ಆತ್ಮವು ಎಂಟಿಮಟಿರಿಯಲ್ ಕಣಗಳ ಸಂಯೋಜನೆಯಿಂದಾಗಿದೆ. ಹೀಗಾಗಿ ಆತ್ಮವನ್ನು ವಿನಾಶ ಮಾಡಲು ಸಾಧ್ಯವಿಲ್ಲ. ವಿಜ್ಞಾನ ಕ್ಷೇತ್ರವು ನಿರಂತರವಾಗಿ ವಿಕಸನದ ಹಾದಿಯಲ್ಲಿ ಇರುತ್ತದೆ. ವಿಜ್ಞಾನದ ವಿಕಸನದ ಹಾದಿಯಲ್ಲಿ ಅನೇಕ ಸಂಶೋಧನೆಗಳು ಆದವು ಹೊರತು ಒಬ್ಬನಿಂದ ಆದ ಒಂದು ಸೌಂಶೋಧನೆ ಅಂತಿಮ ಅಂತ ನಿರ್ಧರಿಸಲ್ಪಡಲು ಸಾಧ್ಯವೇ ಇಲ್ಲ. ( Science is evolution and it is not ones credit) ನಿರಂತರವಾಗಿ ಆಗಲ್ಪಡುತ್ತಿರುವ ವಿಜ್ಞಾನದ ವಿಕಸನದಿಂದ ಭವಿಷ್ಯದಲ್ಲಿ ಬ್ರಹ್ಮಾಂಡದ ಆಚೆಗೆ ಇರುವ ಎಂಟಿಮಟಿರಿಯಲ್ ಜಗತ್ತು ಸೌಂಶೋಧನೆ ಆಗಲ್ಪಡುವದರಲ್ಲಿ ಸಂದೇಹವಿಲ್ಲ. ಅಕ್ಟೋಬರ್ 26, 1959ರಂದು ಅಮೇರಿಕಾದ ಇಬ್ಬರು ಅಣು ವಿಜ್ಞಾನಿಗಳು ಎಂಟಿಪ್ರೋಟಾನ್ ಸಂಶೋಧನೆ ಮಾಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದರು. ವಸ್ತುಗಳ ರಚನೆ ಎರಡು ತರ ಇರುತ್ತವೆ. ಒಂದು ಕಣ(particle) ಮತ್ತೊಂದು ವಿರುದ್ದ ಕಣ (antiparticle) ಎಂಬುದನ್ನು ಈ ವಿಜ್ಞಾನಿಗಳು ಆವಿಷ್ಕಾರ ಮಾಡಿದ್ದರು. ಅಕ್ಟೋಬರ್ 27, 1959ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಈ ಆವಿಷ್ಕಾರದ ಕುರಿತ ವರದಿ ಒಂದನ್ನು ಮಾಡಿತ್ತು

ಈ ಒಂದು ಹೊಸ ಆವಿಸ್ಕಾರದ ಕಲ್ಪನೆಯ ಆಧಾರ ಮೇಲೆ ಎಂಟಿಮಟಿರಿಯಲ್ ಜಗತ್ತು ಅನಂತ ದೂರದಲ್ಲಿ ಬ್ರಹ್ಮಾಂಡದ ಆಚೆಗೆ ಇರಬಹುದು ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಎಂಟಿಮಟಿರಿಯಲ್ ಅಟೋಮ್ ಹಾಗೂ ಎಂಟಿಮಟಿರಿಯಲ್ ಜಗತ್ತಿನ ಕುರಿತು ಇವತ್ತಿನ ವಿಜ್ಞಾನಕ್ಕೆ ನಿಲುಕುವ ಅಂಶಗಳು ಅತ್ಯಂತ ಸೀಮಿತವಾಗಿವೆ. ಮಟಿರಿಯಲ್ ಅಟೋಮಿನಲ್ಲಿರುವ ಇಲೆಕ್ಟ್ರಾನ್ಸ್ಗಳು ಬೇರೆ ಬೇರೆ ಕಕ್ಷೆಗಳಲ್ಲಿ ಒಂದೇ ದಿಕ್ಕಿನಲ್ಲಿ ಸುತ್ತಿದರೆ ಎಂಟಿಮಟಿರಿಯಲ್ ಅಟೋಮಿನಲ್ಲಿರುವ ಇಲೆಕ್ಟ್ರಾನ್ಸ್ಗಳು ಪರಸ್ಪರರ ತದ್ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತಿರುತ್ತವೆ. ಈ ಕಾರಣಕ್ಕಾಗಿ ಎಂಟಿಮಟಿರಿಯಲ್ ಕಣವು ಚಿರವಾಗಿರುತ್ತದೆ. (Antimalarial particle is always eternal) ಎಂಟಿಮಟಿರಿಯಲ್ ಕಣದ ಗುಣಲಕ್ಷಣಗಳು ಮಟಿರಿಯಲ್ ಕಣದ ಗುಣಲಕ್ಷಣಗಳಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿರುತ್ತವೆ. ಎಂಟಿಮ್ಯಾಟರ್ ಅನ್ನು ಯಾವುದೇ ಕಾರಣಕ್ಕೂ ವಿನಾಶ ಮಾಡಲು ಅಥವಾ ವಿಭಜಿಸಲು ಸಾಧ್ಯವಿಲ್ಲ. ಎಂಟಿಮ್ಯಾಟರ್ಗೆ ಸರ್ವನಾಶವಾಗುವ ಯಾವುದೇ ಗುಣಲಕ್ಷಣಗಳು ಇರಲಾರವು.
ಪ್ರಪಂಚದಲ್ಲಿ ವೇದಗಳು ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದ ಪ್ರಾಚೀನ ಗ್ರಂಥಗಳು. ವೇದಗಳನ್ನು ಒಟ್ಟು ನಾಲ್ಕು ಭಾಗಗಳನ್ನಾಗಿ ಮಾಡಲಾಗುದೆ ಸಾಮವೇದ, ಯಜುರ್ವೇದ, ಋಗ್ವೇದ,ಮತ್ತು ಅಥರ್ವಣವೇದ. ಸಾಮಾನ್ಯ ಜನರಿಗೆ ಈ ವೇದಗಳನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರ. 18 ಪುರಾಣಗಳಲ್ಲಿ, ರಾಮಾಯಣ ಮತ್ತು ಮಹಾಭಾರತದಲ್ಲಿ ವೇದಗಳಲ್ಲಿನ ಅನೇಕ ಅಂಶಗಳನ್ನು ಸ್ಪಷ್ಟೀಕರಣಗೊಳಿಸಲಾಗಿದೆ. ಭಗವದ್ಗೀತೆಯಲ್ಲಿ ಸರ್ವನಾಶವಾಗದ ಶಕ್ತಿಯ ಉಲ್ಲೇಖವಿದೆ. ಈ ಶಕ್ತಿಯು ಪರಿವರ್ತನೆ ಆಗಲಾರದು. ಬೆಂಕಿಯಿಂದ ಸುಡಲಾರದು. ಯಾವುದೇ ಶಸ್ತ್ರಾಸ್ತ್ರಗಳಿಂದ ಗಾಯಗೊಳಿಸಲು ಅಥವಾ ವಿಭಜಿಸಲು ಸಾಧ್ಯವಿಲ್ಲ. ನೀರಿನಿಂದ ತೇವಗೊಳ್ಳಲಾರದು. ಗಾಳಿಯಲ್ಲಿ ಒಣಗಲಾರದು ಅಥವಾ ಆವಿಯಾಗಲಾರದು. ಸುಡಲಾರದು ಹಾಗೂ ಯಾವುದೇ ದ್ರವಾದಲ್ಲೂ ಕರಗಲಾರದು. ಅದು ಚಿರವಾಗಿರುವ ಶಕ್ತಿ. ಅದುವೇ ಆತ್ಮ! ಎಂಟಿಮಟಿರಿಯಲ್ ಕಣಗಳಿಂದ ಸಂಯೋಜನೆ ಆಗಲ್ಪಟ್ಟಿರುವ ಶಕ್ತಿಯ ರೂಪವೇ ಆತ್ಮ!
ಉನ್ನತವಾದ ಶಕ್ತಿಯ ಕುರಿತು ಪರಪ್ರಕ್ರತಿ ಅಂತ ಭಗವದ್ಗೀತೆಯಲ್ಲಿ ಅತ್ಯಂತ ಸ್ಪಷ್ಟವಾದ ಉಲ್ಲೇಖವಿದೆ. ಅಧುನಿಕ ವಿಜ್ಞಾನಿಗಳು ಇತ್ತೀಚೆಗೆ ವಸ್ತು(Matter) ಮತ್ತು ವಿರುದ್ಧ ವಸ್ತು (Antimatter) ಕುರಿತು ಸಂಶೋಧನೆ ನಡೆಸಿದ್ದಾರೆ. ವಸ್ತುವಿನಿಂದ ಐಹಿಕ(Material world) ಬ್ರಹ್ಮಾಂಡ ಹುಟ್ಟಿಕೊಂಡದೆ. ಆದರೆ ವಿರುದ್ಧ ವಸ್ತುವಿನ ಸಂಯೋಜನೆಯಿಂದ ಕುಡಿದ ಆಧ್ಯಾತ್ಮಿಕ ಬ್ರಹ್ಮಾಂಡ (Antimaterial world) ಚಿರವಾಗಿ ಇದೆ. ಆತ್ಮವು ವಿರುದ್ಧ ವಸ್ತುವಿನ(Antimaterial) ಸಂಯೋಜನೆಯನ್ನು ಹೊಂದಿರುತ್ತದೆ. ಇವತ್ತಿನ ವಿಜ್ಞಾನಿಗಳು ವಸ್ತುಗಳು ಎರಡು ಬೇರೆ ಬೇರೆ ರಚನೆಯಲ್ಲಿ ಇರುತ್ತವೆ ಎಂದು ಕಂಡು ಹಿಡಿದಿದ್ದಾರೆ. ಒಂದು ಬಗೆಯ ರಚನೆಯುಳ್ಳ ವಸ್ತುವನ್ನು (matter) ಭಗವದ್ಗೀತೆಯಲ್ಲಿ ಅಪಾರ ಪ್ರಕ್ರತಿ ಎಂದು ಉಲ್ಲೇಖಿಸಲಾಗಿದೆ. ಹಾಗೂ ಮತ್ತೊಂದು ಬಗೆಯ ರಚನೆಯುಳ್ಳ ವಿರುದ್ಧ ವಸ್ತುವನ್ನು(Antimatter) ಭಗವದ್ಗೀತೆಯಲ್ಲಿ ಪರಪ್ರಕ್ರತಿ ಎಂದು ಉಲ್ಲೇಖವಿದೆ. (ಆತ್ಮವು ಎಂಟಿಮಟಿರಿಯಲ್ ಕಣಗಳ ಸಂಯೋಜನೆಯಿಂದಾಗಿದೆ)
ಬೆಳಕಿನ ಶಕ್ತಿ ಮತ್ತು ಶಾಖ ಶಕ್ತಿ ಬೆಂಕಿಯಂಬ ಪ್ರಬಲ ಶಕ್ತಿಯ ಮೂಲದಿಂದ ಉತ್ಪತ್ತಿ ಆಗಲ್ಪಡುವ ಉಪ ಶಕ್ತಿಗಳು. ಬೆಳಕು ಮತ್ತು ಶಾಖಕ್ಕೆ ಬೆಂಕಿಯ ಹೊರಗಡೆ ಸ್ವತಂತ್ರ ಅಸ್ತಿತ್ವ ಇರಲಾರದು. (light and heat have no independent existence out of fire) ಇದೆ ರೀತಿ ಮಟಿರಿಯಲ್ ಶಕ್ತಿ ಮತ್ತು ಎಂಟಿಮಟಿರಿಯಲ್ ಶಕ್ತಿ ಒಂದು ಪ್ರಚಂಡ ಶಕ್ತಿಯ ಮೂಲದಿಂದ ಉದ್ಭವಿಸಲ್ಪಡುತ್ತವೆ. ಆ ಪ್ರಚಂಡ ಶಕ್ತಿ ಮತ್ತೇನೂ ಅಲ್ಲ ಅದು ಎಲ್ಲವನ್ನು ಗ್ರಹಿಸಬಲ್ಲ ಇಂದ್ರಿಯಗಳನ್ನು ಹೊಂದಿದ ಜೀವಿ! ಆದರೆ ಮಟಿರಿಯಲ್ ಶಕ್ತಿಯಿಂದ ಆದ ಈ ದೇಹವು ಬಾಲ್ಯವಸ್ಥೆಯಿಂದ ತರುಣಾವಸ್ಥೆ ಹಾಗೂ ತರುಣಾವಸ್ಥೆ
ಮಧ್ಯ ವಯಸ್ಸನ್ನು ತಲುಪಿ ಮುಂದಕ್ಕೆ ದೇಹವು ಮುಪ್ಪವಸ್ಥೆ ತಲಿಪಿಬಿಡುತ್ತದೆ. ಹಾಗೂ ಕಟ್ಟ ಕಡೆಗೆ ಎಂಟಿಮಟಿರಿಯಲ್ ಕಣಗಳ ಸಂಯೋಜನೆಯಿಂದ ಆದ ಆತ್ಮವು ದೇಹವನ್ನು ತ್ಯಜಿಸಿ ಮತ್ತೊಂದು ಹೊಸ ದೇಹವನ್ನು ಪಡೆಯುತ್ತದೆ. ಈ ಪ್ರಕೃತಿ ನಿಯಮದಿಂದ ಯಾರೊಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಈಗಿನ ಆಧುನಿಕ ವಿಜ್ಞಾನಿಗಳು ಮಟಿರಿಯಲ್ ಮತ್ತು ಎಂಟಿಮಟಿರಿಯಲ್ ಕಣಗಳ ಗುಣಸ್ವಭಾವಗಳನ್ನು ಅಸ್ಥಿರ(Temporary) ಮತ್ತು ಚರಾಯ(permanent) ಎಂದು ಕ್ರಮವಾಗಿ ಉಲ್ಲೇಖಿಸಿದ್ದಾರೆ. ಆದರೆ ಈ ಎಂಟಿಮಟಿರಿಯಲ್ ಕಣದ ಕುರಿತು ಇನ್ನಷ್ಟು ಮತ್ತಷ್ಟು ಅಂಶಗಳನ್ನು ವೈಜ್ಞಾನಿಕವಾಗಿ ದೃಢಪಡಿಸಬೇಕೆಂದ್ರೆ ಸಂಶೋಧನೆಗಳು ನಡೆಯುವುದು ಅವಶ್ಯಕತೆ ಇದೆ. ಎಂಟಿಮಟಿರಿಯಲ್ ಕಣದ ಮೇಲೆ ಬೆಳಕು ಚೆಲ್ಲುವ ಸಂಶೋಧನೆಗಳು ಮುಂದಿನ ದಿನಗಳಲ್ಲಿ ಆಗಲಿ ಅಂತ ನಾವೆಲ್ಲರೂ ಆಶಿಸೋಣ.
Article on Aghori loka 👇
DURGA MATA 👇