ಅನಾಮಿಕನೊಬ್ಬ ಭೂಮಿ ನಡುಗುವ ರೀತಿ ದೊಡ್ಡ ದ್ವನಿಯಲ್ಲಿ “ಶಂಭೋ ಶಂಕರ” ಎನ್ನುತ್ತಾ ದೊಡ್ಡ ಶಂಖ ಒಂದನ್ನು ಉದುತ್ತಿದ್ದರೆ ಆ ಅನಾಮಿಕನು ಸಾಧಾರಣ ವ್ಯಕ್ತಿ ಆಗಿರುವ ಸಾಧ್ಯತೆ ತುಂಬಾ ವಿರಳ. ಈ ರೀತಿ “ಶಂಭೋ ಶಂಕರ” ಅಂತ ಭೂಮಿ ನಡುಗುವ ಹಾಗೆ ಘೋಷಣೆ ಮೊಳಗಿಸುವವರು ವಾರಣಾಸಿ, ಉಜ್ಜಯಿನಿ, ಅಸ್ಸಾಮಿನ ಗೌಹಾತಿಯ ಕಾಮಾಕ್ಯ ದೇವಸ್ಥಾನದ ಅಕ್ಕಪಕ್ಕದ ನಿರ್ಜನ ಪ್ರದೇಶದಲ್ಲಿ, ತ್ರಯಂಬಕೇಶ್ವರ, ಹಿಮಾಲಯದ ತಪ್ಪಲಿನಲ್ಲಿ, ಹಾಗೂ ಭಾರತ-ಚೀನಾ- ಟಿಬೆಟ್ ಗಡಿಭಾಗದಲ್ಲಿ ಕಾಣಸಿಗುತ್ತಾರೆ. ಇವರು ಗಾಳಿಯಲ್ಲಿ ಸಂಚರಿಸಬಲ್ಲರು, ನೀರಿನಲ್ಲಿ ತೇಲಬಲ್ಲರು, ವರ್ಣವಿದ್ಯೆಯನ್ನು ಪ್ರಯೋಗಿಸಿ ಕತ್ತಲೆಯಲ್ಲಿ ಪ್ರಚಂಡವಾದ ಬೆಳಕನ್ನು ಸೃಷ್ಟಿಸಿ ಆ ಬೆಳಕಿಗೆ ತಮಗಿಷ್ಟವಾದ ಬಣ್ಣಗಳನ್ನು ತುಂಬಬಲ್ಲರು, ಅಷ್ಟೇ ಏಕೆ ಮನೋಶಕ್ತಿಯಿಂದ ಮತ್ತೊಬ್ಬರನ್ನು ಕ್ಷಣಾರ್ಧದಲ್ಲಿ ವಶಿಕರಣ ಮಾಡಬಲ್ಲರು ಏಕೆಂದರೆ ಇವರು ಆಘೋರಿಗಳು! ಇವರ ಪಂಚೇಂದ್ರಿಯಗಳು ಬಹುಕಾರ್ಯ(Multifunction) ಮಾಡಬಲ್ಲವು! ಏಕೆಂದ್ರೆ ಇವರು ಅಘೋರಿ ಮಾಂತ್ರಿಕರು. ಜಗತ್ತಿನ ಯಾವುದೇ ಸ್ಥಳದಲ್ಲಿ ನಡೆಯುವ ವಿದ್ಯಮಾನವನ್ನು ಧ್ಯಾನದಲ್ಲಿ ಕುಳಿತು ಗ್ರಹಿಸಬಲ್ಲರು ಅಷ್ಟೇ ಏಕೆ ಅಘೋರ ಮಂತ್ರದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಮನುಷ್ಯನ ಮೇಲೆ ಶಕ್ತಿ ಪ್ರಯೋಗ ಮಾಡಿ ಕ್ಷಣಾರ್ಧದಲ್ಲಿ ಆತನನ್ನು ಉಸಿರುಗಟ್ಟಿಸಿ ಬಿಡಬಲ್ಲರು! ಆದರೆ ಸಾಮಾನ್ಯವಾಗಿ ಯಾವ ಅಘೋರಿಯೂ ಇಂಥ ಶಕ್ತಿ ಪ್ರಯೋಗಗಳನ್ನು ಮಾಡಲಾರರು. ಅವರಿಗೆ ಐಹಿಕ ಸುಖ ಭೋಗಗಳಲ್ಲಿ ಯಾವುದೇ ಒಲವಿರುವದಿಲ್ಲ. ಅವರ ಪರಮ ಉದ್ದೇಶ ಕೇವಲ ಸಾಧನೆ ಮುಖಾಂತರ ಮೋಕ್ಷ ಹೊಂದುವುದು. ಚಿತಾಭಸ್ಮವನ್ನು ಮೈ ತುಂಬಾ ಬಳೆದುಕೊಂಡು ಸ್ಮಶಾನದಲ್ಲಿ ಬಲಿಷ್ಠ ಅಷ್ಟ ದಿಗ್ಬಂಧನದ ನಡುವೆ ಪದ್ಮಾಸನ ಹಾಕಿಕೊಂಡು ಕ್ಷುದ್ರ ಶಕ್ತಿಗಳ ಸಾಧನೆಗೆ ಕುಳಿತರೆ ಶಂಭೋ ಶಂಕರ್ ಬಂದರು ಆ ದಿಗ್ಬಂಧನವನ್ನ ದಾಟಲಾರ. ಅಂತಹ ಮನೋದೈಹಿಕ ಸಿದ್ಧಿವುಳ್ಳವರು ಈ ಅಘೋರ ಸಾಧಕರು. ಹಗಲು ರಾತ್ರಿ ಲೆಕ್ಕಿಸದೆ ಮಂತ್ರ ಸಿದ್ಧಿಗಳನ್ನು ಪಡೆಯಲು ಅನೇಕ ದಿನಗಳ ಕಾಲ ಇವರು ನಿರಂತರವಾಗಿ ಪರಮ ಕಠೋರವಾದ ಸಾಧನೆಯಲ್ಲಿ ತೊಡಗಿರುತ್ತಾರೆ. ಅಘೋರ ವಿದ್ಯೆಗಳ ಸಾಧನೆಯ ಹಾದಿಯಲ್ಲಿ ಮೈಥುನವೇ ದೀಕ್ಷೆ! ಆದರೆ ಕೆಲವು ಕ್ಷುದ್ರ ಶಕ್ತಿಗಳ ಸಾಧನೆಯಲ್ಲಿ ಮೈಥುನದ ನಿರ್ಬಂಧತೆ ಇರುತ್ತದೆ. ಅಕಸ್ಮಾತ್ ಏಕಾಗ್ರತೆ ಕಳೆದುಕೊಂಡು ಮನಸ್ಸು ಕಾಮೋದ್ರೇಕಗೊಂಡುಬಿಟ್ಟರೆ ಸಾಧಕನ ಸಾವು ನಿಶ್ಚಿತ. ವಾಮಾಚಾರ ಪೂಜೆಗಳಲ್ಲಿ ಮಾಂಸವೇ ಪ್ರಸಾದ ಹಾಗೂ ಮದ್ಯವೇ ತೀರ್ಥ. ಅಘೋರಿಗಳು ಮಾಡುವ ಸಾಧನೆಗಳು ನಾಗರಿಕ ಮನುಷ್ಯನಲ್ಲಿ ಭಯ ಹುಟ್ಟಿಸಿಬಿಡುತ್ತವೆ. ಅವರದು ಏನಿದ್ದರೂ ವಿಸ್ಮಯಕಾರಿ ಲೋಕ, ಅತ್ಯಂತ ವಿಭಿನ್ನವಾದ ಜೀವನ ಶೈಲಿ, ವಿಚಿತ್ರವಾದ ಪರಂಪರೆ ಹಾಗೂ ನಾಗರಿಕರಲ್ಲಿ ಭಯ ಮತ್ತು ಕುತೂಹಲ ಹುಟ್ಟಿಸುವ ಪೂಜೆಯ ವಿಧಿ ವಿಧಾನಗಳು. ಅಘೋರಿಗಳ ಸಾಧನೆ ಪರಮ ಕಠೋರವಾದದ್ದು.
ಆಘೋರಿ ಎಂಬುದು ಮೂಲತಃ ಸಂಸ್ಕೃತ ಶಬ್ದ. ಅಘೋರ ಅಂದ್ರೆ ಅಂಧಕಾರ ರಹಿತ ಅಥವಾ ಭಯವಿಲ್ಲದವನು ಎಂದಾಗುತ್ತದೆ. ಸತ್ಯನಾಥ, ಸತೋಕನಾಥ, ಅದಿನಾಥ, ಆಕುಳಿತನಾಥ, ಮಾಜ್ಜೇಂದ್ರನಾಥ, ಘಟಯಂತ್ರನಾಥ, ಗೋರಕನಾಥ ಮಾತ್ತು ಗೋರಾಕ್ಷಯ ಎಂಬ ಈ ಒಂಬತ್ತು ಜನ ಸಿದ್ದರು ಅಘೋರಿ ವಿದ್ಯೆಯನ್ನು ಜಗತ್ತಿನ ಮೂಲ ಮಾಂತ್ರಿಕರಿಗೆ ಬೋಧಿಸಿದರು ಎಂದು ಅಘೋರ ಪರಂಪರೆ ಹೇಳುತ್ತದೆ. ಈ ಒಂಬತ್ತು ಜನ ಸಿದ್ಧಿ ಪುರುಷರುನ್ನು ಸಾಕ್ಷಾತ್ ಶಿವನ ರೂಪಗಳೆಂದೇ ಪರಿಗಣಿಸಲಾಗುತ್ತದೆ. ಅಘೋರಿಗಳು ಶಿವನ ಪರಮ ಭಕ್ತರು. ಇವರ ಕುರಿತು ಹೊರ ಜಗತ್ತಿಗೆ ತಿಳಿದಿರುವ ರಹಸ್ಯಗಳು ತುಂಬಾ ಕಡಿಮೆ. ಆದರೆ ನಮ್ಮಂತಹ ನಾಗರಿಕರಿಗೆ ಇವರು ಮಾಡುವ ಸಾಧನೆ, ಕ್ಷುದ್ರ ಶಕ್ತಿ ಪೂಜಾ ವಿಧಿ ವಿಧಾನಗಳ ಕುರಿತು ತಿಳಿದುಕೊಳ್ಳಬೇಕೆಂಬ ಕುತೂಹಲ ತುಂಬಾ ಇದೆ. ಇವರು ನಾಗರಿಗಕ ಸಮಾಜದಲ್ಲಿ ಇರಲಾರರು. ಭಾರತದ ಅತಿ ದೊಡ್ಡ ಕಾಶಿಯ ಸ್ಮಶಾನದಲ್ಲಿ, ಭಾರತದ ಎರಡನೆಯ ದೊಡ್ಡ ಸ್ಮಶಾನವಾದ ತರಾಪೀಠದಲ್ಲಿ ಹಾಗೂ ಅಸ್ಸಾಂಮಿನ ಗೌಹಾತಿಯಲ್ಲಿರುವ ಕಾಮಾಖ್ಯ ದೇವಸ್ಥಾನದ ಅಕ್ಕ ಪಕ್ಕದಲ್ಲಿರುವ ನಿರ್ಜನ ಕಾಡು ಪ್ರದೇಶಗಳಲ್ಲಿ ಅಘೋರಿಗಳು ಅತ್ಯಂತ ಕ್ಲಿಷ್ಟಕರವಾದ ಕ್ಷುದ್ರ ಶಕ್ತಿ ಸಾಧನೆಗಳನ್ನು ಮಾಡುತ್ತಿರುತ್ತಾರೆ. ಇವರು ನಾಗರಿಕ ಪ್ರದೇಶಗಳಿಗೆ ಬರುವುದು ತುಂಬಾ ಅಪರೂಪ. ಸುಮಾರು 4 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳಕ್ಕೆ ಅಘೋರುಗಳು ಎಲ್ಲಿದ್ದರೂ ಬಂದುಬಿಡುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು ಆಘೋರಿ ಗುಂಪುಗಳು ಬಹಳಷ್ಟು ಇದ್ದವು. ಆದರೆ ಅಘೋರಿಗಳ ಸಾಧನೆ ಪರಮ ಕಠೋರವಾದದ್ದು ಹೀಗಾಗಿ ಇತ್ತೀಚೆಗೆ ಇವರ ಸಂಖ್ಯೆ ತುಂಬಾ ಕಡಿಮೆ ಆಗುತ್ತಿದೆ.

ವಿಜ್ಞಾನ ಎಷ್ಟೇ ಬೆಳೆದರೂ ಕ್ಷುದ್ರ ಶಕ್ತಿಗಳನ್ನು ಅದು ಭೇದಿಸಲಾರದು. ಒಂದು ಸೀಮಿತವಾದ ಮಟ್ಟದವರೆಗೆ ಮಾತ್ರ ವಿಜ್ಞಾನಕ್ಕೆ ಬ್ರಹ್ಮಾಂಡದಲ್ಲಿನ ವಿದ್ಯಮಾನಗಳನ್ನು ಭೇದಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಮಾನವನ ಪಂಚೇಂದ್ರಿಯಗಳಿಗೂ ಅತ್ಯಂತ ಸೀಮಿತವಾದ ವಿದ್ಯಮಾನಗಳನ್ನು ಗ್ರಹಿಸುವ ಶಕ್ತಿಯಿದೆ. ನಮ್ಮ ಸುತ್ತಮುತ್ತ ನಡೆಯುವ ಅಸಂಖ್ಯಾತ ವಿದ್ಯಮಾನಗಳನ್ನು ನಮ್ಮ ಪಂಚೇಂದ್ರಿಯಗಳು ಗ್ರಹಿಸಲಾರವು ಹಾಗೂ ವಿಜ್ಞಾನಕ್ಕೂ ಕೂಡಾ ಅಸಂಖ್ಯಾತ ವಿದ್ಯಮಾನಗಳನ್ನು ಬೇಧಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ವಿಜ್ಞಾನಕ್ಕೂ ಕೂಡ ಒಂದು ಸೀಮಿತ ಮಟ್ಟ ಅನ್ನುವುದು ಇದೆ. ನಾವು ಜ್ಞಾನವನ್ನು ಅಥವಾ ವರ್ತಮಾನದಲ್ಲಿ ನಡೆಯುವ ವಿದ್ಯಮಾನಗಳನ್ನು ಮೂರು ರೀತಿಯಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಮೊದಲನೆಯದು ಪ್ರತ್ಯಕ್ಷ ಗ್ರಹಿಕೆ (Direct sense preception). ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಮತ್ತು ಚರ್ಮದಿಂದ ನೇರವಾಗಿ ಗ್ರಹಿಸಲ್ಪಡುವ ವಿದ್ಯಮಾನಗಳನ್ನು ಪ್ರತ್ಯಕ್ಷ ಗ್ರಹಿಕೆ ಎನ್ನಲಾಗುತ್ತದೆ. ಇನ್ನು ಎರಡನೆಯ ರೀತಿಯಲ್ಲಿ, ಜ್ಞಾನವನ್ನು ಅಥವಾ ವಿದ್ಯಮಾನಗಳನ್ನು ಮತ್ತೊಂದು ಅಂಶದ ಸಂಬಂಧವನ್ನು ಆಧಾರವಾಗಿ ಇಟ್ಟುಕೊಂಡು ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ವಿಧಾನಕ್ಕೆ ಅನುಮಾನ ಗ್ರಹಿಕೆ ಎನ್ನಲಾಗುತ್ತದೆ. ಅಥವಾ ತರ್ಕದಿಂದ(logic) ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ಜ್ಞಾನವನ್ನು ಅನುಮಾನ ಗ್ರಹಿಕೆ ಎನ್ನಲಾಗುತ್ತದೆ. ಉದಾಹರಣೆಗೆ ಭೂಕಂಪ ಆಗುವುದಕ್ಕಿಂತ ಎಷ್ಟೋ ಘಂಟೆಗಳ ಮೊದಲು ಪ್ರಾಣಿಗಳ ನಡುವಳಿಕೆಯಲ್ಲಿ ವಿಪರೀತವಾಗಿ ಬದಲಾವಣೆಗಳು ಆಗುತ್ತವೆ. ಪ್ರಾಣಿಗಳ ನಡವಳಿಕೆಯಲ್ಲಿ ಆಗುವ ಬದಲಾವಣೆಯ ಆಧಾರದ ಮೇಲೆ ಭೂಕಂಪ ಆಗುವುದರ ಕುರಿತು ತರ್ಕ ಮಾಡಲು ಸಾಧ್ಯವಾಗುತ್ತದೆ. ಈ ರೀತಿ ನಾವು ಗ್ರಹಿಸುವುದಕ್ಕೆ ಅನುಮಾನ ಗ್ರಹಿಕೆ ಎಂದು ಕರೆಯಲಾಗುತ್ತದೆ. ಹಾಗೂ ಇನ್ನು ಮೂರನೇ ರೀತಿಯಲ್ಲಿ ಜ್ಞಾನವನ್ನು ಗ್ರಹಿಸುವ ಬಗೆ ಅಂದರೆ ಅದು ಶಬ್ದ ಗ್ರಹಿಕೆ (Revealed knowledge from God). ವಿಷ್ಣುವಿನ ಅವತಾರವಾದ ಹಾಗೂ ಔಷಧಿಗಳ ಮಹಾಪಿತನಾದ ಧನ್ವಂತರಿಯು ಸುಶೃತ ಋಷಿಗೆ ಕನಸಿನಲ್ಲಿ ಆಯುರ್ವೇದ ಶಾಸ್ತ್ರವನ್ನು ಕಥಾರೂಪದಲ್ಲಿ ಉಪದೇಶಿಸಿದನಂತೆ. ನಂತರ ಕಥಾರೂಪದಲ್ಲಿ ಬೋದಿಸಲ್ಪಟ್ಟ ಆಯುರ್ವೇದವನ್ನು ಸುಶೃತ ಋಷಿಯು ಸುಶೃತ ಸಂಹಿತೆ ಅಂತ ಗ್ರಂಥವನ್ನಾಗಿ ಬರೆದನಂತೆ. ಹೀಗೆ ನೇರವಾಗಿ ದೇವರಿಂದ ಬಂದ ಜ್ಞಾನವನ್ನು ಶಬ್ದ ಗ್ರಹಿಕೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಆಗುವ ಇಂತಹ ಅನುಭವನ್ನು ಆಧುನಿಕ ವಿಜ್ಞಾನವು Astral experience ಅಂತ ಹೇಳುತ್ತದೆ.
ಭಗವದ್ಗೀತೆಯಲ್ಲಿರು ಶ್ಲೋಕಗಳೂ ಕೂಡ ನಮಗೆ ಶಬ್ದ ಗ್ರಹಿಕೆಯಿಂದ ಸಿಕ್ಕಿವೆ. ಋಷಿಗಳ ಕಠೋರವಾದ ತಪಸ್ಸಿಗೆ ಪರಮಾತ್ಮನು ಪ್ರತ್ಯಕ್ಷನಾಗಿ ತಪಸ್ಸಿಗೆ ಮೆಚ್ಚಿ ಋಷಿಗಳಿಗೆ ವರವಾಗಿ ನೀಡಿದ ಜ್ಞಾನವು ಕೂಡಾ ಶಬ್ದ ಗ್ರಹಿಕೆಯಿಂದ ಬಂದದ್ದಾಗಿರುತ್ತದೆ. ಕಠೋರವಾದ ತಪಸ್ಸಿನಿಂದ ದೇವರನ್ನು ಮೆಚ್ಚಿಸಿ ಶಬ್ದ ಗ್ರಹಿಕೆಯಿಂದ ಪಡೆದ ಜ್ಞಾನವನ್ನು ಪ್ರಾಚೀನ ಋಷಿಗಳು ಗ್ರಂಥಗಳನ್ನಾಗಿ ಬರೆದರು! ಹೀಗೆ ಪ್ರಾಚೀನ ಕಾಲದಲ್ಲಿ ಸಿದ್ಧಿ ಪುರುಷರು ಅನೇಕ ವಿದ್ಯಗಳನ್ನು ಶಬ್ದ ಗ್ರಹಿಕೆಯಿಂದ ಪಡೆಯುತ್ತಿದ್ದರು. ಹೀಗೆ ಶಬ್ದ ಗ್ರಹಿಕೆಯಿಂದ ಪಡೆಯುತ್ತಿದ್ದ ಅನೇಕ ವಿದ್ಯೆಗಳಲ್ಲಿ ಅಘೋರಿ ವಿದ್ಯೆಯೂ ಒಂದು! ಹೀಗೆ ಶಬ್ದ ಗ್ರಹಿಕೆಯ ಮುಖಾಂತರ ಕ್ಷುದ್ರ ದೇವರುಗಳಿಂದ ಬಂದ ಅಘೋರ ವಿದ್ಯೆಯನ್ನು ವಿಜ್ಞಾನವು ಭೇದಿಸಲು ಸಾಧ್ಯವಿಲ್ಲ. ಶತಮಾನಗಳ ಹಿಂದೆ ಅಗ್ನಿನಾಥ ಎಂಬ ಆಘೋರಿಯು ತನ್ನ ಕಣ್ಣಿನಿಂದ ಕತ್ತಲೆಯಲ್ಲಿ ಬೆಳಕನ್ನು ಹೊರಸೂಸುವ ಹಾಗೂ ತಮಗಿಷ್ಟವಾದ ಬಣ್ಣವನ್ನು ಹೊಂದಿದ ವರ್ಣಗೋಲವನ್ನು ಸೃಷ್ಟಿಸುವ ವರ್ಣವಿದ್ಯೆಯನ್ನು ಸಿದ್ಧಿ ಮಾಡಿಕೊಂಡಿದ್ದ ಅಂತ ಅಘೋರ ಇತಿಹಾಸ ಹೇಳುತ್ತದೆ. “ಈ ಅಗ್ನಿನಾಥನು ತನ್ನ ಕಣ್ಣು ಗುಡ್ಡೆಗಳನ್ನು ದೀರ್ಘ ವೃತ್ತಾಕಾರವಾಗಿ ತಿರುಗಿಸುತ್ತಾ ಒಂದು ಸತಿ ಗುಡ್ಡೆಗಳು ಒಳಕ್ಕೆ ಹೋದವೇನೋ ಅನ್ನುವಹಾಗೆ ಮಾಡಿಕೊಂಡು ಮತ್ತೆ ಕಣ್ಣು ಗುಡ್ಡೆಗಳನ್ನು ಸ್ಥಿರಗೊಳಿಸಿದ ತಕ್ಷಣ ಒಮ್ಮಿಂದೊಮ್ಮಿಲೇ ಲೇಸರ್ ಕಿರಣದ ಹಾಗೆ ಬೆಂಕಿಯಷ್ಟು ಪ್ರಖರವಾದ ಬೆಳಕಿನ ಕಿರಣಗಳು ಹಾಗೂ ಅನಂತ ಬೆಳಕಿನ ಗೋಲಗಳು ಒಂದರ ಹಿಂದೆ ಮತ್ತೊಂದರಂತೆ ಕಣ್ಣಿನಿಂದ ಹೊರ ಬಂದ ಬಿಡುತ್ತಿದ್ದವು” ಅಂತ ಈಗಿನ ಕಾಲದ ಅಘೋರಿಗಳು ಶತಮಾನಗಳ ಹಿಂದೆ ಇದ್ದ ಅಗ್ನಿನಾಥನ ಕುರಿತು ಹೇಳುತ್ತಾರೆ. ವಿಜ್ಞಾನಕ್ಕೆ ತನ್ನದೇ ಆದ ಸೀಮಿತ ಮಟ್ಟ ಇದೆ( Science has certain limitations). ಈ ವರ್ಣವಿದ್ಯೆ ಪ್ರಯೋಗಯು ಭೌತಶಾಸ್ತ್ರದ ಶಕ್ತಿ ಸಂರಕ್ಷಣಾ ನಿಯಮಕ್ಕೆ(Law of conversation of energy) ನಿಲುಕದಂತಹದ್ದು.
ಶಿವನು ತನ್ನ ಮೂರನೇ ಕಣ್ಣನ್ನು ತೆರೆದಾಗ ಹೊರ ತೂರಿ ಬಂದ ಬೆಂಕಿಯಿಂದ ಕಾಮದೇವನು ಸುಟ್ಟು ಬೂದಿ ಆದ ಅಂತ ಪುರಾಣಗಳಲ್ಲಿ ಕೇಳುದ್ದೇವೆ ಹಾಗೂ ಪುಣ್ಯ ಕಥೆಗಳಲ್ಲಿ ಓದಿದ್ದೇವೆ. ಅಷ್ಟೇ ಏಕೆ ಕೌಶಿಕ ಋಷಿಯ ತನ್ನ ದೃಷ್ಟಿಯನ್ನು ಗಿಡದ ಮೇಲೆ ಕುಳಿತ ಪಕ್ಷಯ ಕಡೆಗೆ ತಿರುಗಿಸಿದಗ ತಕ್ಷಣ ಪಕ್ಷಿಗೆ ಬೆಂಕಿ ತಗಲಿ ಸತ್ತುಹೋಗುತದೆ ಎಂಬ ಕಥೆಯು ಅತ್ಯಂತ ಪ್ರಚಲಿತವಾಗಿದೆ. ಅಗ್ನಿನಾಥನ ಕಣ್ಣಿನಿಂದ ಹೊರ ತುರಿ ಬರುತ್ತಿದ್ದ ಬೆಳಕು, ಶಿವನ ಮೂರನೇ ಕಣ್ಣಿನಿಂದ ಹೊರ ತುರಿ ಬರುವ ಬೆಂಕಿ ಹಾಗೂ ಕೌಶಿಕ ಋಷಿಯು ದೃಷ್ಟಿಯಿಂದ ಗಿಡದ ಮೇಲೆ ಕುಳಿತ ಪಕ್ಷಿಗೆ ಬೆಂಕಿ ತಗಲಿದ್ದು, ಈ ಮೂರು ಪ್ರಕ್ರಿಯೆಗಳು ಹೆಚ್ಚು ಕಡಿಮೆ ಒಂದೆ ವಿದ್ಯಮಾನಕ್ಕೆ ಸೇರಿದಂತವುಗಳು!
ಇಂತಹ ವಿದ್ಯಮಾನಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಸಿಗಲಾರುವು. ಏನಿದ್ದರೂ ಪುರಾಣ ಪುಣ್ಯ ಕಥೆಗಳಲ್ಲಿ ಇಂಥ ವಿದ್ಯಮಾನಗಳ ಕುರಿತು ಉಲ್ಲೇಖಗಳು ಇವೆ. ಹಾಗೂ ಈ ತರದ ಅನೇಕ ಬೇರೆ ಬೇರೆ ರಹಸ್ಯ ವಿದ್ಯೆಗಳ ಕುರಿತಾದ ವಿದ್ಯಮಾನಗಳ ಮಾಹಿತಿಯು ತಲೆಮಾರದಿಂದ ತಲೆಮಾರಕ್ಕೆ ಬಾಯಿ ಮುಖಾಂತರ ಹರಿದು ಬಂದಿವೆ. ನಾಸ್ತಿಕರು ವೈಜ್ಞಾನಿಕ ಪುರಾವೆಗಳನ್ನು ಕೇಳಿದರೆ ಹಿರಿಯ ಆಸ್ತಿಕರು ಕಿರಿಯರಿಗೆ ಪ್ರಾಚೀನ ವಿದ್ಯೆಗಳ ಮಾಹಿತಿಯನ್ನು ಬಾಯಿಂದ ಬಾಯಿಗೆ ತಲುಪುಸಲು ಯಶಸ್ವಿಯಾಗಿದ್ದಾರೆ. ನಂಬುವುದು ಬಿಡುವುದು ಓದುಗರಿಗೆ ಬಿಟ್ಟದ್ದು. ಆದರೆ ಕುಂಭಮೇಳಕ್ಕೆ ಬಂದ ಅನೇಕ ಅಘೋರಿಗಳು ಹಾಗೂ ನಾಗಸಾಧುಗಳು ವಿಜ್ಞಾನಕ್ಕೆ ನಿಲುಕದ ಅನೇಕ ವಿದ್ಯಮಾನಗಳನ್ನು ಇವತ್ತಿಗೂ ಮಾಡಿ ತೋರಿಸುತ್ತಾರೆ. ಯಂತ್ರ ಮಂತ್ರ ತಂತ್ರದ ಕುರಿತು ಸಂದೇಹ ಇದ್ದವರು, ಪವಾಡಗಳನ್ನು ಬಯಲು ಮಾಡುವವರು ಹಾಗೂ ಅಘೋರ ವಿದ್ಯೆಗಳ ಕುರಿತು ಮತ್ತಷ್ಟು ಸ್ಪಷ್ಟೀಕರಣ ಬೇಕು ಅನ್ನುವವರು ಅಘೋರಿಗಳನ್ನು ಸಂಪರ್ಕಿಸಬಹುದು. ಏನಾದರೂ ತೊಂದರೆ ಆದರೆ ಜವಾಬ್ದಾರಿ ನಮ್ಮದಲ್ಲ. ಏಕೆಂದ್ರೆ ಅಘೋರಿಗಳ ಸಾಧನೆ ಪರಮ ಕಠೋರವಾದದ್ದು.
Configuration of soul 👇
https://anveshana.in/antimaterial-partical/
Atomic Theory 👇