಗಿರುವ ವ್ಯವಸ್ಥೆ ಕೆಟ್ಟು ಹೋಗುತ್ತದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕೆಲವು ಜೀವ ಸಂಕುಲಕ್ಕೆ 21 ಪರ್ಸೆಂಟೇಜ್ ಕಿಂತಲು ಹೆಚ್ಚಿನ ಪ್ರಮಾಣದ ಆಮ್ಲಜನಕ ಬೇಕಾಗುತ್ತಿತ್ತು. ಆದರೆ ಆಮ್ಲಜನಕದ ಪರ್ಸೆಂಟೇಜ್ 26 ರಿಂದ 21 ಕೆ ಇಳಿದಿದೆ. ಹೀಗಾಗಿ ಅನೇಕ ಬಗೆಯ ಜೀವ ಸಂಕುಲಗಳು ಈ ಭೂಮಿ ಮೇಲಿನಿಂದ ಕಣ್ಮರೆ ಕೂಡ ಆಗಿವೆ. ಪ್ರಸ್ತುತವಾಗಿ ಆಗುತ್ತಿರುವ ವಾಯು ಮಾಲಿನ್ಯವನ್ನು ಗಮನಿಸಿದರೆ ಬಹುಶಃ ಭವಿಷ್ಯದಲ್ಲಿ ಆಗುವ ಈ ಅನಾಹುತವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲವೆಂದು ಅನಿಸುತ್ತಿದೆ. ಇನ್ನು ಅತಿಯಾದ ಸಿಗರೇಟ್ ಸೇವನೆ ಮಾಡುವುದರಿಂದ ಹಾಗೂ ಕಾರ್ಬನ್ ಡೈಆಕ್ಸೈಡ್ ಹೆಚ್ಚು ಇರುವ ಸ್ಥಳಗಳಲ್ಲಿ ವಾಸಿಸುವುದರಿಂದ ಪಲ್ಮನರಿ ಫೈಬ್ರೋಸಿಸ್ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಹತ್ತಾರು ಸಾವಿರ ವಾಹನಗಳು ಚಲಿಸುವ ರಸ್ತೆಯ ಮಧ್ಯ ನಿಂತು ಕಾರ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರು ಅಸ್ತಮಾ ಹಾಗೂ ಶ್ವಾಸಕೋಶದ ಫೈಬ್ರೋಸಿಸ್ ಅಥವಾ ಪಲ್ಮನರಿ ಫೈಬ್ರೋಸಿಸ್ ಕುರಿತು ಗಂಭೀರವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲೇಬೇಕು. ಟ್ರಾಫಿಕ್ ಪೊಲೀಸರು ಪ್ರತಿ ವರ್ಷಕ್ಕೆ ಒಂದು ಬಾರಿ ತಮ್ಮ ಶ್ವಾಸಕೋಶಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇನ್ನೂ ಕೆಮಿಕಲ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ರಬ್ಬರ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ದೀರ್ಘ ಕಾಲದವರೆಗೆ ಕೆಮಿಕಲ್ ವಾಸನೆಗಳನ್ನು ಗ್ರಹಿಸುವುದರಿಂದ, ಡಸ್ಟ್ ಇರುವ ಪರಿಸರದಲ್ಲಿ ದೀರ್ಘ ಕಾಲದವರೆಗೆ ಕೆಲಸ ನಿರ್ವಹಿಸುವ ಕಾರಣಕ್ಕೆ ಮತ್ತು ಊದಿನ ಕಡ್ಡಿ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ, ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುವವರಿಗೆ ಪಲ್ಮನರಿ ಫೈಬ್ರೋಸಿಸ್ ಮತ್ತು ಅಸ್ತಮಾ ಖಾಯಿಲೆ ಬರುವ ಸಾಧ್ಯತೆ ತುಂಬಾನೇ ಹೆಚ್ಚಿರುತ್ತದೆ. ಭಾರತಕ್ಕೆ ಬಂದ ಪರ್ಫ್ಯೂಮ್ ಹಾಗೂ ಸೆಂಟ್ ತಯಾರಿಸುವ ವಿದೇಶಿ ಕಂಪನಿಗಳು ಅನೇಕ ವಿಚಿತ್ರ ರೀತಿಯ ವಾಸನೆ ಉಳ್ಳ ಫಾರಿನ್ ಬ್ರಾಂಡ್ ಪರ್ಫ್ಯೂಮ್ಗಳನ್ನು ಹಾಗೂ ಸೆಂಟ್ಗಳನ್ನು ನಮಗೆ ಪರಚಯಿಸಿವೆ. ಅಂತಹ ಪರ್ಫ್ಯೂಮ್ ಹಾಗೂ ಸೆಂಟ್ಗಳಿಂದ ಆಕರ್ಷಿತರಾದ ಹಲವರು ಬೆಳ್ಳಂ ಬೆಳಿಗ್ಗೆ ಎದ್ದು ಸ್ನಾನ ಮಾಡದೆ ಕೈ ಮೇಲೆ ಎಬ್ಬಿಸಿ ಬಗಲಿಗೆ ಹಾಗೂ ಬಟ್ಟೆಯ ತುಂಬ ಕೇವಲ ಪರ್ಫ್ಯೂಮ್ ಅಥವಾ ಸೇಂಟ್ ಸ್ಪ್ರೇ ಮಾಡಿಕೊಂಡು ಕೆಲಸಕ್ಕೆ ಹೊರಡುತ್ತಾರೆ. ಅಂತಹ ಪರ್ಫ್ಯೂಮಗಳ ಅಥವಾ ಸೆಂಟ್ಗಳ ವಿಚಿತ್ರ ವಾಸನೆಯಿಂದ ಶ್ವಾಸಕೋಶದ ಒಳಗೆ ಇರುವ ಅತ್ಯಂತ ಕ್ಲಿಷ್ಟಕರ ರಚನೆಗೆ ವಾಸಿ ಮಾಡಲಾಗದಷ್ಟು ಹಾನಿ ಉಂಟಾಗುತ್ತದೆ ಎಂಬುದನ್ನು ಪರ್ಫ್ಯೂಮ್ ಪ್ರಿಯರು ಜ್ಞಾಪಕದಲ್ಲಿಟ್ಟುಕೊಳ್ಳುವುದು ಉತ್ತಮ. ಈ ರೀತಿ ಶ್ವಾಸಕೋಶದ ಒಳಗಿರುವ ಅತ್ಯಂತ ಕ್ಲಿಷ್ಟಕರ ರಚನೆಗೆ ಹಾನಿ ಆಗುವುದರಿಂದ ಪಲ್ಮನರಿ ಫೈಬ್ರೋಸಿಸ್, ಅಸ್ತಮಾ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲಾಬೇಕಾಗುತ್ತದೆ.
ಬ್ರಹ್ಮಾಂಡದಲ್ಲಿರುವ ಅತ್ಯಂತ ಕ್ಲಿಷ್ಟಕರ ರಚನೆಗಳಲ್ಲಿ ಶ್ವಾಸಕೋಶದ ರಚನೆ ಕೂಡ ಒಂದು. ಶ್ವಾಸಕೋಶದ ಒಳಗಡೆ ದ್ರಾಕ್ಷಿ ಗೊಂಚಲುದಂತಿರುವ ಮೈಕ್ರೋಸ್ಕೋಪಿಕ್ ಏರ್ ಬ್ಯಾಗ್ಸ್ ಇವೆ. ಕನ್ನಡದಲ್ಲಿ ಇವುಗಳಿಗೆ ಗಾಳಿ ಚೀಲಗಳು ಎಂದು ಹೇಳಬಹುದು. ಶ್ವಾಸಕೋಶದ ಒಳಗಿರುವ ಈ ಮೈಕ್ರೋಸ್ಕೋಪಿಕ್ ಏರ್ ಬ್ಯಾಗ್ಸ್ಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಲ್ವಿಒಲೈ ಎಂದು ಕರೆಯುತ್ತಾರೆ. ಉಸಿರಾಟ ಮಾಡುವಾಗ ಉಚ್ಛ್ವಾಸದ ಸ್ಥಿತಿಯಲ್ಲಿ ಶ್ವಾಸಕೋಶದೊಳಗಿರುವ ಅಲ್ವಿಒಲೈ ಎಂದು ಕರೆಯುವ ಈ ಏರ್ ಬ್ಯಾಗ್ಸ್ ವಿಕಸನ ಹೊಂದುತ್ತವೆ ಹಾಗೂ ನಿಶ್ವಾಸದ ಸ್ಥಿತಿಯಲ್ಲಿ ಆಕುಂಚನ ಹೊಂದುತ್ತವೆ. ಶ್ವಾಸಕೋಶದ ಒಳಗಡೆ ಸರಾಸರಿ 480 ಮಿಲಿಯನ್ ಅಲ್ವಿಒಲೈಗಳು ಇರುತ್ತವೆ! ಎರಡೂ ಶ್ವಾಸಕೋಶಗಳ ಮಧ್ಯ ಭಾಗದಿಂದ ಸ್ವಲ್ಪ ಎಡಕ್ಕೆ ಹೃದಯದ ವಿನ್ಯಾಸವಿದೆ ಹಾಗೂ ಹೃದಯವು ಎಡಭಾಗದ ಶ್ವಾಸಕೋಶಕ್ಕೆ ಹೊಂದಿಕೊಂಡತ್ತಿದ್ದು ಸ್ವಲ್ಪ ಎಡಬಾಗಕ್ಕೆ ವಾಲಿಕೊಂಡಿದೆ ಎಂದು ಹೇಳಬಹುದು. ಹೀಗಾಗಿ ಎಡಭಾಗದ ಶ್ವಾಸಕೋಶಕವು ಬಲಭಾಗದ ಶ್ವಾಸಕೋಶಕ್ಕಿಂತ ಸ್ವಲ್ಪ ಚಿಕ್ಕದಾಗಿರುತ್ತದೆ. ಹೃದಯ ಮತ್ತು ಶ್ವಾಸಕೋಶಗಳು ಪರಸ್ಪರ ಅತ್ಯಂತ ಕ್ಲಿಷ್ಟಕರ ವಿನ್ಯಾಸವನ್ನು ಹೊಂದಿವೆ. ದೇಹದಲ್ಲಿ ಇರುವ ಪ್ರತಿ ರಕ್ತದ ಕಣ, ಅಂಗಗಗಳು ಹಾಗೂ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಲು ಪ್ರತಿ ಕ್ಷಣ ಕ್ಷಣಕ್ಕೂ ನಿರಂತರವಾದ ಆಮ್ಲಜಕದ ಸರುಬುರಾಜ ಬೇಕಾಗುತ್ತದೆ. ಹೃದಯ ಹಾಗೂ ಶ್ವಾಸಕೋಶಗಳು ಪರಸ್ಪರ ಕಾರ್ಯನಿರ್ವಹಿಸುವ ಮೂಲಕ ಆಮ್ಲಜನಕವನ್ನು ದೇಹದ ನರ ನಾಡಿಗಳಿಗೆ ಸರಬುರಜು ಮಾಡುತ್ತವೆ. ಲೆಫ್ಟ್ ವೆಂಟ್ರಿಕಲ್, ರೈಟ್ ವೆಂಟ್ರಿಕಲ್ ಹಾಗೂ ಲೆಫ್ಟ್ ಆರಿಕಲ್ ಮತ್ತು ರೈಟ್ ಆರಿಕಲ್ ಎಂಬ 4 ಚೇಂಬರಗಳು ಒಟ್ಟುಗುಡುವ ಮೂಲಕ ಹೃದಯದ ರಚನೆಯಾಗಿದೆ. ದೇಹದಲ್ಲಿರುವ ಅಶುದ್ಧ ರಕ್ತವು ಹೃದಯದ ರೈಟ್ ಆರಿಕಲ್ ಒಳಗೆ ಬಂದು ನಂತರ ರೈಟ್ ವೆಂಟ್ರಿಕಲ್ ಮೂಲಕ ಶುದ್ಧೀಕರಣಕ್ಕೆಂದು ಶ್ವಾಸಕೋಶದೊಳಗೆ ಹೋಗುತ್ತದೆ. ಹೃದಯದ ರೈಟ್ ವೆಂಟ್ರಿಕಲದಿಂದ ಹೊರಗಡೆ ಬಂದ ರಕ್ತವು ಶ್ವಾಸಕೋಶದೊಳಗಿರುವ 480 ಮಿಲಿಯನ್ ಅಲ್ವಿಒಲೈಗಳ ಮೂಲಕ ಹರಿದು ಹೋಗುವಾಗ ರಕ್ತದಲ್ಲಿ ಇರುವ ಕಾರ್ಬನ್ ಡೈಆಕ್ಸೈಡ್ ವಿಸರ್ಜನೆಗೊಂಡು ರಕ್ತವು ಆಮ್ಲಜನಕಗೊಳ್ಳುತ್ತದೆ. ಹೀಗೆ ಆಮ್ಲಜನಕಗೊಂಡ ರಕ್ತವು ಹೃದಯದ ಲೆಫ್ಟ್ ಆರಿಕಲ್ ಮೂಲಕ ಹಾಯ್ದು ಲೆಫ್ಟ್ ವೆಂಟ್ರಿಕಲಗೆ ತಲುಪುತ್ತದೆ ಹಾಗೂ ಲೆಫ್ಟ್ ವೆಂಟ್ರಿಕಲದಿಂದ ಹೊರ ಬರುವ ರಕ್ತವು ರಕ್ತ ನಾಳಗಳ ಮೂಲಕ ಇಡೀ ದೇಹದ ತುಂಬಾ ಹರಿಯುತ್ತದೆ. ಲೆಫ್ಟ್ ವೆಂಟ್ರಿಕಲದಿಂದ ಹೊರ ಬರುವ ರಕ್ತದ ಒತ್ತಡವನ್ನು ಸಿಸ್ಟೊಲಿಕ್ ಎಂದು ಕರೆಯುತ್ತಾರೆ ಹಾಗೂ ಅದು 120 mmhg ಇರ್ಬೇಕು ಮತ್ತು ಹೃದಯದ ರೈಟ್ ಆರಿಕಲ್ ಒಳಗೆ ಬರುವ ರಕ್ತದ ಒತ್ತಡವನ್ನು ಡಯಾಸ್ಟೊಲಿಕ್ ಎದು ಕರೆಯುತ್ತಾರೆ ಹಾಗೂ ಈ ಡಯಾಸ್ಟೊಲಿಕ್ ಒತ್ತಡವು 80mmhg ಇರ್ಬೇಕು.

ಹೃದಯದ ರೈಟ್ ವೆಂಟ್ರಿಕಲದಿಂದ ಹೊರಗಡೆ ಬಂದ ರಕ್ತವು ಆಮ್ಲಜನಕಗೊಳ್ಳುವುದಕ್ಕಾಗಿ ಶ್ವಾಸಕೋಶದೊಳಗಿರುವ 480 ಮಿಲಿಯನ್ ಅಲ್ವಿಒಲೈಗಳ ಮೂಲಕ ಹರಿದು ಹೋಗುವಾಗ ಉಸಿರಾಟಕ್ಕೆ ತಕ್ಕಂತೆ ಅಂದ್ರೆ ಉಸಿರನ್ನು ಒಳಗೆ ಎಳೆದುಕೊಳ್ಳುವಾಗ ಅಲ್ವಿಒಲೈಗಳು ವಿಕಸನ ಹೊಂದಬೇಕು ಹಾಗೂ ಉಸಿರನ್ನು ಹೊರಕ್ಕೆ ಹಾಕುವಾಗ ಆಕುಂಚನ ಹೊಂದಬೇಕು. ಆದರೆ ಈ ಅಲ್ವಿಒಲೈಗಳ ವಿಕಸನ ಮತ್ತು ಆಕುಂಚನದ ಪ್ರಕ್ರಿಯೆ ಸರಾಗವಾಗಿ ಆಗದಿದ್ದರೆ ಅದನ್ನು ಪಲ್ಮನರಿ ಫೈಬ್ರೋಸಿಸ್ ಕಾಯಿಲೆ ಅಥವಾ ಶ್ವಾಸಕೋಶದ ಫೈಬ್ರೋಸಿಸ್ ಎಂದು ಹೇಳಲಾಗುತ್ತದೆ. ಶ್ವಾಸಕೋಶಗಳಲ್ಲಿರುವ ಅಲ್ವಿಒಲೈಗಳ ಆಕುಂಚನ ಮತ್ತು ವಿಕಸನ ಸರಿಯಾಗಿ ಆಗದಿದ್ದಾಗ ದೇಹಕ್ಕೆ ಆಮ್ಲಜನಕದ ಪೂರೈಕೆ ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ಉಸಿರಾಟದ ವೇಗ ಹೆಚ್ಚುತ್ತದೆ ಹಾಗೂ ದಮ್ಮು ಉಲ್ಬಣಗೊಳ್ಳತ್ತದೆ. ಸಾಮಾನ್ಯವಾಗಿ ಆಮ್ಲಜನಕದ ಮಟ್ಟ 94 ಇರ್ಬೇಕು. ಆದರೆ ಪಲ್ಮನರಿ ಫೈಬ್ರೋಸಿಸ್ ರೋಗಕ್ಕೆ ತುತ್ತದಾಗ ಆಮ್ಲಜನಕದ ಮಟ್ಟ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಾ ಆಗುತ್ತಾ ವಿಪರೀತ ದಮ್ಮು ಕಾಣಿಸಿಕೊಳ್ಳುತ್ತದೆ ಹಾಗೂ ಕೊನೆಗೆ ಆಮ್ಲಜನಕದ ಮಟ್ಟ 60 ಕ್ಕಿಂತ ಕಡಿಮೆ ಆಗುತ್ತದೆ ಮತ್ತು ಆಗ ರೋಗಿ ಕೋಮಾ ಸ್ಥಿತಿಗೆ ತಲುಪಬೇಕಾಗಿದೆ. ಪಲ್ಮನರಿ ಫೈಬ್ರೋಸಿಸ್ ರೋಗಕ್ಕೆ ತುತ್ತದಾ ರೋಗಿಯು ನಾಲ್ಕು ಹಂತದಲ್ಲಿ ರೋಗದಿಂದ ಬಳಲಬೇಕಾಗುತ್ತದೆ. ಮೊದಲು ಮತ್ತು ಎರಡನೆಯ ಹಂತದಲ್ಲಿ ಇರುವ ಪಲ್ಮನರಿ ಫೈಬ್ರೋಸಿಸ್ ರೋಗವನ್ನು ಸರಿಯಾದ ಔಷಧಿ, ಆಹಾರ ಪದ್ಧತಿ ಹಾಗೂ ಜೀವನ ಕ್ರಮ ಅಳವಡಿಸಿಕೊಳ್ಳುವ ಮೂಲಕ ಗುಣಪಡಿಸಲು ಸಾಧ್ಯವಿದೆ. ಅಕಸ್ಮಾತ್ ರೋಗವು ಉಲ್ಬಣವಾಗಿ ಮೂರನೇ ಹಂತವನ್ನು ತಲುಪಿದರೆ ಮತ್ತೆ ಮರಳಿ ಗುಣಮುಖವಾಗಲು ಸಾಧ್ಯವಾಗದೆ ರೋಗವು ನಾಲ್ಕನೇ ಹಂತವನ್ನು ತಲುಪಿ ಬಿಡುತ್ತದೆ. ಆದ್ದರಿಂದ ಈ ರೋಗಕ್ಕೆ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ. ಪಲ್ಮನರಿ ಫೈಬ್ರೋಸಿಸ್ ರೋಗದ ಮೊಟ್ಟ ಮೊದಲ ಲಕ್ಷಣ ಅಂದ್ರೆ ನಿದ್ರೆಯಲ್ಲಿ ಉಸಿರು ಕಟ್ಟಿದಂತೆ ಆಗಿ ಒಮ್ಮಿಂದೊಮ್ಮೆಲೆ ಹಾಸಿಗೆಯಿಂದ ಕೆಮ್ಮುತ್ತಾ ಎದ್ದು ಬಿಡುವುದು ಹಾಗೂ ಉಸಿರಾಟದ ವೇಗ ಹೆಚ್ಚುತ್ತದೆ. ಸಣ್ಣ ಪುಟ್ಟ ಕೆಲಸಕ್ಕೆ ದಮ್ಮು ಕಾಣಿಸಿಕೊಳ್ಳುತ್ತದೆ. ಹೆಚ್ಚಿಗೆ ಊಟವನ್ನೂ ಕೂಡ ಮಾಡುವ ಹಾಗಿಲ್ಲ. ಹೆಚ್ಚಿಗೆ ಊಟಾವನ್ನು ಮಾಡಿದರೆ ಕೆಲವರಿಗೆ ತೀವ್ರ ಕೆಮ್ಮು ಆರಂಭವಾದರೆ ಇನ್ನೂ ಕೆಲವರಿಗೆ ಉಸಿರು ಕಟ್ಟಿದಂತೆ ಆಗುತ್ತದೆ. ಮಲಗಿ ನಿದ್ರೆ ಮಾಡ್ಬೇಕು ಅಂದ್ರೆ ಒಮ್ಮೊಮ್ಮೆ ಉಸಿರು ಕಟ್ಟಿದ ಅನುಭವವಾದಂತಾಗುತ್ತದೆ ಹಾಗೂ ತೀವ್ರವಾದ ಕೆಮ್ಮು ಕಾಡುತ್ತದೆ. ಇಂಥ ಲಕ್ಷಣ ಕಂಡುಬಂದಲ್ಲಿ ಮುನ್ನೆಚ್ಚರಿಕಾ ಕ್ರಮಕ್ಕಾಗಿ ಆಸ್ಪತ್ರೆಯಲ್ಲಿ ಇರುವ ಪಲ್ಮನರಿ ವಿಭಾಗಕ್ಕೆ ಹೋಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲೇಬೇಕು ಹಾಗೂ ಯೋಗ, ಪ್ರಾಣಾಯಮ ಹಾಗೂ ಧ್ಯಾನವನ್ನು ಅನುಷ್ಠಾನಗೊಳಿಸಿ ಸರಿಯಾದ ಆಹಾರ ಪದ್ಧತಯನ್ನು ಅಳವಡಿಸಿಕೊಂಡು ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಬಿಟ್ರೆ ಪ್ರಾಥಮಿಕ ಹಂತದಲ್ಲಿರುವ ಪಲ್ಮನರಿ ಫೈಬ್ರೋಸಿಸ್ ರೋಗವು ಪೂರ್ತಿಯಾಗಿ ಗುಣಮುಖವಾಗತ್ತದೆ. ನಿದ್ರೆಯಲ್ಲಿ ಉಸಿರು ಕಟ್ಟಿದಂತೆ ಆಗುವ ಲಕ್ಷಣವನು ನಿರ್ಲಕ್ಷಿಸಿದರೆ ಮುಂದೆ ತೀವ್ರವಾದ ಕೆಮ್ಮು ಮತ್ತು ಕಫ ಕಾಣಿಸಿಕೊಳ್ಳುತ್ತದೆ. ಪಲ್ಮನರಿ ಫೈಬ್ರೋಸಿಸ್ ರೋಗದಿಂದ ಬಳಲುವ ರೋಗಿಯ ಕೆಮ್ಮು ಎಷ್ಟು ತೀವ್ರವಾಗಿರುತ್ತದೆ ಅಂದ್ರೆ, ಅಕ್ಕಪಕ್ಕ ಕುಳಿತವರ ಕಿವಿ ತಮಟೆ ಹರಿದು ಹೋಗುವ ಹಾಗೆ ರೋಗಿಯು ಒಂದೇ ಒಂದು ಕ್ಷಣ ಬಿಡುವಿಲ್ಲದೆ ನಿರಂತರವಾಗಿ ಕೆಮ್ಮುತ್ತಾನೆ. ರಾತ್ರೆ ಹೊತ್ತು ಕೆಮ್ಮು ಮತ್ತು ಕಫ ಇನ್ನೂ ಹೆಚ್ಚು ಉಲ್ಬಣಗೊಳ್ಳುತ್ತವೆ ಹಾಗೂ ಇದರಿಂದ ಉಸಿರು ಕಟ್ಟಿದಂತೆ ಆಗುತ್ತಿರುತ್ತದೆ. ಇಡೀ ರಾತ್ರಿ ಸ್ವಲ್ಪವೂ ಕೂಡ ಮಲಗಲು ಸಾಧ್ಯವೇ ಆಗುವುದಿಲ್ಲ. ಮಲಗಿದ ತಕ್ಷಣ ತೀವ್ರವಾದ ಕೆಮ್ಮು ಕಾಣಿಸಿಕೊಳ್ಳುತ್ತದೆ ಹೀಗಾಗಿ ಇಡೀ ರಾತ್ರಿ ಹಾಸಿಗೆಯಲ್ಲಿ ರೋಗಿಯು ಇದ್ರೆ ಇಲ್ಲದೆ ಎದ್ದು ಕುಳಿತುಕೊಳ್ಳಬೇಕಾಗುತ್ತದೆ. ರೋಗದ ಈ ಸ್ಥಿತಿಯಲ್ಲಿ ಪಲ್ಮನರಿ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆದರೆ ಉಲ್ಬಣವಾಗುವ ಪಲ್ಮನರಿ ಫೈಬ್ರೋಸಿಸ್ ರೋಗವನ್ನು ಹೆಚ್ಚಾಗದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ. ಆದರೆ ಇದನ್ನು ವಾಸಿ ಮಾಡುವುದು ಸಾಧ್ಯವಿಲ್ಲ.
ರೋಗವನ್ನು ನಿರ್ಲಕ್ಷ್ಯ ಮಾಡಿ ಸರಿಯಾದ ಚಿಕಿತ್ಸೆಯನ್ನು ಪಡೆಯದಿದ್ದರೆ ಮುಂದೆ ಹಾಸಿಗೆಯಿಂದ ಮೇಲೆದ್ದರೆ ತೀವ್ರವಾದ ದಮ್ಮು ಕಾಣಿಸಿಕೊಳ್ಳುವಷ್ಟು ಪಲ್ಮನರಿ ಫೈಬ್ರೋಸಿಸ್ ಉಲ್ಬಣಗೊಳ್ಳುತ್ತದೆ. ಹಾಸಿಗೆಯಿಂದ ಮೇಲೆದ್ದು 10 ಮೀಟರ್ ಕೂಡ ನಡೆಯಲು ಸಾಧ್ಯವಾಗದಷ್ಟು ದಮ್ಮು ಕಾಣಿಸಿಕೊಳ್ಳುತ್ತದೆ. ಮಲಗಿದರೆ ಕೆಮ್ಮಿನಿಂದ ಬಳಬೇಕಾಗುತದೆ ಹಾಗೂ ಮೇಲೆದ್ದು ನಡೆಯಲು ಪ್ರಯತ್ನಿಸಿದರೆ ಆಮ್ಲಜನಕದ ಮಟ್ಟ 94ಕ್ಕಿಂತಲೂ ಬಹಳಷ್ಟು ಕಡಿಮೆಯಾಗಿ ತೀವ್ರ ದಮ್ಮಿನಿಂದ ಬಳಬೇಕಾಗುತದೆ. ಹೀಗಾಗಿ ಹಗಲು ರಾತ್ರಿ ಹಾಸಿಗೆಯಲ್ಲಿ ಕುಳಿತಲ್ಲೇ ಕುಳಿತು ಬಿಡುವ ಪರಿಸ್ಥಿತಿ ಎದುರಾಗುತ್ತದೆ. ಕುಳಿತಲ್ಲೇ ಕುಳಿತು ನಿದ್ರೆ ಮಾಡ್ಬೇಕು ಅಂತ ಪ್ರಯತ್ನಿಸಿದರೆ ಸ್ವಲ್ಪ ನಿದ್ರೆ ಆವರಿಸಿಕೊಳ್ಳುತ್ತಿದಂತೆ ಏಕಾಏಕಿ ಉಸಿರು ಕಟ್ಟಿದಂತೆಯಾಗಿ ಎಚ್ಚರವಾಗಿ ಬಿಡುತ್ತದೆ. ಕೆಲವು ಸಲ ನಿದ್ರೆ ಬರುತ್ತಿದ್ದಂತೆ ಚಿಟಾರನೆ ಚೀರುತ್ತಾರೆ. ರೋಗಿಯ ಅಕ್ಕಪಕ್ಕ ಕುಳಿತರೆ ರೋಗಿಯ ತೀವ್ರವಾದ ಉಸಿರಾಟದ ಶಬ್ದ ಒಂದೇ ಸಮನೆ ಕೇಳುತ್ತಿರುತ್ತದೆ. ಕೈಕಾಲು ಬೆರಳುಗಳ ತುದಿಗಳು ಚಪ್ಪಟೆಯಾಗುತ್ತವೆ. ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ 80 ಅಥವಾ 70ಕ್ಕೆ ಇಳಿಯುತ್ತದೆ. ಊಟ ದಿನದಿಂದ ಕೆಲಸಕ್ಕೆ ಕಡಿಮೆ ಆಗುತ್ತಾ ಹೋಗುತ್ತದೆ. ಗಂಟಲಿನಲ್ಲಿ ಯಾವಾಗಲೂ ತುರಿಕೆ ಕಾಣಿಸಿಕೊಳ್ಳುತ್ತಿರುತ್ತದೆ ಹಾಗೂ ಕಫ ಕುಳಿತಿರುತ್ತದೆ. ಗಂಟಲಿನಿಂದ ಶಬ್ದವು ಹೊರಬರಲು ಸದ್ಯವೇ ಆಗುವುದಿಲ್ಲ. ಕಷ್ಟಪಟ್ಟು ಮಾತನಾಡಲು ಪ್ರಯತ್ನಿಸಿದರೆ ತಕ್ಷಣ ಕೆಮ್ಮು ಆರಂಭವಾಗುತ್ತದೆ. ಖಾರ, ಮಸಾಲೆ, ಎಣ್ಣೆ, ಉಪ್ಪು ಎಲ್ಲವನ್ನು ಬಿಟ್ಟು ಕೇವಲ ಸಪ್ಪಗೆ ಇರುವ ಆಹಾರ ಸೇವನೆ ಮಾಡಿದರೂ ಕೂಡ ಉಸಿರಾಟಕ್ಕೆ ತೊಂದ್ರೆ ಆಗುವ ಹಾಗೆ ತೀವ್ರ ಕಫ ಮತ್ತು ಗಂಟಲಿನಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿರುತ್ತದೆ. ಹೀಗೆ ಆದ ಕಫವನ್ನು ಪ್ರತಿ ದಿನ ನೇಬೋಲಿಜರ್ ಹಚ್ಚಿ ತಗೆಯಬೇಕಾಗುತ್ತದೆ. ಇನ್ನು ಕೆಮ್ಮುವ ಶಬ್ದ ಏಷ್ಟು ಗಡುಸಾಗಿರುತ್ತದೆ ಅಂದ್ರೆ ಅಕ್ಕಪಕ್ಕ ಕುಳಿತವರ ಕಿವಿ ತಮಟೆ ಹರಿದು ಹೋಗುವಷ್ಟು ಒಂದೇ ಸಮನೆ ರೋಗಿಯು ಕೆಮ್ಮುತ್ತಿರುತ್ತಾನೆ. ನಿದ್ರೆ ಹಾಗೂ ಊಟಾ ಮಾಡುವುದರಿಂದ ಮತ್ತು ಸ್ನಾನ ಮಾಡುವುದರಿಂದ ರೋಗದ ಎಲ್ಲ ಲಕ್ಷಣಗಳು ಉಲ್ಬಣಗೊಳ್ಳುತ್ತವೆ. ರೋಗಿಯು ರೋಗವು ಈ ಹಂತವನ್ನು ತಲುಪಿದರೆ ಪಲ್ಮನರಿ ಡಾಕ್ಟರ್ ಕೂಡ ಏನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಪಲ್ಮನರಿ ಡಾಕ್ಟರ ಆಂಟಿ ಫೈಬ್ರೋಡಿನ್ ಇಂಜೆಕ್ಷನ್ ಅಥವಾ ಫೈಬ್ರೋಡಿನ್ ಮಾತ್ರೆಗಳನ್ನು ಕೊಡುತ್ತಾರೆ ಇದರಿಂದ ರೋಗವು ಉಲ್ಬನವಾಗದಂತೆ ಸ್ವಲ್ಪ ದಿನಗಳ ಕಾಲ ನಿಯಂತ್ರಿಸಲು ಸಾಧ್ಯವಾಗುತ್ತದೆ ವಿನಃ ಬೇರು ಸಹಿತ ಗುಣಪಡಿಸಲು ಸಾಧ್ಯವಿಲ್ಲ. ಉಲ್ಬನವಾಗುವ ರೋಗವನ್ನು ಸ್ವಲ್ಪ ದಿನಗಳ ಕಾಲ ನಿಯಂತ್ರದಲ್ಲಿ ಇಡುವ ಆಂಟಿ ಫೈಬ್ರೋಡಿನೆ ಇಂಜೆಕ್ಷನ್ ಅಥವಾ ಫೈಬ್ರೋಡಿನ್ ಮಾತ್ರೆಗಳನ್ನು ಡಾಕ್ಟರ್ ಶಿಫಾರಸ್ಸಿನಂತೆ ತೆಗೆದುಕೊಂಡರೂ ಕೂಡ ಕಫ, ಕೆಮ್ಮು ಹಾಗೂ ಉಸಿರಾಟ ಸಮಸ್ಯೆ ಇದ್ದೆ ಇರುತ್ತದೆ. ಹೀಗಾಗಿ ಮೇಲಿಂದ ಮೇಲೆ ಪ್ರತಿ ದಿನ ನೇಬೋಲಿಜರ್ ಹಚ್ಚಿ ಕಫ ಹೊರತಾಗೆಯಬೇಕಾಗುತ್ತದೆ ಹಾಗೂ ರಕ್ತದ ಆಮ್ಲಜನಕದ ಪ್ರಮಾಣವನ್ನು ಕಾಪಾಡಿಕೊಳ್ಳಲು ಆಕ್ಸಿಜನ್ ಕಾನ್ಸಂಟ್ರೇಟರ್ ಅಥವಾ ಆಕ್ಸಿಜನ್ ಟ್ಯಾಂಕದಿಂದ ಆಕ್ಸಿಜನ್ ಹಚ್ಚಬೇಕಾಗುತ್ತದೆ. ಹಗಲು ಸಮಯಕ್ಕಿಂತ ರಾತ್ರಿಯ ಸಮಯದಲ್ಲಿ ಪಲ್ಮನರಿ ಫೈಬ್ರೋಸಿಸ್ ರೋಗದ ಎಲ್ಲ ಲಕ್ಷಣಗಳು ಉಲ್ಬಣಗೊಳ್ಳುವೆ. ಪಲ್ಮನರಿ ಫೈಬ್ರೋಸಿಸ್ ಅಥವಾ ಶ್ವಾಸಕೋಶದ ಫೈಬ್ರೋಸಿಸ್ದಿಂದ ಬಳಲುವ ರೋಗಿಯು ಹೀಗೆ ನರಕಸದೃಶ್ಯವುಳ್ಳ ಬದುಕಿನ ಕೊನೆಯ ಕ್ಷಣಗಳನ್ನು ಕಳೆಯಬೇಕಾಗುತ್ತದೆ.

ಎಸ್ಬ್ರಿಯೆಟ್, ನಿಂಟೆಡಾನಿಬ್, ಫೈಬ್ರೋಡಿನ್ ಮತ್ತು ಪಿರ್ಫೆನಿಡೋನ್ ಎಂಬ ಅಲೋಪಥಿ ಮಾತ್ರೆಗಳಿಂದ ಪಲ್ಮನರಿ ಫೈಬ್ರೋಸಿಸ್ ರೋಗದ ಲಕ್ಷಣಗಳು ಹೆಚ್ಚಾಗದಂತೆ ಸ್ವಲ್ಪ ದಿನಗಳ ಕಾಲ ತಡೆಗಟ್ಟಬಹುದು ಆದರೆ ಇಂತಹ ಅಲೋಪಥಿ ಮಾತ್ರೆಗಳಿಗೆ ವಿಪರೀತ ಅಡ್ಡ ಪರಿಣಾಮಗಳು ಇವೆ. ಈ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕ್ಷಿಪ್ರವಾಗಿ ತಲೆನೋವು ಹಾಗೂ ಹೊಟ್ಟೆ ನೀವು ಕಾಣಿಸಿಕೊಳ್ಳುತ್ತದೆ ಹಾಗೂ ಹೊಟ್ಟೆ ಹಸಿವು ಆಗಲಾರದು. ವಾಕರಿಕೆ ಬಂದಂತೆ ಅನಿಸುತ್ತದೆ. ವಾಂತಿ, ಎದೆಯುರಿ, ದಣಿವು ತೂಕಡಿಗೆ ಮತ್ತು ಭೇದಿ ಆಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಮಾತ್ರೆಗಳಿಗೆ ಇಂತಹ ವಿಲಕ್ಷಣ ಅಡ್ಡ ಪರಿಣಾಮಗಳು ಇರುವುದರಿಂದ ಬಹಳ ದಿನಗಳವರೆಗೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದ ಆಯುರ್ವೇದ ಅಥವಾ ಹೋಮಿಯೋಪತಿ ಚಿಕಿತ್ಸಾ ವಿಧಾನವನ್ನು ಅನುಸರಿಸುವುದು ಸೂಕ್ತ. ದೇಹವನ್ನು ನಿರ್ವಿಶೀಕರಣ ಮಾಡಬಲ್ಲ ಹಸುವಿನ ಮೂತ್ರದಿಂದ ಅತ್ಯಂತ ಪರಿಣಾಮಕಾರಿಯಾಗಿ ಪಲ್ಮನರಿ ಫೈಬ್ರೋಸಿಸ್ ರೋಗದ ಎಲ್ಲ ಲಕ್ಷಣಗಳನ್ನು ಹತೋಟಿಗೆ ತರಲು ಸಾಧ್ಯವಿದೆ. ಮಧ್ಯಪ್ರದೇಶದ ಇಂದೋರಿನಲ್ಲಿ ಇರುವ Jain cow urine therapy ಎಂಬ ಸಂಸ್ಥೆಯ ಹತ್ತಿರ ಪಲ್ಮನರಿ ಫೈಬ್ರೋಸಿಸ್ ಅಥವಾ ಶ್ವಾಸಕೋಶದ ರೋಗಕ್ಕೆ ಗೋ ಮೂತ್ರದಲ್ಲಿ ತಯಾರಿಸಿದ ಆಯುರ್ವೇದಿಕ್ ಔಷಧಿ ಇದೆ ಎಂದು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ www.cowurine.com ಜಾಹೀರಾತು ಕೊಟ್ಟಿದೆ. Jain cow urine therapy ಸಂಸ್ಥೆಯ ಡಾಕ್ಟರನ್ನು ಆನ್ಲೈನ್ ಮೂಲಕ ಸಂಪರ್ಕಿಸಿ ಔಷಧವನ್ನು ತರಿಸಿ ಡಾಕ್ಟರ್ ಹೇಳಿದ ಹಾಗೆ ಆಹಾರದಲ್ಲಿ ಕಟ್ಟು ನಿಟ್ಟಾಗಿ ಪಥ್ಯ ಮಾಡಲು ರೋಗಿಗೆ ಹೇಳಿ ಪಲ್ಮನರಿ ಫೈಬ್ರೋಸಿಸ್ ರೋಗದಿಂದ ಬಳಲುತ್ತಿರುವ ರೋಗಿಯ ಮೇಲೆ ಈ ಔಷಧವನ್ನು ಪ್ರಯೋಗ ಮಾಡಿದಾಗ ಪಲ್ಮನರಿ ಫೈಬ್ರೋಸಿಸ್ ಪೂರ್ತಿಯಾಗಿ ವಾಸಿಯಾಗದಿದ್ದರೂ ಕೂಡ ರೋಗದ ಹಲವು ಲಕ್ಷಣಗಳು ವಾಸಿಯಾಗಿವೆ ಎಂದು ತಿಳಿದು ಬಂದಿದೆ. ಈ ಔಷಧವನ್ನು ಹೊರತು ಮತ್ತೆ ಕೆಲವು ಗಿಡಮೂಲಕೆಗಳಿಂದ ತಯಾರಿಸಿದ ಔಷಧಿಗಳೂ ಕೂಡ ಲಭ್ಯವಿವೆ ಅವುಗಳನ್ನು ಡಾಕ್ಟರ್ ಸಲಹೆ ಪಡೆದು ಉಪಯೋಗಿಸಿ ಶ್ವಾಸಕೋಶಗಳನ್ನು ನಿರ್ವಿಶೀಕರಣ ಮಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಿ. ಇನ್ನು ಲುಂಗ್ಸ್ ಡಿಟಾಕ್ಸ್ ಎನ್ನುವ ಹಲವು ಗಿಡಮೂಲಕೆಗಳಿಂದ ತಯಾರಿಸಿದ ಔಷಧಿಗಳು ಲಭ್ಯವಿವೆ. ಅಂತಹ ಔಷಧಿಗಳನ್ನು ಡಾಕ್ಟರ್ ಸಲಹೆ ಪಡೆದು ನಿಯಮಿತವಾಗಿ ಉಪಯೋಗಿಸಿ. ಒಮ್ಮೊಮ್ಮೆ ಗಂಟಲಿನಲ್ಲಿ ತುರಿಕೆ ಕಾಣಿಸಿಕೊಂಡು ಕೆಮ್ಮಿಸುತ್ತಿದ್ದರೆ ಶುದ್ಧವಾದ ಜೇನು ತುಪ್ಪವನ್ನು ಹಿಪ್ಪಲಿ ಪೌಡರ್ ಜೊತೆಗೆ ಸೇರಿಸಿ ಅಥವಾ ಜೇಷ್ಠ ಮಧು ಮತ್ತು ಜೇನುತುಪ್ಪದ ಜೊತೆಗೆ ಬೆರೆಸಿ ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ. ನಿಯಮಿತವಾಗಿ ಗ್ರೀನ್ ಟೀ, ತುಳಸಿ ಟೀ, ಜಿಂಜರ್ ಟೀ, ಅಥವಾ ಲವಂಗ, ಚಕ್ಕೆ ಪುಡಿ, ತುಳಸಿ ಮತ್ತು ಅಮೃತ ಬಳ್ಳಿ ಎಲೆ, ಮೆಂತೆ ಕಾಳು, ಮೆಣಸಿನ ಕಾಳನ್ನು ಮಿಶ್ರಣ ಮಾಡಿ ಕಷಾಯ ತಯಾರಿಸಿ ನಿಯಮಿತವಾಗಿ ಕುಡಿಯಬೇಕು. ಇದರಿಂದ ಶ್ವಾಸಕೋಶಗಳು ಅಷ್ಟೇ ಅಲ್ಲ ಇಡೀ ದೇಹವೇ ಶುದ್ಧೀಕರಣಗೊಳ್ಳುತ್ತದೆ. ವಂಶ ಪರಂಪರಾಗತವಾಗಿ ಯಾರಾದರೂ ಶ್ವಾಸಕೋಶಗಳ ಈ ಕಾಯಿಲೆಗೆ ನಾಟಿ ಔಷಧಿಯನ್ನು ಕೊಡುತ್ತಿದ್ದರೆ ಅಂತಹ ನಾಟಿ ಔಷಧಿಗಳನ್ನು ಕೂಡ ತೆಗೆದುಕೊಂಡು ಶ್ವಾಸಕೋಶಕ್ಕೆ ಅಂಟಿಕೊಂಡ ಈ ರೋಗವನ್ನು ಗುಣಪಡಿಸುಕೊಳ್ಳುವ ಪ್ರಯತ್ನ ಮಾಡಿ ಹಾಗೂ ನಾಟಿ ಔಷಧಿಯನ್ನು ಕೊಡಬಲ್ಲ ಯಾರಾದರೂ ಇದ್ದರೆ ಅವರು ಕೊಡುವ ನಾಟಿ ಔಷಧಿಯ ಕುರಿತು ನನಗೆ ತಿಳಿಸಿದರೆ ಅದರ ಕುರಿತು ಮತ್ತೊಂದು ಲೇಖನ ಬರೆದು ಬಿಡುಗಡೆ ಮಾಡುವೆ. ಇದರಿಂದ ಶ್ವಾಸಕೋಶದ ರೋಗದಿಂದ ಬಳಲುವವರಿಗೆ ಉಪಯೋಗವಾದೀತು. ಪಲ್ಮನರಿ ಫೈಬ್ರೋಸಿಸ್ ಅಥವಾ ಶ್ವಾಸಕೋಶದ ಫೈಬ್ರೋಸಿಸ್ ರೋಗವನ್ನು ಅತ್ಯಂತ ಪರಿಣಾಮಕಾರಿಯಾಗಿ ಗುಣಪಡಿಸಬಲ್ಲ ವನಸ್ಪತಿಯು ಅಥವಾ ಬೇರೆ ಇನ್ಯಾವುದೇ ಔಷಧಿಯು ಯಾರ ಹತ್ತಿರವಾದರೂ ಇದ್ದರೆ ಅಂಥವರು ದಯವಿಟ್ಟು 9164616567 ವಾಟ್ಸ್ ಆ್ಯಪ್ ನಂಬರ್ಗೆ ವಾಟ್ಸಪ್ ಮೂಲಕ ಅಥವಾ ಫೋನ್ ಮಾಡಿ ದಯವಿಟ್ಟು ತಿಳಿಸಬೇಕಾಗಿ ವಿನಂತಿ.
ರೆಕ್ವೆಗ್ ಕಂಪನಿಯ ‘ಆರ್ 57’ ಎನ್ನುವ ಹೋಮಿಯೋಪಥಿ ಔಷಧಿಯು ಅಸ್ತಮಾ ಹಾಗೂ ಶ್ವಾಸಕೋಶದ ಫೈಬ್ರೋಸಿಸ್ ರೋಗದ ಹಲವು ಲಕ್ಷಣಗಳನ್ನು ವಾಸಿ ಮಾಡುತ್ತದೆ. ಇದೆ ಕಾರಣಕ್ಕೆ ಈ ‘ಆರ್ 57’ ಔಷಧಕ್ಕೆ ಪಲ್ಮನರಿ ಟಾನಿಕ್ ಅಂತ ಕೂಡ ಕರೆಯುತ್ತಾರೆ. ಆಸ್ಪಿಡೋಸ್ಪರ್ಮಾ ಅನ್ನುವ ಮತ್ತೊಂದು ಹೋಮಿಯೋಪಥಿ ಔಷಧಿಯು ಬ್ಲಡ್ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಹಾಗೂ ಶ್ವಾಸಕೋಶದ ಸೋಂಕುಗಳನ್ನು ವಾಸಿ ಮಾಡುತ್ತದೆ. ಈ ಆಸ್ಪಿಡೋಸ್ಪರ್ಮಾ ಅನ್ನುವ ಈ ಹೋಮಿಯೋಪಥಿ ಔಷಧಿಯು ಶ್ವಾಸಕೋಶಗಳಿಗೆ ಹಾನಿ ಮಾಡುವ ಕೋವಿಡ್ -19 ಮಹಾಮಾರಿಯ ಸಮಯದಲ್ಲಿ ಅತಿ ಹೆಚ್ಚು ಮಾರಾಟ ಆಗಿದೆ ಎಂದು ಹೇಳಲಾಗುತ್ತಿದೆ. ಆರ್ 57 ಮತ್ತು ಆಸ್ಪಿಡೋಸ್ಪರ್ಮಾ ಈ ಎರಡು ಔಷಧಿಗಳನ್ನು ಡಾಕ್ಟರ್ ಸಲಹೆಯಂತೆ 10 ನಿಮಿಷಗಳ ಅಂತರದಲ್ಲಿ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ತೆಗೆದುಕೊಳ್ಳುವುದರಿಂದ ಶ್ವಾಸಕೋಶದ ಫೈಬ್ರೋಸಿಸ್ ಮತ್ತು ಅಸ್ತಮದ ಲಕ್ಷಣಗಳು ಕಡಿಮೆ ಆಗುತ್ತವೆ. ಹೋಮಿಯೋಪಥಿ ಚಿಕಿತ್ಸಾ ವಿಧಾನದಲ್ಲಿ ಶ್ವಾಸಕೋಶದ ಸೋಂಕುಗಳಿಗೆ ಅತ್ಯಂತ ಒಳ್ಳೆಯ ಔಷಧಿಗಳುಂಟು ಆದ್ದರಿಂದ ಡಾಕ್ಟರನ್ನು ಸಂಪರ್ಕಿಸಿ ಸಲಹೆ ಪಡೆದು ಔಷಧಿಗಳನ್ನು ಉಪಯೋಗಿಸುವುದು ಒಳ್ಳೆಯದು. ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸಾ ವಿಧಾನಗಳೆರಡನ್ನು ಅನುಸರಿಸುವುದು ಅತ್ಯಂತ ಪರಿಣಾಮಕಾರಿ ಆಗಿರುತ್ತದೆ. ಇನ್ನು ಅಸ್ತಮಾ ಹಾಗೂ ಶ್ವಾಸಕೋಶದ ಫೈಬ್ರೋಸಿಸ್ ಹಾಗೂ ಇನ್ಯಾವುದೇ ಶ್ವಾಸಕೋಶದ ಸೋಂಕುಗಳಿಂದ ಬಳಲುವವರು ಹಾಲು, ಮೊಸರು, ಮಜ್ಜಿಗೆ, ಡೈರಿ ಪ್ರಾಡೆಕ್ಟ್ಸ್, ಬೇಕರಿ ಉತ್ಪನ್ನಗಳನ್ನು, ಸಕ್ಕರಿ, ಉಪ್ಪು, ತಂಪು ಪಾನೀಯಗಳನ್ನು, ಟೀ, ಕಾಫಿ, ಎಣ್ಣೆಯಲ್ಲಿ ಬಹಳಷ್ಟು ಕರೆದಿರುವ ಪದಾರ್ಥಗಳನ್ನು, ಉದ್ದು, ಅಕ್ಕಿ, ಬಾಳೆ ಹಣ್ಣು, ಕಲ್ಲಂಗಡಿ, ಮುಟ್ಟುವಂತಿಲ್ಲ ಹಾಗೂ ಮಾಂಸಾಹಾರದ ವಾಸನೆ ಮೂಗಿಗೆ ತಾಗುವಂತಿಲ್ಲ. ಜೀರ್ಣಕ್ರಿಯೆಗೆ ಭಾರವಾಗುವ ಯಾವುದೇ ಆಹಾರ ಪದಾರ್ಥಗಳ ಸೇವನೆಯನ್ನು ನಿಲ್ಲಿಸಿಬಿಟ್ಟು ಶ್ವಾಸಕೋಶಗಳ ಆರೋಗ್ಯವನ್ನು ವೃದ್ಧಿಸುವ ಪೈನಾಪಲ್, ದಾಳಿಂಬೆ, ಸೇಬು, ಕಿತ್ತಳೆ, ಲಿಂಬೆ ಅಂಜೂರ, ಕರ್ಜುರ, ಕುಂಬಳ ಕಾಯಿ, ಬ್ರೊಕೊಲಿ, ಕಿವಿ ಹಣ್ಣು, ಚಿಕ್ಕು ಹಣ್ಣು, ಕುದಿಸಿದ ಪೊಟಾಟೋ, ಗೆಣಸು, ಗುಡ್ಡದ ನೆಲ್ಲಿಕಾಯಿ, ಡ್ರಾಗನ್ ಫ್ರೂಟ್, ಸ್ಟ್ರಾಬೆರಿ ಫ್ರೂಟ್ ಇವುಗಳನ್ನು ನಿಯಮಿತವಾಗಿ ಸೇವಿಸಬೇಕು. ಡಯೆಟ್ ಕಟ್ಟುನಿಟ್ಟಾಗಿ ಪಾಲಿಸಿ ದೀರ್ಘಕಾಲದ ತನಕ ಸರಿಯಾದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಶ್ವಾಸಕೋಶಗಳು ನಿರ್ವಿಶೀಕರಣಗೊಂಡು ಶ್ವಾಸಕೋಶಗಳ ಫೈಬ್ರೋಸಿಸ್ ಹತೋಟಿಗೆ ಬಂದು ಬದುಕುಳಿಯುವ ಸಾಧ್ಯತೆಗಳನ್ನು ಅಲ್ಲಗಳಿಯುವಂತಿಲ್ಲ. ಇಷ್ಟೆಲ್ಲ ಡಯೆಟ್ ಮಾಡಿ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಂಡರೂ ಕೂಡ ಶ್ವಾಸಕೋಶಗಳು ನಿರ್ವಿಶೀಕರಣಗೊಳ್ಳದೆ ಫೈಬ್ರೋಸಿಸ್ ಉಲ್ಬನವಾದರೆ ಪುನರ್ಜನ್ಮ ಎಂಬುದು ಕಟ್ಟಿಟ್ಟ ಬುತ್ತಿ! ಸಾವಿಗೆ ಯಾವತ್ತಿಗೂ ಹೆದರಬಾರದು. ಬದುಕು ಆನಂದದಾಯಕವಾಗಿದ್ದರೆ ಸಾವು ವೈಭವಯುಕ್ತವಾಗಿ ಇರ್ಬೇಕು. ಐಹಿಕ ಪ್ರಪಂಚದ ಎಲ್ಲ ಸಂಬಂಧಗಳನ್ನು ಹಾಗೂ ಆಸೆಗಳನ್ನು ತೊರೆದು ಸಾವನ್ನು ಕೂಡ ಆನಂದವಾಗಿ ಸೆಲೆಬ್ರೇಟ್ ಮಾಡ್ಬೇಕು! ಆಗ ಮಾತ್ರ ಮುಕ್ತಿ ಸಿಗುತ್ತದೆ. ಇಷ್ಟೆಲ್ಲ ವೈದ್ಯಕೀಯ ಶಾಸ್ತ್ರ ಮುಂದುವರಿದರು ಕೂಡ ಶ್ವಾಸಕೋಶಗಳ ಫೈಬ್ರೋಸಿಸನ್ನು ಪೂರ್ತಿಯಾಗಿ ಗುಣಮುಖ ಮಾಡಿ ರೋಗಿಯನ್ನು ಚಿರಂಜೀವಿಯನ್ನಾಗಿ ಮಾಡಬಲ್ಲ ಔಷಧಿ ಇನ್ನೂ ಕೂಡ ಸಂಶೋಧನೆಯಾಗಿಲ್ಲ ಎಂಬುದು ಅತ್ಯಂತ ದುರ್ದೈವದ ಸಂಗತಿ.
Sun light has healing power👇
https://anveshana.in/powerofsunlight/
Vegetarian diet👇