ಕರ್ಮಸಿದ್ಧಾಂತ ಹಾಗೂ ಮನುಷ್ಯ ಜನ್ಮ ಪರಸ್ಪರ ಸಂಬಂಧ ಹೊಂದಿವೆ. ಆತ್ಮ ವೆಂಚಕರು, ದುಷ್ಟರು, ಅಧರ್ಮಿಗಳು ಕೊನೆಗೆ ಇವರೆಲ್ಲರೂ ಹೀನರ ಲೋಕಗಳನ್ನು ಸೆರಲೇಬೇಕು. ಮನುಷ್ಯ ಎಷ್ಟೇ ಉನ್ನತ ಹುದ್ದೆಯಲ್ಲಿ ಇರಲಿ, ಬಡವನಾಗಿರಲಿ, ರಾಜಕಾರಣಿ ಆಗಿರಲಿ, ಉದ್ಯಮಿ ಆಗಿರಲಿ, ಅಥವಾ ಮತ್ಯಾವುದೇ ಐಹಿಕ ಜಗತ್ತಿನ ಹುದ್ದೆಯಲ್ಲಿ ಇರಲಿ ಆತ ಕರ್ಮಕ್ಕೆ ಅನುಗುಣವಾಗಿ ಫಲಗಳನ್ನು ಪಡೆಯಬೇಕಾಗುತ್ತದೆ. ಮಾನವನ ಬದುಕಿಗೂ ಪ್ರಾಣಿಯ ಬದುಕಿಗೂ ಜವಾಬ್ದಾರಿಯಲ್ಲಿ ತುಂಬಾ ವ್ಯತ್ಯಾಸವಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ವಿಷಯ. ಮಾನವ ತನ್ನ ಜವಾಬ್ದಾರಿಗಳನ್ನು ಅರಿತು ಒಳ್ಳೆ ಮನೋಭಾವದಿಂದ ಜೀವನ ನಡೆಸಿದರೆ ಅಂಥವರನ್ನು ಸುರರು ಎಂದು ಕರೆಯುತ್ತಾರೆ ಹಾಗೂ ತಮ್ಮ ಜವಾಬ್ದಾರಿಗಳ ಬಗ್ಗೆ ತಾತ್ಸಾರ ಮನೋಭಾವ ತೋರಿಸುವವರನ್ನು ಅಥವಾ ಅವುಗಳ ಅರಿವೇ ಇಲ್ಲದವರನ್ನು ಅಸುರರು ಎಂದು ಕರೆಯುತ್ತಾರೆ. ಇವೆರಡು ಬಗೆಯ ಜನರು ಪ್ರಪಂಚಾದ್ಯಂತ ಮೂಲೆ ಮೂಲೆಗಳಲ್ಲಿ ಕಾಣಸಿಗುತ್ತಾರೆ. ಸುರರು ಯಾವಾಗಲೂ ಪರಮ ಪ್ರಭುವಿನ ಚರಣ ಕಮಲಗಳನ್ನೇ ಬಯಸಿ ಅದಕ್ಕಾಗಿ ಶ್ರಮಿಸುತ್ತಾರೆ ಮತ್ತು ಕೊನೆಗೆ ಮುಕ್ತಿಯನ್ನು ಪಡೆಯುತ್ತಾರೆ ಎಂದು ಋಗ್ವದವು ಹೇಳುತ್ತದೆ. ಸುರರು ಯಾವಾಗಲೂ ಧರ್ಮದ ಹಾದಿಯಲ್ಲಿ ನಡೆಯಬೇಕಾಗುತ್ತದೆ.…
Author: Anveshana
ಸಮುದ್ರದಾಳದಲ್ಲಿ ಮುಳಗಿದ ದ್ವಾರಕಾ ನಗರ ರಾಷ್ಟ್ರೀಯ ಸಮುದ್ರೀಯ ವಿಜ್ಞಾನ ಸಂಸ್ಥೆಯಿಂದ (National institute of oceanography) ಶ್ರೀ ಕೃಷ್ಣ ಪರಮಾತ್ಮನ ಜಲಾಂತರ್ಗತವಾದ ಪೌರಾಣಿಕ ದ್ವಾರಕಾ ನಗರದ ಪುರಾತತ್ವ ಸಂಶೋಧನೆ. ಶ್ರೀಕೃಷ್ಣ ನೆಲೆಯಾಗಿದ್ದ ಐತಿಹಾಸಿಕ ಹಾಗೂ ಪೌರಾಣಿಕ ನಗರ ದ್ವಾರಕಾದ ಇರುವಿಕೆನ್ನು ಕಂಡು ಹಿಡಿದ ಕೀರ್ತಿ ಪುರಾತತ್ವ ತಜ್ಞರಾದ ಶಿವಮೊಗ್ಗದ ಶಿಕಾರಿಪುರ ರಂಗನಾಥರಾವ್ ಅವರುಗೆ ಸಲ್ಲುತ್ತದೆ. ರಂಗನಾಥರಾವ್ ಅವರು ಭಾರತಕ್ಕೆ ವಿಶ್ವ ಮಟ್ಟದಲ್ಲಿ ಕೀರ್ತಿ ತಂದ ಪುರಾತತ್ವ ಶಾಸ್ತ್ರಜ್ಞರು. ಸುಮಾರು 32 ವರ್ಷಗಳ ಕಾಲ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ(1980) ರಾಷ್ಟ್ರೀಯ ಸಮುದ್ರೀಯ ವಿಜ್ಞಾನ ಸಂಸ್ಥೆಯಲ್ಲಿ ನೇಮಕಗೊಂಡು ಅನೇಕ ಮಹತ್ವದ ಸಂಶೋಧನೆಗಳನ್ನು ನಡೆಸಿದರು. ಈ ಸಂಶೋಧನೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಅಂದ್ರೆ ಮುಳುಗಿ ಹೋಗಿರುವ ಶ್ರೀ ಕೃಷ್ಣನ ದ್ವಾರಕಾ ನಗರದ ಪುರಾತತ್ವ ಸಂಶೋಧನೆ. ದ್ವಾರಕೆಯು ಮಾಹಾಭಾರತ ಕಾಲದ ವೈಭೋಪೇತ ನಗರ. Dvaraka was very well planed and modern city. ಹಾಗೂ ದ್ವಾರಕಾ ನಗರವನ್ನು ವಿಶ್ವಕರ್ಮನ ಸಲಹೆಗಳಿಗೆ ಅನುಗುಣವಾಗಿ ವಾಸ್ತು ಶಾಸ್ತ್ರದ…