ವೈಜ್ಞಾನಿಕ ವಾಸ್ತು ಮನೆಬಾಗಿಲಿನ ದಿಕ್ಕುಗಳು ವಾಸ್ತು ಶಾಸ್ತ್ರದ ಪ್ರಕಾರ ನಾವು ವಾಸಿಸುವ ಮನೆಯ ಮೇಲೆ ಗ್ರಹ ನಕ್ಷತ್ರಗಳ ಪ್ರಭಾವ ನಿರಂತರವಾಗಿ ಆಗುತ್ತಿರುತ್ತದೆ. ಪ್ರತಿಯೊಂದು ಗ್ರಹಗಳು ಎಸ್ಟೇ ದೂರದಲ್ಲಿ ಇದ್ದರೂ ಅವು ಮಾನವನ ಜೀವನದ ಮೇಲೆ ಏಕ ಕಾಲದಲ್ಲಿ ಒಳ್ಳೆಯ ಮತ್ತು ಕೆಟ್ಟ ಪ್ರಭಾವಗಳನ್ನು ಮಾಡುತ್ತಿರುತ್ತವೆ. ಗ್ರಹಗಳ ಪ್ರಭಾವವು ನಿರ್ಜೀವ ಮತ್ತು ಸಜೀವ ವಸ್ತುಗಳ ಎರಡರ ಮೇಲೂ ಆಗುತ್ತಿರುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಚಂದ್ರನ ಗುರುತ್ವಾಕರ್ಷಣ ಶಕ್ತಿಯಿಂದ ಉಂಟಾದ ಆಕರ್ಷಣೆ ಮತ್ತು ವಿಕರ್ಷಣೆಯಿಂದಾಗಿ ಸಮುದ್ರದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಹೇಗೆ ಉಬ್ಬರವಿಳಿತಗಳಾಗುತ್ತವೆಯೋ ಇದೇ ರೀತಿ ಮನುಷ್ಯನ ರಕ್ತೆದಲ್ಲೂ ಕೂಡ ಚಂದ್ರನ ಗುರುತ್ವಾಕರ್ಷಣ ಶಕ್ತಿಯಿಂದ ಅತಿ ಸೂಕ್ಷ್ಮ ಉಬ್ಬರವಿಳಿತಗಳಾಗುತ್ತವೆ ಏಕೆಂದ್ರೆ ಸಮುದ್ರದ ನೀರಿನ ಮತ್ತು ಮಾನವನ ರಕ್ತದ ಸಂಯೋಜನೆಗಳು ಒಂದೇ ಆಗಿರುತ್ತವೆ. ಸಮುದ್ರದ ನೀರಿನಲ್ಲಿ 80% ಸೋಡಿಯಂ ಇದೆ. ಕ್ಯಾಲ್ಸಿಯಂ 4% ಇದೆ. ಪೊಟ್ಯಾಸಿಯಂ 4% ಇದೆ ಹಾಗೂ 12% ದಷ್ಟು ಮಗ್ನೆಸಿಯಂ ಮತ್ತು ಇತರೆ ಲವಣಗಳು ಇವೆ. ಇದೇ ರೀತಿಯ ಸಂಯೋಜನೆಯು ಮಾನವನ ರಕ್ತದಲ್ಲೂ ಇದೆ. ಆದ್ದರಿಂದ ಸಮುದ್ರದಲ್ಲಿ ಹೇಗೆ ಉಬ್ಬರವಿಳಿತಗಳು ಆಗುತ್ತವೋ ಅದೇ ರೀತಿಯಲ್ಲಿ ಮಾನವನ ರಕ್ತದಲ್ಲೂ ಕೂಡ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಸೂಕ್ಷ್ಮ ರೀತಿಯ ಉಬ್ಬರವಿಳಿತಗಳಾಗುತ್ತವೆ ಎಂಬುದನ್ನು ಅಲ್ಲಗಳೆಯುವ ಹಾಗಿಲ್ಲ. ಇದೇ ಕಾರಣಕ್ಕೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಮನುಷ್ಯನ ಮನೋದೈಹಿಕ ಸ್ಥಿತಿಯು ಏರು ಪೇರುಗಳು ಆಗುತ್ತವೆ. ಚಂದ್ರನ ಗುರುತ್ವಾಕರ್ಷ ಣ ಶಕ್ತಿಯಿಂದ ಹೇಗೆ ಸಮುದ್ರದ ಮೇಲೆ ಪ್ರಭಾವವಾಗುತ್ತದೋ ಅದೇ ರೀತಿ ಇತರ ಗ್ರಹ ನಕ್ಷತ್ರಗಳ ಸ್ಥಾನಕ್ಕ ಅನುಗುಣವಾಗಿ ಹಾಗೂ ಅವುಗಳಿಂದ ಬರುವ ಅಗೋಚರ ಶಕ್ತಿಯಿಂದಾಗಿ ನಾವು ಕಟ್ಟಿದ ಮನೆಯೊ ಕೂಡಾ ಪ್ರಭಾವಕ್ಕ ಒಳಗಾಗುತ್ತದೆ. ಹೀಗೆ ಮನೆಗಳು ಗ್ರಹಗಳ ಪ್ರಭಾವಕ್ಕೆ ಒಳಪಟ್ಟಾಗ ಆ ಮನೆಯಲ್ಲಿರುವ ನಿವಾಸಿಗಳ ಮೇಲೆ ನೇರವಾಗಿ ಋಣಾತ್ಮಕ ಮತ್ತು ಧನಾತ್ಮಕ ಪ್ರಭಾವ ಆಗುತ್ತಿದೆ ಮತ್ತು ಇದರಿಂದ ಸಜೀವ ಮತ್ತು ನಿರ್ಜೀವ ವಸ್ತುಗಳ ಎರಡರ ಮೇಲೂ ಗ್ರಹಗಳ ಪ್ರಭಾವ ಆಗುತ್ತದೆ ಎಂಬುದು ತಿಳಿದುಬರುವುದೆ. ಹೀಗಾಗಿ ನಿರ್ಜೀವ ಮತ್ತುಸಜೀವ ವಸ್ತುಗಳಲ್ಲೂ ಅದೃಷ್ಟ ಅನ್ನೋದು ಇರುತ್ತದೆ ಎಂದು ಪರಿಗಣಿಸಬಹುದು. ಗ್ರಹಗಳ ವಕ್ರದೃಷ್ಟಿಯು ಬೀಳದಂತೆ ವಾಸ್ತು ಶಾಸ್ತ್ರವನ್ನು ಅನುಸರಿಸಿ ಮನೆ ಕಟ್ಟಿದರೆ ಅಂತಹ ಮನೆಯನ್ನು ಅದೃಷ್ಟದ ಮನೆ ಅಂದು ಪರಿಗಣಿಸಬಹುದು. ಮುಖ್ಯವಾಗಿ 8 ದಿಕ್ಕುಗಳು ಇವೆ ಹಾಗೂ ಪ್ರತಿ ದಿಕ್ಕಿಗೂ ಬೇರೆ ಬೇರೆ ಗ್ರಹಗಳು ಅಧಿಪತಿ ಆಗಿರುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ.

ವೈಜ್ಞಾನಿಕ ವಾಸ್ತು ಮನೆಬಾಗಿಲಿನ ದಿಕ್ಕುಗಳು
ಮನೆಯ ಮುಕ್ಯ ದ್ವಾರವು ಯಾವ ದಿಕ್ಕಿನಲ್ಲಿ ಇರುತ್ತದೋ ಅದಕ್ಕೆ ಅನುಗುಣವಾಗಿ ಬೇರೆ ಬೇರೆ ಗ್ರಹಗಳು ಅಧಿಪತಿ ಆಗಿರುತ್ತವೆ ಹಾಗೂ ಆಯಾ ದಿಕ್ಕಿನ ಅಧಿಪತಿ ಹೊಂದಿದ ಗ್ರಹಕ್ಕೆ ನುಗುಣವಾಗಿ ಮನೆಯ ಯನಮಾನ ಹಾಗೂ ಮನೆಯ ಇತರ ಸದಸ್ಯರ ಮೇಲೆ ಪ್ರಭಾವ ಆಗುತ್ತದೆ.
- ರವಿ (ಸೂರ್ಯ) – ಸೂರ್ಯನು ಪೂರ್ವ ದಿಕ್ಕಿನ ಅಧಿಪತಿಯಾಗಿರುತ್ತಾನೆ. ಮನೆಯ ಮುಖ್ಯದ್ವಾರವು ಸರಿಯಾಗಿ ನಡು ಮಧ್ಯ ಪೂರ್ವದಲ್ಲಿ ಇದ್ದರೆ ಆ ಮನೆ ಯಜಮಾನನು ಧರ್ಮನಿಷ್ಠನೂ, ಮಹತ್ವಾಕಾಂಕ್ಷೆ ಉಳ್ಳವನೂ, ವಿದ್ಯಾವಂತನೂ, ಗುಣವಂತನೂ, ಆರೋಗ್ಯವಂತನೂ, ಹಾಗೂ ಕ್ಷಿಪ್ರ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳು ಬಲ್ಲವನು ಆಗಿರುತ್ತಾನೆ.
- ಶನಿ ಗ್ರಹ – ಮನೆಯ ಮುಖ್ಯದ್ವಾರವು ಪಶ್ಚಿಮದ ಮಧ್ಯಭಾಗದಲ್ಲಿ ಇದ್ದಾಗ ಅಲ್ಲಿ ಶನಿಗ್ರಹವು ಅಧಿಪತ್ಯವನ್ನು ಹೊಂದಿರುತ್ತದೆ. ಇದರಿಂದಾಗಿ ಮನೆಯ ಯಜಮಾನನು ಗಂಭೀರ ಉಳ್ಳವನಾಗಿ, ಇತರರ ಕುರಿತು ಚಿಂತನಶೀಲ ವ್ಯಕ್ತಿತ್ವ ಉಳ್ಳವನಾಗಿ ಇರುತ್ತಾನೆ. ಪಶ್ಚಿಮದ ಮಧ್ಯಭಾಗದಲ್ಲಿ ಮುಖ್ಯ ದ್ವಾರವನ್ನು ಹೊಂದಿದೆ ಮನೆಗಳಲ್ಲಿ ಸ್ಪಲ್ಪ ಮಾನಸಿಕ ಒತ್ತಡ ಹಾಗೂ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಆ ಮನೆ ಯಜಮಾನ ಅಥವಾ ಮನೆಯ ಸದಸ್ಯರು ಹಠ ಸ್ವಭಾವದ ವ್ಯಕ್ತಿತ್ವ ಉಳ್ಳವರಾಗಿಯೂ ಹಾಗೂ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳ ಬಲ್ಲವರಾಗಿಯೂ ಇರುತ್ತಾರೆ. ಇಂತಹ ಶನಿ ಗ್ರಹ ಅಧಿಪತ್ಯ ಹೊಂದಿದ ಮನೆಯ ಯಜಮಾನನು ಹಾಗೂ ಮನೆಯ ಸದಸ್ಯರು ಕಾರ ಮತ್ತು ಎಣ್ಣೆಯಿಂದ ಮಾಡಿದ ಪದಾರ್ಥಗಳನ್ನು ಹಾಗೂ ತಂಪು ಪಾನೀಯಗಳನ್ನು ಇಷ್ಟಪಡುತ್ತಾರೆ.
- ಬುಧ ಗ್ರಹ – ಮನೆಯ ಮುಖ್ಯ ದ್ವಾರವು ಉತ್ತರದ ಮಧ್ಯಭಾಗದಲ್ಲಿ ಇದ್ದಾಗ ಅಲ್ಲಿ ಬುಧ ಗ್ರಹವು ಅಧಿಪತ್ಯವನ್ನು ಹೊಂದಿರುತ್ತದೆ. ಬುಧ ಗ್ರಹವು ಅಧಿಪತ್ಯ ಹೊಂದಿರುವ ಮನೆಯಲ್ಲಿರುವ ಯಜಮಾನನು ಜ್ಞಾನಿಯು ಹಾಗೂ ಹಾಸ್ಯ ಮಾಡುವ ಸ್ವಭಾವ ಉಳ್ಳವನಾಗಿ ಇರುತ್ತಾನೆ. ಇವರು ಅತಿ ಬುದ್ಧಿವಂತರಾಗಿದ್ದು ಪುಸ್ತಕಗಳನ್ನು ಓದುವ ಮತ್ತು ಬರೆಯುವ ಹವ್ಯಾಸ ಉಳ್ಳವರಾಗಿರುತ್ತಾರೆ. ಇವರು ಯಾವುದೇ ಕೆಲಸವನ್ನು ಮಾಡಲು ಬೇಸರ ಮಾಡಿಕೊಳ್ಳುವುದಿಲ್ಲ ಹಾಗೂ ಎಲ್ಲವನ್ನು ಯೋಜನೆಗೆ ಅನುಗುಣವಾಗಿ ಮಾಡಿ ಮುಗಿಸುತ್ತಾರೆ. ಇವರು ಇಷ್ಟಪಡದೇ ಇರುವ ಯಾವುದೇ ಆಹಾರಗಳನ್ನೂ ಕೂಡ ಪ್ರೀತಿಯಿಂದ ತಿನ್ನುತ್ತಾರೆ.
- ಮಂಗಳ ಗ್ರಹ – ಮನೆಯ ಮುಖ್ಯದ್ವಾರವು ದಕ್ಷಿಣದ ಮಧ್ಯಭಾಗದಲ್ಲಿ ಇದ್ದರೆ ಮಂಗಳ ಗ್ರಹವು ಅಧಿಪತ್ಯವನ್ನು ಹೊಂದಿರುತ್ತದೆ. ದಕ್ಷಿಣದ ಮಧ್ಯಭಾಗದಲ್ಲಿ ಮುಖ್ಯದ್ವಾರ ಇರುವ ಮನೆಯ ಯಜಮಾನನು ತುಂಬಾ ದಿಟ್ಟ ಮನೋಭಾವವುಳ್ಳವನಗಿದ್ದರೂ ಮನಸು ಚಂಚಲತೆಯಿಂದ ಕೂಡಿರುತ್ತದೆ ಹಾಗೂ ಈ ಮನೆಯಲ್ಲಿ ಇರುವ ಕುಟುಂಬ ಸದಸ್ಯರು ತೀವ್ರ ಕೋಪವುಳ್ಳವರಾಗಿರುತ್ತಾರೆ. ಇವರು ಎಣ್ಣೆ ಪದಾರ್ಥಗಳನ್ನು ಮತ್ತು ಬಿಸಿ ಬಿಸಿ ಪದಾರ್ಥಗಳನ್ನು ಹೆಚ್ಚು ಇಷ್ಟಪಡುತ್ತಾರೆ.
- ಗುರು ಗ್ರಹ- ಮನೆಯ ಮುಖ್ಯದ್ವಾರವು ಉತ್ತರ ಈಶಾನ್ಯ ಅಥವಾ ಪೂರ್ವ ಈಶಾನ್ಯದಲ್ಲಿ ಇದ್ದರೆ ಆ ದಿಕ್ಕಿನಲ್ಲಿ ಗುರುಗ್ರಹವು ಅಧಿಪತ್ಯವನ್ನು ಹೊಂದಿರುತ್ತದೆ. ಇಂತಹ ಮನೆಗಳಲ್ಲಿನ ಯಜಮಾನನು ಗುಣವಂತನೂ, ದಯಾಶೀಲನು, ವಿದ್ಯಾವಂತನು, ವಿಚಾರವಂತನು, ಪರೋಪಕಾರಿಯೂ ಹಾಗೂ ಧಾರ್ಮಿಕ ಮನೋಭಾವವುಳ್ಳವನು ಆಗಿರುತ್ತಾನೆ ಹಾಗೂ ಈ ಮನೆಯಲ್ಲಿರುವ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸವನ್ನು ದೊರಕಿಸಿಕೊಳ್ಳುವುದರಲ್ಲಿ ಯಶಸ್ವಿ ಹೊಂದುತ್ತಾರೆ.
- ಶುಕ್ರ ಗ್ರಹ – ಮನೆಯ ಮುಖ್ಯದ್ವಾರವು ದಕ್ಷಿಣ ಆಗ್ನೇಯಲ್ಲಿ ಅಥವಾ ಪೂರ್ವ ಆಗ್ನೇಯಲ್ಲಿ ಇದ್ದಾಗ ಅಲ್ಲಿ ಶುಕ್ರಗ್ರಹವು ಅಧಿಪತ್ಯವನ್ನು ಹೊಂದುತ್ತದೆ. ಇಂತಹ ಮನೆಯ ಯಜಮಾನನು ಸದಾ ಸಂತೋಷಕರ ಹಾಗೂ ಭೋಗಭರಿತ ವ್ಯಕ್ತಿತ್ವ ಉಳ್ಳವನಾಗಿದ್ದು ಹೆಚ್ಚಿನ ಸಮಯವನ್ನು ಮನರಂಜನೆಯಲ್ಲಿ ಕೊಳ್ಳುತ್ತಾನೆ. ಇವರು ಸಂಗೀತಗಳನ್ನು, ಹಾಡುಗಳನ್ನು ಚಲನಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಪರಿಮಳಯುಕ್ತ ಹೂವುಗಳು, ಸೆಂಟ್ಗಳು, ಬಣ್ಣಬಣ್ಣದ ಬಟ್ಟೆಗಳು ಅಂದ್ರೆ ಇವರಿಗೆ ತುಬಾ ಇಷ್ಟ. ಆದರೆ ಪೂರ್ವ ಆಗ್ನೇಯ ದಿಕ್ಕಿನಲ್ಲಿ ಶುಕ್ರ ಗ್ರಹದ ಋಣಾತ್ಮಕ ಪ್ರಭಾವವಿರುವುದರಿಂದ ಅಲ್ಲಿ ಮುಖ್ಯದ್ವಾರವನ್ನು ಮಾಡಬಾರದು.
- ರಾಹು – ಮನೆಯ ಮುಖ್ಯದ್ವಾರವು ದಕ್ಷಿಣ ನೈರುತ್ಯದಲ್ಲಿ ಅಥವಾ ಪಶ್ಚಿಮ ನೈಋತ್ಯದಲ್ಲಿ ಇದ್ದರೆ ಅಲ್ಲಿ ರಾಹು ಅಧಿಪತ್ಯವನ್ನು ಹೊಂದಿರುತ್ತದೆ. ಇಂತಹ ಮನೆಗಳಲ್ಲಿ ರಾಹು ಅಧಿಪತ್ಯವನ್ನು ಹೊಂದಿರುವ ಕಾರಣಕ್ಕಾಗಿ ಮನೆ ಯಜಮಾನನು ಕ್ಷಿಪ್ರ ಕೋಪ ಮಾಡಿಕೊಳ್ಳುವ ಸ್ವಭಾವದವನು ಆಗಿರುತ್ತಾನೆ. ಮನೆ ಯಜಮಾನ ಹಾಗೂ ಮನೆಯ ಸದಸ್ಯರು ರಾಹುವಿನ ಪ್ರಭಾವಕ್ಕೆ ಒಳಪಟ್ಟು ದುರಹಂಕಾರಿಗಳಾಗಿ, ಬೇರೆಯವರಿಗೆ ಮೋಸ ಮಾಡುವ ಪ್ರವೃತ್ತಿ ಉಳ್ಳವರಾಗಿ ಹಾಗೂ ಕುತಂಟ್ರಿಗಳಾಗಿ ಜವನ ನಡೆಸುತ್ತಾರೆ. ಪ್ರತಿ ದಿನ ಒಂದಿಲ್ಲ ಒಂದು ಭಿನ್ನಾಭಿಪ್ರಾಯವನ್ನೂ ಮಾಡಿಕೊಂಡು ಬೇರೆಯವರ ಜೊತೆಗೆ ಜಗಳ ಮಾಡುತ್ತಿರುತ್ತಾರೆ. ಇವರು ಮಾಂಸಾಹಾರ ಹಾಗೂ ಅತಿಯಾಗಿ ಸಂಸ್ಕರಿಸಿದ ಆಹಾರವನ್ನು ಹೆಚ್ಚು ಸೇವಿಸುತ್ತಾರೆ ಆದ್ದರಿಂದ ಇವರಲ್ಲಿ ಸಾತ್ವಿಕ ಸ್ವಭಾವ ಕಡಿಮೆಯಾಗಿ ತಾಮಸಿಕ ಪ್ರವೃತ್ತಿ ವೃದ್ಧಿಗೊಳ್ಳುತ್ತದೆ.
- ಚಂದ್ರ – ಮನೆಯ ಮುಖ್ಯದ್ವಾರವು ಪಶ್ಚಿಮ ವಾಯುವ್ಯ ಹಾಗೂ ಉತ್ತರ ವಾಯುವ್ಯದಲ್ಲಿ ಇದ್ದರೆ ಅಲ್ಲಿ ಚಂದ್ರನು ಅಧಿಪತ್ಯವನ್ನು ಹೊಂದುತ್ತಾನೆ. ಇಂತಹ ಮನೆಗಳಲ್ಲಿ ವಾಸಿಸುವ ಯಜಮಾನನ ಮನಸ್ಸು ಭಾವನಾತ್ಮಕತೆಯಿಂದ ಹಾಗೂ ಚಂಚಲತೆಯಿಂದ ಕೂಡಿರುತ್ತದೆ ಹೀಗಾಗಿ ಇವನು ನಿರಂತರವಾಗಿ ಸುತ್ತಾಡಲು ಇಷ್ಟಪಡುತ್ತಾರೆ. ಉತ್ತರ ವಾಯುವ್ಯದಲ್ಲಿ ಮನೆಯ ಮುಖ್ಯ ಬಾಗಿಲು ಇದ್ದರೆ ಆಗ ಅದರಿಂದ ಆಗುವ ಋಣಾತ್ಮಕ ಪ್ರಭಾವದಿಂದ ಆ ಮನೆಯಲ್ಲಿನ ಸದಸ್ಯರಲ್ಲಿ ಯಾರಾದರೊಬ್ಬರು ಮಧ್ಯಪಾನ ಮಾಡುವ ಮತ್ತು ಸಿಗರೇಟ್ ಸೇದುವ ದುಶ್ಚಟಗಳನ್ನು ಅಂಟಿಸಿಕೊಂಡು ಬಿಡುತ್ತಾರೆ. ಆದ್ದರಿಂದ ಉತ್ತರ ವಾಯುವ್ಯ ದಿಕ್ಕಿಗೆ ಮನೆಯ ಮುಖ್ಯ ಬಾಗಿಲನ್ನು ಕೂರಿಸಲು ಸೂಚಿಸಲಾಗುವುದಿಲ್ಲ.
Similar article on vastu👇
Vastu in kannada ಸ್ವಸ್ತಿಕ ಮತ್ತು ಓಂ ಚಿಹ್ನೆಗಳು
Similar article 👇