ಏಲಿಯನ್ಸ್ ಹುಡುಕಾಟ 14 ಲೋಕಗಳು ಹಾಗೂ ಬ್ರಹ್ಮಾಂಡ – ಇವತ್ತಿನ ಆಧುನಿಕ ವಿಜ್ಞಾನಿಗಳು ಸ್ಪೇಸ್ ವೇಹಿಕಲ್ಲಗಳನ್ನು ಅನ್ಯಗ್ರಹ ಜೀವಿಗಳ ಅನ್ವೇಷಣೆಗೆಂದು ಕಳಿಸುತ್ತಿದ್ದಾರೆ ಹಾಗೂ ಸಾವಿರಾರು ಕೋಟಿ ಹಣ ಖರ್ಚು ಮಾಡಿ 2070ರ ಹೊತ್ತಿಗೆ ಪಕ್ಕದ ಗ್ರಹ ಮಂಗಳಕ್ಕೆ ಹೋಗಿ ಮಾನವ ನೆಲೆಗಳನ್ನು ಸ್ಥಾಪಿಸಿ ಜೀವಿಗಳು ಬಾಳಿ ಬದುಕುವ ಪರಿಸರವನ್ನು ಸೃಷ್ಟಿ ಮಾಡುವ ಯೋಜನೆಯಲ್ಲೂ ಇದ್ದಾರೆ. ಆದರೆ ನಮ್ಮ ಪ್ರಾಚೀನ ಋಷಿಗಳು ಧ್ಯಾನದಲ್ಲಿ ಕುಳಿತುಕೊಂಡು ತಮ್ಮ ಮನಸ್ಸನ್ನು ಬ್ರಹ್ಮಾಂಡದ ಯಾವುದೇ ಗ್ರಹ ನಕ್ಷತ್ರಗಳಿಗೆ ಕಳುಹಿಸಿ ದೇವರು ಸೃಷ್ಟಿಸಿದ ಬ್ರಹ್ಮಾಂಡದ ಅದ್ಭುತಗಳನ್ನು ನೋಡಿದ್ದರು. 4.2 ಜ್ಯೋತಿರ್ವರ್ಷ ದೂರದ ಪ್ರಾಕ್ಸಿಮಾ ಸೆಂಟಾರಿ ಸೌರವ್ಯೂಹದಲ್ಲಿರುವ ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರವು ನಮ್ಮ ಹತ್ತಿರದ ನಕ್ಷತ್ರ ಎಂದು ವಿಜ್ಞಾನಿಗಳು ದೃಢಪಡಿಸಿರುವುದನ್ನು ನಾವು ಹತ್ತನೆಯ ತರಗತಿಯಲ್ಲಿ ಓದಿದ್ದೇವೆ. ಆದರೆ ನಮ್ಮ ಪ್ರಾಚೀನ ಋಷಿಗಳು ಈ ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರಕ್ಕೆ ಮಿತ್ರ ಎಂದು ಹೆಸರಿಟ್ಟಿದ್ದರು. ಸಂಸ್ಕೃತ ಭಾಷೆಯಲ್ಲಿ ಮಿತ್ರ ಅಂದರೆ ಹತ್ತಿರದ ಗೆಳೆಯ ಎಂದಾಗುತ್ತದೆ. 1969ರಲ್ಲಿ ಅಪೋಲೋ 11ರಲ್ಲಿ ಪ್ರಯಾಣ ಮಾಡಿದ ನೀಲ್ ಆರ್ಮ್ಸ್ಟ್ರಾಂಗ್, ಎಡ್ವಿನ್ ಆಲ್ಡ್ರಿನ್, ಮೈಕೆಲ್ ಕಾಲಿನ್ಸ್ ಚಂದ್ರನನ್ನು ತಲುಪಿ ಸುಮಾರು ಎರಡೂವರೆ ಗಂಟೆಗಳ ಕಾಲ ಚಂದ್ರನ ಮೇಲೆ ಸಂಶೋಧನೆಗಳನ್ನು ನಡೆಸಿ ಮರಳಿ ಬರುವಾಗ ಚಂದ್ರನ ಮೇಲಿನ ಕಪ್ಪು ಮಣ್ಣನ್ನು ತಂದು ಚಂದ್ರನ ಮೇಲೆ ಕಪ್ಪು ಮಣ್ಣು ಇದೆ ಎಂದು ದೃಢಪಡಿಸಿದರು. ಅಮೇರಿಕಾದ ನಾಸಾ ಸಂಸ್ಥೆಗೆ ಇಷ್ಟು ಸಣ್ಣ ಸಂಶೋಧನೆ ಮಾಡುವಷ್ಟರಲ್ಲಿ ಸಾವಿರಾರು ಕೋಟಿಗಳಷ್ಟು ದುಡ್ಡು ಖರ್ಚಾಗಿ ಹೋಗಿತ್ತು. ಆದರೆ ಅಥರ್ವಣ ವೇದದಲ್ಲಿ ಚಂದ್ರ ಮಧಿ ಕೃಷ್ಣಂ (चंद्र मधि कृष्णम) ಎಂಬ ಶ್ಲೋಕವಿದೆ. ಈ ಶ್ಲೋಕದ ಅರ್ಥ ಚಂದ್ರನ ಮಣ್ಣು ಕಪ್ಪು ಎಂದಾಗುತ್ತದೆ (चंद्र – ಚಂದ್ರ, मधि – ಮಣ್ಣು, कृष्णम – ಕಪ್ಪು).
ಡಿಸೆಂಬರ್ 25, 2021 ರಂದು ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ, ಹಾಗೂ ಕೆನಡಿಯನ್ ಸ್ಪೇಸ್ ಏಜೆನ್ಸಿಗಳು 9.7 ಬಿಲಿಯನ್ ದುಡ್ಡು ಸುರಿದು ಬಾಹ್ಯಾಕಾಶ ಸಂಶೋಧನೆಗಾಗಿ ಅಭಿವೃದ್ಧಿಪಡಿಸಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಅನ್ನು ಉಡಾವಣೆ ಮಾಡಲಾಗುತ್ತಿದೆ. ಇದು ಹೆಬ್ಬಲ್ ಸ್ಪೇಸ್ ಟೆಲಿಸ್ಕೋಪಗಿಂತ ನೂರು ಪಟ್ಟು ಹೆಚ್ಚು ಶಕ್ತಿಶಾಲಿ ಹೊಂದಿದ್ದು 100 ಮಿಲಿಯನ್ ವರ್ಷಗಳ ಹಿಂದಿನಿಂದ ಹೊರಟ ನಕ್ಷತ್ರಗಳ ಬೆಳಕನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಪ್ರಾಕ್ಸಿಮಾ ಸೆಂಟಾರಿ ಸೌರವ್ಯೂಹದ ಗ್ರಹವೊಂದರ ಮೇಲೆ ನಿಂತು ದೀಪದ ಕಡ್ಡಿ ಒಂದನ್ನು ಗೀಚಿದರೆ ಅದರ ಬೆಳಕನ್ನು ಕೂಡ ಈ ಜೇಮ್ಸ್ ಗೇಮ್ಸ್ ಟೆಲಿಸ್ಕೋಪ ಪತ್ತೆ ಹಚ್ಚುವಷ್ಟು ಸಾಮರ್ಥ್ಯಹೊಂದಿದೆ. ಬಾಹ್ಯಾಕಾಶದ ಗ್ರಹ ನಕ್ಷತ್ರಗಳ ಚಲನೆ ಮೇಲೆ, ಅಂತರಿಕ್ಷದಲ್ಲಿ ನಡೆಯುವ ಪವಾಡಗಳ ಮೇಲೆ, ಹಾಗೂ ಅನ್ಯಲೋಕದ ಜೀವಿಗಳ(Alien life) ಚಲನವಲದ ಮೇಲೆ ಈ ಜೇಮ್ಸ್ ವೆಬ್ ಟೆಲಿಸ್ಕೋಪದಿಂದ ತೀಕ್ಷ್ಣ ಕಣ್ಣಿಡಲು ಸಾಧ್ಯವಾದರೂ ಕೂಡ ಭಾರತೀಯ ಐವತ್ತು ರೂಪಾಯಿ ಪಂಚಾಂಗದಷ್ಟು ನಿಖರವಾಗಿ ಗ್ರಹ ನಕ್ಷತ್ರಗಳ ಚಲನೆಯನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ನಮ್ಮ ಭಾರತದ 50 ರೂಪಾಯಿ ಪಂಚಾಂಗವು 1+1=2 ಎಷ್ಟು ನಿಖರತೆ ಹೊಂದಿದೆನೋ ಅಷ್ಟೇ ನಿಖರವಾಗಿ ಗ್ರಹ ನಕ್ಷತ್ರಗಳ ಚಲನೆಯನ್ನು ವಿವರಿಸಿ ಬಿಡಬಲ್ಲದು.

ಬಿಲಿಯಗಟ್ಟಲೆ ಹಣ ಸುರಿದು ಸ್ಪೇಸ್ ಶಿಪ್ ಕಳಿಸಿ ಆಧುನಿಕ ವಿಜ್ಞಾನಿಗಳು ಸಂಶೋಧನೆಗಳನ್ನು ಮಾಡಿದರೆ ನಮ್ಮ ಭಾರತದ ಪ್ರಾಚೀನ ಋಷಿಗಳು ಧ್ಯಾನದಲ್ಲಿ ಕುಳಿತು ಇಡೀ ಬ್ರಹ್ಮಾಂಡದ ವಿದ್ಯಮಾನಗಳನ್ನು ಗ್ರಹಿಸಿ ಬಿಡುತ್ತಿದ್ದರು. ಇವತ್ತಿನ ವಿಜ್ಞಾನಿಗಳು ಬಿಗ್ ಬ್ಯಾಂಗ್ ಸಿದ್ಧಾಂತವನ್ನು ಪ್ರತಿಪಾದಿಸಿದರೆ ಋಗ್ವೇದದಲ್ಲಿ ಇಡೀ ಬ್ರಹ್ಮಾಂಡವು ಒಂದು ಸಣ್ಣ ಬಿಂದುವಾಗಿ ಕೇಂದ್ರೀಕೃತವಾಗಿತ್ತು. ಈ ಕೇಂದ್ರೀಕೃತ ಬಿಂದುವೇ ಸೃಷ್ಟಿಯ ಉಗಮಕ್ಕೆ ಕಾರಣ. ಇದೇ ಕೇಂದ್ರಿಕೃತ ಬಿಂದು ಮಹಾಸ್ಪೋಟದ ಮೂಲಕ ನಾದ(Sound) ಹುಟ್ಟಿಕೊಂಡಿತು ಎಂದು ಉಲ್ಲೇಖವಿದೆ. ಬಿಗ್ ಬ್ಯಾಂಗ್ ಹಾಗೂ ಪ್ರಾಚೀನ ಋಗ್ವೇದದಲ್ಲಿ ಉಲ್ಲೇಖ ಇರುವ ಬಿಂದು ಮಹಾಸ್ಪೋಟ ಸಿದ್ಧಾಂತಗಳು ಎರಡು ಒಂದೇ! ಹೀಗೆ 13.9 ಬಿಲಿಯನ್ವರ್ಷಗಳ ಹಿಂದೆ ಬಿಂದು ಮಹಾಸ್ಪೋಟದಿಂದಾಗಿ ಹುಟ್ಟಿಕೊಂಡ ಬ್ರಹ್ಮಾಂಡದಲ್ಲಿ ಕಡಿಮೆ ಅಂದ್ರು 100 ಬಿಲಿಯನ್ ಗ್ಯಾಲಕ್ಸಿಗಳು ಇವೆ. ಹಾಗೂ ಪ್ರತಿ ಗ್ಯಾಲಕ್ಸಿಯಲ್ಲೂ ಕಡಿಮೆ ಅಂದರೆ 100 ಬಿಲಿಯನಗಳಷ್ಟು ಸೌರ ಮಂಡಲಗಳ ವ್ಯವಸ್ಥೆ ಇದೆ. ನಮ್ಮ ಸೌರ ಮಂಡಲದಲ್ಲಿ 9 ಗ್ರಹಗಳು ಇವೆ. ಇವೇ 9 ಗ್ರಹಗಳನ್ನು ನಾವು ಸಾವಿರಾರು ವರ್ಷಗಳ ಹಿಂದಿನಿಂದ ನವ ಗ್ರಹಗಳೆಂದು ಪೂಜೆ ಮಾಡುತ್ತಾ ಬಂದಿದ್ದೇವೆ. 100 ಬಿಲಿಯನ್ ಸೌರ ಮಂಡಲಗಳನ್ನು ಒಳಗೊಂಡ ಗ್ಯಾಲಕ್ಸಿಯು ತನ್ನ ಯಾವುದಾದರು ಸೌರವ್ಯೂಹದ ಗ್ರಹದ ಮೇಲೆ ಜೀವಿಗಳು ಬಾಳಿ ಬದುಕುವ ಪರಿಸರ ವ್ಯವಸ್ಥೆ ಇದ್ದರೆ ಹಾಗೂ ಇಡೀ ಬ್ರಹ್ಮಾಂಡದಲ್ಲಿ ಇರುವ ಪ್ರತಿ ಗ್ಯಾಲಕ್ಸಿ ಒಂದರಲ್ಲಿ ಜೀವಿಗಳು ವಾಸಿಸುತ್ತಿದ್ದಾರೆ ಅಲ್ಲಿಗೆ ಇಡೀ ಬ್ರಹ್ಮಾಂಡದಲ್ಲಿ 100 ಬಿಲಿಯನ್ ಬೇರೆ ಬೇರೆ ಆಯಾಮಗಳಲ್ಲಿ 100 ಬಿಲ್ಲಿಯನ್ಸ್ಗಳಷ್ಟು ಬೇರೆ ಬೇರೆ ರೀತಿಯ ಜೀವಿಗಳ ಅಸ್ತಿತ್ವ ಇದೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಇವುಗಳನ್ನೇ ನಾವು ಎಲಿಯನ್ ಎಂದು ಕರೆಯುತ್ತೇವೆ.
ಅಮೇರಿಕಾ, ರಷ್ಯಾ, ಚೈನಾ ಹಾಗೂ ಯುರೋಪಿನ ಕೆಲವು ರಾಷ್ಟ್ರಗಳ ಖಗೋಳ ವಿಜ್ಞಾನಿಗಳು ಬ್ರಹ್ಮಾಂಡದಲ್ಲಿ ಇರುವ ಇಂತಹ ಎಲಿಯನ್ ಅಥವಾ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಕುರಿತಾದ ಸಂಶೋಧನೆಯಲ್ಲಿ ತೊಡಗಿದ್ದಾರೆ. ರೇಡಿಯೋ ತರಂಗಗಳನ್ನು ಬ್ರಹ್ಮಾಂಡದಲ್ಲಿ ಕಳುಹಿಸಿ ಅನ್ಯಗ್ರಹ ಜೀವಿಗಳ ಜೊತೆಗೆ ಸಂಪರ್ಕ ಸಾಧಿಸುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿವೆ. ಬ್ರಹ್ಮಾಂಡದಲ್ಲಿರುವ ಇತರ ಬುದ್ದಿ ಜೀವಿಗಳಿಗೆ ನಮ್ಮ ಅಸ್ತಿತ್ವವನ್ನು ತಿಳಿಸಬೇಕೆಂಬ ಉದ್ದೇಶದಿಂದ ಈಗಾಗಲೇ ವಾಯೇಜರ್ 1 ಮತ್ತು ವಾಯೇಜರ್ 2 ಮನಕುಲದ ಇತಿಹಾಸವನ್ನು ಹೊತ್ತು ಸೌರ ಮಂಡಲವನ್ನು ದಾಟಿ ಬಿಲ್ಲಿಯನಗಟ್ಟಲೆ ಮೈಲ್ಗಳಷ್ಟು ದೂರದ ಪ್ರಯಾಣವನ್ನು ವಾಯೇಜರ್ 1 ಪ್ರತಿ ಸೆಕೆಂಡಿಗೆ 17 ಕಿಲೋಮೀಟರಂತೆ ಹಾಗೂ ವಾಯೇಜರ್ 2 ಪ್ರತಿ ಸೆಕೆಂಡಿಗೆ 15 ಕಿಲೋಮೀಟರ್ ಅಂತೆ ಮಾಡುತ್ತಿವೆ. ಈ ಅನ್ಯಗ್ರಹ ಜೀವಿಗಳ ಇರುವಿಕೆ ಮತ್ತು ಹಾರುವ ತಟ್ಟೆಗಳ ಕುರಿತು ಆಗಾಗ ಪ್ರಪಂಚಾದ್ಯಂತ ದೊಡ್ಡ ಸದ್ದುಗಳು ಆಗುತ್ತಿರುತ್ತವೆ. ಉನ್ನತ ಹುದ್ದೆಯಲ್ಲಿರುವ ಮತ್ತು ಅತ್ಯಂತ ಜವಾಬ್ದಾರಿಯುಳ್ಳ ಪ್ರತ್ಯಕ್ಷದರ್ಶಿಗಳು ಪ್ರತಿವರ್ಷ ಹಾರುವ ತಟ್ಟೆಗಳ ಕುರಿತು ಅನೇಕ ದಾಖಲೆಗಳನ್ನು ಒದಗಿಸುತ್ತಿದ್ದಾರೆ. ಹಾಗೂ ಮತ್ತೊಂದು ರಹಸ್ಯ ಸಂಗತಿ ಏನಂದರೆ ಕೆಲವು ಗಗನ ಯಾತ್ರಿಗಳ ಪ್ರಕಾರ ಈಗಾಗಲೇ ಅನ್ಯಗ್ರಹ ಜೀವಿಗಳು ತಮ್ಮ ನೆಲೆಯನ್ನು ಭೂಮಿಯ ಮೇಲೆ ರಹಸ್ಯ ಸ್ಥಳದಲ್ಲಿ ಸ್ಥಾಪಿಸಿವೆ ಹಾಗೂ ಇಲ್ಲಿ ಅನೇಕ ಪ್ರಯೋಗಗಳನ್ನು ನಡೆಸುತ್ತಿವೆ ಎಂದು ಹೇಳುತ್ತಿದ್ದಾರೆ.

ಭೂಮಿಗೆ ಬಂದು ಹೋಗುವ ಅನ್ಯಗ್ರಹ ಜೀವಿಗಳು ಅತಿ ಉನ್ನತವಾದ ಪ್ರಜ್ಞೆಯನ್ನು ಹೊಂದಿದ್ದು ಹಾಗೂ ನಮಗಿಂತಲೂ ಹೆಚ್ಚಿನ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೊಂದಿದ ಕಾರಣಕ್ಕಾಗಿ ಅವು ಬಹುಶಃ ಮಾನವಕುಲದ ಜೊತೆ ಸಂವಾದ ನಡೆಸಲು ಇಷ್ಟಪಡದೆ ಇರಬಹುದು. ಅನ್ಯಗ್ರಹ ಜೀವಿಗಳ ಮತ್ತು ಮಾನವನ ನಡುವಿನ ಗೆಳೆತನದ ಪ್ರಸ್ತುತ ಸುದ್ದಿಗಳನ್ನು ಹಾಗೂ ಪ್ರಸ್ತುತ ಖಗೋಳಶಾಸ್ತ್ರದ ಸಂಶೋಧನೆಗಳನ್ನು ಸ್ವಲ್ಪ ಪಕ್ಕಕ್ಕಿಟ್ಟು ಅಥರ್ವಣ ವೇದದಲ್ಲಿ ಉಲ್ಲೇಖವಿರುವ ಕೆಲವು ಅಂಶಗಳನ್ನು ಇಲ್ಲಿ ವಿಶ್ಲೇಷಣೆ ಮಾಡೋಣ. ಅಥರ್ವಣ ವೇದದಲ್ಲಿ ಮತ್ತು ಭಗವತ್ ಪುರಾಣದಲ್ಲಿ 14 ಲೋಕಗಳ ಕುರಿತು ಉಲ್ಲೇಖವಿದೆ ಹಾಗೂ ಪುರಾಣ ಪುಣ್ಯ ಕಥೆಗಳಲ್ಲಿ ನಾವು ಈ 14 ಲೋಕಗಳ ಕುರಿತು ಕೇಳಿದ್ದೇವೆ. ಅವುಗಳು ಯಾವು ಎಂದರೆ
01 ಸತ್ಯಲೋಕ
02 ತಪಲೋಕ
03 ಜನಲೋಕ
04 ಮಹರ್ಲೋಕ
05 ಸ್ವರ್ಲೋಕ
06 ಭುವರ್ಲೋಕ
07 ಭೂಲೋಕ
08 ಅತಳಲೋಕ
09 ವಿತಳಲೋಕ
10 ಸುತಳಲೋಕ
11 ತಲಾತಳಲೋಕ
12 ಮಹಾತಳಲೋಕ
13 ರಸಾತಳಲೋಕ
14 ಪಾತಾಳಲೋಕ
ಈ 14 ಲೋಕಗಳಲ್ಲಿ ಬೇರೆಬೇರೆ ಪ್ರಜ್ಞೆಯನ್ನು ಹೊಂದಿದ ಜೀವಿಗಳಿವೆ ಎಂಬುದು ವೇದಗಳಲ್ಲಿ ಹಾಗೂ ಭಗವದ್ಗೀತೆಯಲ್ಲಿ ಉಲ್ಲೇಖವಿದೆ. ಆತ್ಮವು ಕರ್ಮ ಸಿದ್ಧಾಂತದ ಆಧಾರದ ಮೇಲೆ ಬೇರೆ ಬೇರೆ ಲೋಕಗಳಲ್ಲಿ ಜನ್ಮವನ್ನು ಪಡೆಯುತ್ತದೆ. ಆತ್ಮವು ಯಾವುದೇ ಲೋಕದಲ್ಲಿ ಜನ್ಮ ಪಡೆದರು ಕೂಡ ಕರ್ಮಕ್ಕೆ ಅನುಗುಣವಾಗಿ ವಿಕಸನಗೊಳ್ಳುತ್ತದೆ. ಭೂಲೋಕದಿಂದ ಮೇಲೆ ಇರುವ ಲೋಕಗಳಲ್ಲಿ ಉನ್ನತ ಪ್ರಜ್ಞೆಯನ್ನು ಹೊಂದಿದ ಜೀವಿಗಳು ಇರುತ್ತವೆ. ಹಾಗೂ ಈ ಲೋಕಗಳನ್ನು ಬ್ರಹ್ಮಾಂಡದ ಉನ್ನತ ಲೋಕಗಳನ್ನು ಪರಿಗಣಿಸಲಾಗುತ್ತದೆ. ಈ ಉನ್ನತ ಲೋಕಗಳಲ್ಲಿ ವಾಸಿಸುವ ಜೀವಿಗಳು ಅತ್ಯಂತ ಮುಂದುವರೆದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೊಂದಿದ್ದು ಇವು ಯಾವುದೇ ಸಮಯದಲ್ಲೂ ಬ್ರಹ್ಮಾಂಡದ ಯಾವುದೇ ಗ್ರಹಗಳಿಗೂ ಮನಸ್ಸಿನ ವೇಗದಲ್ಲಿ ಹೋಗುವ ಸಾಮರ್ಥ್ಯವನ್ನು ಹೊಂದಿವೆ. ಭೂಲೋಕದಿಂದ ಮೇಲೆ ಇರುವ ಈ ಲೋಕಗಳಲ್ಲಿ ಏಷ್ಟು ವಿಜ್ಞಾನ ಮತ್ತು ತಂತ್ರಜ್ಞಾನ ಇದೇನೋ ಅಷ್ಟು ಭೂಲೋಕದಲ್ಲಿ ಈ ಸದ್ಯಕ್ಕೆ ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ನಾವು ನಮ್ಮ ಸ್ಪೇಸ್ ವೆಹಿಕಲಗಳ ಮೂಲಕ ಈ ಉನ್ನತ ಲೋಕಗಳಿಗೆ ಹೋಗಲು ಸಾಧ್ಯವಿಲ್ಲ. ಭಗವದ್ ಪುರಾಣದಲ್ಲಿ ಉಲ್ಲೇಖವಿರುವ ಈ ಉನ್ನತ ಲೋಕಗಳಿಗೆ ನಮ್ಮ ಇವತ್ತಿನ ವಿಜ್ಞಾನಿಗಳು Type I, II, III, IV & V Civilization ಅಂತ ಇವತ್ತು ಹೇಳುತ್ತಿದ್ದಾರೆ!
ನಮ್ಮ ಪ್ರಾಚೀನ ಋಷಿಗಳು ಧ್ಯಾನದಲ್ಲಿ ಕುಳಿತುಕೊಂಡು ಎಲ್ಲವನ್ನೂ ಗ್ರಹಿಸಿ ಬಿಡಬಲ್ಲ ಉನ್ನತ ಪ್ರಜ್ಞೆಯನ್ನು ಹೊಂದಿದ್ದರು. ಭೂಲೋಕದಿಂದ ಮೇಲೆ ಇರುವ ಲೋಕಗಳಲ್ಲಿ ಹೇಗೆ ವಿಜ್ಞಾನ-ತಂತ್ರಜ್ಞಾನ ಇದೆಯೋ ಅದೇ ರೀತಿ ಭೂಲೋಕದಲ್ಲೂ ಒಂದು ಯುಗದಲ್ಲಿ ಇತ್ತು. ನಮ್ಮ ಪೂರ್ವಜರು ಅನ್ಯಗ್ರಹ ಜೀವಿಗಳ ಜೊತೆ ಗೆಳೆತನ ಹೊಂದಿದ್ದರು ಹಾಗೂ ಧ್ಯಾನದಲ್ಲೇ ಕುಳಿತುಕೊಂಡು ಉನ್ನತ ಲೋಕದಲ್ಲಿರುವ ಜೀವಿಗಳ ಜೊತೆ ಸಂವಾದ ನಡೆಸುತ್ತಿದ್ದರು. ರಾಮಾಯಣದಲ್ಲಿ ಇಂದ್ರಜಿತನು ಬಿಟ್ಟ ನಾಗ ಅಸ್ತ್ರದ ಪ್ರಭಾವಕ್ಕೆ ಒಳಗಾಗಿ ಪ್ರಜ್ಞೆ ಕಳೆದುಕೊಂಡ ರಾಮಲಕ್ಷ್ಮಣರನ್ನು ಬದುಕಿಸುವ ಸಲುವಾಗಿ ವೈಕುಂಠ ಲೋಕದಿಂದ ಗರುಡ ದೇವ ಭೂಲೋಕಕ್ಕೆ ಬಂದಿದ್ದ! Who is that Garuda deva!? ಗರುಡ ದೇವನು ವೈಕುಂಠ ಲೋಕದಿಂದ ಬಂದ ಅತ್ಯಂತ ಮುಂದುವರಿದ ವೈಕುಂಠ ಲೋಕದ ಜೀವಿ! ಹಾಗೂ ಇದೇ ರಾಮಾಯಣದಲ್ಲಿ ರಾವಣನು ರಾಮಲಕ್ಷ್ಮಣರ ವಿರುದ್ಧ ಯುದ್ಧ ಮಾಡಲೆಂದು ಐರಾವಣ ಮೈರಾವಣರನ್ನು ಪಾತಾಳ ಲಂಕೆಯಿಂದ ಕರೆಸಿಕೊಂಡಿದ್ದ. ಐರಾವಣ ಮೈರಾವನರೂ ಕೂಡ ಪಾತಾಳಲೋಕದ ರಾಕ್ಷಸ ಜೀವಿಗಳು.
ದುರದೃಷ್ಟಕರವಾಗಿ 97% ಮನುಕುಲದ ಇತಿಹಾಸ ಈ ಕಲಿಯುಗದಲ್ಲಿ ನಮಗೆ ಗೊತ್ತೇ ಇಲ್ಲ. ಇದರಿಂದಾಗಿ ಮುಂದುವರೆದ ನಾಗರೀಕತೆ ಅಂತ ನಮಗೆ ನಾವೇ ಕಲ್ಪನೆ ಮಾಡಿಕೊಂಡು ಪ್ರಾಪಂಚಿಕ ಸುಖಭೋಗಗಳಲ್ಲಿ ತೇಲಿ ಮುಳಗಿದ್ದೇವೆ. ಕಲಿಯುಗ ಮುಗಿದು ಸತ್ಯ ಯುಗ ಆರಂಭವಾದಾಗ ಮತ್ತೆ ಜ್ಞಾನ ಉದಯವಾಗುತ್ತದೆ ಹಾಗೂ ಪ್ರಜ್ಞೆ ಉನ್ನತ ಮಟ್ಟಕ್ಕೆ ಎರುತ್ತದೆ. ಈ ಕಲಿಯುಗದಲ್ಲಿ ಎಷ್ಟೇ ವಿಜ್ಞಾನ-ತಂತ್ರಜ್ಞಾನ ಬೆಳೆದರು ನಾವು ಅನಂತ ದೂರದಲ್ಲಿರುವ ಉನ್ನತ ಗ್ರಹಗಳಿಗೆ ಬೆಳಕಿನ ವೇಗದಿಂದ ಕೂಡಾ ಹೋಗಲು ಸಾಧ್ಯವೇ ಇಲ್ಲ. ಉನ್ನತ ಗ್ರಹಗಳಿಗೆ ಹೋಗಿ ಅಲ್ಲಿನ ಮುಂದುವರೆದ ಜೀವಿಗಳ ಜೊತೆ ಸಂಪರ್ಕ ಸಾಧಿಸಲು ಧ್ಯಾನದಲ್ಲಿ ಕುಳಿತ ಒಬ್ಬ ಯೋಗಿಗೆ ಮಾತ್ರ ಸಾಧ್ಯ. ಇಲ್ಲದಿದ್ದರೆ ನಮ್ಮ ವಿಜ್ಞಾನ-ತಂತ್ರಜ್ಞಾನ ಬೆಳೆಯುತ್ತಾ ಬೆಳೆಯುತ್ತಾ ಕಟ್ಟಕಡೆಗೆ ಮನೋವೇಗದಲ್ಲಿ ಚಲಿಸಬಲ್ಲ ಸ್ಪೇಸ್ ವೆಹಿಕಲ್ ಸಂಶೋಧನೆ ಆಗಬೇಕ ಆಗ ಮಾತ್ರ ಬ್ರಹ್ಮಾಂಡದ ಯಾವುದೇ ಮೂಲೆಗೂ ಕ್ಷಣಾರ್ಧದಲ್ಲಿ ತಲುಪಲು ಸಾಧ್ಯ. ನಮ್ಮ ವಿಜ್ಞಾನಿಗಳು ಇಂತಹ ಮನೋವೇಗದಲ್ಲಿ ಚಲಿಸುವ ಸ್ಪೇಸ್ ವೆಹಿಕಲ್ ಸಂಶೋಧನೆ ಮಾಡಿ ಮುಗಿಸುವಷ್ಟರಲ್ಲಿ ಕಲಿಯುಗ ಮುಗಿದು ಮತ್ತೆ ಸತ್ಯಯುಗ ಆರಂಭವಾಗಿರುತ್ತದೆ.
Article on Vastu👇
https://anveshana.in/landsurvay/
Article on Anti-gravity aircraft 👇