ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯ ಬಡವಾಗಿ ಬದುಕಲು ಇಷ್ಟಪಡುವುದಿಲ್ಲ. ಶ್ರೀಮಂತನಾಗಿ ಬದುಕಬೇಕೆಂಬ ಆಸೆಯಿಂದ ನಿರಂತರವಾಗಿ ಶ್ರಮ ಪಡುತ್ತಿರುತ್ತೇವೆ. ಆದರೆ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ದುಡಿಮೆಗೆ ಸರಿಯಾದ ಪ್ರತಿಫಲ ಸಿಗುವುದಿಲ್ಲ. ಕೆಲಸ ಮಾಡುವ ಸಂಸ್ಥೆಯಲ್ಲಿ ಎಷ್ಟೇ ಶ್ರದ್ಧೆಯಿಂದ, ಸತ್ಯವಂತಿಕೆಯಿಂದ, ಕಾರ್ಯದಕ್ಷತೆಯಿಂದ ಹಾಗೂ ಒಳ್ಳೆಯ ಕೌಶಲ್ಯದಿಂದ ಸೇವೆ ಸಲ್ಲಿಸಿದರೂ ಸಂಬಳ ಹೆಚ್ಚಿಗೆ ಸಿಗಲಾರದು ಹಾಗೂ ಪ್ರಮೋಷನ್ ಕುರಿತಾದ ಕನಸು ಕನಸಾಗಿಯೇ ಉಳಿದಿರುತ್ತದೆ. ಇನ್ನು ಬಂಡವಾಳ ತೊಡಗಿಸಿ ಏನಾದರೂ ಸ್ವಂತ ಉದ್ದೋಗ ಮಾಡಲು ಹೊರಟರೆ ವಹಿವಾಟು ಸರಿಯಾಗಿ ನಡೆಯುವುದಿಲ್ಲ ಹಾಗೂ ಕೆಲವೊಮ್ಮೆ ತೊಡಗಿಸಿದ ಬಂಡವಾಳ ಕೂಡ ತಿರುಗಿ ಬಾರದೆ ನಷ್ಟ ಅನುಭವಿಸಬೇಕಾಗುತ್ತದೆ. ಏನೇ ತಂತ್ರಗಾರಿಕೆ ಮಾಡಿ ಬಿಸಿನೆಸ್ ಸಕ್ಸಸ್ ಮಾಡಲು ಹೊರಟರೂ ಕೂಡ ಬಿಸಿನೆಸ್ನಲ್ಲಿ ಸಫಲತೆ ಕಾಣುವುದಿಲ್ಲ. ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಷ್ಟು ಲಕ್ಷ್ಮಿ ದೇವಿಯು ಕೃಪೆ ತೋರುವುದಿಲ್ಲ! ಬುದ್ಧಿವಂತಿಕೆ ಇರುತ್ತದೆ, ಒಳ್ಳೆಯ ಪದವಿ ಪಡೆದುಕೊಂಡಿರುತ್ತಾರೆ, ಒಳ್ಳೆಯ ಕೌಶಲ್ಯವಿರುತ್ತದೆ, ಶ್ರಮ ಪಟ್ಟು ದುಡಿಯುವ ಮನೋಭಾವ ಹೊಂದಿರುತ್ತಾರೆ, ಒಳ್ಳೆಯ ಜ್ಞಾಪಕ ಶಕ್ತಿ ಇರುತ್ತದೆ ಹಾಗೂ ಅತ್ಯಂತ…
Author: Anveshana
Vastu in kannada ಜಗತ್ತಿನ ಕೆಲವು ಭಾಗದಲ್ಲಿ ಶಿಲಾಯುಗದ ಕಾಲಘಟ್ಟ ಇದ್ದ ಸಮಯದಲ್ಲಿ ಭಾರತದಲ್ಲಿ ಅತ್ಯಂತ ಉನ್ನತವಾದ ಹಾಗೂ ಅಷ್ಟೇ ರಹಸ್ಯವಾದ ಜ್ಞಾನ ಹೊಂದಿದ ನಾಗರಿಕತೆ ಇತ್ತು. ಆದರೆ ನಮ್ಮ ಪೂರ್ವಜರು ಶತ ದಡ್ಡರು, ನಮ್ಮ ಪೂರ್ವಜರಿಗೆ ಯಾವುದೇ ವಿಜ್ಞಾನ, ಖಗೋಳಶಾಸ್ತ್ರ,ಭೂಗೋಳಶಾಸ್ತ್ರ, ಭೂಗರ್ಭ ಶಾಸ್ತ್ರ, ತಂತ್ರಜ್ಞಾನ, ಜ್ಯೋತಿಷ್ಯ, ವಾಸ್ತು, ವೈದ್ಯಕೀಯ, ಗೊತ್ತಿರಲಿಲ್ಲ ಎಂದು ಇವತ್ತಿನ ಯುವಕರಿಗೆ ಶಾಲೆ ಕಾಲೇಜುಗಳಲ್ಲಿ ಕಲಿಸಿ ನಮ್ಮ ಪೂರ್ವಜರು ಜ್ಞಾನ ಭಂಡಾರದ ಕುರಿತು ತಪ್ಪು ಅಭಿಪ್ರಾಯಗಳು ಮೂಡುವ ಹಾಗೆ ಅತ್ಯಂತ ವ್ಯವಸ್ಥೆಯಾಗಿ ಬ್ರೈನ್ ವಾಶ್ ಮಾಡಲಾಗುತ್ತಿದೆ. ಇವತ್ತು ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿರುವುದು ಎಡಪಂಥೀಯರ ಇತಿಹಾಸ. ಶಿಲಾಯುಗದ ಕಾಲಘಟ್ಟದಲ್ಲಿ ಯುರೋಪ್ ಖಂಡದ ಕೆಲವು ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದ ಎಡಪಂಥೀಯರು ಮೈ ಮೇಲೆ ಪ್ರಾಣಿಗಳ ಚರ್ಮವನ್ನು ಹಾಕಿಕೊಂಡು ಕಲ್ಲಿನಿಂದ ತಯಾರಿಸಿದ ಮೊಂಡಾದ ಆಯುಧಗಳನ್ನು ಹಿಡಿದು ಕಾಡುಮೇಡುಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ತಿಂದು ಜೀವನ ನಡೆಸುತ್ತಿದ್ದರು ಎಂಬುದು ಪಕ್ಕಾ ಎಡಪಂತಿಯರ ಇತಿಹಾಸ! ಬ್ರಿಟಿಷರು ಭಾರತದಲ್ಲಿ ಆಡಳಿತ ನಡೆಸುವಾಗ ಭಾರತದ ಪ್ರಾಚೀನ ಇತಿಹಾಸ, ಇಲ್ಲಿನ…