ಸೌಂಡ್ ಹೀಲಿಂಗ್ ಹಾಗೂ ರೋಗಗಳು
ಸೌಂಡ್ ಹೀಲಿಂಗ್ ಹಾಗೂ ರೋಗಗಳು ನಮಗೆಲ್ಲರಿಗೂ ತಿಳಿದಿರುವಂತೆ ಶಬ್ದವು ಶಕ್ತಿಯ ಒಂದು ರೂಪ. ವಿಶಿಷ್ಟವಾದ ಕಂಪನವುಳ್ಳ ಶಬ್ದದಿಂದ ಅನಂತವಾದ ಲಾಭಗಳಿವೆ ಎಂಬುದು ನಮಗೆ ಪ್ರಾಚೀನ ಈಜಿಪ್ಟಿಯನ್ ಮತ್ತು ಗ್ರೀಕ್ ನಾಗರಿಕತೆಯ ಇತಿಹಾಸದಿಂದ ತಿಳಿದುಬರುತ್ತದೆ. ಶಬ್ದವು ನೆನಪಿನ ಶಕ್ತಿಯನ್ನು ಹಾಗೂ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ವಿಶಿಷ್ಟವಾದ ಕಂಪಣವುಳ್ಳ ಶಬ್ದವು ಚಿಕಿತ್ಸಕಾರಿ ಗುಣಗವನ್ನು ಹೊಂದಿದೆ ಎಂಬುದನ್ನು ಪ್ರಾಚೀನ ಈಜಿಪ್ಟಿಯನ್ ಮತ್ತು ಗ್ರೀಕ್ ನಾಗರಿಕತೆಗಳು ಅರ್ಥಮಾಡಿಕೊಡಿದ್ದವು. ವಿಶಿಷ್ಟವಾದ ಶಬ್ದ ಕಂಪನದ ಮೂಲಕ ರೋಗಗಳನ್ನು ಗುಣಪಡಿಸುವ ವಿಧಾನಕ್ಕೆ ಸೌಂಡ್ ಹೀಲಿಂಗ್ ಎನ್ನಲಾಗುತ್ತದೆ. ಸೌಂಡ್ ಹೀಲಿಂಗ್ ಎಂಬುದು ಪ್ರಾಚೀನ ರೋಗ ಚಿಕಿತ್ಸಾ ವಿಧಾನಗಳಲ್ಲಿ ಒಂದು ಹಾಗೂ ಇದನ್ನು ಜಗತ್ತಿನಾದ್ಯಂತ ಬೇರೆ ಬೇರೆ ಸಂಸ್ಕೃತಿಯ ಜನರು ರೋಗಗಳನ್ನು ಗುಣಪಡಿಸಲು ರೋಗಿಗಳ ಮೇಲೆ ಅನುಷ್ಠಾನಗೊಳಿಸುತ್ತಿದ್ದರು. ಸುಮಾರು 40 ಸಾವಿರ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿದ್ದ ಮೂಲನಿವಾಸಿಗಳು ಮುರಿದ ಮೂಳೆಯನ್ನು ಜೋಡಿಸಲು ಹಾಗೂ ಇತರೆ ರೋಗಗಳನ್ನು ಗುಣಪಡಿಸಲು ಮೊಟ್ಟ ಮೊದಲ ಬಾರಿಗೆ ಶಬ್ದದ ಕಂಪನಗಳನ್ನು ಬಳೆಸುತ್ತಿದ್ದರು ಎಂದು ಹೇಳಲಾಗುತ್ತದೆ. ಆಸ್ಟ್ರೇಲಿಯಾದ ಮೂಲ ನಿವಾಸಿಗಳು ರೋಗಗಳನ್ನು ಗುಣಪಡಿಸುವ ಈ ವಿಧಾನವು ಅನೇಕ ತಿರುವುಗಳನ್ನು ಪಡೆದುಕೊಂಡು ಹಾಗೂ ನಿರಂತರ ಸುಧಾರಣೆ ಹೊಂದುವ ಮೂಲಕ ಕಟ್ಟಕಡೆಗೆ ಇವತ್ತು ಅಲ್ಟ್ರಾ ಸೌಂಡ್ ಚಿಕಿತ್ಸಾ ವಿಧಾನವನ್ನು ತಲುಪಿದೆ. ಪ್ರಾಚೀನ ಕಾಲದ ಶಬ್ದ ಕಂಪನದ ಚಿಕಿತ್ಸಾ ವಿಧಾನದ ಪರಿವರ್ತನಾ ರೂಪವೇ ಇವತ್ತಿನ ಅಲ್ಟ್ರಾ ಸೌಂಡ್ ಚಿಕಿತ್ಸೆ! ನಮ್ಮ ದೇಹವು ಶಬ್ದಕ್ಕೆ ಅತ್ಯಂತ ಕ್ಷಿಪ್ರವಾಗಿ ಪ್ರತಿಕ್ರಿಯಾತ್ಮಕ ಗೊಳ್ಳುತ್ತದೆ ಹಾಗೂ ಶಬ್ದವು ನಿಶ್ಚಿತವಾಗಿ ನಮ್ಮ ಮನಸ್ಸಿನ ಮೇಲೆ ಮತ್ತು ನಡವಳಿಕೆ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಉದಾಹರಣೆಗೆ ಸಂಗೀತವನ್ನು ಕೇಳುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗಿ ಸ್ವಲ್ಪ ಮನಸಿಗೆ ಖುಷಿ ಅನಿಸುತ್ತದೆ ಹಾಗೂ ಮನಸ್ಸಿನಲ್ಲಿನ ಒಬ್ಬಂಟಿತನ, ನೋವು, ಕಷ್ಟ, ಕಣ್ಣೀರು, ದುಃಖ, ಹಳೆಯ ಕಹಿ ನೆನಪುಗಳು, ಮುಂತಾದ ಎಲ್ಲ ಮನಸ್ಸಿನಲ್ಲಿರುವ ಋಣಾತ್ಮಕ ಅಂಶಗಳು ವಾಸಿ ಆದವೇನೋ ಅನ್ನೋ ಹಾಗೆ ಒಂದು ನವಚೈತನ್ಯದ ಅನುಭವ ಉಂಟಾಗುತ್ತದೆ. ಆದ್ದರಿಂದ ಶಬ್ದವು ನಮ್ಮ ಭಾವನಾತ್ಮಕ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಶಬ್ದವು ನಮ್ಮ ಮೇಲೆ ಹೇಗೆಲ್ಲ ಪ್ರಭಾವ ಬೀರುತ್ತದೆ ಎನ್ನುವುದು ಇನ್ನಷ್ಟು ಮತ್ತಷ್ಟು ಆಳವಾಗಿ ವಿಶ್ಲೇಷಣೆ ಮಾಡಿದಾಗ ರಕ್ತದ ಒತ್ತಡ, ಹೃದಯ ಬಡಿತ, ದೇಹದ ತಾಪಮಾನ, ಉಸಿರಾಟದ ವೇಗ, ಮುಂತಾದ ಶಾರೀರಿಕ ನಿಯತಾಂಕಗಳಲ್ಲೂ ಗಣನೀಯವಾಗಿ ಬದಲಾವಣೆಗಳು ಉಂಟಾಗುತ್ತವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಇಡೀ ಬ್ರಹ್ಮಾಂಡವನ್ನು ಶಕ್ತಿಯ ರೂಪವೆಂದು, ತರಂಗವೆಂದು ಹಾಗೂ ಕಂಪನವೆಂದು ಪರಿಗಣಿಸಿದಾಗ ಮಾತ್ರ ಈ ಬ್ರಹ್ಮಾಂಡದ ಅನೇಕ ರಹಸ್ಯಗಳನ್ನು ಬೇಧಿಸಲು ಸಾಧ್ಯವಾಗುತ್ತದೆ ಎಂಬುದನ್ನು ಜಗತ್ಪ್ರಸಿದ್ಧ ವಿಜ್ಞಾನಿ ನಿಕೋಲಾ ಟೆಸ್ಲಾ ಹೇಳುತ್ತಾರೆ. ಪರಮನುವಿನಲ್ಲಿ ಇರುವ ಎಲೆಕ್ಟ್ರಾನಗಳು ಚಲಿಸುವ ಸಮಯದಲ್ಲಿ ಹೇಗೆ ಕಂಪನಗಳನ್ನು ಉಂಟು ಮಾಡುತ್ತವೋ ಅದೇ ರೀತಿ ಬ್ರಹ್ಮಾಂಡದಲ್ಲೂ ಕೂಡ ಅನಂತವಾದ ಕಂಪನಗಳು ಇರುತ್ತವೆ. ಇಡೀ ಬ್ರಹ್ಮಾಂಡವೇ ಕಂಪನಗಳಿಂದ ತುಂಬಿಹೋಗಿದೆ. ಬ್ರಹ್ಮಾಂಡದಲ್ಲಿರುವ ಎಲ್ಲ ವಸ್ತುಗಳಿಗೂ ಕಂಪನವೇ ತಳಹದಿ ಹಾಗೂ ಭೌತಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಮುಂತಾದ ಎಲ್ಲ ಆಯಾಮಗಳು ಕೂಡಾ ಕಂಪನದ ಆಧಾರದ ಮೇಲೆ ತಮ್ಮ ಅಸ್ತಿತ್ವವನ್ನು ಹೊಂದಿವೆ. ಕಂಪನಗಳ ಕುರಿತಾದ ಪ್ರಾಯೋಗಿಕ ವೀಕ್ಷಣೆ ಮತ್ತು ಸಂಶೋಧನೆಯ ಆಧಾರದ ಮೇಲೆ ಸೂಕ್ತವಾದ ಕಂಪನವನ್ನು ಹೊಂದಿದ ಧ್ವನಿಗೆ ಚಿಕಿತ್ಸಕಾರಿ ಗುಣವಿದೆ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ. ಸೂಕ್ತವಾದ ಕಂಪನದ ತರಂಗಗಳಿಂದ ನಿದ್ರಾಹೀನತೆ, ಒತ್ತಡ, ನಿರುತ್ಸಾಹ, ರಕ್ತದೊತ್ತಡ, ರೋಗನಿರೋಧಕ ಶಕ್ತಿಯ ಸಮಸ್ಯೆಗಳು, ಹೃದಯ ಬಡಿತದ ಸಮಸ್ಯೆ, ಉಸಿರಾಟದ ಸಮಸ್ಯೆ ಮುಂತಾದ ಮನೋದೈಹಿಕ ಕಾಯಿಲೆಗಳನ್ನು ವಾಸಿಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಸೌಂಡ್ ಹೀಲಿಂಗ್ ಚಿಕಿತ್ಸಾ ವಿಧಾನ ಒಪ್ಪಿಕೊಳ್ಳುತ್ತದೆ.
ಅಗೋಚರ ಶಬ್ದವು ವಾಸ್ತವವಾಗಿ ಅತ್ಯಂತ ಕ್ಲಿಷ್ಟಕರವಾದ ರಚನಾತ್ಮಕ ಸ್ವರೂಪವನ್ನು ಹೊಂದಿರುತ್ತದೆ ಎಂಬುದು ಶಬ್ದದ ಅಧ್ಯಯನವಾದ ಸೈಮ್ಯಾಟಿಕ್ಸ್ದಿಂದ ತಿಳಿದು ಬರುತ್ತದೆ. ಶಬ್ದದ ಕಪನಗಳಲ್ಲಿನ ಕ್ಲಿಷ್ಟತೆಯನ್ನು ಹಾಗೂ ಶಬ್ದವು ದ್ರವಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಸೈಮ್ಯಾಟಿಕ್ಸ್ದಿಂದ ನೋಡಲು ಸಾಧ್ಯವಾಗುತ್ತದೆ. ಶಬ್ದವನ್ನು ನೀರು, ಮರಳು, ಗಾಳಿ ಹಾಗೂ ಮುಂತಾದ ಕೆಲವು ಮಾಧ್ಯಮಗಳಲ್ಲಿ ಪ್ರಾಯೋಗಿಕವಾಗಿ ಹರಿಸಿ ಪರೀಕ್ಷೆ ಮಾಡಿದಾಗ ಶಬ್ದದಲ್ಲಿರುವ ಕ್ಲಿಷ್ಟಕರ ರಚನಾತ್ಮಕ ಸ್ವರೂಪ ಎಂತದ್ದು ಎಂದು ಅರ್ಥವಾಗುತ್ತದೆ. ವಿಜ್ಞಾನಿಗಳು ಇವತ್ತು ವಿನ್ಯಾಸಗೊಳಿಸಿದ ಸೈಮಾಸ್ಕೋಪ್ ಎಂಬ ಉಪಕರಣದಿಂದ ಶಬ್ದದ ಕ್ಲಿಷ್ಟತೆ ಹಾಗೂ ಶಬ್ದ ಕಂಪನದ ರಹಸ್ಯ ಸ್ವರೂಪವನ್ನು ನೋಡಲು ಸಾಧ್ಯವಾಗುತ್ತಿದೆ. ಶಬ್ದ ಕಂಪನದ ರಹಸ್ಯದ ಕುರಿತು ಆಳ ಅಧ್ಯಯನ ನಡೆಸಿದಾಗ ಬ್ರಹ್ಮಾಂಡದ ಪ್ರತಿ ಹಂತದಲ್ಲೂ ಸಾಮರಸ್ಯ ಹಾಗೂ ಪರಸ್ಪರ ಸಂಬಂಧ ಇದೆ ಎಂಬುದು ತಿಳಿದುಬರುತ್ತದೆ. ಒಂದು ರಕ್ತದ ಕಣ, ಹೃದಯ ಬಡಿತ, ಹಾಗೂ ಸಾಮರಸ್ಯವನ್ನು ಹೊಂದಿದ ಸಂಗೀತ ವಾದ್ಯದ ಶಬ್ದ ಕಂಪನದಲ್ಲಿ ಗೋಲ್ಡನ್ ರೇಶೋ(1.618)ಇದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಿಸರ್ಗದಲ್ಲಿ ಇರುವ ವಸ್ತುಗಳು ಯದ್ವಾತದ್ವಾ ಜೋಡಣೆ ಆಗಿಲ್ಲ. ಪ್ರತಿ ವಾಸ್ತುವಿನಲ್ಲೂ ಗೋಲ್ಡನ್ ರೇಶೋ ಅನ್ನುವುದು ಇದ್ದೆ ಇದೆ. ಸೈಮ್ಯಾಟಿಕ್ಸ್ ಪ್ರಕಾರ ಧ್ವನಿ ತರಂಗವು ನೇರವಾಗಿ ವಸ್ತುವಿನ ಕಣಗಳಲ್ಲಿ ಕಂಪನವನ್ನು ಹುಟ್ಟಿಸುತ್ತದೆ ಹಾಗೂ ಧ್ವನಿ ತರಂಗವನ್ನು ನೀರಿನಲ್ಲಿ ಹರಿಸಿದಾಗ ನೀರಿನ ಪರಮಾಣುವಿನ ಅಣುಗಳ ರಚನಾತ್ಮಕ ವ್ಯವಸ್ತೆಯ ಮೇಲೆ ಪ್ರಭಾವ ಆಗುತ್ತದೆ. ನಮ್ಮ ದೇಹವು 70% ನೀರಿನಿಂದ ಆಗಲ್ಪಟ್ಟಿರುವ ಕಾರಣಕ್ಕಾಗಿ ಹಾಗೂ ಧ್ವನಿಯ ವೇಗವು ನೀರಿನಲ್ಲಿ 5 ರಷ್ಟು ಹೆಚ್ಚಿನ ವೇಗದಿಂದ ಚಲಿಸುವ ಕಾರಣಕ್ಕಾಗಿ ನಮ್ಮ ದೇಹದ ಮೇಲೆ ಧ್ವನಿಯು ಅತ್ಯಂತ ಕ್ಷಿಪ್ರವಾಗಿ ಪ್ರಭಾವ ಬೀರುತ್ತದೆ ಎಂಬುದು ಸೈಮ್ಯಾಟಿಕ್ಸ್ದಿಂದ ತಿಳಿದು ಬರುತ್ತದೆ. 528 ಹರ್ಟ್ಝ್ ಆವರ್ತನದ ಧ್ವನಿಗೆ ಹಾಗೂ ಬೇರೆ ಕೆಲವು ಕಡಿಮೆ ಆವರ್ತನವುಳ್ಳ ಧ್ವನಿಗೆ ಚಿಕಿತ್ಸಾಕಾರಿ ಗುಣವಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಸೌಂಡ್ ಹೀಲಿಂಗ್ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ರೀತಿಯ ಕಡಿಮೆ ಆವರ್ತನವುಳ್ಳ ಶಬ್ದಗಳನ್ನು ಉಪಯೋಗಿಸುತ್ತಾರೆ. 396 ಹರ್ಟ್ಝ್ ಆವರ್ತನವುಳ್ಳ ಶಬ್ದವು ಅಪರಾಧ ಮನಸ್ಥಿತಿಯಿಂದ ಮತ್ತು ಭಯದಿಂದ ಮುಕ್ತಗೊಳಿಸಿ ಜೀವನದಲ್ಲಿನ ಗುರಿಯನ್ನು ತಲುಪಲು ಸಹಾಯಕವಾಗುತ್ತದೆ. 417 ಹರ್ಟ್ಝ್ ಆವರ್ತನವುಳ್ಳ ಶಬ್ದವು ದೇಹದಲ್ಲಿ ಹಾಗೂ ಮನೆಯಲ್ಲಿ ಇರುವ ಋಣಾತ್ಮಕ ಶಕ್ತಿಯನ್ನು ತಗೆದು ಹಾಕಿ ಮನಸಲ್ಲಿ ಧನಾತ್ಮಕ ಆಲೋಚನೆಗಳು ಬರುವ ಹಾಗೆ ಮಾಡುತ್ತದೆ ಮತ್ತು ಮನಸಿಗೆ ಆದ ಆಘಾತವನ್ನು ವಾಸಿ ಮಾಡುವ ಮೂಲಕ ನವ ಚೈತನ್ಯವನ್ನು ಹುಟ್ಟಿಸುತ್ತದೆ. 528 ಹರ್ಟ್ಝ್ ಆವರ್ತನವುಳ್ಳ ಶಬ್ದಕ್ಕೆ ಪ್ರೀತಿಯ ಆವರ್ತನ ಅಥವಾ ಪವಾಡವನ್ನು ಸೃಷ್ಠಿಸುವ ಸ್ವರ ಎಂದು ಕರೆಯುತ್ತಾರೆ. ಈ ಆವರ್ತನವು ನಿರ್ದಯತೆಯಿಂದ ಕೂಡಿದ ಮನಸಲ್ಲಿ ಪ್ರೀತಿಯನ್ನು ಹುಟ್ಟಿಸುತ್ತದೆ. ಮಣಿಪುರ ಚಕ್ರವನ್ನು ಕ್ರಿಯಾಶೀಲ ಮಾಡುವ ಮೂಲಕ ಆತ್ಮಗೌರವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ಒತ್ತಡಕ್ಕೆ ಸಂಬಂಧಪಟ್ಟ ಹಾರ್ಮೋನಗಳನ್ನು ಕಡಿಮೆ ಮಾಡಿ ಜೀವನದಲ್ಲಿ ಪರಿವರ್ತನೆ ಮತ್ತು ಪವಾಡಗಳನ್ನು ಸೃಷ್ಟಿಸಿ ಮನಸ್ಸನ್ನು ಶಾಂತಿ, ನೆಮ್ಮದಿ ಸ್ಥಿತಿಗೆ ಕರೆದುಕೊಂಡು ಹೋಗುತ್ತದೆ. 639 ಹರ್ಟ್ಝ್ ಆವರ್ತನವುಳ್ಳ ಶಬ್ದವು ಪರಸ್ಪರ ಸಂಬಂಧದಲ್ಲಿ ಸಾಮರಸ್ಯವನ್ನು ಉಂಟುಮಾಡುತ್ತದೆ. ಕುಟುಂಬದಲ್ಲಿ, ಗೆಳೆತನದಲ್ಲಿ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಪರಸ್ಪರ ಸಹಾನುಭೂತಿ ತೋರಿಸಬಲ್ಲ ಹಾಗೂ ತಾಳ್ಮೆಯ ಮನೋಭಾವದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 639 ಹರ್ಟ್ಝ್ ಆವರ್ತನವುಳ್ಳ ಶಬ್ದವು ಹಾರ್ಟ್ ???? ಚಕ್ರವನ್ನು ಕ್ರಿಯಾಶೀಲಗೊಳಿಸುತ್ತದೆ. 741 ಹರ್ಟ್ಝ್ ಆವರ್ತನವುಳ್ಳ ಶಬ್ದವು ಅಂತಃಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಹಾನಿಕಾರಕ ವಿದ್ಯುತ್ಕಾಂತಿಯ ತರಂಗಗಳಿಂದ ಉಂಟಾದ ಮನೋದೈಹಿಕ ಸಮಸ್ಯೆಗಳನ್ನು ವಾಸಿ ಮಾಡಿ ಮನಸ್ಸನ್ನು ಮತ್ತು ದೇಹವನ್ನು ಶುದ್ಧೀಕರಣಗೊಳಿಸುತ್ತದೆ ಹಾಗೂ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ರಕ್ತಕಣಗಳನ್ನು ಮತ್ತು ಅಂಗಾಂಗಗಳನ್ನು ನಿರ್ವಿಷಗೊಳಿಸಲು ಸಹಕರಿಸುತ್ತದೆ. 741 ಹರ್ಟ್ಝ್ ಆವರ್ತನವುಳ್ಳ ಶಬ್ದವು ವಿಶುದ್ಧ ಚಕ್ರವನ್ನು ಕ್ರಿಯಾಶೀಲಗೊಳಿಸುತ್ತದೆ. 852 ಹರ್ಟ್ಝ್ ಆವರ್ತನವುಳ್ಳ ಶಬ್ದವು ಜೀವನದಲ್ಲಿ ಜ್ಞಾನೋದಯವನ್ನು ಹುಟ್ಟಿಸಿ ಆಧ್ಯಾತ್ಮಿಕ ಪಥದತ್ತ ಕರೆದುಕೊಂಡು ಹೋಗುತ್ತದೆ ಹಾಗೂ ಅಂತಃಪ್ರಜ್ಞೆ ಮತ್ತು ಅಂತಃಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಆಜ್ಞಾ ಚಕ್ರವು ಈ ಆವರ್ತನವುಳ್ಳ ಶಬ್ದದಿಂದ ಕ್ರಿಯಾಶೀಲಗೊಳ್ಳುತ್ತದೆ. 963 ಹರ್ಟ್ಝ್ ಆವರ್ತನವುಳ್ಳ ಶಬ್ದವು ಸಹಸ್ರಾರು ಚಕ್ರವನ್ನು ಕ್ರಿಯಾಶೀಲಗೊಳಿಸುತ್ತದೆ. ಐಹಿಕ ಪ್ರಪಂಚದೊಂದಿಗೆ ಸಂಪರ್ಕ ಕಡಿತಗೊಳಿಸಿ ಉನ್ನತ ಪ್ರಜ್ಞೆಯ ಕಡೆಗೆ ಕರೆದುಕೊಂಡು ಹೋಗುತ್ತದೆ.
ಕ್ಷಿಪ್ರವಾಗಿ ಬೆಳೆಯುತ್ತಿರುವ ನಾಗರಿಕತೆಯಲ್ಲಿ ಒತ್ತಡ ಅನ್ನುವುದು ಉತ್ತುಂಗ ಹಂತವನ್ನು ತಲುಪಿದೆ. ಬಹಳಷ್ಟು ಜನರು ಇವತ್ತು ಅನೇಕ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಹಾಗೂ ಇಂತಹ ಮಾನಸಿಕ ಅನಾರೋಗ್ಯದಿಂದ ದೈಹಿಕವಾಗಿ ಅನೇಕ ರೋಗಗಳು ಸೃಷ್ಟಿಯಾಗುತ್ತಿವೆ. ಸೌಂಡ್ ಹೀಲಿಂಗ್ ಚಿಕಿತ್ಸಾ ವಿಧಾನಕ್ಕೆ ಎಲ್ಲ ಬಗೆಯ ಮನೋದೈಹಿಕ ಸಮಸ್ಯೆಗಳನ್ನು ಯಾವುದೇ ಅಡ್ಡ ಪರಿಣಾಮ ಇಲ್ಲದೆ ಗುಣಪಡಿಸುವ ಸಾಮರ್ಥ್ಯ ಇರುವುದರಿಂದ ಇವತ್ತಿನ ದಿನಗಳಲ್ಲಿ ಅತ್ಯಂತ ಜನಪ್ರಿಯತೆ ಪಡೆಯುತ್ತಿದೆ. ಸೌಂಡ್ ಹೀಲಿಂಗ್ ಅನ್ನುವುದು ಮಾನಸಿಕ ಅಸ್ವಸ್ಥತೆಗೆ ನೂರಕ್ಕೆ ನೂರರಷ್ಟು ರಾಮ ಬಾಣ. ಸೌಂಡ್ ಹೀಲಿಂಗ್ ಚಿಕಿತ್ಸೆಯಿಂದ ಕ್ಯಾನ್ಸರ್ ಜೀವಕೋಶಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ. ಆತಂಕ, ಖಿನ್ನತೆ, ಒಬ್ಬಂಟಿತನದಿಂದ ಉಂಟಾಗುವ ಮಾನಸಿಕ ನೋವು, ಕಾಲ್ಪನಿಕ ಬಯ, ಒತ್ತಡ, ಉದ್ವಿಗ್ನತೆ, ಬುದ್ಧಿಮಾಂದ್ಯತೆ, ಮನಸಿನ ಅಸ್ಥಿರತೆ, ನಿದ್ರಾಹೀನತೆ, ಸ್ವಪ್ನ ದೋಷ, ರಕ್ತ ಹೀನತೆ, ರಕ್ತದ ಒತ್ತಡ, ಉಸಿರಾಟದ ಸಮಸ್ಯೆ, ಅನಿಯಂತ್ರಿತ ಹೃದಯ ಬಡಿತ ಮುಂತಾದ ಮನೋದೈಹಿಕ ಕಾಯಿಲೆಗಳ ಮೇಲೆ ಸೌಂಡ್ ಹೀಲಿಂಗ್ ಚಿಕಿತ್ಸಾ ಪದ್ಧತಿಯು ಅಧುನಿಕ ಚಿಕಿತ್ಸಾ ಪದ್ಧತಿಗಿಂತಲೂ ಅತ್ಯಂತ ಗರಿಷ್ಟವಾದ ಮತ್ತು ಕ್ಷಿಪ್ರವಾದ ಫಲಿತಾಂಶವನ್ನು ಕೊಡುತ್ತದೆ. ಕೆಲವು ಕಾಯಿಲೆಗಳಿಗೆ ಅಧುನಿಕ ಚಿಕಿತ್ಸಾ ವಿಧಾನದಿಂದ ಪರಿಣಾಮಕಾರಿಯಾಗಿ ಫಲಿತಾಂಶ ಸಿಗದೆ ಇದ್ದಾಗ ಅಂತಹ ಕಾಯಿಲೆಗಳನ್ನು ಸೌಂಡ್ ಹೀಲಿಂಗದಿಂದ ಗುಣಪಡಿಸಲು ಸಾಧ್ಯವಾಗುತ್ತದೆ.
pulmonary fibrosis 👇
ಅಸ್ತಮಾ ಹಾಗೂ ಶ್ವಾಸಕೋಶದ ಫೈಬ್ರೋಸಿಸ್
Sound healing 👇
1 Comment
Pingback: ಸಮಯ ಮತ್ತು ಸಾವಿನ ಅಧಿಪತಿ