ಮನೆಯೊಳಗೆ ಸ್ವಸ್ತಿಕ ಓಂ ಅಂಟಿಸಿ ಧನಾತ್ಮಕ ಶಕ್ತಿಯನ್ನು ಪಡೆದುಕೊಳ್ಳಿ. ಈ ಪ್ರಪಂಚದಲ್ಲಿ ಪ್ರತಿಯೊಂದು ಧರ್ಮದ ಜನರು ತಮ್ಮ ತಮ್ಮ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಪ್ರಾಚೀನಕಾಲದಿಂದಲೂ ತಮ್ಮದೇ ಆದ ಕೆಲವು ಧನಾತ್ಮಕ ಚಿಹ್ನೆಗಳನ್ನು ಹೊಂದಿದ್ದಾರೆ. ಹಿಂದೂಗಳು ಸ್ವಸ್ತಿಕ ಅನ್ನು (卐) ಮತ್ತು “ಓಂ” (ॐ)ಅನ್ನು ಧನಾತ್ಮಕ ಶಕ್ತಿ ಚಿಹ್ನೆಯನ್ನಾಗಿ ಬಳೆಸುತ್ತಾರೆ. ಆದರೆ ಅಂಗಡಿಗಳಲ್ಲಿ, ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಮದುವೆ ಮಂಟಪಗಳಲ್ಲಿ ಮುಂತಾದ ಕಡೆ (ॐ) ಮತ್ತು ಸ್ವಸ್ತಿಕ (卐) ಚಿಹ್ನೆಯನ್ನು ಪ್ರದರ್ಶಿಸುವ ಸಂಪ್ರದಾಯ ಇತ್ತೀಚೆಗೆ ಹಿಂದೂಗಳಲ್ಲಿ ಕ್ಷೀಣಿಸುತ್ತಿದೆ. ಬೌದ್ಧ ಹಾಗೂ ಜೈನ ಧರ್ಮದಲ್ಲೂ ಸ್ವಸ್ತಿಕ (卐) ಚಿಹ್ನೆಯನ್ನು ಪವಿತ್ರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಡಾಲ್ಫ್ ಹಿಟ್ಲರ್ ಕೂಡ ಸ್ವಸ್ತಿಕ (卐) ಚಿಹ್ನೆಯನು ತನ್ನ ನಾಜಿ ಪಕ್ಷದ ಲೋಗೋ ಅನ್ನಾಗಿ ಮಾಡಿಕೊಂಡಿದ್ದ. ಇದೇ ರೀತಿ ಕ್ರಿಶ್ಚಿಯನ್ ಧರ್ಮದಲ್ಲಿ ಶಿಲುಬೆಯ ✟ ಪವಿತ್ರವಾದ ಚಿಹ್ನೆಯೆಂದು ಪರಿಗಣಿಸಲಾಗುತ್ತದೆ. ಮುಸಲ್ಮಾನರು ತಮ್ಮ ಇಸ್ಲಾಂ ಧರ್ಮದ ನಂಬಿಕೆಗೆ ಅನುಗುಣವಾಗಿ ನಕ್ಷತ್ರವನ್ನು ಹೊಂದಿದ ಅರ್ಧಚಂದ್ರಾಕೃತಿಯನ್ನು ಧನಾತ್ಮಕ ಚಿಹ್ನೆ ಎಂದು ಭಾವಿಸುತ್ತಾರೆ. ಹಾಗೂ ರಷ್ಯನ್ನರು ಕೀಲಿಕೈ ಚಿಹ್ನೆಯನ್ನು ಧನಾತ್ಮಕ ಸಂಕೇತ ಎಂದು ಪರಿಗಣಿಸುತ್ತಾರೆ. ಇದೇ ರೀತಿ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ರೀತಿಯ ಧನಾತ್ಮಕ ಚಿಹ್ನೆಗಳನ್ನು ಅವರವರ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಪ್ರದರ್ಶಿಸುತ್ತಾರೆ. ವಾಸ್ತು ಶಾಸ್ತ್ರದಲ್ಲೂ ಇಂತಹ ಧನಾತ್ಮಕ ಶಕ್ತಿಯುಳ್ಳ ಚಿಹ್ನೆಗಳಿಗೆ ಅತಿಹೆಚ್ಚಿನ ಪ್ರಾಮುಖ್ಯತೆ ಇದೆ. ಭಾರತ, ಟರ್ಕಿ, ಇರಾನ್, ಚೈನಾ, ಜಪಾನ್, ಕೊರಿಯಾ ಹಾಗೂ ಕೆಲವು ಯೂರೋಪ್ ರಾಷ್ಟ್ರಗಳ ಪ್ರಾಚೀನ ನಾಗರಿಕತೆಗಳಲ್ಲೂ ಸ್ವಸ್ತಿಕ(卐) ಚಿಹ್ನೆಯನ್ನು ಬಳಿಸಲಾಗಿದೆ. ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಹಾಗೂ ಮೆಡಿಟರೇನಿಯನ್ ನಾಗರಿಕತೆಯಲ್ಲಿ ಸ್ವಸ್ತಿಕ (卐) ಚಿಹ್ನೆಯ ಆಕಾರದ ಆಭರಣಗಳನ್ನು ಧಾರಣ ಮಾಡುತ್ತಿದ್ದರು ಎಂದು ಪುರಾತತ್ವ ಪುರಾವೆಗಳು ಇವೆ.

ನಮ್ಮ ಪೂರ್ವಜರಿಗೆ ಧನಾತ್ಮಕ ಚಿಹ್ನೆಗಳ ಕುರಿತು ಜ್ಞಾನವಿತ್ತು ಹಾಗೂ ಅವುಗಳನ್ನು ಪ್ರದರ್ಶನ ಮಾಡುವುದರ ಮೂಲಕ ಋಣಾತ್ಮಕ ಶಕ್ತಿಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ ಎಂಬುದರ ಅರಿವು ಇತ್ತು. ಆದ್ದರಿಂದ ಇಂತಹ ಧನಾತ್ಮಕ ಚಿಹ್ನೆಗಳನ್ನು ಪ್ರದರ್ಶನ ಮಾಡುವ ಸಂಪ್ರದಾಯ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿದೆ ಹಾಗೂ ಭವಿಷ್ಯದಲ್ಲಿ ತಲೆತಲಾಂತರಕ್ಕೆ ಈ ಸಂಪ್ರದಾಯ ಹರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದರೆ ಇಂತಹ ಧಾರ್ಮಿಕ ಚಿಹ್ನೆಗಳಾದ “ಓಂ” (ॐ) ಮತ್ತು ಸ್ವಸ್ತಿಕಗೆ (卐) ಧನಾತ್ಮಕ ಶಕ್ತಿ ಇದ್ದಾಗ್ಯೂ ಅವುಗಳನ್ನು ಪ್ರದರ್ಶಿಸುವ ಪ್ರವೃತ್ತಿ ಹಿಂದೂಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿರುವುದು ದುರದೃಷ್ಟಕರ ಸಂಗತಿ. ಸ್ವಸ್ತಿಕ (卐) ಮತ್ತು “ಓಂ” (ॐ) ಚಿಹ್ನೆಗಳಿಂದ ಹೊರಸೂಸುವ ಧನಾತ್ಮಕ ಶಕ್ತಿಯಿಂದ ಋಣಾತ್ಮಕ ಶಕ್ತಿಗಳನ್ನು ನಿಗ್ರಹಿಸಲು ಸಾಧ್ಯವಿದೆ ಎಂಬುದರ ಕುರಿತು ಅರಿವು ಮತ್ತೆ ಹಿಂದೂಗಳಲ್ಲಿ ಹೆಚ್ಚಾಗಬೇಕು. ಹಿಂದು ಸಂಸ್ಕೃತಿ-ಸಂಪ್ರದಾಯಗಳನ್ನು ಅಳಿಸಿಹಾಕಲು ಅನೇಕ ಹುನ್ನಾರಗಳು ಕಾಣದ ಕೈಗಳಿಂದ ನಿರಂತರವಾಗಿ ನಡೆಯುತ್ತಿವೆ ಇದಕ್ಕೆ ಸಾಕ್ಷಿ ಎನ್ನುವಂತೆ ಕೆಲವು ಹಳ್ಳಿಗಳಲ್ಲಿ ಹಳ್ಳಿಗರು ಸ್ವಸ್ತಿಕ (卐)ಮತ್ತು “ಓಂ” (ॐ) ಚಿಹ್ನೆಗಳನ್ನು ಮನೆ ಒಳಗೆ ಪ್ರದರ್ಶಿಸಬಾರದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುವುದು. ಇದಕ್ಕೆ ಅಜ್ಞಾನದ ಕಾರಣವೂ ಇರಬಹುದು ಹಾಗೂ ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಉಂಟಾದ ಬಿರುಕು ಕೂಡ ಕಾರಣ ಎನ್ನಲಾಗುತ್ತದೆ.
ಈ ಚಿಹ್ನೆಗಳು ಹೊರಸೂಸುವ ಧನಾತ್ಮಕ ಶಕ್ತಿಯನ್ನು ಬೋವಿಮೀಟರ್ ಎಂಬ ಅಧುನಿಕ ಉಪಕರಣದಿಂದ ಯೂನಿಟ್ ಅಥವಾ ಬೋವಿ ಎಂಬ ಮಾನದಂಡ ಮೂಲಕ ಅಳೆಯಲಾಗುತ್ತದೆ. ಲೊಬಿ ಎಂಟೆನಾ ಹಾಗೂ ಲ್ಯಾಟಿಸ್ ಎಂಟೆನಾ ಎಂಬ ಉಪಕರಣಗಳಿಂದ ಕೂಡ ಇಂತಹ ಧಾರ್ಮಿಕ ಚಿಹ್ನೆಗಳು ಹೊರಸೂಸುವ ಧನಾತ್ಮಕ ಶಕ್ತಿಯನ್ನು ಯೂನಿಟ್ ಎಂಬ ಮಾನದಂಡದಿಂದ ಅಳೆಯಲು ಸಾಧ್ಯವಾಗುತ್ತದೆ. ಅನರ್ಸ್ಟ್ ಹಾರ್ಟ್ಮನ್ನ ಎಂಬ ಜರ್ಮನ್ ವಿಜ್ಞಾನಿಯು ಈ ಉಪಕರಣವನ್ನು ಸಂಶೋಧನೆ ಮಾಡಿದನು. ಬೋವಿಮೀಟರ್ ಸಂಶೋಧನೆ ಆದ ಕಾರಣ ಇವತ್ತು ನಮಗೆ ಪ್ರಕೃತಿಯಲ್ಲಿರುವ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳನ್ನು ವಿಜ್ಞಾನಿಕವಾಗಿ ಅಳತೆ ಮಾಡಲು ಸಾಧ್ಯವಾಗಿದೆ. ಸ್ವಸ್ತಿಕ ಚಿಹ್ನೆಯು (卐) ಸುಮಾರು ಒಂದು ಲಕ್ಷ ಬೋವಿ ಅಷ್ಟು ಧನಾತ್ಮಕ ಶಕ್ತಿಯನ್ನು ಹೊರಸೂಸಿದರೆ “ಓಂ”(ॐ) ಚಿಹ್ನೆಯು 70 ಸಾವಿರ ಬೋವಿ ಅಷ್ಟು ಧನಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಕ್ರೈಸ್ತ ಧರ್ಮದಲ್ಲಿರುವ ಕ್ರಾಸ್ ಚಿಹ್ನೆಯು ಸುಮಾರು 11 ಸಾವಿರ ಬೋವಿ ಅಷ್ಟು ಧನಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ರಷ್ಯನ್ನರ ಕೀಲಿಕೈ ಚಿಹ್ನೆಯ ಸುಮಾರು 9 ಸಾವಿರ ಬೋವಿ ಧನಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಅವರವರ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಈ ಚಿಹ್ನೆಗಳನ್ನು ಮನೆಗಳಲ್ಲಿ ಪ್ರದರ್ಶಿಸುವ ಮೂಲಕ ಧನಾತ್ಮಕ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ವಾಸ್ತು ಶಾಸ್ತ್ರದಲ್ಲೂ “ಓಂ”(ॐ) ಮತ್ತು ಸ್ವಸ್ತಿಕ (卐) ಚಿಹ್ನಗಳಿಗೆ ಅತಿ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ವಾಸ್ತು ದೋಷ ಇರುವ ಮನೆಗಳಲ್ಲಿ “ಓಂ” ಮತ್ತು ಸ್ವಸ್ತಿಕ ಚಿಹ್ನೆಗಳನು ಬರೆಯುವುದರಿಂದ ವಾಸ್ತು ದೋಷದಿಂದ ಉಂಟಾದ ಋಣಾತ್ಮಕ ಶಕ್ತಿಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. “ಓಂ” ಶಬ್ದವು ಅ, ಊ ಮತ್ತು ಮ ಈ ಮೂರು ಶಬ್ಧಗಳ ಸಂಯೋಜನೆಯಿಂದ ಆಗಿದೆ. “ಓಂ” ಶಬ್ದವನ್ನು ಇಡೀ ಸೃಷ್ಟಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. “ಓಂ” ಶಬ್ದವು ಪವಿತ್ರ ಬೀಜ ಮಂತ್ರವಾಗಿದ್ದು ಇದಕ್ಕೆ ಜೈನ, ಬೌದ್ಧ, ಸಿಕ್, ಧರ್ಮಗಳಲ್ಲೂ ಅತ್ಯಂತ ಪ್ರಾಮುಖ್ಯತೆ ಕೊಡಲಾಗಿದೆ. “ಓಂ” ಮಂತ್ರವನ್ನು ಪಠಿನೆ ಮಾಡುವುದರಿಂದ ಸುತ್ತಮುತ್ತಲಿರುವ ಋಣಾತ್ಮಕ ಶಕ್ತಿಗಳು ನಿಗ್ರಹಗೊಳ್ಳುತ್ತವೆ ಹಾಗೂ ಧನಾತ್ಮಕ ಶಕ್ತಿ ವೃದ್ಧಿಗೊಳ್ಳುತ್ತದೆ ಇದರಿಂದ ಮನಸ್ಸು ನಿರುದ್ವೇಗ ಸ್ಥಿತಿಗೆ ತಲುಪುಪಿ ಆಂತರಿಕ ಮನಃಶಾಂತಿ ಹಾಗೂ ಆರೋಗ್ಯ ಲಭಿಸುತ್ತದೆ. “ಓಂ” ಶಬ್ದಕ್ಕೆ ಹಾಗೂ ಚಿಹ್ನೆಗೆ ಹೀಗೆ ಅಪಾರವಾದ ಧನಾತ್ಮಕ ಶಕ್ತಿಗಳು ಇರುವುದರಿಂದ ವಾಸ್ತು ದೋಷ ನಿವಾರಣೆಗಾಗಿ ಬಳಸಲಾಗುತ್ತದೆ. ಇದೇ ರೀತಿ ಸ್ವಸ್ತಿಕ ಚಿಹ್ನೆಯು 1 ಲಕ್ಷ ಬೋವಿ ಅಷ್ಟು ಧನಾತ್ಮಕ ಶಕ್ತಿಯನ್ನು ಹೊರಸೂಸುವುದರಿಂದ ಸ್ವಸ್ತಿಕ ಚಿಹ್ನೆಗೂ ವಾಸ್ತುಶಾಸ್ತ್ರದಲ್ಲಿ ಅಗ್ರ ಸ್ಥಾನವನ್ನು ನೀಡಲಾಗಿದೆ. ಸ್ವಸ್ತಿಕದಲ್ಲಿರುವ 卐 ಲಂಬ ರೇಖೆಗಳು ಪವಿತ್ರ ಜ್ಯೋತಿರ್ಲಿಂಗಗಳನ್ನು ಪ್ರತಿನಿಧಿಸುತ್ತವೆ ಹಾಗೂ ಅಡ್ಡ ರೇಖೆಗಳು ಬ್ರಹ್ಮಾಂಡವು ವಿಸ್ತರಿಸುತ್ತಿರುವುದನ್ನು ಪ್ರತಿನಿಧಿಸುತ್ತವೆ. ಸ್ವಸ್ತಿಕ ಚಿಹ್ನೆಯು ವಿಷ್ಣುವಿನ ಸಂಕೇತವಾಗಿದ್ದು ಅದರ ನಾಲ್ಕು ಬದಿಗಳನ್ನು ವಿಷ್ಣುವಿನ ನಾಲ್ಕು ಕೈಗಳು ಎನ್ನಲಾಗುತ್ತದೆ. ಕಿತ್ತಳೆ ಅಥವಾ ಕೆಂಪು ಬಣ್ಣಗಳಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬರೆಯಬೇಕು. ಇದು ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತವಾಗಿರುವ ಕಾರಣಕ್ಕೆ ಪ್ರತಿಯೊಬ್ಬರು ಮನೆಯಲ್ಲಿ ಸ್ವಸ್ತಿಕ ಚಿಹ್ನೆಯನ್ನು 卐 ಪ್ರದರ್ಶಿಸುವ ಮೂಲಕ ಧನಾತ್ಮಕ ಫಲವನ್ನು ಪಡೆಯಬಹುದು.
Article on Vastu 👇
ವೈಜ್ಞಾನಿಕ ವಾಸ್ತು ಮನೆಬಾಗಿಲಿನ ದಿಕ್ಕುಗಳು
To measure the energy strength auspicious symbols 👇