
ಆಯುರ್ವೇದ = ಆಯುವ (ಜೀವ) + ವೇದ (ಜ್ಞಾನ). ಆಯುರ್ವೇದವು ಸನಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಭಾರತದ ವೈದ್ಯಕೀಯ ಪದ್ಧತಿ. ಆಯುರ್ವೇದದ ಮಾಹಾನ್ ಜ್ಞಾನಿಯಾದ ಪ್ರಾಚೀನ ಋಷಿ ಚರಕನ ಪ್ರಕಾರ ಆಯು ಅಂದ್ರೆ 4 ಪ್ರಮುಖ ಭಾಗಗಳಾದ ಮನಸ್ಸು, ದೇಹ, ಇಂದ್ರಿಯಗಳು ಮತ್ತು ಆತ್ಮ ಎಂದಾಗುತ್ತದೆ. ಆಯುರ್ವೇದದ ಪ್ರಕಾರ ದೇಹವು ಪಂಚಮಹಾಭೂತಗಳಾದ ಭೂಮಿ (Earth), ನೀರು (Water), ಅಗ್ನಿ (Fire), ಗಾಳಿ (Wind) ಮತ್ತು ಆಕಾಶದ (Space) ಸಂಯೋಗದಿಂದ ಆಗಿರುತ್ತದೆ. ಈ ಪಂಚಮಹಾಭೂತಗಳು ಜೈವಿಕ ವ್ಯವಸ್ಥೆಯಲ್ಲಿ ಪರಸ್ಪರ ಕ್ರಿಯೆ ನಡೆಸುವಾಗ ಉದ್ಭವಗೊಳ್ಳುವ ಅಂಶಗಳೇ ವಾತ (ಗ್ಯಾಸ), ಪಿತ್ತ (ಉಷ್ಣತೆ) ಮತ್ತು ಕಫ (ನೀರು). ಇವುಳನ್ನು ಆಯುರ್ವೇದದಲ್ಲಿ ತ್ರಿದೋಷಗಳೆಂದು ಗುರುತಿಸಲಾಗಿದೆ. ವಾತ ದೋಷದಲ್ಲಿ ಅಸಮತೋಲನವಾದರೆ ದೇಹದಲ್ಲಿ ಗ್ಯಾಸ್ ಸ್ರಷ್ಟಿ ಆಗಿ ರಕ್ತ ಚಲನೆಯು ಮೇಲೆ, ಉಸಿರಾಟದ ಮೇಲೆ ಹಾಗೂ ಮಲ ಮೂತ್ರ ವಿಸರ್ಜನೆ ಮೇಲೆ ಋಣಾತ್ಮಕ ಪ್ರಭಾವಗಳು ಆಗುತ್ತವೆ. ಪಿತ್ತದೋಷದಲ್ಲಿ ಅಸಮತೋಲನ ಆದರೆ ಚಯಾಪಚಯ ಚಟುವಟಿಕೆ ಕುಂಠಿತಗೊಳ್ಳುತ್ತದೆ. ಹಾಗೂ ಕಫ ದೋಷದಲ್ಲಿ ಅಸಮತೋಲನವಾದರೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಹೀಗೆ ತ್ರಿದೋಷಗಳಲ್ಲಿ ಉಂಟಾಗುವ ಅಸಮತೋಲನದ ಸ್ಥಿತಿಗೆ ರೋಗವೆಂದು ಪರಿಗಣಿಸಬೇಕಾಗುತ್ತದೆ. ಹಾಗೂ ಪಂಚಮಹಾಭೂತಗಳಿಂದಾದ ಈ ಐಹಿಕ ದೇಹವು 7 ತರದ ದ್ರವ್ಯಗಳನ್ನು ಹೊಂದಿದೆ. ಅವುಗಳು ಯಾವು ಎಂದರೆ (Ayurveda in kannada ಆಯುರ್ವೇದ ಶಾಸ್ತ್ರ)
2) ಸುಕ್ರಾ (ಸಂತಾನೋತ್ಪತ್ತಿ ಅಂಗಾಂಶ)
1) ಮಜ್ಜ (ನರಗಳು ಮತ್ತು ಮೂಳೆಗಳು)
3) ರಸ (ಜೀವ ರಸ)
4) ರಕ್ತ
5) ಮಾಂಸ (ಸ್ನಾಯುಗಳು)
6) ಮೇದ ( ಕೊಬ್ಬಿನ ಅಂಶ)
7) ಅಸ್ಥಿ (ಮೂಳೆ)
ಆತ್ಮವು ಐಹಿಕ ದೇಹದಲ್ಲಿರುವ ತನಕ ಈ 7 ದ್ರವ್ಯಗಳು ದೇಕದಲ್ಲಿ ಪರಸ್ಪರ ಬೇರೆ ಬೇರೆ ಕ್ರಿಯೆಗಳನ್ನು ನಡೆಸುತ್ತಿರುತ್ತವೆ. ಹಾಗೂ ಜೀವಿಯ ಜೀವನದ ಆಧಾರದ ಮೇಲೆ ತ್ರಿದೋಷಗಳಲ್ಲಿ ಸಮತೋಲನ ಮತ್ತು ಅಸಮತೋಲನ ಉಂಟಾಗುತ್ತದೆ ಎಂದು ಆಯುರ್ವೇದ ವೈದ್ಯಕೀಯ ಶಾಸ್ತ್ರ ಹೇಳುತ್ತದೆ. (Ayurveda in kannada ಆಯುರ್ವೇದ ಶಾಸ್ತ್ರ)
Vegetarian diet 👇
https://anveshana.in/veg-vs-nonveg-foods/
Vegetarian diet 👇