ಮನೆಮನೆಯಲ್ಲಿ ಮಧುಮೇಹ. ಭಾರತವನ್ನು ಜಗತ್ತಿನ ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ ಎಂಬುದು ನಿಜವಾಗಲೂ ಅತ್ಯಂತ ಆಘಾತಕಾರಿ ಸಂಗತಿ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಮಧುಮೇಹದ (Indian council of medical research) ಕುರಿತು ಪೂರ್ತಿಯಾಗಿ ಒಂದು ಅಧ್ಯಯನ ಮಾಡಿ ಭಾರತದಲ್ಲಿ ಮಧುಮೇಹದಿಂದ ಬಳಲುವವರ ಅಂಕಿ ಅಂಶಗಳನ್ನು ಪ್ರಕಟ ಮಾಡಿದೆ. ಭಾರತದಲ್ಲಿ 10 ಕೋಟಿಗಿಂತಲೂ ಹೆಚ್ಚಿನ ಜನ ಇವತ್ತು ಮಧುಮೇಹದಿಂದ ಬಳಲುತ್ತಿದ್ದಾರೆ. ಇನ್ನು 13.6 ಕೋಟಿಯಷ್ಟು ಜನರು ಪೂರ್ವ ಮಧುಮೇಹದಿಂದ (Prediabetes) ಬಳಲುತ್ತಿದ್ದಾರೆ. ಇಡೀ ದೇಶಾದ್ಯಂತ ಅತ್ಯಂತ ವ್ಯಾಪಕವಾಗಿ ಮಧುಮೇಹವು ಅಥವಾ ಸಕ್ಕರೆ ಕಾಯಿಲೆ ಹಬ್ಬುತ್ತಿದೆ. ಪೂರ್ವ ಮಧುಮೇಹದಿಂದ ಬಳಲುವವರಿಗೆ ದೇಹದಲ್ಲಿ ಮೇದೋಜೀರಕ ಗ್ರಂಥಿಯು (pancreas) ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದನೆ ಮಾಡುವುದಿಲ್ಲ. ಹೀಗಾಗಿ ಪೂರ್ವ ಮಧುಮೇಹದಿಂದ ಬಳಲುವವರಿಗೆ ರಕ್ತದಲ್ಲಿ ಸಕ್ಕರೆ ಅಂಶ ತುಂಬಾ ಹೆಚ್ಚು ಇರುತ್ತದೆ. ಭಾರತದಲ್ಲಿ ಇರುವ ಈ 13.6 ಕೋಟಿ ಪೂರ್ವ ಮಧುಮೇಹದಿಂದ ಬಳಲುತ್ತಿರುವ ಜನರ ಮೇದೋಜೀರಕ ಗ್ರಂಥಿಯು (pancreas) ಇನ್ಸುಲಿನ್ ಉತ್ಪಾದನೆ ಮಾಡುವ ಕೆಲಸವನ್ನು ಮುಂದಿನ ಕೆಲವೇ…
Author: Anveshana
18th February 3102 ರಂದು ಸೌರವ್ಯೂಹದಲ್ಲಿನ ಗ್ರಹಗಳು ಒಂದೇ ಸರಳರೇಖೆಯಲ್ಲಿ ಬಂದಿದ್ದವೂ ಹಾಗೂ ಆ ಕ್ಷಣದಲ್ಲಿ ದ್ವಾಪರ ಯುಗದಿಂದ ಕಲಿಯುಗಕ್ಕೆ ಕಾಲಘಟ್ಟ ಬದಲಾವಣೆ ಆಯಿತು ಎಂದು ಹೇಳಲಾಗುತ್ತದೆ. ಅಂದ್ರೆ ಸುಮಾರು 5000 ವರ್ಷಗಳ ಹಿಂದೆ ಕಲಿಯುಗ ಆರಂಭವಾಯಿತು. ಕಲಿಯುಗ ಆರಂಭವಾದ ನಂತರ ಧರ್ಮ ಹಾಗೂ ದೇವರನ್ನು ಮನುಷ್ಯ ಮರೆಯುತ್ತಾ ಪಾಪ ಕರ್ಮಗಳಲ್ಲಿ ತೊಡಗಿದ. ಕಲಿಯುಗದಲ್ಲಿ ಮನುಷ್ಯನು ಮಾಡಬಾರದ ಪಾಪಗಳನ್ನು ಮಾಡಿದ. ಮಾಡಿದ ಪಾಪಗಳಿಗೆ ಅನುಗುಣವಾಗಿ ಮನುಷ್ಯ ಶಾಪಗ್ರಸ್ತನಾಗುತ್ತ ಹೋದ. ಮಾಡಿದ ಪಾಪಗಳಿಗೆ ತಕ್ಕ ಪ್ರಾಯಶ್ಚಿತ ಹಾಗೂ ಶಿಕ್ಷೆ ಪ್ರಕೃತಿ ನಿಯಮದ ಪ್ರಕಾರ ಆಗಿಯೇ ಆಗುತ್ತದೆ. ಮಾಡಿದ ಎಲ್ಲಾ ಪಾಪಗಳಿಗೆ ಅನುಗುಣವಾಗಿ ಅತ್ಯಂತ ಘೋರವಾದಂತಹ ಶಿಕ್ಷೆಯನ್ನು ಮನುಷ್ಯ ಕಲಿಯುಗದ ಅಂತ್ಯದಲ್ಲಿ ಅನುಭವಿಸಬೇಕಾಗುತ್ತದೆ ಎಂಬುದು ಸೃಷ್ಟಿ ಕರ್ತನ ನಿಯಮ . ಕಲಿಯುಗದ ಕಾಲಘಟ್ಟವು 432,000 ವರ್ಷಗಳು ಎಂದು ಪುರಾಣ ಹಾಗೂ ಪುಣ್ಯ ಕಥೆಗಳಲ್ಲಿ ಬಣ್ಣಿಸಲಾಗಿದೆ. ಆದರೆ ಭವಿಷ್ಯ ಮಾಲಿಕ ಪುರಾಣ ಪ್ರಕಾರ 2032ರ ಹೊತ್ತಿಗೆ ಕಲಿಯುಗ ಅಂತ್ಯವಾಗಿ ಮತ್ತೆ ಸತ್ಯಯುಗ ಆರಂಭವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.…
ಕುರುಕ್ಷೇತ್ರದಲ್ಲಿ ಬದುಕುಳಿದವರ ಪೀಳಿಗೆ ಹಾಗೂ 3ನೇ ಮಹಾಯುದ್ಧ- ಕುರುಕ್ಷೇತ್ರದಂತಹ ಮಹಾಯುದ್ಧದಿಂದಲೇ ಹಿಂದೂ ಧರ್ಮದ ಕೊಂಡಿಗಳು ಭಾರತದಿಂದ ಕಳಚಿ ಪ್ರಪಂಚದ ಅನೇಕ ರಾಷ್ಟ್ರಗಳಿಗೆ ಹೋಗಿ ನೆಲೆಗೊಂಡವು. ಕುರುಕ್ಷೇತ್ರದಂತಹ ಯುದ್ಧದಿಂದ ಅನೇಕ ಜನರ ಜೀವನ ಅಸ್ತವ್ಯಸ್ತವಾಗಿತ್ತು. ಅಣ್ಣ-ತಮ್ಮ ಹಾಗೂ ಬಂಧು ಬಳಗದವರು ಯುದ್ಧದಲ್ಲಿ ಮಡಿದಿದ್ದರು. ಯುದ್ಧದಲ್ಲಿ ಬದುಕುಳಿದವರು ತಮ್ಮ ಬಂಧು ಬಳಗದವರುನ್ನು, ಮಿತ್ರರನ್ನು ಕಳೆದುಕೊಂಡು ಮನಸ್ಸಿಗೆ ಅಘಾತವಾಗಿತ್ತು. ಕುರುಕ್ಷೇತ್ರ ಯುದ್ಧದಲ್ಲಿ ಬದುಕುಳಿದವರು ಮಹಾಯುದ್ಧದಿಂದ ಬೇಸತ್ತು ಹೋಗಿದ್ದರು ಹಾಗೂ ಯುದ್ಧದಿಂದ ಆದ ಮಾನಸಿಕ ಆಘಾತವನ್ನು ಮರೆಯಲು ಭಾರತದಿಂದ ಪ್ರಪಂಚದ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ನೆಲೆಸಿದರು. ಹೀಗೆ ನೆಲೆಸಿದ ನಾಗರಿಕತೆಯು ತನ್ನ ವಿಕಸನದಲ್ಲಿ ಅನೇಕ ತಿರುವುಗಳನ್ನು ಕಂಡಿತು. ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಅಳಿದುಳಿದ ಕೆಲವು ಕೃಷ್ಣನ ವಂಶಸ್ಥರಾದ ಯಾದವರು ಕೂಡ ಭಾರತ ಬಿಟ್ಟು ಹೊರಟುಹೋಗಿ ಮಧ್ಯ ಏಷ್ಯಾದಲ್ಲಿ ನೆಲೆಗೊಂಡಿದ್ದರು. ಹೀಗೆ ನೆಲೆಗೊಂಡ ಯಾದವ ಜನಾಂಗದ ಆಚಾರ-ವಿಚಾರ, ಧಾರ್ಮಿಕ ಆಚರಣೆಗಳು, ಸಂಸ್ಕೃತಿ, ಹಬ್ಬ ಹರಿದಿನಗಳು ಶತಮಾನಗಳು ಉರುಳಿದಂತೆ ಬದಲಾವಣೆ ಹೊಂದುತ್ತಾ ಹೋದವು. ಪೀಳಿಗೆಯಿಂದ ಪೀಳಿಗೆಗೆ ಯಾದವ…
Kali Yuga ending – ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭ – 18 February 3102 BCE ಅಂದು ಸೌರಮಂಡಲದಲ್ಲಿ ಒಂದು ಕೌತುಕ ನಡಿಯಿತು. Mercury, Venus, earth, Mars, Jupiter, Saturn ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬಂದಿದ್ದವು. ಆ ಒಂದು ಕ್ಷಣದಲ್ಲಿ ದ್ವಾಪರ ಯುಗದಿಂದ ಕಲಿಯುಗಕ್ಕೆ ಕಾಲಘಟ್ಟ ಬದಲಾವಣೆಯಾಯಿತು. ಇದರ ಕುರಿತು ಗೂಗಲ್ ಅಲ್ಲಿ ಅಥವಾ ಯಾವುದಾದರೂ ಹಳೆಯ ಗ್ರಂಥಗಳಲ್ಲಿ cross verify ಮಾಡಿಕೊಳ್ಳಬಹುದು. ದ್ವಾಪರ ಯುಗದಿಂದ ಕಲಿಯುಗಕ್ಕೆ ಶಿಫ್ಟ್ ಆಗುವ ಸಮಯದಲ್ಲಿ ಹೇಗೆ ಆರು ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬಂದಿದ್ದವು ಅದೇ ರೀತಿ ಮೊನ್ನೆ ಆರು ಗ್ರಹಗಳು ಮತ್ತೆ ಒಂದೇ ಸರಳ ರೇಖೆಯಲ್ಲಿ ಬಂದಿವೆ. ಬ್ರಹ್ಮಾಂಡದಲ್ಲಿ ಜರುಗುವ ಇಂತಹ ವಿದ್ಯಮಾನಗಳಿಂದ ಭೂಮಿ ಮೇಲೆ ದೊಡ್ಡ ಮಟ್ಟದ ಬದಲಾವಣೆಗಳಾಗುತ್ತವೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 2024 ಜೂನ್ 3ಕ್ಕೆ ಕೂಡ ಆರು ಗ್ರಹಗಳು ಮತ್ತೆ ಸರಳ ರೇಖೆಯಲ್ಲಿ ಬಂದವು ಇದರಿಂದ ಖಂಡಿತವಾಗಿ ಭೂಮಿಯ ಮೇಲೆ ದೊಡ್ಡ…
ಮಹಾಕಾಳೇಶ್ವರ ದೇವಸ್ತಾನ ಜಗತ್ತಿನ ಅದ್ಭುತಗಳಲ್ಲಿಒಂದು. ಸಮಯ ಮತ್ತು ಸಾವಿನ ಅಧಿಪತಿ ಎಂದು ಉಜ್ಜಯಿನಿಯ ಮಹಾಕಾಳೇಶ್ವರನನ್ನು ಪೂಜಿಸಲಾಗುತ್ತದೆ! ಇಡೀ ಜಗತ್ತಿನ ಸಮಯವನ್ನು ಉಜ್ಜಯಿನದ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಜ್ಯೋತಿರ್ಲಿಂಗ ನಿರ್ಧರಿಸಬಲ್ಲದು ಎಂಬುದು ಇವತ್ತಿನ ಪೀಳಿಗೆಗೆ ಸರಿಯಾಗಿ ಗೊತ್ತಿಲ್ಲ. ಏಕೆಂದ್ರೆ ಬ್ರಿಟಿಷ ಸರ್ಕಾರ ಭಾರತದಲ್ಲಿದ್ದಾಗ ಉಜ್ಜಯಿನ ಮೇಲೆ ಹಾದು ಹೋಗಿರುವ 0° ರೇಖಾಂಶವನ್ನು ಲಂಡನ್ ನಗರದ ಗ್ರೀನ್‌ವಿಚ್ಗೆ ವರ್ಗಾವಣೆ ಮಾಡುವ ಮೂಲಕ ತಮಗೆ ಹೇಗೆ ಬೇಕೋ ಹಾಗೆ ಜಾಗತಿಕ ಸ್ಥಾನೀಕರಣ (Global positioning) ಮಾಡಿಕೊಂಡರು. ಭಾರತದ ಅತ್ಯಂತ ಪುರಾತನ ಖಗೋಳ ಶಾಸ್ತ್ರದ ಗ್ರಂಥವಾದ ಸೂರ್ಯ ಸಿದ್ಧಾಂತದ ಪ್ರಕಾರ 0° ರೇಖಾಂಶವು ಉಜ್ಜಯನದ ಮೇಲೆ ದಾಟಿ ಹೋಗುತ್ತದೆ ಹಾಗೂ ಈ 0° ರೇಖಾಂಶವು ಕರ್ಕಾಟಕ ಸಂಕ್ರಾಂತಿ ವೃತ್ತವನ್ನು (ಉತ್ತರದ 23.5° ಅಕ್ಷಾಂಶ) ಉಜ್ಜಯನದ ಮೇಲೆ ಛೇದಿಸುತ್ತದೆ. ಹೀಗಾಗಿ ‘ಸೂರ್ಯ ಸಿದ್ಧಾಂತ’ ಗ್ರಂಥದ ಪ್ರಕಾರ ಉಜ್ಜಯನದ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಭಾರತದ ಹಾಗೂ ಇಡೀ ಜಗತ್ತಿನ ಕೇಂದ್ರ ಬಿಂದು ಎಂದು ಪರಿಗಣಿಸಲಾಗುತ್ತದೆ. ಆದ್ದರಿದಲೇ ಜಾಗತಿಕ ಸ್ಥಾನೀಕರಣವನ್ನು (Global positioning) ಮಹಾಕಾಳೇಶ್ವರ…
ವಾಸ್ತು ಶಾಸ್ತ್ರದ ಇತಿಹಾಸ. ಪ್ರಾಚೀನ ಕಾಲದ ಋಷಿಮುನಗಳು ಹಾಗೂ ಸಂತರು ಪಂಚಮಹಾಭೂತಗಳನ್ನು ಮತ್ತು ಅವುಗಳಿಂದ ಮನುಷ್ಯನ ಜೀವನದ ಮೇಲಾಗುವ ಪ್ರಭಾವಗಳನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ಹಾಗೂ ಅನೇಕ ವೀಕ್ಷಣೆಗಳನ್ನು ಮಾಡುವುದರ ಮೂಲಕ ರಚಿಸಿದ ವಿಜ್ಞಾನವೇ ವಾಸ್ತು ಶಾಸ್ತ್ರ. ವಾಸ್ತು ಶಾಸ್ತ್ರಕ್ಕೆ ಅನೇಕ ಸಾವಿರ ವರ್ಷಗಳ ಇತಿಹಾಸವಿದ್ದು ಶತಮಾನದಿಂದ ಶತಮಾನಕ್ಕೆ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಾ ಇವತ್ತು ಈ ವೈಜ್ಞಾನಿಕ ಯುಗವನ್ನು ತಲುಪಿಬಿಟ್ಟಿದೆ. ಈ ರೀತಿ ವಾಸ್ತು ಶಾಸ್ತ್ರವು ಶತಮಾನದಿಂದ ಶತಮಾನಕ್ಕೆ ನಮ್ಮ ಪೂರ್ವಜರಿಂದ ಹರಿದುಬರುವ ಸಮಯದಲ್ಲಿ ಅನೇಕ ಕಡೆಗಳಲ್ಲೂ ತನ್ನ ಪ್ರಾಚೀನ ಕುರುಹುವಿನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವಾಸ್ತು ಶಾಸ್ತ್ರದ ಕುರುಹುಗಳು ನಮಗೆ ಮಣ್ಣಿನಲ್ಲಿ ಹುಗಿದು ಹೋದ ಪ್ರಾಚೀನ ಕಾಲದ ಮೊಹೆಂಜೋದಾರೋ ಮತ್ತು ಹರಪ್ಪ ಪಟ್ಟಣಗಳಲ್ಲಿ ಕಾಣಸಿಗುತ್ತದೆ. ಪ್ರಾಚೀನ ಕಾಲದ ಈ ಎರಡೂ ಪಟ್ಟಣಗಳಲ್ಲಿರುವ ನಿವಾಸಿಗಳು ತಮ್ಮ ಮನೆಗಳನ್ನು, ಉದ್ಯಾನ ವನಗಳನ್ನು, ಈಜು ಕೊಳಗಳನ್ನು, ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ನಿರ್ಮಿಸಿರುವುದಕ್ಕೆ ಅನೇಕ ಕುರುಹುಗಳು ಇಂದಿಗೂ ಸಿಗುತ್ತವೆ. ವಾಸ್ತುವಿನ ಪ್ರಕಾರ ಮನೆಯನ್ನು ಕಟ್ಟುವಾಗ ಪೂರ್ವ…
ಜೀವನದ ಪ್ರತಿಯೊಂದು ಆಗು ಹೋಗುಗಳನ್ನು ಪರಿಶೋಧಿಸಲು ಶಿಕ್ಷಣ ನೆರವಾಗುತ್ತದೆ. ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ಶಿಕ್ಷಣವು ಸಹಾಯಕ. ಶಿಕ್ಷಣವು ಜೀವನಕ್ಕೆ ಮಹತ್ವವಾಗಿದ್ದು ಪ್ರತಿಯೊಬ್ಬರು ಶಿಕ್ಷಿತರಾಗುವುದರಿಂದ ಮಾನವೀಯತೆಯು ವಿಕಾಸನಗೊಂಡು ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಭಾರತದ ಎಲ್ಲ ಸಮಸ್ಯೆಗಳಿಗೂ ಬಹುಶಃ ಶಿಕ್ಷಣ ಒಂದೇ ಪರಿಹಾರ. ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣವಾಗುತ್ತದೆ ಹಾಗೂ ಚಾರಿತ್ರ್ಯ ನಿರ್ಮಾಣದಿಂದ ಆದರ್ಶವಾದ ರಾಷ್ಟ್ರನಿರ್ಮಾಣವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ತಮ್ಮ ಅಭಿಪ್ರಾಯವನ್ನು ಯುವ ಜನತೆಯ ಮುಂದೆ ಹಂಚಿಕೊಳ್ಳುತ್ತಿದ್ದರು. ಶಿಕ್ಷಣವು ಮಾನವನನ್ನು ಸೀಮಿತ ಸ್ತರದಿಂದ ಆಸೀಮ ಸ್ತರಕ್ಕೆ ಕರೆದುಕೊಂಡು ಹೋಗುತ್ತದೆ. ಇವತ್ತು ಆಧುನಿಕ ಶಿಕ್ಷಣದ ಜೊತೆ ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆಯೂ ತುಂಬಾ ಇದೆ. ಆಧ್ಯಾತ್ಮಿಕ ಶಿಕ್ಷಣ ಇಲ್ಲ ಅಂದ್ರೆ ಜೀವನ ಪೂರ್ಣಗೊಳ್ಳಲಾರದು ಏಕೆಂದ್ರೆ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಶಕ್ತಿ ಆಧ್ಯಾತ್ಮಿಕ ಶಿಕ್ಷಣಕ್ಕೆ ಮಾತ್ರ ಇದೆ. ಆಧುನಿಕ ಶಿಕ್ಷಣವನ್ನು ಕಲಿತವರಲ್ಲಿ ಅನೇಕರು ಗಲಭೆಕೋರರು ಆಗಿರುತ್ತಾರೆ, ಪುಂಡರು ಆಗಿರುತ್ತಾರೆ, ಸಾಮಾಜಿಕ ಜವಾಬ್ದಾರಿ ಇಲ್ಲದವರಾಗಿರುತ್ತಾರೆ. ಏಕೆಂದರೆ…
ಆಯುರ್ವೇದ = ಆಯುವ (ಜೀವ) + ವೇದ (ಜ್ಞಾನ). ಆಯುರ್ವೇದವು ಸನಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಭಾರತದ ವೈದ್ಯಕೀಯ ಪದ್ಧತಿ. ಆಯುರ್ವೇದದ ಮಾಹಾನ್ ಜ್ಞಾನಿಯಾದ ಪ್ರಾಚೀನ ಋಷಿ ಚರಕನ ಪ್ರಕಾರ ಆಯು ಅಂದ್ರೆ 4 ಪ್ರಮುಖ ಭಾಗಗಳಾದ ಮನಸ್ಸು, ದೇಹ, ಇಂದ್ರಿಯಗಳು ಮತ್ತು ಆತ್ಮ ಎಂದಾಗುತ್ತದೆ. ಆಯುರ್ವೇದದ ಪ್ರಕಾರ ದೇಹವು ಪಂಚಮಹಾಭೂತಗಳಾದ ಭೂಮಿ (Earth), ನೀರು (Water), ಅಗ್ನಿ (Fire), ಗಾಳಿ (Wind) ಮತ್ತು ಆಕಾಶದ (Space) ಸಂಯೋಗದಿಂದ ಆಗಿರುತ್ತದೆ. ಈ ಪಂಚಮಹಾಭೂತಗಳು ಜೈವಿಕ ವ್ಯವಸ್ಥೆಯಲ್ಲಿ ಪರಸ್ಪರ ಕ್ರಿಯೆ ನಡೆಸುವಾಗ ಉದ್ಭವಗೊಳ್ಳುವ ಅಂಶಗಳೇ ವಾತ (ಗ್ಯಾಸ), ಪಿತ್ತ (ಉಷ್ಣತೆ) ಮತ್ತು ಕಫ (ನೀರು). ಇವುಳನ್ನು ಆಯುರ್ವೇದದಲ್ಲಿ ತ್ರಿದೋಷಗಳೆಂದು ಗುರುತಿಸಲಾಗಿದೆ. ವಾತ ದೋಷದಲ್ಲಿ ಅಸಮತೋಲನವಾದರೆ ದೇಹದಲ್ಲಿ ಗ್ಯಾಸ್ ಸ್ರಷ್ಟಿ ಆಗಿ ರಕ್ತ ಚಲನೆಯು ಮೇಲೆ, ಉಸಿರಾಟದ ಮೇಲೆ ಹಾಗೂ ಮಲ ಮೂತ್ರ ವಿಸರ್ಜನೆ ಮೇಲೆ ಋಣಾತ್ಮಕ ಪ್ರಭಾವಗಳು ಆಗುತ್ತವೆ. ಪಿತ್ತದೋಷದಲ್ಲಿ ಅಸಮತೋಲನ ಆದರೆ ಚಯಾಪಚಯ ಚಟುವಟಿಕೆ ಕುಂಠಿತಗೊಳ್ಳುತ್ತದೆ. ಹಾಗೂ ಕಫ ದೋಷದಲ್ಲಿ ಅಸಮತೋಲನವಾದರೆ ಬೆಳವಣಿಗೆ…
ಅಷ್ಟಾಂಗ ಯೋಗದ ಪರಿಚಯ ಅಷ್ಟಾಂಗ ಎನ್ನುವುದು ಸಂಸ್ಕ್ರುತದ ಎರಡು ಶಬ್ದಗಳ ಸಂಯೋಗದಿಂದ ಆಗಿದೆ. ಅಷ್ಟ + ಅಂಗ = ಅಷ್ಟಾಂಗ. ಅಷ್ಟ ಎಂದರೆ ಎಂಟು ಹಾಗೂ ಅಂಗ ಎಂದರೆ ಭಾಗ ಎಂದು ಅರ್ಥವಾಗುತ್ತದೆ. ಆದ್ದರಿಂದ ಅಷ್ಟಾಂಗ ಯೋಗವನ್ನು ಎಂಟು ಬೇರೆ ಬೇರೆ ಪಥಗಳ ಮೂಲಕ ಏಕಕಾಲಕ್ಕೆ ಸೇರುವ ಮೋಕ್ಷದ ಗಮ್ಯವೆಂದು ಪರಿಗಣಿಸುಬಹುದು. ಅಷ್ಟಾಂಗ ಯೋಗವು ಯೋಗದ ತತ್ವಶಾಸ್ತ್ರದ ಆಧಾರ ಮೇಲೆ ಇದ್ದು ಅದನ್ನು ಕ್ರಿಪೂ 200 ರಲ್ಲಿ ಪತಂಜಲಿ ಋಷಿಗಳು ತಮ್ಮ ಯೋಗ ಸೂತ್ರ ಗ್ರಂಥದಲ್ಲಿ ಬರೆದಿದ್ದಾರೆ. ಈ ಯೋಗ ಸೂತ್ರ ಗ್ರಂಥವು ಯೋಗ ಭಂಗಿಗಳ ಮೇಲೆ, ಧ್ಯಾನದ ಮೇಲೆ, ಐಹಿಕ ಜಗತ್ತಿನಿಂದ ಆಕರ್ಶಿಸಲ್ಪಡುವ ಇಂದ್ರಿಯಗಳನ್ನು ಹೇಗೆ ನಿಗ್ರಹಿಸಬೇಕು ಎಂಬುವದರ ಮೇಲೆ ಬೆಳಕು ಚೆಲ್ಲುತ್ತದೆ. ಮನಕುಲದ ಜೀವನವನ್ನು ಉತ್ಕೃಷ್ಟಗೊಳಿಸುವ ಸಲುವಾಗಿ ಯೋಗ ಶಾಸ್ತ್ರದ ಬೇರುಗಳು ಇಡೀ ಪ್ರಪಂಚಾದ್ಯಂತ ಹಬ್ಬಿವೆ. ಪ್ರಪಂಚದ ಅನೇಕ ಬೇರೆ ಬೇರೆ ರಾಷ್ಟ್ರಗಳು ಐಹಿಕ ಜೀವನದ ಅಂತರಂಗ ಶುದ್ಧಿಗಾಗಿ ಮತ್ತು ಬಹಿರಂಗ ಶುದ್ಧಿಗಾಗಿ ಯೋಗ ಶಾಸ್ತ್ರವನ್ನು ಅನುಸರಿಸುತ್ತಿವೆ. ಅಷ್ಟಾಂಗ ಯೋಗದ…
ಕೃಷಿಯು ಮಾನವ ಕುಲದ ಮೊಟ್ಟ ಮೊದಲ ಕಸಬು. ಹಾಗೂ ಮಾನವನು ಕೃಷಿಯನ್ನು ಆರಂಭಿಸಿದ ಮೊದಲ ದಿನದಿಂದ ನಾಗರಿಕತೆಗಳು ಕೂಡಾ ಆರಂಭವಾದವು. ಕೃಷಿ ಎಂದರೆ ಭೂಮಿಯನ್ನು ಉಳುಮೆ ಮಾಡಿ ಬೆಳೆಯನ್ನು ಬೆಳೆಯುವ ಕಲೆ ಎಂದು ಪರಿಗಣಿಸಲಾಗುತ್ತದೆ. ಭಾರತವು ಕೃಷಿ ಪ್ರಧಾನ ರಾಷ್ಟ್ರ. ಹಾಗೂ ಭಾರತದಲ್ಲಿ ಕೃಷಿಯ ಇತಿಹಾಸ ಋಗ್ವೇದ ಕಾಲದಷ್ಟು ಹಳೆಯದು. ಭಾರತ ಇಂದು ಕೃಷಿ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಕೃಷಿಯು ಎಲ್ಲ ಶಾಸ್ತ್ರಗಳಿಗೂ ತಾಯಿ ಸ್ವರೂಪವಾಗಿದ್ದು, ಮಾನವ ಸಂಸ್ಕೃತಿಯ ಮೂಲವಾಗಿದೆ. ಭಾರತೀಯ ಕೃಷಿಯು ಅತಿ ಸಮೃದ್ಧ ಇತಿಹಾಸವನ್ನು ಹೊಂದಿರುವುದು ನಮಗೆಲ್ಲ ಇತಿಹಾಸದಿಂದ ತಿಳಿದುಬಂದಿದೆ. ಆರ್ಯರ ಮತ್ತು ಸಿಂಧೂ ಕಣಿವೆಯ ನಾಗರಿಕತೆಯ ಸಮಯದಲ್ಲೂ ಕೃಷಿಯನ್ನು ಹೇರಳವಾಗಿ ಮಾಡಲಾಗುತ್ತಿತ್ತು. ಹೀಗೆ ಪ್ರಾಚೀನಕಾಲದಿಂದಲೂ ಕೃಷಿಯು ನಮ್ಮ ದೇಶದ ಬೆನ್ನೆಲುಬು ಹಾಗೂ ನಮ್ಮ ರೈತರ ಜೀವನಾಧಾರದ ಕಸುಬು. ದುರಾದೃಷ್ಟಕರ ಸಂಗತಿ ಎಂದರೇ 1991ರಲ್ಲಿ ಜಾಗತೀಕರಣ ಆದ ನಂತರ ಕೃಷಿಯ ಕುರಿತು ಕೆಲವು ರೈತರಲ್ಲಿ ಏನೋ ಒಂದು ತಾತ್ಸಾರ ಮನೋಭಾವ ಬೆಳೆಯುತ್ತಿದೆ. ವಿದೇಶೀ ಹೂಡಿಕೆದಾರರು ರೈತರ ಭೂಮಿಯನ್ನು…