ಮಾನಸಿಕ ಒತ್ತಡ ಮತ್ತು ಆರೋಗ್ಯ – ದೈಹಿಕ ಆರೋಗ್ಯ ಬೇಕು ಅಂದ್ರೆ ಮೊದಲು ಮನಸ್ಸಲ್ಲಿ ಉದ್ಭವವಾಗುವ ಆಲೋಚನೆಗಳು ನಿಲ್ಲಬೇಕು. ನೀರಿನ ಆಳಕ್ಕೆ ಅಸಂಖ್ಯಾತ ಚಿಕ್ಕ ಚಿಕ್ಕ ನೀರಿನ ಗುಳ್ಳೆಗಳು ಉದ್ಬವವಾಗಿ ಆಕಾರದಲ್ಲಿ ದೊಡ್ಡ ಗಾತ್ರವನ್ನು ಹೊಂದುತ್ತಾ ಹೊಂದುತ್ತಾ ನಿಧಾನವಾಗಿ ನೀರಿನ ಮೇಲ್ಬಾಗಕ್ಕೆ ಬಂದು ಹೇಗೆ ನೀರಿನ ಗುಳ್ಳೆಗಳು ಒಡೆದು ಬಿಡುತ್ತವೋ ಅದೇ ರೀತಿ ಇವತ್ತಿನ ಒತ್ತಡದ ಜೀವನದಿಂದ ಮನಸ್ಸಿನ ಆಳಭಾಗದಲ್ಲಿ ಅನಂತವಾದ ಆಲೋಚನೆಗಳು ಉದ್ಭವಿಸಿ( Thinking developes at the bottom of consciousness which the modern psychology calls it as subconscious mind) ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಾ ನಿಧಾನವಾಗಿ ಮನಸ್ಸಿನ ಮೇಲ್ಬಾಗಕ್ಕೆ (conscious mind) ಬಂದು ಅಪ್ಪಳಿಸಿ ಎಲ್ಲ ಆಲೋಚನೆಗಳು ಒಮ್ಮಿಂದೊಮ್ಮಿಲೇ ಸ್ಪೋಟಗೊಳ್ಳುತ್ತಿದ್ದಂತೆ ಎರಡು ಕೈಗಳನ್ನು ತಲೆ ಮೇಲೆ ಇಟ್ಟು oh my god I can’t control my mind ಅಂತ ಅಂದುಬಿಟ್ಟಿರುತ್ತೇವೆ. ಇಂತಹ ಅನುಭವ ಪ್ರತಿನಿತ್ಯ ಹೆಚ್ಚಿನ ಜನರಿಗೆ ಆಗುತ್ತಿರುತ್ತದೆ. ನಾವು ಮನಸ್ಸನ್ನು ಬಾಹ್ಯಾಜಗತ್ತಿನತ್ತ ಹರಿಸಿದಷ್ಟು ಮಾನಸಿಕ ಒತ್ತಡ ಉಲ್ಬಣಗೊಳ್ಳುತ್ತದೆ ಹಾಗೂ ಅನಿಯಂತ್ರಿತ ಆಲೋಚನೆಗಳು ನಮ್ಮ ಮಾನಸಿಕ ಶಾಂತಿಗೆ ಸದಾ ಡಿಸ್ಟರ್ಬೆನ್ಸ್ ಮಾಡುತ್ತಿರುತ್ತವೆ. ಈ ಕಾರಣಕ್ಕಾಗಿ ಶಾರೀರಿಕ ಶಕ್ತಿಯೂ ಕೂಡ ವ್ಯಯವಾಗುತ್ತದೆ ಎಂದುದನ್ನು ಪ್ರಾಚೀನ ರಸವಿದ್ಯಾ ತತ್ವಗಳು ಹೇಳುತ್ತವೆ. ಹೀಗೆ ವ್ಯಯವಾಗುವ ಶಕ್ತಿಯನ್ನು ಮತ್ತೆ ಭರ್ತಿ ಮಾಡುವುದಕ್ಕಾಗಿ ನಿಯತವಾದ ಆಹಾರ, ನೀರು, ಉಸಿರಾಟ, ಧ್ಯಾನ, ಯೋಗದ ಅವಶ್ಯಕತೆ ಇರುತ್ತದೆ.
ಆಲೋಚನೆಗಳು ಬರದಂತೆ ಮನಸ್ಸನ್ನು ಹೇಗೆ ಹತ್ತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬುದು ಎಸ್ಟೇ ಪ್ರಯತ್ನಿಸಿದರೂ ಅರ್ಥವೇ ಆಗೋಲ್ಲ. ಬೇಡವಾದ ಅನೇಕ ಹಳೆಯ ಕಹಿ ನೆನಪುಗಳು, ಕಹಿ ಅನುಭವಗಳು, ಹಾಗೂ ಪ್ರಸ್ತುತ ಕಷ್ಟ-ನಷ್ಟ ನೋವುಗಳು ನಮಗೆ ಸದಾ ಮಾನಸಿಕವಾಗಿ ತೊಂದರೆ ಕೊಡುತ್ತಿರುತ್ತವೆ. ನಿಂತ್ರೂ ಆಲೋಚನೆಗಳು, ಕುತ್ರೂ ಆಲೋಚನೆಗಳು, ನಿಲ್ಲೋಕೂ ಆಗೋಲ್ಲ ಹಾಗೂ ಕುಡ್ರೋಕೂ ಆಗೋಲ್ಲ, ಮಲಗೋಕೂ ಆಗೋಲ್ಲ ಹಾಗೂ ಮಲಗಿದ್ರೆ ಸ್ವಲ್ಪ ನಿದ್ರೆಯೂ ಬರೋಲ್ಲ. ಮನಸ್ಸು ಹೀಗೆ ತನ್ನ ಸ್ಥಿರತೆಯನ್ನು ಕಳೆದುಕೊಂಡರೆ ಪ್ರತಿ ಕ್ಷಣ ಕ್ಷಣಕ್ಕೂ ಮನೋ ದೈಹಿಕವಾದ ನೋವನ್ನು ಅನುಭವಿಸಬೇಕಾಗುತ್ತದೆ. ಇನ್ನು ಕೆಲವರಿಗೆ ರಾತ್ರಿ ಸಮಯದಲ್ಲಿ ನಿದ್ರೆ ಬಂದರೂ ಬ್ಯಾಕ್ ಗ್ರೌಂಡಲ್ಲಿ ಆಲೋಚನೆಗಳಿಂದ ಡಿಷ್ಟರ್ಬನ್ಸ್ ಆಗುತ್ತಿರುತ್ತದೆ ಹಾಗೂ ಈ ಆಲೋಚನೆಗಳಿಂದ ಆಗುವ ಡಿಷ್ಟರ್ಬನ್ಸ್ ಬೆಳಿಗ್ಗೆ 3 ಗಂಟೆಯಿಂದ 6 ಗಂಟೆಯ ನಡುವಿನ ಸಮಯದಲ್ಲಿ ವಿಪರೀತ ಉಲ್ಬಣಗೊಳ್ಳುತ್ತದೆ. ಮನಸಿನ ಸ್ಥಿತಿಯು ಈ ಹಂತವನ್ನು ತಲುಪುವುದಕ್ಕೆ ಒತ್ತಡದ ಬದುಕು, ಆಹಾರ ಶೈಲಿ, ಹಾಗೂ ಬಾಹ್ಯಾಜಗತ್ತಿನತ್ತ ಆಕರ್ಷಣೆಗಳೇ ಕಾರಣಗಳು ಎಂದು ಪರಿಗಣಿಸಬೇಕಾಗುತ್ತದೆ. ಈ ರೀತಿಯ ಆಲೋಚನೆಗಳ ಮಿಶ್ರಿತ ನಿದ್ರೆಯ ಸ್ಥಿತಿಯಲ್ಲಿ ಎಷ್ಟೇ ಗಂಟೆಗಳವರೆಗೆ ಮಲಗಿದರೂ ಇಂತಹ ನಿದ್ರೆಯಿಂದ ದಣಿವು ಅರಲಾರದು ಹಾಗೂ ಯಾವುದೇ ಚೈತನ್ಯ ಸಿಗಲಾರದು. ಇಂತಹ ಆಲೋಚನೆಗಳ ಮಿಶ್ರಿತ ನಿದ್ರೆಯಿಂದ ಮನೋ ದೈಹಿಕವಾದ ಶಕ್ತಿ ನಿರಂತರವಾಗಿ ವ್ಯಯವಾಗುತ್ತಾ ಹೋಗುತ್ತದೆ ಹೀಗಾಗಿ ಆಲೋಚನೆಗಳ ಮಿಶ್ರಿತ ನಿದ್ರೆಯು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಕಿಪ್ರವಾಗಿ ಮುಂದುವರೆಯುತ್ತಿರುವ ಈ ಆಧುನಿಕ ನಾಗರಿಕತೆಯಲ್ಲಿ ನಾವೆಲ್ಲರೂ ಒಂದಲ್ಲ ಮತ್ತೊಂದು ಕಾರಣಕ್ಕಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದೇವೆ. ದುಡ್ಡಿನ ಕೊರತೆಯಿಂದ, ಕೌಟುಂಬಿಕ ಸಂಬಂಧಗಳ ನಡುವೆ ಬಿರುಕು ಉಂಟಾದಾಗ, ಅನ್ಯಾಯ ಹಾಗೂ ಮೊಸಗಳು ಆದಾಗ, ಅನಿರೀಕ್ಷಿತವಾಗಿ ಕುಟುಂಬದ ಸದಸ್ಯರೊಬ್ಬರು ಮರಣಹೊಂದಿದರೆ, ಕೆಲಸದ ಒತ್ತಡದಿಂದಾಗಿ, ನಿರುದ್ಯೋಗ ಸಮಸ್ಯೆಯಿಂದ, ಮುಂತಾದ ಹಲವು ಅಂಶಗಳ ಕಾರಣದಿಂದ ಮಾನಸಿಕ ಒತ್ತಡ ಉಲ್ಬಣಗೊಳ್ಳುತ್ತದೆ. ನಾವು ಎಷ್ಟು ತೀವ್ರವಾದ ಮಾನಸ್ಸಿಕ ಒತ್ತಡಕ್ಕೆ ಒಳಪಡುತ್ತೇವೋ ಅಷ್ಟೇ ತೀವ್ರವಾದ ಆಲೋಚನೆಗಳು ನಮ್ಮ ಮನಸ್ಸಿನಲ್ಲಿ (sub-conscious mind) ಉದ್ಭವವಾಗಿಬಿಡುತ್ತವೆ. ಅದೆಷ್ಟು ಆಲೋಚನೆಗಳು ಮನಸ್ಸಿನಲ್ಲಿ ಉದ್ಭವವಾಗಿಬಿಡುತ್ತವೆಯೋ ಅಷ್ಟೇ ದೈಹಿಕ ಆರೋಗ್ಯ ಕೆಟ್ಟುಬಿಡುತ್ತದೆ. ಏಕೆಂದ್ರೆ ಮಾನಸ್ಸಿಕ ಆರೋಗ್ಯಕ್ಕೂ ಮತ್ತು ದೈಹಿಕ ಆರೋಗ್ಯಕ್ಕೂ ಪರಸ್ಪರ ನಿಕಟ ಸಂಬಂಧವಿದೆ. ಮಾನಸಿಕ ಆಲೋಚನೆಗಳು ಎಷ್ಟು ಕಡಿಮೆ ಇರುತ್ತವೋ ಅಷ್ಟು ದೈಹಿಕ ಆರೋಗ್ಯ ಹಾಗೂ ಮಾನಸಿಕ ಶಾಂತಿ ಲಭಿಸುತ್ತದೆ. ಯಾವುದೇ ಇಂಜೆಕ್ಷನ್ ಅಥವಾ ಮಾತ್ರೆ ಮನಸ್ಸಲ್ಲಿ ಉದ್ಭವವಾಗುವ ಆಲೋಚನೆಗಳನ್ನು ಕಡಿಮೆ ಮಾಡಲಾರವು. ನಿರಂತರವಾದ ಆಲೋಚನೆಗಳಿಂದ ಉಂಟಾದ ಮಾನಸಿಕ ಬೇಜಾರು, ಖಿನ್ನತೆ, ಅತಿಯಾದ ಆಯಾಸ, ಸಿಟ್ಟು, ಆಸೆ, ನಿದ್ರಾಹೀನತೆ, ಅತಿಯಾದ ಅನುಮಾನ, ಆತಂಕ, ವಿನಾಕಾರಣ ಇನ್ನೊಬ್ಬರನ್ನು ಬೈಯುವದು, ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಮುಂತಾದ ಮಾನಸಿಕ ಲಕ್ಷಣಗಳು ಈ ಆಲೋಚನೆಗಳಿಂದ ಹುಟ್ಟಿಕೊಂಡುಬಿಡುತ್ತವೆ. ಇಂತಹ ಮಾನಸಿಕ ಲಕ್ಷಣಗಳು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ರೋಗಗಳು, ಮುಂತಾದ ಭಯಂಕರ ಖಾಯಿಲೆಗಳಿಗೆ ಕಾರಣವಾಗುತ್ತವೆ.
ಆದರೆ ಯಾವುದೇ ಇಂಜೆಕ್ಷನ್ ಅಥವಾ ಮಾತ್ರೆಗೆ ಮನಸ್ಸಲ್ಲಿ ಉದ್ಭವವಾಗುವ ಆಲೋಚನೆಗಳನ್ನು ಕಡಿಮೆ ಮಾಡಿ ಆಲೋಚನೆಗಳಿಂದ ಉದ್ಭವವಾದ ಮಾನಸಿಕ ಲಕ್ಷಣಗಳನ್ನು ಮತ್ತು ಈ ಮಾನಸಿಕ ಲಕ್ಷಣಗಳಿಂದ ಉಂಟಾದ ದೈಹಿಕ ಕಾಯಲೆಗಳನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬ ಸಂಗತಿಯು ಇವತ್ತಿನ ಪೀಳಿಗೆಗೆ ಅರ್ಥವಾಗದಿರುವುದು ಒಂದು ದೊಡ್ಡ ದುರ್ದೈವ. ಬಹುತೇಕ ಎಲ್ಲ ರೋಗಗಳಿಗೆ ಆಲೋಚನೆಗಳೇ ಮೂಲ ಕಾರಣ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳದೆ ತ್ವರೆ ಮಾಡಿ ದೊಡ್ಡ ದೊಡ್ಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೋಗಿ ಅಧುನಿಕ ಚಿಕಿತ್ಸೆಗಳನ್ನು ಪಡೆದುಕೊಂಡು ಬಿಡುತ್ತೇವೆ. ವಾಸ್ತವವಾಗಿ ಯಾವುದೇ ಆಧುನಿಕ ಚಿಕಿತ್ಸೆಯು ಕೂಡ ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆಗಳನ್ನು ವಾಸಿ ಮಾಡಲಾರದು. ಮನಸ್ಸಲ್ಲಿ ಉದ್ಭವವಾಗುವ ಆಲೋಚನೆಗಳು ವಾಸಿ ಆಗದಿದ್ದರೆ ಮಾನಸಿಕ ಲಕ್ಷಣಗಳಾದ ಸಿಟ್ಟು, ಆಸೆ, ಅನುಮಾನ, ಖಿನ್ನತೆ, ಬೇಜಾರು, ನಿದ್ರಾಹೀನತೆ, ಮುಂತಾದ ಎಲ್ಲ ಮಾನಸಿಕ ಲಕ್ಷಣಗಳು ವಾಸಿ ಆಗಲಾರವು. ಈ ಎಲ್ಲ ಮಾನಸಿಕ ಲಕ್ಷಣಗಳು ವಾಸಿಯಾಗದೆ ಇದ್ದರೆ ದೈಹಿಕ ರೋಗಗಳೂ ಕೂಡ ವಾಸಿಯಾಗುವುದಿಲ್ಲ. ಆದರ್ಶವಾದ ಆರೋಗ್ಯ ಲಭಿಸಬೇಕು ಅಂದ್ರೆ ಮೊಟ್ಟಮೊದಲು ಮನಸಿನಲ್ಲಿ ಉದ್ಭವವಾಗುವ ಆಲೋಚನೆಗಳು ನಿಲ್ಲಲ್ಪಟ್ಟು ಮನಸು ಶಾಂತ ಸ್ಥಿತಿಗೆ ಬರ್ಬೇಕು. ಆಗ ಆಲೋಚನೆಗಳಿಂದ ಉದ್ಭವಿಸಿದ ಮಾನಸಿಕ ಲಕ್ಷಣಗಳು ಕೂಡ ವಾಸಿ ಆಗುವುದರ ಜೊತೆಗೆ ದೇಹದಲ್ಲಿರುವ ರೋಗಗಳೂ ವಾಸಿ ಅಗಲ್ಪಡುತ್ತವೆ.
ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆಗಳನ್ನು ಸಂಪೂರ್ಣ ಕಡಿಮೆ ಮಾಡಿಕೊಂಡು ಮನಸ್ಸಿನ ಮೇಲೆ ನಿಯಂತ್ರಣ ಹೊಂದಬೇಕು ಅಂದ್ರೆ ಯೋಗ ಮತ್ತು ಧ್ಯಾನ ಅನಿವಾರ್ಯ. ಧ್ಯಾನವು ಅನಾವಶ್ಯಕವಾಗಿ ಮನಸ್ಸಿನಲ್ಲಿ ಉದ್ಭವವಾಗುವ ಎಲ್ಲ ಆಲೋಚನೆಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಪ್ರಚಂಡ ಚೈತನ್ಯವನ್ನು ನೀಡುತ್ತದೆ. ಮತ್ತು ಎಲ್ಲ ರೀತಿಯ ಮಾನಸಿಕ ಲಕ್ಷಣಗಳನ್ನು ಗುಣಪಡಿಸುತ್ತದೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಯೋಗ, ಪ್ರಾಣಾಯಾಮ,ಧ್ಯಾನ, ಮಾಡಬೇಕು ಹಾಗೂ ಬೆಳ್ಳಂ ಬೆಳಿಗ್ಗೆ ಎದ್ದು ಸೂರ್ಯನ ಎಳೆ ಬಿಸಿಲಿಗೆ 1 ಗಂಟೆ ಕಾಲ ಮೈಯೊಡ್ಡಿ ವ್ಯಾಯಾಮ ಮಾಡುವ ರುಡಿ ಇಟ್ಟುಕೊಳ್ಳಬೇಕು. ಹೆಚ್ಚಿನ ಸಮಯ ನಿಸರ್ಗದಲ್ಲಿ ಕಳೆದು ಅದರ ಸವಿಯನ್ನು ಸವಿಯಬೇಕು. ಇದರಿಂದಾಗಿ ಮಾನಸಿಕ ಒತ್ತಡ ನಿವಾರಣೆ ಆಗಿ ಆದರ್ಶವಾದ ದೈಹಿಕ ಆರೋಗ್ಯವನ್ನು ಲಭಿಸುತ್ತದೆ.
Take care of Lungs👇
https://anveshana.in/pulmonary-fibrosis/
Food is medicine👇
https://www.facebook.com/share/p/1B2dh3iX6h/