ಕರ್ಮಸಿದ್ಧಾಂತ ಹಾಗೂ ಮನುಷ್ಯ ಜನ್ಮ ಪರಸ್ಪರ ಸಂಬಂಧ ಹೊಂದಿವೆ. ಆತ್ಮ ವೆಂಚಕರು, ದುಷ್ಟರು, ಅಧರ್ಮಿಗಳು ಕೊನೆಗೆ ಇವರೆಲ್ಲರೂ ಹೀನರ ಲೋಕಗಳನ್ನು ಸೆರಲೇಬೇಕು. ಮನುಷ್ಯ ಎಷ್ಟೇ ಉನ್ನತ ಹುದ್ದೆಯಲ್ಲಿ ಇರಲಿ, ಬಡವನಾಗಿರಲಿ, ರಾಜಕಾರಣಿ ಆಗಿರಲಿ, ಉದ್ಯಮಿ ಆಗಿರಲಿ, ಅಥವಾ ಮತ್ಯಾವುದೇ ಐಹಿಕ ಜಗತ್ತಿನ ಹುದ್ದೆಯಲ್ಲಿ ಇರಲಿ ಆತ ಕರ್ಮಕ್ಕೆ ಅನುಗುಣವಾಗಿ ಫಲಗಳನ್ನು ಪಡೆಯಬೇಕಾಗುತ್ತದೆ.
ಮಾನವನ ಬದುಕಿಗೂ ಪ್ರಾಣಿಯ ಬದುಕಿಗೂ ಜವಾಬ್ದಾರಿಯಲ್ಲಿ ತುಂಬಾ ವ್ಯತ್ಯಾಸವಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ವಿಷಯ. ಮಾನವ ತನ್ನ ಜವಾಬ್ದಾರಿಗಳನ್ನು ಅರಿತು ಒಳ್ಳೆ ಮನೋಭಾವದಿಂದ ಜೀವನ ನಡೆಸಿದರೆ ಅಂಥವರನ್ನು ಸುರರು ಎಂದು ಕರೆಯುತ್ತಾರೆ ಹಾಗೂ ತಮ್ಮ ಜವಾಬ್ದಾರಿಗಳ ಬಗ್ಗೆ ತಾತ್ಸಾರ ಮನೋಭಾವ ತೋರಿಸುವವರನ್ನು ಅಥವಾ ಅವುಗಳ ಅರಿವೇ ಇಲ್ಲದವರನ್ನು ಅಸುರರು ಎಂದು ಕರೆಯುತ್ತಾರೆ. ಇವೆರಡು ಬಗೆಯ ಜನರು ಪ್ರಪಂಚಾದ್ಯಂತ ಮೂಲೆ ಮೂಲೆಗಳಲ್ಲಿ ಕಾಣಸಿಗುತ್ತಾರೆ. ಸುರರು ಯಾವಾಗಲೂ ಪರಮ ಪ್ರಭುವಿನ ಚರಣ ಕಮಲಗಳನ್ನೇ ಬಯಸಿ ಅದಕ್ಕಾಗಿ ಶ್ರಮಿಸುತ್ತಾರೆ ಮತ್ತು ಕೊನೆಗೆ ಮುಕ್ತಿಯನ್ನು ಪಡೆಯುತ್ತಾರೆ ಎಂದು ಋಗ್ವದವು ಹೇಳುತ್ತದೆ. ಸುರರು ಯಾವಾಗಲೂ ಧರ್ಮದ ಹಾದಿಯಲ್ಲಿ ನಡೆಯಬೇಕಾಗುತ್ತದೆ.
ನಮ್ಮ ಈ ಮಾನವ ಜನ್ಮವು ಮಿಲಿಯಾಂತರ ವರ್ಷಗಳ ಕಾಲ ವಿಕಸನಗೊಳ್ಳುವ ಪ್ರಕ್ರಿಯೆಯಲ್ಲಿ ಬೇರೆ-ಬೇರೆ ಜನ್ಮಗಳನ್ನು ಪಡೆದು ವಿಕಸನಗೊಂಡ ನಂತರ ಕಟ್ಟಕಡೆಗೆ ಮಾನವ ಜನ್ಮವನ್ನು ಪಡೆದಿರುತ್ತದೆ ಎನ್ನುವ ಸಂಗತಿಯನ್ನು ವಿವೇಕಿಗಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಮಿಲಿಯಾಂತರ ವರ್ಷಗಳ ಕಾಲ ವಿಕಸನಗೊಂಡ ನಂತರ ಆತ್ಮವು ಮನುಷ್ಯನ ದೇಹವನ್ನು ಪಡೆದಿರುವುದರಿಂದ ಒಬ್ಬ ವ್ಯಕ್ತಿಯು ತನ್ನ ಬದುಕನ್ನು ಆತ್ಮಸಾಕ್ಷಾತ್ಕಾರಕ್ಕೆ ಬಳಿಸಿಕೊಂಡು ಮುಕ್ತಿ ಹೊಂದಬೇಕು. ಹಾಗೂ ಮನುಷ್ಯನು ತನ್ನ ಈ ಜನ್ಮವನ್ನು ಆತ್ಮಘಾತಕ ಕೆಲಸಗಳಿಗೆ ಬಳಸಿಕೊಂಡದ್ದೇ ಆದರೆ ಆತ ಶಾಶ್ವತ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಅಜ್ಞಾನದ ಕಗ್ಗತ್ತಲನ್ನು ಪ್ರವೇಶಿಸಿಸಿ ಕಷ್ಟ-ನಷ್ಟಗಳನ್ನು ಅನುಭವಿಸುತ್ತಾ ಜನನ ಮರಣಗಳ ಚಕ್ರಕ್ಕೆ ಸಿಲುಕಬೇಕಾಗುತ್ತದೆ ಎಂದು ವೇದಗಳಲ್ಲಿ ಹಾಗೂ ಭಗವದ್ಗೀತೆಯಲ್ಲಿ ಹೇಳಲಾಗಿದೆ.

ಮನುಷ್ಯನ ಜೀವನಕ್ಕೆ ಬೇಕಾದ ಸಕಲ ಸೌಕರ್ಯಗಳನ್ನು ಮಾನವನಿಗೆ ಪ್ರಕೃತಿ ನಿಯಮಗಳು ನೀಡಿವೆ. ಹಂದಿ, ಬೆಕ್ಕು, ನಾಯಿ ಮುಂತಾದ ಇತರ ಪ್ರಾಣಿಗಳ ಜನ್ಮಕ್ಕಿಂತ ಮಾನವ ಜನ್ಮವು ಏಕೆ ಶ್ರೇಷ್ಠವಾದದ್ದು? ಉದಾಹರಣೆಗೆ ಒಬ್ಬ ಸಾಧಾರಣ ಗುಮಾಸ್ತನಿಗಿಂತ ಒಬ್ಬ ಉನ್ನತ ಅಧಿಕಾರಿಗೆ ಎಲ್ಲ ಸೌಲಭ್ಯಗಳನ್ನು ಕೊಡಲಾಗುತ್ತದೆ. ಏಕೆಂದರೆ ಉನ್ನತ ಅಧಿಕಾರಿಯು ಉನ್ನತ ಮಟ್ಟದ ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಪ್ರಾಣಿಗಳು ತಮ್ಮ ಹಸಿದ ಹೊಟ್ಟೆಯನ್ನು ತುಂಬಿಸಿಕೊಳ್ಳುವುದರಲ್ಲೇ ಸದಾ ತೊಡಗಿರುತ್ತವೆ. ಆದರೆ ಮಾನವನು ಅದಕ್ಕಿಂತ ಉನ್ನತ ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೆ ಈ ಆಧುನಿಕ ಪ್ರಪಂಚದಲ್ಲಿ ಮಾನವ ಆತ್ಮಘಾತಕ ಕೆಲಸಗಳನ್ನು ಮಾಡುವುದರಿಂದ ನಾಗರಿಕತೆಯ ಹಸಿದ ಹೊಟ್ಟೆಯ ಸಮಸ್ಯೆಯು ಹೆಚ್ಚುತ್ತಿದೆ. ಐಹಿಕ ಜಗತ್ತಿಗೆ ಅಂಟಿಕೊಂಡಿರುವ ಹಾಗೂ ನವನಾಗರಿಕನಂತಿರುವ ಸುಧಾರಿತ ಮನುಷ್ಯ ಪ್ರಾಣಿಯ ಬಳಿ ಹೋಗಿ ನಿನ್ನ ಕರ್ತವ್ಯವೇನು ಎಂದು ಕೇಳಿದರೆ ಅವನು ಹೊಟ್ಟೆಯನ್ನು ತುಂಬಿಸಿಕೊಳ್ಳಲು ಕೆಲಸ ಮಾಡಬೇಕು, ಜೀವನ ತುಂಬಾ ಚಿಕ್ಕದು ಸಕ್ಕತ್ತಾಗಿ ಎಂಜಾಯ್ ಮಾಡ್ಬೇಕು ಮತ್ತು ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಬೇಕಾಗಿಲ್ಲ ಎಂದು ಹೇಳುತ್ತಾನೆ. ಆದರೆ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ಜೀವನ ನಡೆಸುವದರಿಂದ ಆತ ಹೊಟ್ಟೆಪಾಡಿಗೆ ದುಡಿಯಲು ಕಾತರನಾಗಿದ್ದರು ಅವನನ್ನು ಸದಾ ನಿರುದ್ಯೋಗ ಸಮಸ್ಯೆ ಕಾಡುತ್ತದೆ.
ನಮಗೆ ಈ ಮಾನವ ಜನ್ಮ ಸಿಕ್ಕಿರುವುದು ಕತ್ತೆಗಳಂತೆ, ಕುದುರೆಗಳಂತೆ ದುಡಿಯುವದಕ್ಕಲ್ಲ. ಮಾನವ ಜನ್ಮ ಇರುವುದು ಜೀವನದ ಅತ್ಯುನ್ನತ ಸಾರ್ಥಕ ಪಡೆಯಲು. ನಾವು ಆತ್ಮಸಾಕ್ಷಾತ್ಕಾರದ ಕಡೆ ಗಮನವೇ ಕೊಡದಿದ್ದರೆ ನಮಗೆ ಇಷ್ಟವಿಲ್ಲದಿದ್ದರೂ ಪ್ರಕೃತಿ ನಿಯಮಗಳು ನಮ್ಮನ್ನು ತುಂಬಾ ಕಷ್ಟಪಟ್ಟು ದುಡಿಯುವಂತೆ ಮಾಡುತ್ತವೆ. ಮಾನವ ಜೀವಿ ಈ ಕಲಿಯುಗದಲ್ಲಿ ಕತ್ತೆಗಳಂತೆ ಹಾಗೂ ಗಾಡಿ ಎಳೆಯುವ ಎತ್ತುಗಳಂತೆ ದುಡಿಯಲೇಬೇಕಾಗಿದೆ. ಅಸುರರನ್ನು ಕಳಿಸುವ ಕೆಲವು ಪ್ರದೇಶಗಳ ಹೆಸರುಗಳನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ ಮಾನವನಾಗಿ ಮಾಡಬೇಕಾದ ಕರ್ತವ್ಯಗಳನ್ನು ಮಾಡದಿದ್ದರೆ ಅವನು ಅಸುರ ಲೋಕಗಳಿಗೆ ಹೋಗಿ ಕೇಳು ಜನ್ಮದಲ್ಲಿ ಹುಟ್ಟಿ ಅಜ್ಞಾನ ಅಂಧಕಾರಗಳಲ್ಲಿ ಶ್ರಮಪಟ್ಟು ಕೆಲಸ ಮಾಡಬೇಕಾಗುತ್ತದೆ.
ಆತ್ಮಸಾಕ್ಷಾತ್ಕಾರ ಹಾದಿಯಲ್ಲಿ ಹೋಗಿ, ಪ್ರಾಮಾಣಿಕವಾಗಿ ಪ್ರಯತ್ನಪಟ್ಟರೂ ಗುರಿ ತಲುಪದೇ ಹೋದರೆ ಅಂತವರಿಗೆ ಮುಂದಿನ ಜನ್ಮದಲ್ಲಿ ಅತ್ಯಂತ ಉನ್ನತವಾದ ಕೀರ್ತಿಯನ್ನು, ಸಂಪತ್ತನ್ನು ಹಾಗೂ ಜ್ಞಾನವನ್ನು ಹೊಂದಿದ ಜನ್ಮ ಸಿಗುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಿದೆ. ತನಗೂ ಪರಮಾತ್ಮನಿಗೂ ಇರುವ ಸಂಬಂಧವನ್ನು ಅರಿಯುವಲ್ಲಿ ವಿಫಲನಾದವನಿಗೆ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಅವನು ತನ್ನ ಹಿಂದಿನ ಜನ್ಮಗಳಲ್ಲಿ ಮಾಡಿದ ಪ್ರಾಮಾಣಿಕ ಪ್ರಯತ್ನಗಳ ಫಲವಾಗಿ ಅವನಿಗೆ ಇನ್ನೊಂದು ಒಳ್ಳೆಯ ಅವಕಾಶವನ್ನು ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಕೊಡಲಾಗುವುದು. ಒಬ್ಬನು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಲು ಪ್ರಯತ್ನಿಸಿದರೆ ಸಾಕು ಆತ ಶ್ರೀಮಂತ ಕುಟುಂಬದಲ್ಲಿ ಹುಟ್ಟುವುದು ಖಚಿತ. ಆದರೆ ಅದಕ್ಕೆ ಕಿಂಚಿತ್ತು ಪ್ರಯತ್ನ ಪಡೆದವನು ಭ್ರಮೆ ಅಥವಾ ಮಾಯೆಯಲ್ಲಿರಬಯಸುವವನು, ಅತಿಯಾದ ಭೋಗಲೋಲುಪತೆಯಲ್ಲಿದ್ದು ಐಹಿಕ ಸುಖಗಳಿಗೆ ಅಂಟಿಕೊಂಡವನು ನರಕ ಲೋಕಕ್ಕೆ ಹೋಗಬೇಕಾಗುತ್ತದೆ ಎಂದು ವೇದಶಾಸ್ತ್ರಗಳಲ್ಲಿ ಹೇಳಿದೆ.
ಕೆಟ್ಟ ಕೆಲಸಗಳಿಂದ ಕೇವಲ ಐಹಿಕ ಸಂಪತ್ತನ್ನು ಗಳಿಸುವ ಜನರಿಗೆ ಮುಕ್ತಿ ಸಿಗಲಾರದೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ ಏಕೆಂದರೆ ಅವರು ವಂಚನೆಯಿಂದ ದೊಡ್ಡವರಾಗಿರುತ್ತಾರೆ ಎಂದು ಪರಿಗಣಿಸಾಲಾಗುತ್ತದೆ. ಅಮಾಯಕ ಜನರ ವೋಟುಗಳಿಂದಲೋ ಅಥವಾ ತಮ್ಮ ಐಹಿಕ ಸಂಪತ್ತಿನಿಂದ ಅವರು ದೊಡ್ಡವರಾಗುತ್ತಾರೆ. ಆತ್ಮಸಾಕ್ಷಾತ್ಕಾರವಿಲ್ಲದ ಮತ್ತು ಭಗವಂತನ ಜ್ಞಾನವಿಲ್ಲದ ಅವರು ಪ್ರಾಣಿ, ಪಕ್ಷಿಗಳ ಅಥವಾ ಮತ್ಯಾವದೋ ಕೀಳ ಜನ್ಮವನ್ನು ಹೊಂದುವುದು ಖಚಿತ. (ಕರ್ಮಸಿದ್ಧಾಂತ ಹಾಗೂ ಮನುಷ್ಯ ಜನ್ಮ)
Sogal waterfalls👇
https://anveshana.in/sogalkshatra/
Significance of peepal Tree 👇