ಮೂಲತಃ ವಶೀಕರಣ ಅನ್ನುವುದು ಸಂಸ್ಕೃತ ಭಾಷೆಯಿಂದ ಬಂದ ಶಬ್ದ. ವಶಿ ಅಂದ್ರೆ ಮತ್ತೊಬ್ಬರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಎಂದಾಗುತ್ತದೆ ಹಾಗೂ ಕರಣ ಅಂದ್ರೆ ಮತ್ತೊಬ್ಬರು ನಮ್ಮ ನಿಯಂತ್ರಣದಲ್ಲಿ ಇರುವ ಹಾಗೆ ಮಾಡುವ ಪದ್ಧತಿ ಎಂದಾಗುತ್ತದೆ. ಆದ್ದರಿಂದ ವಶೀಕರಣ ಎಂಬ ಶಬ್ದವು ವಶಿ + ಕರಣ ಎಂಬ ಎರಡು ಶಬ್ದಗಳ ಸಂಯೋಗದಿಂದ ಆಗಿದೆ. ಮತ್ತೊಬ್ಬರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ವಿದ್ಯೆ ಅಂದ್ರೆ ಯಾರಿಗೆ ತಾನೆ ಆಸಕ್ತಿ ಇರುವುದಿಲ್ಲ? ಇದಕ್ಕಾಗಿ ಏನನ್ನಾದರೂ ಮಾಡುತ್ತಾರೆ ಹಾಗೂ ಪ್ರೀತಿ ಮಾಡಿದ ಹುಡುಗಿಯ ಮೇಲೆ ವಶೀಕರಣ ಮಾಡಿಸಿ ನಿಯಂತ್ರಣ ಸಾಧಿಸುವ ಸಲುವಾಗಿ ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡಲು ಸಿದ್ಧರಿರುತ್ತಾರೆ. ಜಗತ್ತಿನ ಪ್ರಬಲ ರಾಷ್ಟ್ರಗಳು ಅತ್ಯಂತ ರಹಸ್ಯ ಯೋಜನೆ ಒಂದನ್ನು ರುಪಿಸಿಕೊಂಡು ಕೋಟಿ ಗಟ್ಟಲೆ ದುಡ್ಡು ಸುರಿದು ಮತ್ತೊಬ್ಬರ ಮೇಲೆ ನಿಯಂತ್ರಣ ಸಾಧಿಸುವ ರಹಸ್ಯ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಇಂತಹ ಸಂಶೋಧನೆಗಳ ಪ್ರಮುಖ ಭಾಗವೇ ಸೈಕಾಲಜಿಕಲ್ ವೆಪನ್ ಸಿಸ್ಟಮ್ ಡೆವಲಪ್ಮೆಂಟ್! ಸೈಕಾಲಜಿಕಲ್ ವೆಪನಗಳಿಂದ ಎದುರಾಳಿಯ ಅಭಿಪ್ರಾಯವನ್ನು, ಮನೋಭಾವವನ್ನು, ಆಲೋಚನೆಯನ್ನು, ನಡವಳಿಕೆಯನ್ನು, ಭಾವನೆಯನ್ನು ಪ್ರಭಾವಗೊಳಿಸಲು ಸಾಧ್ಯವಾಗುವ ಕಾರಣಕ್ಕಾಗಿ ಸೈಕಾಲಜಿಕಲ್ ವೆಪನಗಳ ಕುರಿತು ರಹಸ್ಯವಾಗಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಪರಮಾಣು ಯುದ್ಧ, ಜೈವಿಕ ಯುದ್ದ, ರಾಸಾಯನಿಕ ಯುದ್ದಗಳಿಗಿಂತಲೂ ಸೈಕಾಲಜಿಕಲ್ ಯುದ್ಧ ಅನ್ನುವುದು ಭವಿಷ್ಯದಲ್ಲಿ ಅಡ್ವಾನ್ಸ್ಡ್ ಯುದ್ದ ತಂತ್ರವಾಗಿ ಹೊರಹೊಮ್ಮುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. 2000 ರ ಆರಂಭದಲ್ಲಿ ಸೈಕಾಲಜಿಕಲ್ ವೆಪನ್ಸ್ಗೆ ಸಂಬಂಧಪಟ್ಟ ಡೈರೆಕ್ಟ್ ಆಡಿಯೋ ಸ್ಪಾಟ್ ಲೈಟಿಂಗ್ ಎನ್ನುವ ತಂತ್ರಜ್ಞಾನ ಒಂದು ಸಂಶೋಧನೆ ಆಗಲ್ಪಡುತ್ತಿದ್ದಂತೆ ಇದರ ಕುರಿತು ಪತ್ರಕರ್ತರು ಸುದ್ದಿಯನ್ನು ವರದಿ ಮಾಡಿದರು ಹಾಗೂ ಇಂಟರ್ನೆಟ್ಟಿನಲ್ಲಿ ಈ ತಂತ್ರಜ್ಞಾನದ ಕುರಿತು ದೊಡ್ಡ ಸುದ್ದಿಯಾಯಿತು. 2002 ರೆಲ್ಲಿ ಜಾನ್ ಗಾರ್ಡರ್ ಎಂಬ ಪತ್ರಕರ್ತ ವೈರ್ಡ್ ಅನ್ನುವ ವೆಬ್ಸೈಟಿನಲ್ಲಿ ಡೈರೆಕ್ಟ್ ಆಡಿಯೋ ಸ್ಪಾಟ್ ಲೈಟಿಂಗ್ ತಂತ್ರಜ್ಞಾನದ ಕುರಿತು ಸಂಪೂರ್ಣ ವರದಿ ಒಂದನ್ನು ಮಾಡಿದ್ದ ಹಾಗೂ ಅಮೆರಿಕಾ ಈಗಾಗಲೇ ಬಂದೂಕಿನ ಆಕಾರದಲ್ಲಿ ಇರುವ ಡೈರೆಕ್ಟಡ್ ಸ್ಟಿಕ್ ರೇಡಿಯೇಟರ್ ಎಂಬ ಸೈಕಾಲಜಿಕಲ್ ವೆಪನ್ಸಿನ ತಯಾರಿಕೆಯಲ್ಲಿ ತೊಡಗಿಕೊಂಡಿದೆ ಎಂಬುದನ್ನು ವೈರ್ಡ್ ವೆಬ್ಸೈಟಿನಲ್ಲಿ ಲೇಖಕ ಜಾನ್ ಗಾರ್ಡರ್ ಪ್ರಕಟ ಮಾಡಿದ್ದ. ಕೆಲವು ದಶಕಗಳ ಹಿಂದೆ ಕೊಳ್ಳೇಗಾಲದಲ್ಲಿ ಇದ್ದ ಮಾಂತ್ರಿಕರು ಚಿಟಿಕೆ ಹೊಡೆಯುವಷ್ಟರಲ್ಲಿ ಒಬ್ಬನ ಮೇಲೆ ಹೇಗೆ ಸಂಮೋಹನ ಮಾಡಿಬಿಡುತ್ತಿದ್ದರೂ ಅದೇ ರೀತಿ ಸ್ಟನ ಗನ್ ಆಕಾರದಲ್ಲಿ ಇರುವ ಈ ಡೈರೆಕ್ಟಡ್ ಸ್ಟಿಕ್ ರೇಡಿಯೇಟರ್ ಎಂಬ ಸೈಕಾಲಜಿಕಲ್ ವೆಪನ್ಸ್ದಿಂದ ಎದುರಾಳಿಯ ಮೇಲೆ ಕ್ಷಣಾರ್ಧದಲ್ಲಿ ಮಾನಸಿಕ ಪ್ರಭಾವ ಮಾಡಲು ಸಾಧ್ಯವಾಗುತ್ತದೆ! ಸ್ಟನ ಗನ್ ಆಕಾರದಲ್ಲಿ ಇರುವ ಈ ಡೈರೆಕ್ಟಡ್ ಸ್ಟಿಕ್ ರೇಡಿಯೇಟರ್ ಎಂಬ ಸೈಕಾಲಜಿಕಲ್ ವೆಪನ್ಸಿನ ಟ್ರಿಗರ್ ಒತ್ತಿದರೆ ಗುಂಡಿನ ಬದಲಾಗಿ ಹೈ ಡೆಸಿಬಲ್ ಸೌಂಡ್ ಈಜೆಕ್ಟ್ ಆಗಿ ಹೊರಗಡೆ ಬಂದು ಎದುರಾಳಿಯ ಮೇಲೆ ಕ್ಷಣಾರ್ಧದಲ್ಲಿ ಮಾನಸಿಕ ಪ್ರಭಾವ ಉಂಟುಗಿ ಸಮ್ಮೋಹನಕ್ಕೆ ಒಳಗಾಗಿ ಬಿಡುತ್ತಾನೆ! ಇದನ್ನೇ ನಮ್ಮ ಪ್ರಾಚೀನ ಮಾಂತ್ರಿಕರು ಮಂತ್ರ ಶಕ್ತಿಯ ಮೂಲಕ ಸಾಧಿಸಿದ್ದರು! ಮಂತ್ರ ಶಕ್ತಿಯ ಮೂಲಕ ಸಾಧಿಸಿದ ಈ ವಿದ್ಯೆಯೇ ವಶೀಕರಣ! ದಾಂಪತ್ಯದಲ್ಲಿ ಉಂಟಾದ ಮನಸ್ತಾಪಕ್ಕೆ ವಶೀಕರಣ ಒಳ್ಳೆಯ ರಿಸಲ್ಟ್ ನೀಡುತ್ತದೆ.

ದಗದಗಿಸುವ ಯಜ್ಞಕುಂಡದ ಮುಂದೆ ಪದ್ಮಾಸನದಲ್ಲಿ ಕುಳಿತುಕೊಂಡು ಯಜ್ಞಕುಂಡದಲ್ಲಿ ತುಪ್ಪವನ್ನು ಸುರಿಯುತ್ತಾ ಎರಡು ಸಾಲಿನ ವಶೀಕರಣ ಮಂತ್ರ ಒಂದನ್ನು ಪಠಿಸಿದರೆ ಮಂತ್ರವು ಪ್ರಚಂಡ ಶಕ್ತಿಯಾಗಿ ಪರಿವರ್ತನೆ ಹೊಂದಿ ಯಜ್ಞಕುಂಡದಿಂದ ಹೊರಹೊಮ್ಮುವ ಹೊಗೆಯ ಜೊತೆಗೆ ಮೊಡುಲೇಷನ್ ಆಗಿಬಿಡುತ್ತದೆ! ಹೀಗೆ ಯಜ್ಞಕುಂಡದಿಂದ ಹೊರಹೊಮ್ಮುವ ಹೊಗೆಯ ಜೊತೆಗೆ ಮೋಡುಲೇಷನ್ ಆಗಲ್ಪಟ್ಟ ಮಂತ್ರ ಶಕ್ತಿಯು ವಾತಾವರಣದಲ್ಲಿ ಪಸರಿಸುತ್ತಾ ಜಗತ್ತಿನ ಯಾವ ಮೂಲೆಗೂ ಬೇಕಾದರೂ ತಲುಪಿ ಬಿಡಬಲ್ಲದು! ಹಾಗೂ ನಿರ್ದಿಷ್ಟ ವ್ಯಕ್ತಿಯ ಮೇಲೆ ವಶೀಕರಣ ಪ್ರಭಾವ ಮಾಡಿ ಬಿಡಬಲ್ಲದು! ಮಾಂತ್ರಿಕರು ವಶೀಕರಣ ಯಜ್ಞಗಳನ್ನು ಸಾಮಾನ್ಯವಾಗಿ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮಾಡುತ್ತಾರೆ ಹಾಗೂ ಹೆಚ್ಚು ಕಡಿಮೆ 12 ದಿನಗಳಿಂದ 90 ದಿನಗಳ ಒಳಗೆ ವಶೀಕರಣ ಯಜ್ಞದ ಫಲಿತಾಂಶವು ನೂರಕ್ಕೆ ನೂರರಷ್ಟು ಸಿಗುತ್ತದೆ ಎಂದು ಮಾಂತ್ರಿಕರು ಹೇಳುತ್ತಾರೆ. ಆದರೆ ಮಾನಸಿಕವಾಗಿ ಅತ್ಯಂತ ಬಲಿಷ್ಠರಾಗಿರಾಗಿದ್ದವರ ಮೇಲೆ, ವೈದಿಕ ಮಂತ್ರಗಳನ್ನು ಪ್ರತಿನಿತ್ಯ ಪಠಣ ಮಾಡುತ್ತಾ ದೇವರ ಪೂಜೆ-ಪುನಸ್ಕಾರಗಳನ್ನು ಮಾಡುವುವರ ಮೇಲೆ ಹಾಗೂ ಜನ್ಮ ಕುಂಡಲಿಯಲ್ಲಿ ಗ್ರಹಗಳು ಅನುಕೂಲಕರ ಸ್ಥಾನದಲ್ಲಿ (favorable position) ಇದ್ದಾಗ ಸಾಮಾನ್ಯವಾಗಿ ವಶೀಕರಣ ಪ್ರಯೋಗವು ನಾಟುವುದಿಲ್ಲ ಎಂದು ಹೇಳಲಾಗುತ್ತದೆ. ವಶೀಕರಣ ಮಾಡಲು ಸಾವಿರಾರು ಬಗೆಯ ವಿಧಿ ವಿಧಾನಗಳಿದ್ದು ವಶೀಕರಣ ಮಾಡುವ ಮೊದಲು ಯಾರ ಮೇಲೆ ಯಾವ ಪ್ರಕಾರದ ವಶೀಕರಣ ಪ್ರಯೋಗವನ್ನು ಮಾಡಬೇಕು ಹಾಗೂ ಯಾವ ಸಮಯದಲ್ಲಿ ಮಾಡಬೇಕು ಎನ್ನುವ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮಹತ್ವವಾದದ್ದು. ಏಕೆಂದರೆ ಜೋತಿಷ್ಯ ಶಾಸ್ತ್ರದ ಪ್ರಕಾರ ಮಾನವರಲ್ಲಿ ಒಟ್ಟು 12 ಬೇರೆ ಬೇರೆ ರೀತಿಯ ಗುಣಸ್ವಭಾವಕ್ಕೆ ಒಳಪಟ್ಟ ಜನರು ಇರುತ್ತಾರೆ. ಮೇಷ ರಾಶಿಯ ಗುಣಸ್ವಭಾವಕ್ಕೆ ಒಳಪಟ್ಟವರು, ವೃಷಭ ರಾಶಿಯ ಗುಣಸ್ವಾಭಾವಕ್ಕೆ ಒಳಪಟ್ಟವರು, ಮಿಥುನ ರಾಶಿಯ ಗುಣಸ್ವಾಭಾವಕ್ಕೆ ಒಳಪಟ್ಟವರು, ಕರ್ಕಾಟಕ ರಾಶಿಯ ಗುಣಸ್ವಾಭಾವಕ್ಕೆ ಒಳಪಟ್ಟವರು ಹೀಗೆ 12 ರಾಶಿಗಳು ಪ್ರಭಾಕ್ಕೆ ಒಳಪಟ್ಟು 12 ರೀತಿಯ ಬೇರೆ ಬೇರೆ ಗುಣಸ್ವಭಾವ ಹೊಂದಿದ ಜನರು ಈ ಪ್ರಪಂಚದಲ್ಲಿ ಇರುವುದರಿಂದಾಗಿ ಅವರವರ ರಾಶಿಗೆ ಅನುಗುಣವಾಗಿ ಬೇರೆ ಬೇರೆ ರೀತಿಯ ವಶೀಕರಣ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಆದ್ದರಿಂದ ಯಾರ ಮೇಲೆ ಯಾವ ಪ್ರಕಾರದ ವಶೀಕರಣ ಪ್ರಯೋಗ ಮಾಡಬೇಕು ಹಾಗೂ ಜಮ್ಮ ಕುಂಡಲಿಯಲ್ಲಿನ ಗ್ರಹ ಗತಿಗಳ ಚಲನೆಗೆ ಅನುಗುಣವಾಗಿ ಯಾವ ಸಮಯದಲ್ಲಿ ವಶೀಕರಣ ಪ್ರಯೋಗ ಮಾಡಬೇಕು ಎನ್ನುವ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮಹತ್ವವಾದದ್ದು. ಆದರೆ ವಾಸ್ತವವಾಗಿ ಇವತ್ತಿನ ಹೆಚ್ಚಿನ ಮಾಂತ್ರಿಕರಿಗೆ ಯಾರ ಮೇಲೆ ಯಾವ ಪ್ರಕಾರದ ವಶೀಕರಣ ಪ್ರಯೋಗವನ್ನು ಮಾಡಬೇಕು ಹಾಗೂ ಯಾವ ಸಮಯದಲ್ಲಿ ಮಾಡಬೇಕು ಎನ್ನುವ ಚಾತುರ್ಯ ಇಲ್ಲದೆ ಇದರಿಂದಾಗಿ ವಶೀಕರಣ ಪ್ರಯೋಗಗಳು ಹೆಚ್ಚಾಗಿ ವಿಫಲತೆ ಹೊಂದುತ್ತವೆ.
ಈ ಆಧುನಿಕ ಹಾಗೂ ತೀವ್ರವಾಗಿ ಬೆಳೆಯುತ್ತಿರುವ ನಾಗರಿಕತೆಯಲ್ಲಿ ಲಕ್ಷಾಂತರ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು, ಜಂಜಾಟಗಳು ಇರುವುದರಿಂದ ಸಂಸಾರಿಕ ಜೀವನದಲ್ಲಿ ಬಿರುಕುಗಳು ಉಂಟಾಗುವುದು ಸರ್ವೇಸಾಮಾನ್ಯ. ಸಂಸಾರಿಕ ಜೀವನದಲ್ಲಿ ಗಂಡ ಹೆಂಡತಿ ಮಧ್ಯ ಉಂಟಾದ ಬಿರುಕುಗಳಿಂದಾಗಿ ಕೆಲವು ಸಲ ವಿಚ್ಛೇದನ ಪಡೆಯುವ ಹಂತಕ್ಕೆ ಗಂಡ ಹೆಂಡತಿಯ ಮನಸ್ಥಿತಿ ತಲುಪಿ ಬಿಡುತ್ತದೆ. ಈ ಆಧುನಿಕ ಪ್ರಪಂಚದಲ್ಲಿ ವಿಚ್ಛೇದನಗಳು ಹೆಚ್ಚಾಗುತ್ತಿವೆ ಹಾಗೂ ಕೊನೆ ಉಸಿರು ಇರೋವರೆಗೂ ಗಟ್ಟಿಯಾಗಿ ಉಳಿಯುವ ಸಂಬಂಧಗಳು ಒಂದು ಕಡೆ ಗಣನೀಯವಾಗಿ ಕ್ಷೀಣಿಸುತ್ತಿದ್ದರೆ ಇನ್ನು ಕೆಲವು ಕುಟುಂಬಗಳಲ್ಲಿನ ಗಂಡ ಹೆಂಡತಿ ಜೀವನದಲ್ಲಿ ಹೊಂದಾಣಿಕೆ ಕೊರತೆ ಇದ್ದು ಅನೇಕ ಭಿನ್ನಾಭಿಪ್ರಾಯಗಳು ಜೀವನಪರ್ಯಂತ ಇರುವವು. ಮತ್ತೊಂದು ಕಡೆಗೆ ನೈತಿಕ ಮೌಲ್ಯಗಳನ್ನು ಕಳೆದುಕೊಂಡ ಸಂಬಂಧಗಳು ಹೆಚ್ಚುತ್ತಿವೆ. ಇನ್ನು ಹುಡುಗ ಹುಡುಗಿಯ ಸ್ನೇಹದ ಮಧ್ಯ ಉಂಟಾದ ಪ್ರೀತಿ ಪ್ರೇಮದ ಬೆಲೆ ಕ್ಷೀಣಿಸುತ್ತಿದ್ದು ಪರಸ್ಪರ ವಿವೇಚನೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹುಡುಗ ಹುಡುಗಿಯರ ಸ್ನೇಹದ ಮಧ್ಯ ಪ್ರತಿನಿತ್ಯ ಸಾವಿರಾರು ಪ್ರೀತಿ ಪೇಮಗಳು ಹುಟ್ಟುತ್ತವೆ ಹಾಗೂ ಅಷ್ಟೇ ಪ್ರಮಾಣದ ಪ್ರೀತಿ ಪ್ರೇಮಗಳು ಕೊನೆಯುಸರೆಳೆದರೂ ಕೂಡಾ ನಿಜವಾದ ಪ್ರೀತಿಯನ್ನು ಗಿಟ್ಟಿಸಿಕೊಂಡು ಒಳ್ಳೆಯ ಬದುಕು ಕಟ್ಟಿಕೊಂಡವರು ಅಲ್ಲೊಬ್ಬರು ಇಲ್ಲೊಬ್ಬರು ಅಪರೂಪಕ್ಕೆ ಕಾಣಸಿಗುತ್ತಾರೆ. ಆದರೆ ಪ್ರೀತ ಪ್ರೇಮದಲ್ಲಿ ಅಥವಾ ಒಂದು ಕುಟುಂಬದಲ್ಲಿನ ಗಂಡ ಹೆಂಡತಿಯ ನಡುವಿನ ಸಂಬಂಧದಲ್ಲಿ ಹತಾಶೆ ಉಂಟಾಗಿ ಬಿರುಕು ಅಥವಾ ಭಿನ್ನಾಭಿಪ್ರಾಯ ಕಾಣಿಸಿಕೊಂಡು ವಿಚ್ಛೇದನ ಹಂತವನ್ನು ತಲುಪಿದ ಸ್ಥಿತಿಯಲ್ಲಿ ಹಾಗೂ ಒಂದು ಪ್ರೀತಿ ಪ್ರೇಮವು break-up ಆಗುವ ಸಂದರ್ಭ ಇದ್ದಾಗ, 2 ಗಂಟೆಯಲ್ಲಿ, 24 ಗಂಟೆಯಲ್ಲಿ ಹಾಗೂ 48 ಗಂಟೆಯಲ್ಲಿ ಕುಟುಂಬದ ಎಲ್ಲ ಸಮಸ್ಯೆಗಳಿಗೆ ಹಾಗೂ ಪ್ರೀತಿ ಪ್ರೇಮದಲ್ಲಿ ಉಂಟಾದ ಬಿರುಕಿಗೆ ಪರಿಹಾರ ಇದೆ ಎನ್ನುವ ಆನ್ಲೈನ್ ಮತ್ತು ಸುದ್ದಿ ಪತ್ರಿಕೆಗಳಲ್ಲಿ ಬಂದಂತಹ ಜಾಹೀರಾತುಗಳನ್ನು ನೋಡಿ ಅನೇಕರು ಮಾಂತ್ರಿಕರ ನೆರವು ಪಡೆದು ಒಂದು ಸಂಬಂಧದಲ್ಲಿ ಅಥವಾ ಪ್ರೇಮದಲ್ಲಿ ಉಂಟಾದ ಬಿರುಕನ್ನು, ಭಿನ್ನಾಭಿಪ್ರಾಯವನ್ನು ವಶೀಕರಣದ ಮೂಲಕ ಸರಿಪಡಿಸಿಕೊಳ್ಳಬೇಕೆಂದು ಮಾಂತ್ರಿಕರ ಕಡೆಗೆ ಧಾವಿಸಿ ಹೋಗಿ ಅವರು ಕೇಳಿದಷ್ಟು ದುಡ್ಡು ಕೊಟ್ಟುಬಿಡುತ್ತಾರೆ. ಆದರೆ ಇಲ್ಲಿ ನೀವು ಎರಡು ದೊಡ್ಡ ಮೋಸದ ಜಾಲದೊಳಗೆ ಸಿಕ್ಕಿಹಾಕಿಕೊಂಡು ಬಿಡುವ ಸಾಧ್ಯತೆಗಳಿರುತ್ತವೆ ಎಂಬುದನ್ನು ತಿಳಿದು ಕೊಳ್ಳಬೇಕು. ಎಚ್ಚರಿಕೆ!
ಜನರಲ್ಲಿ ಜಾಗ್ರತೆ ಮೂಡಿಸಬೇಕು ಎನ್ನುವ ದೃಷ್ಟಿಕೋನದಿಂದ ಇಲ್ಲಿ ಕೆಲವು ಮಾಂತ್ರಿಕರ ಮುಖವಾಡವನ್ನು ಕಳಚಲು ಬಯಸುತ್ತೇನೆ. 2 ಗಂಟೆ ಒಳಗೆ, 24 ಗಂಟೆ ಒಳಗೆ ಅಥವಾ 48 ಗಂಟೆ ಒಳಗೆ ನೂರಕ್ಕೆ ನೂರರಷ್ಟು ಗ್ಯಾರಂಟಿ ವಶೀಕರಣ ಮಾಡಲಾಗುತ್ತದೆ ಎಂದು ಜಾಹೀರಾತು ಫಲಕಗಳನ್ನು ಹಾಕಿಕೊಂಡಿರುವವರು “लूटने वालों लोग हैं” ಅಂತ ಅಸ್ಸಾಂ ರಾಜ್ಯದ ಕಾಮಕ್ಯಾ ದೇವಸ್ಥಾನಕ್ಕೆ ದರ್ಶನಕ್ಕೆಂದು ಹೋದ ಸಮಯದಲ್ಲಿ ಸಿಕ್ಕ ಮಾಂತ್ರಿಕನೊಬ್ಬನು ಹೇಳುತ್ತಿದ್ದ! ಒಬ್ಬ ವ್ಯಕ್ತಿಯ ಮನಸ್ಸು ವಶೀಕರಣದ ಮೂಲಕ ಆಕರ್ಷಣೆ ಆಗಲ್ಪಟ್ಟು ಮನಸ್ಸಲ್ಲಿ ಪ್ರೀತಿ ಪ್ರೇಮದ ಭಾವನೆ ಹುಟ್ಟಿ ಸದಾ ಕಾಲ ನಿಯಂತ್ರಣ ಆಗಲ್ಪಡಬೇಕು ಅಂದ್ರೆ ವಶೀಕರಣ ಶಕ್ತಿಗೆ ಪ್ರಭಾವ ಬೀರಲು 12 ದಿನಗಳಿಂದ 90 ದಿನಗಳ ಕಾಲಾವಕಾಶ ಬೇಕಾಗುತ್ತದೆ. ವಶೀಕರಣದ ಫಲಿತಾಂಶವು ತಕ್ಷಣ ಸಿಗುವಂತಹದ್ದಲ್ಲ. ಕೆಲವು ಸಂದರ್ಭದಲ್ಲಿ 90 ದಿನಗಳಿಗಿಂತ ಹೆಚ್ಚಿನ ಕಾಲಾವಕಾಶ ಕೂಡ ಬೇಕಾಗಬಹುದು. 2 ಗಂಟೆಯಲ್ಲಿ, 24 ಗಂಟೆಯಲ್ಲಿ, 48 ಗಂಟೆಯಲ್ಲಿ ವಶೀಕರಣ ಮಾಡಲಾಗುತ್ತದೆ ಅಂತ ಜಾಹೀರಾತು ಫಲಕಗಳನ್ನು ಹಾಕಿಕೊಂಡಿರುವವರು ಮಾಂತ್ರಿಕರ ವೇಷದಲ್ಲಿರುವ ವಂಚಕರು. ನಿಮ್ಮ ಲವ್ ಪ್ರೊಬ್ಲಮ್ಗಳನ್ನು ಹಾಗೂ ಕುಟುಂಬದಲ್ಲಿನ ಗಂಡ ಹೆಂಡತಿಯ ಹೊಂದಾಣಿಕೆ ಸಮಸ್ಯೆಯನ್ನು 2 ಗಂಟೆ, 24 ಅಥವಾ 48 ಗಂಟೆಯಲ್ಲಿ ನೂರಕ್ಕೆ ನೂರರಷ್ಟು ವಶೀಕರಣದ ಮೂಲಕ ಪರಿಹಾರ ಮಾಡಿ ಕೊಡುತ್ತೇವೆಂದು ಅವರು ನಿಮ್ಮನ್ನು ಯಾಮರಿಸಿ ಹತ್ತ ಹನ್ನೆರಡು ಸಾವಿರ ರೂಪಾಯಿ ದುಡ್ಡು ಕಿತ್ತುಕೊಂಡು ಬಿಡುತ್ತಾರೆ ಹಾಗೂ 48 ಗಂಟೆಗಳ ನಂತರ ವಶೀಕರಣದ ಯಾವುದೇ ಫಲಿತಾಂಶವು ಸಿಗದೇ ಸಮಸ್ಯೆಯು ಪರಿಹಾರವಾಗಲಿಲ್ಲವೆಂದು ನಿಮಗೆ ಅನಿಸಿದ ಮೇಲೆ ನೀವು ಮತ್ತೆ ಹೋಗಿ ಆ ಮಾಂತ್ರಿಕರ ವೇಷದಲ್ಲಿರುವ ವಂಚಕರನ್ನು ಸಮಸ್ಯೆ ಏಕೆ ಪರಿಹಾರವಾಗಲಿಲ್ಲವೆಂದು ಕೇಳಿದರೆ ಅವರು ಕೊಡುವ ಉತ್ತರೆ ಬೇರೆ ರೀತಿಯಲ್ಲೇ ಇರುತ್ತದೆ.
“ನಾನು ನಿನ್ನೆ ದಿನವೇ ವಶೀಕರಣ ಪ್ರಯೋಗವನ್ನು ಮಾಡಿ ಮುಗಿಸಿದ್ದೇನೆ ಆದರೆ ವಶೀಕರಣದ ಪ್ರಭಾವ ಈಗ ಆಗಿಲ್ಲ ಅಂದ್ರೆ ಅದನ್ನು ಮರುಪರಿಶೀಲನೆ ಮಾಡಬೇಕಾಗುತ್ತದೆ. ಇವತ್ತು ಅಥವಾ ನಾಳೆ ದಿನ ವಶೀಕರಣದ ಪ್ರಭಾವವು ಏಕೆ ಆಗಿಲ್ಲ ಎಂಬುದನ್ನು ಮರುಪರಿಶೀಲನೆ ಮಾಡಿ ನಿಮಗೆ ಹೇಳುತ್ತೇನೆ” ಎನ್ನುವ ವಂಚನೆಯ ಮನೋಭಾವವನ್ನು ವ್ಯಕ್ತಪಡಿಸುತ್ತನೆ ನಕಲಿ ಮಾಂತ್ರಿಕ! ಎರಡು ದಿನಗಳ ನಂತರ ಮಾಂತ್ರಿಕನನ್ನು ಕನ್ಸಲ್ಟಿಂಗ್ ಮಾಡಿದಾಗ ಆತಾ ಹೇಳುವುದೇನೆಂದರೆ “ನಾನು ನಿನ್ನೆ ಮರುಪರಿಶಲನೆ ಮಾಡಿದೆ ಹಾಗೂ ಮರುಪರಿಶಲನೆಯಿಂದ ತಿಳಿದು ಬಂದದ್ದು ಏನೆಂದರೆ ಬೇರೆ ಯಾರೋ ಒಬ್ಬರು ಈ ಮೊದಲು ಒಂದು ಶಕ್ತಿ ಪ್ರಯೋಗ ಮಾಡಿದ್ದಾರೆ ಹೀಗಾಗಿ ಆ ಶಕ್ತಿಯು ನಾನು ಪ್ರಯೋಗಿಸಿದ ವಶೀಕರಣ ಶಕ್ತಿಯನ್ನು ತಡೆಯುತ್ತಿದೆ ಆದ್ದರಿಂದ ಆ ಶಕ್ತಿಯನ್ನು ನಿಷ್ಕ್ರಿಯಗೊಳಿಸಿಬೇಕಾಗುತ್ತದೆ ಹಾಗೂ ಅದನ್ನು ನಿಷ್ಕ್ರಿಯಗೊಳಿಸಿದರೆ ನಾನು ಪ್ರಯೋಗಿಸಿದ ಶಕ್ತಿಯು ತನ್ನಿಂತಾನೇ ಪ್ರಭಾವ ಬೀರಲಾರಂಭಿಸುತ್ತದೆ ಆದ್ದರಿಂದ ಬೇರೆ ಯಾರೋ ಈ ಮೊದಲು ಪ್ರಯೋಗಿಸಿದ ಶಕ್ತಿಯನ್ನು ನಿಷ್ಕ್ರಿಯಗೊಳಿಸಲು ಬೇರೆ ರೀತಿಯ ಚಾರ್ಜ್ ಆಗುತ್ತದೆ” ಎಂದು ಹೇಳಿಬಿಡುತ್ತೇನೆ ಹಾಗೂ ನಿಷ್ಕ್ರಿಯಗೊಳಿಸಲೆಂದು ನೀವು ನಂಬಿ ಮತ್ತೇನಾದರೂ ದುಡ್ಡು ಕೊಟ್ಟರೆ ಮತ್ತೊಂದು ರೀತಿಯಲ್ಲಿ ಯಾಮರಿಸುವ ಹುನ್ನಾರವನ್ನು ಮಾಡುತ್ತಾನೆ ನಕಲಿ ಮಾಂತ್ರಿಕ. ಕಟ್ಟಕಡೆಗೆ ಮೋಸವಾಯಿತೆಂದು ಅರ್ಥವಾಗುವಷ್ಟರಲ್ಲಿ ಅಲೆದಾಡಿ ಸಾಕಾಗಿ ಹೋಗಿರುತ್ತದೆ. ಇನ್ನು ಆನ್ಲೈನ್ ಜಾಹೀರಾತುಗಳನ್ನು ನೋಡಿ ದುಡ್ಡನ್ನು ಟ್ರಾನ್ಸ್ಫರ್ ಮಾಡಿದರೆ ಗೋವಿಂದ ಗೋವಿಂದ ಆಮೇಲೆ ನಿಮ್ಮ ಕಾಲ್ ಪಿಕ್ ಮಾಡೋದೇ ಇಲ್ಲ. ಈ ರೀತಿಯಲ್ಲಿ ಮೊದಲ ಮೋಸದ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಬಿಡುವ ಸಾಧ್ಯತೆಗಳು ಇರುತ್ತವೆ ಹಾಗೂ ಇನ್ನು ಎರಡನೇ ಮೋಸದ ಜಾಲ ಹೇಗಿರುತ್ತೆ ಅಂದ್ರೆ ನೀವು ಕನ್ಸಲ್ಟ್ ಮಾಡಿದ ಮಾಂತ್ರಿಕನು ಮಂತ್ರ ಶಕ್ತಿಗಳ ಪಕ್ಕಾ ಸಾಧನೆ ಮಾಡಿದವನಾಗಿದ್ದರೆ ಆತಾ ಮೊಟ್ಟಮೊದಲು ನಿಮ್ಮನ್ನು ವಶೀಕರಣ ಮಾಡಿಕೊಂಡು ಬಿಡುತ್ತಾನೆ! ಏಕೆ ಅಂದ್ರೆ ಮಾಂತ್ರಿಕನಿಗೆ ನಿರಂತರ ಸಂಪಾದನೆ ಬೇಕು ಆದ್ದರಿಂದ ತನ್ನ ಕಡೆಗೆ ಪದೇ ಪದೇ ಗ್ರಾಹಕ ಸಮಸ್ಯೆ ಒಂದನ್ನು ಇಟ್ಟುಕೊಂಡು ಬರಬೇಕು ಎಂಬುದನ್ನು ಬಯಸುತ್ತಾನೆ. ಹೀಗಾಗಿ ಗ್ರಾಹಕನಿಗೆ ಏನೋ ಒಂದು ಸಮಸ್ಯೆ ಉಂಟಾಗಬೇಕು ಹಾಗೂ ಪದೇ ಪದೇ ನನ್ನ ಕಡೆಗೆ ಧಾವಿಸಬೇಕು ಎನ್ನುವ ರೀತಿಯಲ್ಲಿ ಮಾಂತ್ರಿಕನು ತನ್ನ ಗ್ರಾಹಕರನ್ನು ವಶೀಕರಣ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ.
ಹೀಗಾಗಿ ಮಾಂತ್ರಿಕರನ್ನು ನಂಬುವುದನ್ನು ಬಲು ಕಷ್ಟ. ಆದರೆ ಎಲ್ಲ ಮಾಂತ್ರಿಕರು ವೆಂಚಕರು ಎಂದು ಭಾವಿಸುವುದು ತಪ್ಪಾಗುತ್ತದೆ. ಒಳ್ಳೆಯವರು, ನಿಷ್ಟಾವಂತರು, ಪ್ರಾಮಾಣಿಕರು, ಸತ್ಯವಂತರು ಇದ್ದರೆ ಹೀಗಾಗಿ ಇಂತಹ ಮಾಂತ್ರಿಕರಿಂದ ಗಂಡ ಹೆಂಡತಿಯ ನಡುವಿನ ಸಂಸಾರಿಕ ಜೀವನದ ಅನೇಕ ಕ್ಲಿಷ್ಟಕರ ಸಮಸ್ಯೆಗಳು ಪರಿಹಾರ ಆಗಲ್ಪಟ್ಟಿರುವ ಉದಾಹರಣೆಗಳು ಸಾಕಷ್ಟಿವೆ ಹಾಗೂ ಪ್ಯಾರಾನಾರ್ಮಲ್ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಮಂತ್ರ ಶಕ್ತಿಯ ಮೂಲಕ ಪ್ರಾಮಾಣಿಕವಾಗಿ ವಾಸಿ ಮಾಡಿ ಒಳ್ಳೆಯತನವನ್ನು ಗಿಟ್ಟಿಸಿಕೊಳ್ಳುವವರು ಇವತ್ತಿಗೂ ಕಾಣಸಿಗುತ್ತಾರೆ. ಆದರೆ 2 ಗಂಟೆಯಲ್ಲಿ ಅಥವಾ 24 ಗಂಟೆಯಲ್ಲಿ ವಶೀಕರಣ ಮಾಡಲಾಗುತ್ತದೆ ಎನ್ನುವ ಜಾಹೀರಾತು ಫಲಕಗಳನ್ನು ನೋಡಿ, ಸಮಸ್ಯೆ ಹೇಗೋ ಆದಷ್ಟು ಬೇಗನೆ ಪರಿಹಾರ ಆದರೆ ಸಾಕು ಎನ್ನುವ ಅಭಿಪ್ರಾಯವನ್ನು ಇಟ್ಟುಕೊಂಡು ಹೋಗಿ ಆತಾ ಕೇಳಿದಷ್ಟು ದುಡ್ಡು ಕೊಟ್ಟರೆ ಕೈ ಸುಟ್ಟುಕೊಳ್ಳುವುದು ಖಚಿತ. ಇನ್ನು ವೋಡೂ ಡಾಲ್ ಹಾಗೂ ಕಾಲಾ ಜಾದೂ ಎಂದು ಗೂಗಲ್ ಹಾಗೂ ಯೂಟ್ಯೂಬ್ ಸರ್ಚ್ ಕೊಟ್ಟರೆ ನೂರಾರು ಜಾಹೀರಾತುಗಳು ಬರುತ್ತವೆ. ವೋಡೂ ಡಾಲ್ ಹಾಗೂ ಕಾಲಾ ಜಾದೂ ಇವು ಅತ್ಯಂತ ಕ್ಲಿಷ್ಟಕರವಾದ, ಶಕ್ತಿಶಾಲಿಯಾದ, ಅತ್ಯಂತ ಅಪಾಯಕಾರಿಯಾದ ಹಾಗೂ ಅತ್ಯಂತ ಕ್ಷಿಪ್ರವಾದ ವಶೀಕರಣ ಮಾಡುವ ಬ್ಲಾಕ್ ಮ್ಯಾಜಿಕ್ ವಿಧಾನಗಳು ಎಂದು ಹೇಳಲಾಗುತ್ತದೆ. ಆದರೆ ಇಂತಹ ವಿದ್ಯೆಗಳು ಸಂಪೂರ್ಣವಾಗಿ ನಿರ್ನಾಮದ ಅಂಚಿನಲ್ಲಿ ಇರುವುದರಿಂದ ವೋಡೂ ಡಾಲ್ ಹಾಗೂ ಕಾಲಾ ಜಾದೂಗಳನ್ನು ಮಾಡಬಲ್ಲ ಅಥವಾ ಚಿಟಿಕೆ ಹೊಡಿಯುವಷ್ಟರಲ್ಲಿ ವಶೀಕರಣ ಅಥವಾ ಸಂಮೋಹನ ಮಾಡಬಲ್ಲ ಒಬ್ಬೇ ಒಬ್ಬ ಮಾಂತ್ರಿಕನು ಬಹುಶಃ ಜಗತ್ತಿನಲ್ಲಿ ಇರಲಿಕ್ಕಿಲ್ಲ.

ಸಂಪೂರ್ಣ ನಶಿಸಿ ಹೋಗಿರಬಹುದಾದ ಈ ವೋಡೂ ಡಾಲ್ ಹಾಗೂ ಕಾಲಾ ಜಾದೂಗಳನ್ನು ಬಿಟ್ಟು ಅಳಿದುಳಿದ ಮಾಂತ್ರಿಕ ವಿದ್ಯೆಯ ಮೂಲಕ ಹಾಗೂ ಮಾಂತ್ರಿಕ ಕ್ಷೇತ್ರದ ಕೆಲವು ನಿಯಮಗಳಗೆ ಮತ್ತು ಷರತ್ತುಗಳಿಗೆ ಒಳಪಟ್ಟು ವಶೀಕರಣ ಮಾಡಲು ಸಾಧ್ಯವಾಗುತ್ತದೆ. ಇನ್ನು ಈ ಮಾಂತ್ರಿಕ ವಿಧಾನದಿಂದ ಅಷ್ಟೇ ಅಲ್ಲ ವೈದಿಕ ಮಂತ್ರಗಳ ಮೂಲಕ ಕೂಡ ವಶೀಕರಣ ಮಾಡಲು ಸಾಧ್ಯವಾಗುತ್ತದೆ. ವಶೀಕರಣವನ್ನು ಮಾಂತ್ರಿಕ ವಿಧಾನದಿಂದ ಮಾಡಿಸಿದರೆ ಜೀವನದಲ್ಲಿ ಅನೇಕ ವ್ಯತಿರಿಕ್ತವಾದ ಪರಿಣಾಮಗಳಾಗುತ್ತವೆ ಆದ್ದರಿಂದ ಮಾಂತ್ರಿಕ ವಿಧಾನದ ಬದಲು ವೈದಿಕ ವಿಧಾನ ಸುರಕ್ಷಿತ ಎನ್ನಲಾಗುತ್ತದೆ. ಅಳಿದುಳಿದ ಪ್ರಾಚೀನ ಕಾಲದ ವಶೀಕರಣ ವಿದ್ಯೆಯನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ಹಾಗೂ ದುರ್ವಿನಿಯೋಗ ಮಾಡಿಕೊಳ್ಳುವುದು ಅವರವರ ವೈಯಕ್ತಿಕ ಮನೋಭಾವಕ್ಕೆ ಬಿಟ್ಟದ್ದು. ಸದ್ವಿನಿಯೋಗ ಮಾಡಿಕೊಂಡರೆ ಬಿರುಕು ಬಿಟ್ಟ ಕೌಟುಂಬಿಕ ಸಂಬಂಧ ಒಂದನ್ನು ಸರಿಪಡಿಸಲು ಸಾಧ್ಯವಾಗಬಹುದು ಹಾಗೂ ದುರ್ವಿನಿಯೋಗ ಮಾಡಿಕೊಂಡರೆ ಕೆಟ್ಟ ಕರ್ಮ ತಟ್ಟುತ್ತೆ. ಆಯ್ಕೆ ನಿಮ್ಮದು ಆದರೆ ಮಂತ್ರಿಕರನ್ನು ಕನ್ಸಲ್ಟಿಂಗ್ ಮಾಡುವಾಗ ಎಚ್ಚರಿಕೆ ಇರಲಿ.
Ancient Vaimanika Shastra👇
https://anveshana.in/vaimanikashstra/
Ancient Vaimanika Shastra👇
https://www.facebook.com/share/p/1HD5E1zsBC/