ಭೃಗು, ಅತ್ರಿ ವಸಿಷ್ಠ, ನಾರದ, ಮಯ ವಿಶ್ವಕರ್ಮ ಮುಂತಾದ ಋಷಗಳು ವಾಸ್ತುಶಾಸ್ತ್ರವನ್ನು ಮನುಕುಲಕ್ಕೆ ಕಾಣಿಕೆಯನ್ನಾಗಿ ಕೊಟ್ಟರು. ಜಪಾನ್, ಅಮೇರಿಕಾ, ಜರ್ಮನ್, ಚೀನಾ ಮುಂತಾದ ಕೆಲವು ರಾಷ್ಟ್ರಗಳು, ಪ್ರಾಚೀನ ಕಾಲದ ಅತ್ಯಮೂಲ್ಯವಾದ ಈ ವಾಸ್ತು ವಿಜ್ಞಾನದ ಪೂರ್ಣಪ್ರಮಾಣದ ಲಾಭವನ್ನು ಪಡೆಯುತ್ತಿವೆ. ದುರದೃಷ್ಟವಶಾತ್ ನಮ್ಮ ಪ್ರಾಚೀನ ವಾಸ್ತು ವಿಜ್ಞಾನದ ಕುರಿತು ನಾವು ಮೂಢನಂಬಿಕೆ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಅದರ ಲಾಭ ಪಡೆಯುವಲ್ಲಿ ವಿಫಲತೆ ಹೊಂದಿದರೆ ಆಕಡೆ ತೀವ್ರಗತಿಯಿಂದ ಅಭಿವೃದ್ಧಿ ಹೊಂದುತ್ತಿರುವ ಲಂಡನ್, ಹಾಂಕಾಂಗ್, ಟೋಕಿಯೋ, ನೆವಾರ್ಕ್ ಪಟ್ಟಣಗಳು ವಾಸ್ತು ಶಾಸ್ತ್ರದ ನಿಯಮಗಳನ್ನು ಚಾಚುತಪ್ಪದೇ ಕಟ್ಟುನಿಟ್ಟಾಗಿ ಅನುಸರಿಸುತ್ತಿವೆ. ಆದರೆ ವಾಸ್ತವವಾಗಿ ನಾವು ವಾಸ್ತು ಶಾಸ್ತ್ರವನ್ನು ಅಲ್ಪ ಸ್ವಲ್ಪ ಅನುಸರಿಸುತ್ತಿರುವುದರಿಂದ ಗರಿಷ್ಠ ಪ್ರಮಾನದ ಫಲವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕುತೂಹಲಕಾರಿ ಹಾಗೂ ರಹಸ್ಯವಾದ ವಾಸ್ತು ವಿದ್ಯೆಯನ್ನು ತತ್ಸಾರ ಮಾಡುತ್ತಿರುವುದು ಒಂದು ದೊಡ್ಡ ದುರಾದೃಷ್ಟಕರ ಸಂಗತಿ. ತಮ್ಮನ್ನೇ ತಾವು ದೊಡ್ಡ ಜ್ಞಾನಿಗಳೆಂದು ಪರಿಗಣಿಸಿಕೊಂಡು ಕಲ್ಪನಾಲೋಕದಲ್ಲಿ ತೇಲಿ ಮುಳುಗುವ ನಾಸ್ತಿಕರು ಯಾವುದೇ ಪ್ರಾಯೋಗಿಕ ಪರೀಕ್ಷೆ ಮಾಡದೆ ವಾಸ್ತು ಶಾಸ್ತ್ರವನ್ನು ಮೂಢನಂಬಿಕೆಯೆಂದು ಭಾವಿಸಿಬಿಡುತ್ತಾರೆ. ಇವರ ನಡುವೆ ನಕಲಿ ಗುರೂಜಿಗಳ ಹಾಗೂ ಜ್ಯೋತಿಷಿಗಳ ಸಂಖ್ಯೆಯ ಗಣನೀಯವಾಗಿ ಹೆಚ್ಚುತ್ತಿದೆ ಹೀಗಾಗಿ ಪ್ರಾಚೀನ ಕಾಲದ ರಹಸ್ಯ ವಿದ್ಯೆಗಳ ಕುರಿತು ಅರಿವು ಕಡಿಮೆ ಆಗಿ ನಮ್ಮಲ್ಲಿ ಅಜ್ಞಾನ ಅಂಧಕಾರಗಳು ಹೆಚ್ಚುತ್ತಿದ್ದರೆ ಆಕಡೆ ಪಾಶ್ಚಿಮಾತ್ಯರು ಸಂಸ್ಕೃತ ಭಾಷೆಯನ್ನು ಕಲಿತು ಪ್ರಾಚೀನ ಗ್ರಂಥಗಳ ಅಧ್ಯಯನದಲ್ಲಿ ತೊಡಗಿ ಅನೇಕ ರಹಸ್ಯ ವಿದ್ಯೆಗಳ ಲಾಭವನ್ನು ಪಡೆಯುತ್ತಿದ್ದಾರೆ. (ವಾಸ್ತು ವೈಜ್ಞಾನಿಕವಾದದ್ದ. ಸಮೃದ್ಧಿಗಾಗಿಯೇ ವಾಸ್ತು)

ವಾಸ್ತು ವೈಜ್ಞಾನಿಕವಾದದ್ದ. ಸಮೃದ್ಧಿಗಾಗಿಯೇ ವಾಸ್ತು.
ಪ್ರಾಚೀನ ಕಾಲದಲ್ಲಿ ವಾಸ್ತುಶಾಸ್ತ್ರದ ಜ್ಞಾನವು ಋಷಿಗಳಿಗೆ, ಸಾಧು ಸಂತರಿಗೆ ಮಾತ್ರ ಇತ್ತು. ಹಾಗೂ ಇವರೆಲ್ಲರೂ ವಾಸ್ತು ಶಾಸ್ತ್ರದ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸಲು ಪ್ರಯತ್ನಿಸಲಿಲ್ಲ. ಇದರ ನಿಯಮಗಳಿಗೆ ಅನುಗುಣವಾಗಿ ದೇವಸ್ಥಾನಗಳನ್ನು, ಉನ್ನತ ಧಾರ್ಮಿಕ ಸ್ಥಳಗಳನ್ನು, ಸಾರ್ವಜನಿಕ ಮಂಟಪಗಳನ್ನು ಹಾಗೂ ಸಭಾಂಗಣಗಳನ್ನು ಕಟ್ಟುತ್ತಿದ್ದರು. ಜನಸಾಮಾನ್ಯರಿಗೆ ಪ್ರಾಚೀನ ಕಾಲದಲ್ಲಿ ವಾಸ್ತುಶಾಸ್ತ್ರದ ಅರಿವು ಕಡಿಮೆ ಇತ್ತು ಆದರೆ ನಮ್ಮ ಪೂರ್ವಜರು ಕರ್ಮಗಳನ್ನು ಧರ್ಮದಿಂದ ಮಾಡುತ್ತಿದ್ದರು ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು ಇದರಿಂದಾಗಿ ಧನಾತ್ಮಕ ಶಕ್ತಿ ಸಂಚಲನವಾಗುತ್ತಿತ್ತು. ಈಗ ಕಾಲ ಬದಲಾವಣೆಯಾಗಿದೆ ತೀವ್ರಗತಿಯಿಂದ ಮುಂದುವರಿಯುತ್ತಿರುವ ಈ ನಾಗರಿಕತೆಯಲ್ಲಿ ಜನಸಾಮಾನ್ಯರಿಗೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ತಾಳ್ಮೆ ಕಡಿಮೆಯಾಗಿದೆ, ಏಕಾಗ್ರತೆ ಹೊರಟು ಹೋಗಿದೆ ಹಾಗೂ ಆಧುನಿಕ ಮಾನವ ಮಾಡುವ ಕರ್ಮವು ಧರ್ಮದಿಂದ ಇಲ್ಲ. ಆದ್ದರಿಂದ ಅಧುನಿಕ ಮಾನವ ಋಣಾತ್ಮಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾನೆ. ಆದ್ದರಿಂದ ಪ್ರಾಚೀನ ಕಾಲದಲ್ಲಿ ನಮ್ಮ ಪೂರ್ವಜರು ಗೌಪ್ಯವಾಗಿ ಇಟ್ಟಿದ್ದ ವಾಸ್ತುಶಾಸ್ತ್ರವನ್ನು ಇವತ್ತು ನಾವು ಮನೆ ಕಟ್ಟುವ ಸಮಯದಲ್ಲಿ ಅನುಸರಿಸುವ ಮೂಲಕ ಧನಾತ್ಮಕ ಶಕ್ತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಧರ್ಮದಿಂದ ಕರ್ಮಗಳನ್ನು ಮಾಡಿದರೆ ಇನ್ನಷ್ಟು ಮತ್ತಷ್ಟು ಜೀವನದಲ್ಲಿ ಒಳ್ಳೆಯ ಫಲ ಸಿಗುತ್ತದೆ. ವಾಸ್ತುಶಾಸ್ತ್ರ ಮತ್ತು ಕರ್ಮ ಸಿದ್ಧಾಂತ ಇವೆರಡು ಅಂಶಗಳು ಒಂದಕ್ಕೊಂದು ತಳುಕು ಹಾಕಿಕೊಂಡು ಮನುಷ್ಯನ ಜೀವನದ ಮೇಲೆ ನಿರಂತರವಾಗಿ ಪ್ರಭಾವ ಮಾಡುತ್ತಿರುತ್ತವೆ. ಈ ಎರಡು ಅಂಶಗಳಲ್ಲಿ ಕನಿಷ್ಠಪಕ್ಷ ಒಂದನ್ನಾದರೂ ಜೀವನದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕು. ತಪ್ಪಿ ಹೋಗಿರುವ ಮನೆಯ ವಾಸ್ತುವನ್ನು ಸರಿಮಾಡಲು ಸಾಧ್ಯವಾಗುತ್ತಿಲ್ಲವೆಂದು ಚಿಂತೆ ಮಾಡುವುದನ್ನು ನಿಲ್ಲಿಸಿ ಕರ್ಮವನ್ನು ಧರ್ಮದಿಂದ ಮಾಡಿ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಬಿಡಿ ಆಗ ತಾನಾಗಿಯೇ ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ ಸಂಚಲನ ಆಗಿಬಿಡುತ್ತದೆ.
ಈ ಪ್ರಪಂಚದಲ್ಲಿ ಪ್ರತಿಯೊಂದು ವಸ್ತು ಪಂಚಮಹಾಭೂತಗಳಿಂದ ಆಗಿರುವ ಸಂಗತಿಯನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಲೇಬೇಕು. ನಾವು ಕಟ್ಟುವ ಮನೆಯು ಆಕಾಶದ ಅಲ್ಪ ಪ್ರಮಾಣದ ಖಾಲಿ ಸ್ಥಳವನ್ನು (Space) ತನ್ನೊಳಗೆ ಆಕ್ರಮಿಸಿಕೊಳ್ಳುತ್ತದೆ. ಆದ್ದರಿಂದ ಮನೆಯ ಒಳಗೆ ಇರುವ ಅಲ್ಪಪ್ರಮಾಣದ ಆಕಾಶ ಹಾಗೂ ಮನೆಯ ಹೊರಗೆ ಇರುವ ಆಕಾಶದ ಗುಣಲಕ್ಷಣಗಳು ಒಂದೇ ಆಗಿರುತ್ತವೆ. ಇದೇ ರೀತಿ ಮನೆಯ ಒಳಗೆ ಇರುವ ಗಾಳಿ ಹಾಗೂ ಮನೆಯ ಹೊರಗೆ ಇರುವ ಗಾಳಿಯ ಗುಣಲಕ್ಷಣಗಳು ಒಂದೇ ಆಗಿರುತ್ತವೆ. ಸಮುದ್ರದಲ್ಲಿರುವ ನೀರನ್ನ ಒಂದು ಕಪ್ಪಿನಲ್ಲಿ ತೆಗೆದುಕೊಂಡರೆ ಆ ಕಪ್ಪಿನಲ್ಲಿ ಇರುವ ನೀರಿನ ಗುಣಲಕ್ಷಣ ಹಾಗೂ ಸಮುದ್ರದ ನೀರಿನ ಗುಣಲಕ್ಷಣಗಳು ಒಂದೇ ಆಗಿರುತ್ತವೆ. ಅಷ್ಟೇ ಏಕೆ ಇಡೀ ಬ್ರಹ್ಮಾಂಡದಲ್ಲಿ ನೀರಿನ ಗುಣಲಕ್ಷಣಗಳು ಒಂದೇ ಆಗಿರುತ್ತವೆ. ಇದೇ ರೀತಿ ಒಂದು ಪರಮಾಣು ಯಾವ ರೀತಿಯಲ್ಲಿ ರಚನೆ ಹಾಗೂ ಗುಣಲಕ್ಷಣಗಳನ್ನು ಹೊಂದಿದೇನೋ ಅದೇ ರೀತಿಯಲ್ಲಿ ಇಡೀ ಬ್ರಹ್ಮಾಂಡದ ರಚನೆಯಾಗಿದೆ ಹಾಗೂ ಪರಮಾಣುವಿಗೆ ಇರುವ ಎಲ್ಲ ಗುಣಲಕ್ಷಣಗಳು ಇಡೀ ಬ್ರಹ್ಮಾಂಡಕ್ಕೆ ಇವೆ. ಈ ಬ್ರಹ್ಮಾಂಡದಲ್ಲಿ ಖಾಲಿ ಸ್ಥಳವಿದೆ (Space), ದ್ರವ್ಯರಾಶಿ ಇದೆ (Mass), ಹಾಗೂ ಶಕ್ತಿ ತುಂಬಿಕೊಂಡಿದೆ (Energy). (Universe has endless expanding them existence of time, space metta and energy) ಇದರಿಂದ ಆಲ್ಬರ್ಟ್ ಐನ್ ಸ್ಟೀನನ ಸಿದ್ಧಾಂತದ ಪ್ರಕಾರ
E = MC*2
E = ಪರಮಾಣುವಿನ ಶಕ್ತಿ (Energy related to atom)
M = ದ್ರವ್ಯರಾಶಿ (mass)
C = ಬೆಳಗಿನ ವೇಗ (Velocity of light)
ಆಕಾಶದಲ್ಲಿ ನಮ್ಮ ಗ್ಯಾಲಕ್ಸಿ ಮಿಲ್ಕಿವೇ ಇದೆ. ಬೇರೆ ಬೇರೆ ಗ್ಯಾಲಕ್ಸಿಗಳು, ಟ್ರಿಲಿಯನ್ ಗಟ್ಟಲೆ ಗ್ರಹ ನಕ್ಷತ್ರಗಳು ಇವೆ. ಉಪಗ್ರಹಗಳು ಹಾಗೂ ಧೂಮಕೇತುಗಳು ಇವೆ. ಈ ಆಕಾಶಕಾಯಗಳ ಮೇಲೆ ನಿರಂತರವಾಗಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ನಡೆಯುತ್ತಿರುತ್ತವೆ. ಹಾಗೂ ಬ್ರಹ್ಮಾಂಡದ ಅನೇಕ ವಿದ್ಯಮಾನಗಳು ಆಕಾಶದಲ್ಲಿ ಸದಾ ಜರುಗುತ್ತಿರುತ್ತವೆ. ಆದ್ದರಿಂದ ನಮ್ಮ ಮನೆಯು ಆಕ್ರಮಿಸಿಕೊಂಡ ಅಲ್ಪಪ್ರಮಾಣದ ಆಕಾಶವು ಇಂತಹ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಹಾಗೂ ವಿದ್ಯಮಾನಗಳಿಗೆ ಕಾರ್ಯಪ್ರವೃತ್ತಿಗೊಳ್ಳುತ್ತದೆ. (The small space bonded in our structure is functioning as action and reactions taking place over celestial bodies at outside space) ಅನಂತ ದೂರದಲ್ಲಿರುವ ಗ್ರಹ-ನಕ್ಷತ್ರಗಳ ಚಲನೆಯು ಖಂಡಿತವಾಗಿಯೂ ಮನೆಯೊಳಗಿರುವ ಅಲ್ಪಪ್ರಮಾಣದ ಆಕಾಶದಲ್ಲಿ ಪ್ರಭಾವ ಬೀರುತ್ತದೆ. ಹೀಗೆ ಕಾರ್ಯಪ್ರವೃತ್ತಿಗೊಂಡ ಮನೆಯಲ್ಲಿರುವ ಅಲ್ಪಪ್ರಮಾಣದ ಆಕಾಶವು ನಮ್ಮ ಮೇಲೂ ಪ್ರಭಾವ ಬೀರುತ್ತದೆ. ಈ ರೀತಿಯಾಗಿ ಪರಮಾಣು ಮತ್ತು ಅನಂತ ಆಕಾಶದ ನಡುವಿನ ಸಂಬಂಧ ಯಾವತ್ತೂ ಕಳಚಿಕೊಳ್ಳಲು ಸಾಧ್ಯವಿಲ್ಲ. ಕೃತಕವಾಗಿ ನಾವು ನಿರ್ಮಿಸಿಕೊಂಡ ಮನೆಯು ಆಕಾಶದಲ್ಲಿ ನಡೆಯುವ ವಿದ್ಯಮಾನಗಳಿಂದ ಸಂಪೂರ್ಣವಾದ ಪ್ರತ್ಯೇಕತೆಯನ್ನು ಯಾವತ್ತೂ ಒದಗಿಸಲಾರದು.

ಪ್ರಾಚೀನ ಕಾಲದ ದೊಡ್ಡ ದೊಡ್ಡ ಋಷಿಗಳು, ಸಾಧುಗಳು, ಹಾಗೂ ಸಂತರು ಆಕಾಶದಲ್ಲಿರುವ ಗ್ರಹ-ನಕ್ಷತ್ರಗಳ, ನಕ್ಷತ್ರಪುಂಜಗಳ, ಸೂರ್ಯನ ಬೆಳಕಿನ, ಕಾಸ್ಮಿಕ್ ಕಿರಣಗಳ ಕುರಿತು ಆಳವಾದ ಅಧ್ಯಯನ ಮಾಡಿದರು. ಗ್ರಹ-ನಕ್ಷತ್ರಗಳ ಮೇಲೆ ಜರಗುವ ವಿದ್ಯಮಾನಗಳಿಂದ ಉದ್ಭವವಾಗುವ ಅನಿಲಗಳು, ಅಲ್ಟ್ರಾವೈಲೆಟ್ ಮತ್ತು ಇನ್ಫ್ರಾರೆಡ್ ಕಿರಣಗಳು, ರೇಡಿಯೋ ತರಂಗ ಶಕ್ತಿ, ಗುರುತ್ವಾಕರ್ಷಣ ಶಕ್ತಿ ಇವೆಲ್ಲವುಗಳು ಭೂಮಿಯ ಪರಿಸರದ ಮೇಲೆ ಹಾಗೂ ನಾವು ಕಟ್ಟಿಕೊಂಡಿರುವ ಮನೆಯ ಮೇಲೆ ಹೇಗೆ ಪ್ರಭಾವ ಬರುತ್ತವೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಿ ನಮ್ಮ ಪೂರ್ವಜರು ವಾಸ್ತುಶಾಸ್ತ್ರವನ್ನು ಬರೆದರು. ಈ ವಾಸ್ತುಶಾಸ್ತ್ರದ ನಿಯಮಗಳನ್ನು ಮನೆ ಕಟ್ಟುವ ಸಂದರ್ಭದಲ್ಲಿ ಅನುಸರಿಸಿದರೆ ಖಂಡಿತವಾಗಿಯೂ ಸುಖ, ಶಾಂತಿ, ಅಭಿವೃದ್ಧಿ, ಆರೋಗ್ಯ, ಆಯುಷ್ಯ ಲಭಿಸುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ಯಾರು ಬೇಕಾದರೂ ಪರೀಕ್ಷೆ ಮಾಡಿಕೊಳ್ಳಬಹುದು. ವಾಸ್ತುಶಾಸ್ತ್ರದ ನಿಯಮಗಳನ್ನು ಮನೆ ಕಟ್ಟುವ ಸಮಯದಲ್ಲಿ ಅನುಸರಿಸಿದರೆ ಖಂಡಿತವಾಗಿಯೂ ವಾಸ್ತುಶಾಸ್ತ್ರದ ಫಲವನ್ನು ಪಡೆಯಲು ಸಾಧ್ಯವಿದೆ.