ಸಮುದ್ರದಾಳದಲ್ಲಿ ಮುಳಗಿದ ದ್ವಾರಕಾ ನಗರ ರಾಷ್ಟ್ರೀಯ ಸಮುದ್ರೀಯ ವಿಜ್ಞಾನ ಸಂಸ್ಥೆಯಿಂದ (National institute of oceanography) ಶ್ರೀ ಕೃಷ್ಣ ಪರಮಾತ್ಮನ ಜಲಾಂತರ್ಗತವಾದ ಪೌರಾಣಿಕ ದ್ವಾರಕಾ ನಗರದ ಪುರಾತತ್ವ ಸಂಶೋಧನೆ.
ಶ್ರೀಕೃಷ್ಣ ನೆಲೆಯಾಗಿದ್ದ ಐತಿಹಾಸಿಕ ಹಾಗೂ ಪೌರಾಣಿಕ ನಗರ ದ್ವಾರಕಾದ ಇರುವಿಕೆನ್ನು ಕಂಡು ಹಿಡಿದ ಕೀರ್ತಿ ಪುರಾತತ್ವ ತಜ್ಞರಾದ ಶಿವಮೊಗ್ಗದ ಶಿಕಾರಿಪುರ ರಂಗನಾಥರಾವ್ ಅವರುಗೆ ಸಲ್ಲುತ್ತದೆ. ರಂಗನಾಥರಾವ್ ಅವರು ಭಾರತಕ್ಕೆ ವಿಶ್ವ ಮಟ್ಟದಲ್ಲಿ ಕೀರ್ತಿ ತಂದ ಪುರಾತತ್ವ ಶಾಸ್ತ್ರಜ್ಞರು. ಸುಮಾರು 32 ವರ್ಷಗಳ ಕಾಲ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ(1980) ರಾಷ್ಟ್ರೀಯ ಸಮುದ್ರೀಯ ವಿಜ್ಞಾನ ಸಂಸ್ಥೆಯಲ್ಲಿ ನೇಮಕಗೊಂಡು ಅನೇಕ ಮಹತ್ವದ ಸಂಶೋಧನೆಗಳನ್ನು ನಡೆಸಿದರು. ಈ ಸಂಶೋಧನೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಅಂದ್ರೆ ಮುಳುಗಿ ಹೋಗಿರುವ ಶ್ರೀ ಕೃಷ್ಣನ ದ್ವಾರಕಾ ನಗರದ ಪುರಾತತ್ವ ಸಂಶೋಧನೆ.
ದ್ವಾರಕೆಯು ಮಾಹಾಭಾರತ ಕಾಲದ ವೈಭೋಪೇತ ನಗರ. Dvaraka was very well planed and modern city. ಹಾಗೂ ದ್ವಾರಕಾ ನಗರವನ್ನು ವಿಶ್ವಕರ್ಮನ ಸಲಹೆಗಳಿಗೆ ಅನುಗುಣವಾಗಿ ವಾಸ್ತು ಶಾಸ್ತ್ರದ ಆಧಾರದ ಮೇಲೆ ಕಟ್ಟಲಾಗಿತ್ತು. ಶ್ರೀ ಕೃಷ್ಣನು ವಾಸ್ತು ಸಲಹೆಗಳನ್ನು ವಿಶ್ವಕರ್ಮನಿಂದ ಪಡೆದ್ದಿದ್ದ ಎಂದು ಹೇಳಲಾಗುತ್ತದೆ. ಈಗ ಸಮುದ್ರಲ್ಲಿ ಮುಳುಗಿರುವ ದ್ವಾರಕಾ ನಗರವನ್ನು ಪರೀಕ್ಷಿಸಿದರೆ ವಾಸ್ತು ಶಾಸ್ತ್ರದ ಎಲ್ಲ ಕುರುಹುಗಳು ಕಂಡುಬರುತ್ತವೆ.
ಸಮುದ್ರದಾಳದಲ್ಲಿ ಮುಳಗಿದ ದ್ವಾರಕಾ ನಗರ

ತ್ರಿಕಾಲ ಜ್ಞಾನಿ ಆದ ಶ್ರೀ ಕೃಷ್ಣನಿಗೂ ಮತ್ತು ದ್ವಾರಕಾ ನಗರವನ್ನು ನಿರ್ಮಿಸಿದ ವಿಶ್ವಕರ್ಮನಿಗೂ (civil engineer) ದ್ವಾರಕಾ ನಗರವು ನಿರ್ಧಿಷ್ಟ ಸಮಯದ ನಂತರ ಸಮುದ್ರದಲ್ಲಿ ಮುಳಗುತ್ತದೆ ಎಂಬ ಸಂಗತಿ ಮೊದಲೇ ಗೊತ್ತಿತ್ತು. ಮತ್ತು ಇದರ ಕುರಿತು ಶ್ರೀ ಕೃಷ್ಣ ಹಾಗೂ ವಿಶ್ವಕರ್ಮ ಪರಸ್ಪರ ಚರ್ಚೆಗಳನ್ನು ಮಾಡಿ ನಿರ್ದಿಷ್ಟವಾದ ಸಮಯದ ನಂತರ ದ್ವಾರಕಾ ನಗರವು ಸಮುದ್ರದಲ್ಲಿ ಮುಳುಗುವ ಹಾಗೆ ಯೋಜನೆ ರೂಪಿಸಿ ದ್ವಾರಕಾವನ್ನು ಕಟ್ಟಿದ್ದರು. ಯೋಜನೆ ಅನುಗುಣವಾಗಿ ಶ್ರೀ ಕೃಷ್ಣನ ನಂತರ ದ್ವಾರಕಾ ನಗರವು ಸಮುದ್ರದಲ್ಲಿ ಮುಳಗಲ್ಪಟ್ಟಿತು.
ಈ ಘಟನೆ ಎಷ್ಟು ಸತ್ಯ? ಶ್ರೀ ಕೃಷ್ಣನು ನಿಜವಾಗಿಯೂ ಐತಿಹಾಸಿಕ ವೇಕ್ತಿಯೇ? ಅಥವಾ ಕವಿ ನಿರ್ಮಿತ ಕಾವ್ಯದ ಕಥಾನಾಯಕನೇ? ದ್ವಾರಕಾ ನಗರವು ಸಮುದ್ರದಲ್ಲಿ ಮುಳುಗಿದ್ದರೆ ಅವಶೇಷಗಳು ಇನ್ನೂ ಇರುಬಾಹುದೇ? ಏನೇನೂ ಅವಶೇಷಗಳು ಇರಬಹುದು? ಮುಂತಾದ ಪ್ರಶ್ನೆಗಳನ್ನು ಮುಂದೆ ಇಟ್ಟುಕೊಂಡು ಭಾರತದ ರಾಷ್ಟ್ರೀಯ ಸಮುದ್ರೀಯ ಸಂಸ್ಥೆಯು ಶಿಕಾರಿಪುರ ರಂಗನಾಥರಾವ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ ದ್ವಾರಕಾ ನಗರದ ಪುರಾತತ್ವ ಸಂಶೋಧನೆಗೆ ಮುಂದಾಯಿತು. ಸಮುದ್ರ ಆಳದಲ್ಲಿ ಉತ್ಖನನ ಮಾಡಿ ಸಾವಿರಾರು ವರ್ಷಗಳ ಹಿಂದೆ ಮಳಗಿರುವ ದ್ವಾರಕೆಯನ್ನು ಬೆಳಕಿಗೆ ತರುವ ಬ್ರಹತ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅನೇಕ ವಿಜ್ಞಾನಿಗಳ, ಪ್ರಯೋಶಾಲೆಗಳ ಮತ್ತು ಸಮುದ್ರ ಆಳದಲ್ಲಿ ಮುಳಗಿ ಸಂಶೋಧನೆ ನಡೆಸುವ ಪುರತತ್ವಜ್ಞಾನಿ ಯುವಕರ ಮತ್ತು ಯುವತಿಯರ ಸಹಾಯ ಅತ್ಯವಶ್ಯಕವಾಗಿತ್ತು.
ಭಾರತದಲ್ಲಿ ಪುರಾತತ್ವೀಯ ಜ್ಞಾನವನ್ನು ಹೊಂದಿದ ಯುವಕರಿಗೆ ಸಮುದ್ರದಲ್ಲಿ ಮುಳಗಿ ಛಾಯಾಚಿತ್ರಗಳನ್ನು ತೆಗೆಯುವ, ವಿಡಿಯೋ ಚಿತ್ರೀಕರಣ ಮಾಡುವ ಮತ್ತು ತಾಂತ್ರಿಕ ಉಪಕರಣಗಳನ್ನು ಸಮುದ್ರ ಆಳದಲ್ಲಿ ಉಪಯೋಗಿಸಿ ಸಂಶೋಧನೆ ನಡೆಸಲು ಬೇಕಾದ ಎಲ್ಲ ತರಬೇತಿಯನ್ನು 1980ರಲ್ಲಿ ಕೊಡಲಾಯಿತು. ನಂತರ 1982ರಲ್ಲಿ ರಾಷ್ಟ್ರೀಯ ಸಮುದ್ರ ವಿಜ್ಞಾನ ಸಂಸ್ಥೆಯು ವೃತ್ತಿಪರ ಮುಳುಗುಗಾರರ ಸಹಾಯದಿಂದ ಸಮುದ್ರದಲ್ಲಿ ಮುಳಗಿದ ಪೌರಾಣಿಕ ದ್ವಾರಕಾ ನಗರದ ಅನ್ವೇಷಣೆ ಆರಂಭವಾಯಿತು. ಅಂತರ್ಜಾಲೀಯ ಕ್ಯಾಮರಾ ಮೂಲಕ ಅನೇಕ ಚಿತ್ರಗಳನ್ನು ತೆಗೆಯಲಾಯಿತು. ಹಾಗೂ ಅನೇಕ ಪ್ರಾಚೀನ ಅವಶೇಷಗಳನ್ನು ಹೊರತೆಗೆದು ಅವುಗಳ ಕುರಿತು ಅಧ್ಯಯನ ಮಾಡಲಾಯಿತು. 1982ರಿಂದ 1995ರ ವರೆಗೆ ರಾಷ್ಟ್ರೀಯ ಸಮುದ್ರೀಯ ವಿಜ್ಞಾನ ಸಂಸ್ಥೆ ಅನೇಕ ಸಲ ಅರಬ್ಬೀ ಸಮುದ್ರ ಆಳದಲ್ಲಿ ಉತ್ಖನನ ನಡೆಸಿ ಸಾಕಷ್ಟು ನಂಬಲರ್ಹವಾದ ಪುರಾವೆಗಳನ್ನು ಬೆಳಕಿಗೆ ತಂದಿರುವುದು ಒಂದು ಮಹತ್ವದ ಸಾಧನೆ ಎಂದೇ ಹೇಳಬೇಕು. ಮಾಹಾಭಾರತಕಾಲೀನ ಘಟನೆಗಳಿಗೆ ಶ್ರೀ ಕೃಷ್ಣನು ಕೇಂದ್ರ ಬಿಂದು ಅಂತ ಈ ಸಂಶೋಧನೆಯಿಂದ ತಿಳಿದು ಬಂದಿದೆ.
ದುರದೃಷ್ಟಕರ ಸಂಗತಿ ಏನೆಂದರೆ ನಮ್ಮ ಪ್ರಾಚೀನ ಭಾರತದ ಇತಿಹಾಸ ಪರಂಪರೆ ಪಾಶ್ಚಿಮಾತ್ಯರ ಕೈಯಲ್ಲಿ ಸಿಲುಕಿ ನಲುಗಿರುವುದು ಒಂದು ದೊಡ್ಡ ದುರಂತ. ಪಾಶ್ಚಿಮಾತ್ಯರು ನಮ್ಮ ಇತಿಹಾಸ ಪರಂಪರೆಯನ್ನು ತಿರುಚುವದರಲ್ಲಿ ಸತತ ಪ್ರಯತ್ನಗಳನ್ನು ಇವತ್ತಿಗೂ ಮಾಡುತ್ತಿದ್ದಾರೆ. ಹಾಗೂ ಭಾರತದ ಪ್ರಾಚೀನ ಪರಂಪರೆಯ ಇತಿಹಾಸವನ್ನು ತಿರುಚಲು ಇಲ್ಲಿನ ಎಡಪಂಥೀಯರು ಪರಕೀಯರ ಜೊತೆಗೆ ಕೈ ಜೋಡಿಸುತ್ತಿರುವುದು ಮತ್ತೊಂದು ದುರಂತ. ಹೀಗಾಗಿ ಅತ್ಯಂತ ಸಮೃದ್ಧವಾದ, ಶ್ರೀಮಂತವಾದ, ಪುರಾತನವಾದ ಒಂದು ಸಂಸ್ಕೃತಿಗೆ ಸಲ್ಲಬೇಕಾದ ಮರ್ಯಾದೆ, ಸ್ಥಾನಗಳಿಂದ ಭಾರತೀಯ ಸಂಸ್ಕೃತಿ ವಂಚಿತವಾಗಿದೆ. ಆದರೆ ಅದೃಷ್ಟವಶಾತ್ ಭಾರತದ ಪ್ರಾಚೀನ ಪರಂಪರೆಯ ಇತಿಹಾಸವನ್ನು ಮರುಸಂಶೋಧನೆ ಮಾಡಿ ಎಲ್ಲ ಆಧಾರಗಳ ಸಮೇತ ದೃಡಪಡಿಸು ಒಂದ ಪ್ರಯತ್ನ ಇತ್ತೀಚಿನ ಭಾರತದ ಇತಿಹಾಸಕಾರರಿಂದ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ