ಈಗಿನ ಕಾಲದಲ್ಲಿ ಮಾಂಸಾಹಾರಕ್ಕೆ ವಿಪರೀತ ಬೇಡಿಕೆ ಇದೆ. ಭಾನುವಾರ ಬಂದ್ರೆ ಸಾಕು ” ಮನೆಯಲ್ಲಿ ವೀಕ್ ಎಂಡ್ ಸ್ಪೆಷಲ್ ಏನು? ಚಿಕನ್ ಮಾಡುತ್ತಿದ್ದೀರಾ? ಅಥವಾ ಮಟನ್ ಮಾಡುತ್ತಿದ್ದೀರಾ”? ಎಂದು ಪರಸ್ಪರ ಮತನಡಿಕೊಳ್ಳುವ, ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ವಾಡಿಕೆ ಪ್ರಸ್ತುತವಾಗಿ ಸಾಮಾನ್ಯವಾಗಿ ಹೋಗಿದೆ. ಇನ್ನು ಮಾಂಸಾಹಾರಿ ಹೋಟೆಲುಗಳಿಗೆ ಎಂಟ್ರಿ ಕೊಟ್ಟು ನೋಡಿದರೆ ಮೂರು ಸಂಜೆ ಸಮಯದಲ್ಲೂ ಜನ ಕುಳಿತು ಮಾಂಸಾಹಾರಿ ಊಟ ಹಾಗೂ ಜೊತೆಗೆ ಡ್ರಿಂಕ್ಸ್ ಅನ್ನು ಒಟ್ಟೊಟ್ಟಿಗೆ ಮಾಡುತ್ತಾ ನಡುಮಧ್ಯೆ ಯಾವತ್ತೂ ಯಾರಿಗೂ ಹೇಳದ ಭಾವನೆಗಳನ್ನು, ಜೀವನದ ವೈಯಕ್ತಿಕ ವಿಚಾರಗಳನ್ನು, ರಹಸ್ಯಗಳನ್ನು, ಕಷ್ಟ-ಸುಖಗಳನ್ನು, ತಮಗೇ ಅರಿವು ಇಲ್ಲದ ಹಾಗೆ ಪರಸ್ಪರ ಹಂಚಿಕೊಳ್ಳುತ್ತಾ ಲೈಫ್ ಎಂಜಾಯ್ ಮಾಡಬೇಕು ಎನುವ ವಿಲಕ್ಷಣ ಮೂಡಿನಲ್ಲಿ ತೇಲಿ ಮುಳುಗುತ್ತಿರುತ್ತಾರೆ. ಕಂಪನಿ ಕೆಲಸದಲ್ಲಿ ಇತ್ತೀಚಿಗೆ ಒತ್ತಡ ಹೆಚ್ಚಾಗುತ್ತಿದೆ ಹಾಗೂ ಕೆಲಸದ ಒತ್ತಡದಿಂದ ಮನಸಿಗೆ ಸುಸ್ತಾಗುತ್ತದೆ. ಬೇಜಾರು ಅನಿಸುತ್ತದೆ. ಮನಸ್ಸು ಖಿನ್ನತೆಗೊಳಗಾಗಿ ಯಾವುದರಲ್ಲಿಯೂ ಆಸಕ್ತಿ ಇಲ್ಲದೆ ಇರುವ ಸ್ಥಿತಿಗೆ ಒಳಗಾಗುತ್ತದೆ. ಹೀಗಾಗಿ ಮಲ್ಟಿನ್ಯಾಷನಲ್ ಕಂಪನಿಯ ಅನೇಕ ಉದ್ಯೋಗಿಗಳು ಮನಸನ್ನು ರಿಫ್ರೆಶ್ ಮಾಡಿಕೊಳ್ಳಬೇಕು ಎಂಬ ಮನೋಭಾವದಿಂದ ಹಾಗೂ ಮಾನಸಿಕ ಉತ್ಸಾಹವನ್ನು ದ್ವಿಗುಣ ಮಾಡಿಕೊಳ್ಳಬೇಕು ಎನ್ನುವ ಕಲ್ಪಿನೆಯಿಂದ ದೊಡ್ಡ ದೊಡ್ಡ ನಾನ್ ವೆಜ್ ರೆಸ್ಟೋರೆಂಟಗಳಿಗೆ ಹೋಗಿ ಮಾಂಸಾಹಾರಿ ಊಟ ಹಾಗೂ ಡ್ರಿಂಕ್ಸ್ ಮಾಡಿ ಪಾರ್ಟಿ ಮುಗಿಸಿಕೊಂಡು ಲೇಟ್ ನೈಟ್ ಮನೆಗೆ ತಲುಪಿ ಮಲಗುತ್ತಾರೆ. ಮರುದಿನ ಕೆಲಸಕ್ಕೆ ಲೀವ್? ಖಂಡಿತವಾಗಿಯೂ ಗೊತ್ತಿಲ್ಲ. ಆದರೆ ಮರುದಿನ ಎದ್ದೇಳುವಷ್ಟರಲ್ಲಿ ಸೂರ್ಯ ನಡು ನೆತ್ತೆಯ ಮೇಲೆ ಬಂದು ಬಿಟ್ಟಿರುತ್ತಾನೆ. ನಿದ್ರೆಯಿಂದ ಏಳುವಾಗ ಮೈ ಭಾರ ಅನಿಸಿದ ಹಾಗೆ ಫೀಲ್ ಆಗುತ್ತೆ. ಕಷ್ಟ ಪಟ್ಟು ನಿದ್ರೆಯಿಂದ ಎದ್ದ ಮೇಲೆ ಮತ್ತೆ ಇನ್ನಷ್ಟು ಮತ್ತಷ್ಟು ಮಾನಸಿಕ ಸುಸ್ತು, ತೂಕಡಿಕೆ, ನಿರುತ್ಸಾಹ, ಲಜಿನೆಸ್, ಮನಸಿಗೆ ಬೇಡವಾದ ಆಲೋಚನೆಗಳು, ಚಿಂತನೆಗಳು ಮನಸನ್ನು ಬಿಟ್ಟು ಬಿಡದೆ ಕಾಡುತ್ತವೆ. ಮುಖದಲ್ಲಿ ಯಾವುದೇ ತೇಜಸ್ಸು ಇರಲಾರದು. ಮನಸ್ಸಿನ ಮೇಲಿರುವ ಹತೋಟಿಯು ತಪ್ಪಿ ಹೋಗಿರುತ್ತದೆ ಹಾಗೂ ಹಿಂದಿನ ದಿನ ಪಾರ್ಟಿಯಲ್ಲಿ ನಡೆದ ಎಲ್ಲ ವಿದ್ಯಮಾನಗಳನ್ನು ಮತ್ತೆ ಮತ್ತೆ ಮನಸಲ್ಲಿ ಮೆಲಕು ಹಾಕುತ್ತಾ ಏನೋ ಒಂದು ವಿಲಕ್ಷಣವಾದ ಸಂತೋಷವನ್ನು ಮಾಡಿಕೊಳ್ಳುವ ಮಾನಸಿಕ ಸ್ಥಿತಿಗೆ ಮನಸ್ಸು ತಲುಪಿರುತ್ತದೆ. ಇನ್ನು ದೈಹಿಕವಾಗಿ ಮೈ ಭಾರ, ಗ್ಯಾಸ್ಟ್ರಿಕ್, ಒಮ್ಮಿಟಿಂಗ್, ಲೂಸ್ ಮೋಶನ್ ಹೀಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಏಕೆಂದ್ರೆ ತಿಂದ ಮಾಂಸಾಹಾರವು ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ. ಏಕೆ ಮಾಂಸಾಹಾರವು ಸುಲಭವಾಗಿ ಜೀರ್ಣವಾಗುವುದಿಲ್ಲ ಎಂಬುದನ್ನು ವಿಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ತಿಳಿದುಬರುವುದೇನೆಂದರೆ ಮಾನವನ ದೇಹದ ರಚನೆಯು ಮಾಂಸಾಹಾರವನ್ನು ಅತ್ಯಂತ ಸುಲಭವಾಗಿ ಜೀರ್ಣ ಮಾಡಿಕೊಳ್ಳಬಲ್ಲಂತಹ ವಿನ್ಯಾಸವನ್ನು ಹೊಂದಿಲ್ಲ ಎಂಬುದು ವೈಜ್ಞಾನಿಕವಾಗಿ ಗೊತ್ತಾಗುತ್ತದೆ. ಮಾಂಸಾಹಾರವು ದೇಹದಲ್ಲಿ ಅಷ್ಟು ಸುಲಭವಾಗಿ ಜೀರ್ಣವಾಗದೇ ಅನೇಕ ದಿನಗಳವರೆಗೆ ಕರುಳಿನಲ್ಲಿ ಉಳಿದುಕೊಂಡು ಬಿಡುತ್ತದೆ. ಮಾಂಸಾಹಾರವನ್ನು ಜೀರ್ಣ ಮಾಡಿಕೊಳ್ಳಬಲ್ಲ ವಿನ್ಯಾಸವು ಮಾನವನ ದೇಹದಲ್ಲಿ ಇಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾದರೂ ಕೂಡ ಮಾಂಸಾಹಾರ ಊಟ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾವುದೇ ಜಾತಿ, ಧರ್ಮ, ವರ್ಗ, ವರ್ಣ, ಎನ್ನುವ ತಾರತಮ್ಯವಿಲ್ಲದೆ ಹೆಚ್ಚಿನ ಜನರು ಮಾಂಸಾಹಾರ ಸೇವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಹಾಗೂ ಇದೆ ರೀತಿ ಕಟ್ಟಾ ಸಸ್ಯಾಹಾರಿಗಳು ಕೂಡ ಎಲ್ಲ ಜಾತಿ, ಧರ್ಮ, ವರ್ಗಗಳಲ್ಲಿ ಕಾಣಸಿಗುತ್ತಾರೆ. ಸಸ್ಯಾಹಾರ ಸೇವನೆಯಿಂದ ಆದರ್ಶವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಹಾಗೂ ಸಸ್ಯಾಹಾರವು ಮಾಂಸಾಹಾರಕ್ಕಿಂತ ಅತ್ಯಂತ ಶ್ರೇಷ್ಠವಾದದ್ದು ಎಂದು ವೈಜ್ಞಾನಿಕವಾಗಿ ಸಾಬೀತಾದ ಕಾರಣಕ್ಕಾಗಿ ಯುರೋಪ ಹಾಗೂ ಅಮೇರಿಕಾ ಖಂಡದಲ್ಲಿರುವ ಹಾಗೂ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಇತ್ತೀಚಿಗೆ ಸಸ್ಯಾಹಾರ ಸೇವನೆಯ ಕುರಿತು ತಕ್ಕಮಟ್ಟಿಗೆ ಜಾಗೃತಿ ಮೂಡುತ್ತಿದೆ. ಆದರ್ಶವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಕೆಲವು ರಾಷ್ಟ್ರಗಳಲ್ಲಿ ಅನೇಕ ಮಾಂಸಹಾರಿಗಳು ಈಗಾಗಲೇ ಸಸ್ಯಾಹಾರಿಗಳಾಗಿ ಪರಿವರ್ತನೆಯಾಗಿದ್ದಾರೆ. ಆದರೆ ಮಾಂಸಹಾರಿಗಳಿಂದ ಸಸ್ಯಾಹಾರಿಗಳಾಗಿ ಪರಿವರ್ತನೆ ಆಗುವ ಶೇಕಡಾವಾರು ತುಂಬಾ ಕಡಿಮೆ ಇದೆ. ಇತ್ತೀಚಿನ ಒಂದು ಜನಗಣತಿಯ ಪ್ರಕಾರ ಭಾರತದಲ್ಲಿ ಸುಮಾರು 30% ಅಷ್ಟು ಕಟ್ಟಾ ಸಸ್ಯಾಹಾರಿಗಳು ಹಾಗೂ ಸುಮಾರು 70% ಅಷ್ಟು ಮಾಂಸಾಹಾರ ಮತ್ತು ಸಸ್ಯಾಹಾರ ಎರಡೂ ಪದ್ಧತಿಯನ್ನು ಅಳವಡಿಸಿಕೊಂಡಿರುವ ಸರ್ವಭಕ್ಷಕರು ಇದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೂ ಸಸ್ಯಾಹಾರಿಗಳಿಂದ ಮಾಂಸಾಹಾರಿಗಳಾಗಿ ಪರಿವರ್ತನೆಯಾಗುವ ಶೇಕಡಾವಾರು ಎಸ್ಟೇ ಹೆಚ್ಚಾದರೂ ಸಸ್ಯಾಹಾರಿಗಳ ಅಸ್ತಿತ್ವ ಪ್ರಪಂಚದಲ್ಲಿ ಅನಾದಿಕಾಲದಿಂದ ಇದೆ. ಮುಂದೆಯೂ ಇರುತ್ತದೆ. ಸಸ್ಯಹಾರ VS ಮಾಂಸಹಾರ ಪದ್ಧತಿ – Veg vs nonveg foods ನಡುವಿನ ವ್ಯತ್ಯಾಸವನ್ನು ತಿಳಿಯುದು ತುಂಬಾ ಮಹತ್ವದ್ದು.

ಸಸ್ಯಾಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೊ ಅಥವಾ ಮಾಂಸಾಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೊ ಅಥವಾ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನು ಅಳವಡಿಸಿಕೊಳ್ಳಬೇಕೊ ಅನ್ನುವುದು ಅವರವರ ವೈಯಕ್ತಿಕ ಅಭಿಪ್ರಾಯಕ್ಕೆ ಬಿಟ್ಟದ್ದು. ಆದರೆ ಮಾಂಸಾಹಾರ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸದ್ಯವೇ ಇಲ್ಲ. ಮಾಂಸಾಹಾರ ಪದ್ಧತಿಯನ್ನು ಅಳವಡಿಸಿಕೊಂಡಿರುವ ಮನುಷ್ಯರು ಏಕೆ ಸಸ್ಯಾಹಾರಿ ಮನುಷ್ಯರಷ್ಟು ಆರೋಗ್ಯವಂತರಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮಾಂಸಾಹಾರಿ ಮತ್ತು ಸಸ್ಯಾಹಾರಿ ಪ್ರಾಣಿಗಳ ದೈಹಿಕ ರಚನೆಯನ್ನೊಮ್ಮೆ ಇಲ್ಲಿ ವಿಶ್ಲೇಷಣೆ ಮಾಡಿ ಅರ್ಥಮಾಡಿಕೊಳ್ಳೋಣ.
- ಮಾಂಸಾಹಾರಿ ಪ್ರಾಣಿಗಳಂತೆ ಹರಿತವಾದ ಹಲ್ಲುಗಳು ಮನುಷ್ಯನಿಗಿಲ್ಲ. ಇತರೆ ಸಸ್ಯಾಹಾರಿ ಪ್ರಾಣಿಗಳಂತೆ ಚಪ್ಪಟೆಯಾದ ಹಲ್ಲುಗಳು ಮನುಷ್ಯನಿಗೆ ಇವೆ.
- ಮಾಂಸಾಹಾರಿ ಪ್ರಾಣಿಗಳು ನೀರನ್ನು ಕುಡಿಯುವ ಸಮಯದಲ್ಲಿ ನೀರನ್ನು ನಾಲಿಗೆಯಿಂದ ನೆಕ್ಕಿ ನೀರು ಕುಡಿದರೆ ಮನುಷ್ಯ ಹಾಗೂ ಇತರ ಎಲ್ಲ ಸಸ್ಯಾಹಾರಿ ಪ್ರಾಣಿಗಳು ನಾಲಿಗೆಯಿಂದ ಹಿರಿ ನೀರು ಕುಡಿಯುತ್ತವೆ.
- ಮಾನವನನ್ನು ಒಳಗೊಂಡತ್ತೆ ಜಗತ್ತಿನ ಎಲ್ಲ ಸಸ್ಯಾಹಾರಿ ಪ್ರಾಣಿಗಳು ಹುಟ್ಟಿದ ತಕ್ಷಣ ಕಣ್ಣನ್ನು ತೆರೆದು ಪ್ರಪಂಚವನ್ನು ನೀಡಬಲ್ಲವು. ಆದರೆ ಮಾಂಸಾಹಾರಿ ಪ್ರಾಣಿಗಳು ಹುಟ್ಟಿದ ನಂತರ ಕೆಲವು ದಿನಗಳು ಕಳೆದ ಮೇಲೆ ಕಣ್ಣು ಬಿಡುತ್ತವೆ.
- ಸಸ್ಯಾಹಾರಿ ಪ್ರಾಣಿಗಳ ಉಗುರುಗಳು ಬಹುತರವಾಗಿ ಚಪ್ಪಟೆಯಾಗಿರುತ್ತವೆ ಹಾಗೂ ಮಾಂಸಾಹಾರಿ ಪ್ರಾಣಿಗಳ ಗುರುಗಳು ಉದ್ದವಾಗಿಯೂ ಮತ್ತು ಹದನವಾಗಿಯೂ ಇರುತ್ತವೆ. ಮನುಷ್ಯನಿಗೆ ಉದ್ದವಾದ ಮತ್ತು ಹದನವಾದ ಉಗರುಗಳು ಇರದೆ ಇತರ ಎಲ್ಲ ಸಸ್ಯಾಹಾರಿ ಪ್ರಾಣಿಗಳ ಹಾಗೆ ಚಪ್ಪಟೆಯಾದ ಉಗುರುಗಳು ಇವೆ.
- ಮಾಂಸಾಹಾರಿ ಮತ್ತು ಸಸ್ಯಾಹಾರಿ ಪ್ರಾಣಿಗಳ ದೇಹದಲ್ಲಿರುವ ಪಚನ ವ್ಯವಸ್ಥೆಯು ಅಜಗಜಾಂತರ ವ್ಯತ್ಯಾಸವಿದೆ. ಮಾಂಸದಲ್ಲಿ ಹೆಚ್ಚು ವಿಷಕಾರಿ ಅಂಶಗಳು ಇರುತ್ತವೆ ಹೀಗಾಗಿ ವಿಷಕಾರಿ ಅಂಶಗಳು ಬೇಗನೆ ಮಲ ಮೂತ್ರ ಆಗಿ ಹೊರ ಹೋಗಬೇಕೆಂಬ ಕಾರಣಕ್ಕಾಗಿ ಮಾಂಸಾಹಾರಿ ಪ್ರಾಣಿಗಳ ಹೊಟ್ಟೆಯಲ್ಲಿರುವ ಆಹಾರದ ಕೊಳವೆಯ ಚಿಕ್ಕದಾಗಿರುತ್ತದೆ. ಇನ್ನು ಮನುಷ್ಯನನ್ನು ಒಳಗೊಂಡಂತೆ ಇತರ ಎಲ್ಲ ಸಸ್ಯಾಹಾರಿ ಪ್ರಾಣಿಗಳ ದೇಹದಲ್ಲಿರುವ ಆಹಾರದ ಕೊಳವೆಯು ಉದ್ದವಾಗಿರುತ್ತದೆ. (ಸಸ್ಯಹಾರ VS ಮಾಂಸಹಾರ ಪದ್ಧತಿ – Veg vs nonveg foods )
ಇಂತಹ ಅಂಶಗಳ ಆಧಾರದ ಮೇಲೆ ಮನುಷ್ಯ ಮೂಲತಹ ಸಸ್ಯಾಹಾರಿ ಎಂದು ಪರಿಗಣಿಸಬೇಕಾಗುತ್ತದೆ ಹಾಗೂ ವೈಜ್ಞಾನಿಕವಾಗಿಯೂ ಕೂಡ ಮನುಷ್ಯ ಮೂಲತಹ ಸಸ್ಯಾಹಾರಿ ಜೀವಿ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದ ಮಾಂಸಾಹಾರವು ಮನುಷ್ಯನ ಆಹಾರ ಅಲ್ಲವೇ ಅಲ್ಲ. ಆದರೆ ಮನುಷ್ಯ ಮಾಂಸಾಹಾರ ತಿನ್ನುವುದನ್ನು ವಾಡಿಕೆ ಮಾಡಿಕೊಂಡಿದ್ದಾನೆ. ಮಾಂಸಾಹಾರ ಸೇವನೆ ಮಾಡಬೇಕೊ ಅಥವಾ ಸಸ್ಯಾಹಾರ ಸೇವನೆ ಮಾಡಬೇಕೊ ಅನ್ನುವುದು ಅವರವರ ವೈಯಕ್ತಿಕ ವಿಚಾರ. ಆದರೆ ಮಾಂಸಾಹಾರ ತಿನ್ನುವುದರಿಂದ ಆರೋಗ್ಯದ ಮೇಲೆ ಬಹಳಷ್ಟು ಏರುಪೇರುಗಳು ಆಗುತ್ತವೆ. ಮಾಂಸಾಹಾರ ಸೇವನೆಯಿಂದ ದೇಹದಲ್ಲಿ ಅಧಿಕ ಕೊಬ್ಬಿನ ಅಂಶ ಸಂಗ್ರಹವಾಗುತ್ತದೆ ಹಾಗೂ ಇದರಿಂದ ಹೃದಯಾಘಾತವಾಗಿ ನಿಂತಲ್ಲೇ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದ. ಚಿಕ್ಕ ವಯಸ್ಸಿನಲ್ಲಿ ಬಿಪಿ, ಶುಗರ್ದಂತಹ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ರಕ್ತದೊತ್ತಡದಲ್ಲಿ ಏರುಪೇರಾಗುತ್ತದೆ ಹಾಗೂ ಅನಿಯಂತ್ರಿತ ಭೌತಿಕ ದ್ರವ್ಯರಾಶಿ ಸೂಚಿ (body mass index) ಉಂಟಾಗುತ್ತದೆ. ಇದೇ ಕಾರಣಕ್ಕೆ ವೈದ್ಯರು ದೇಹವನ್ನು ತೆಳ್ಳಗಾಗಿಸಲು ಮತ್ತು ದೈಹಿಕ ಆರೋಗ್ಯವನ್ನು ನಿಯಂತ್ರಿಸಲು ಸಸ್ಯಾಹಾರವನ್ನು ಸೂಚಿಸುತ್ತಾರೆ. ಆದರೆ ಅನೇಕರು ಮಾಂಸಾಹಾರವೇ ಶ್ರೇಷ್ಠವಾದದ್ದು ಹಾಗೂ ಸಸ್ಯಾಹಾರದಲ್ಲಿ ಏನೂ ಇಲ್ಲ. ದೇಹವನ್ನು ದಷ್ಟಪುಷ್ಟವಾಗಿ ಬೇಳಿಸಬೇಕು ಅಂದ್ರೆ ಹಾಗೂ ದೈಹಿಕವಾಗಿ ಕಷ್ಟಕರವಾಗಿರುವ ಕೆಲಸಗಳನ್ನು ಮಾಡಲು ಮಾಂಸಾಹಾರ ತಿನ್ನಬೇಕಾಗುತ್ತದೆ ಎನ್ನುವ ತಪ್ಪು ಮನೋಭಾವ ಉಳ್ಳವರಾಗಿದ್ದಾರೆ. ಒಂದು ಸತಿ ಆಟೋಮೊಬೈಲ್ ಕಂಪನಿಯ ಉದ್ಯೋಗಿ ಒಬ್ಬರು ಚಿಕನ್ ಮತ್ತು ಮಟನ್ ನಿಯಮಿತವಾಗಿ ತಿಂದ್ರೆ ಮಾತ್ರ ಆಟೊಮೊಬೈಲ್ ಕಂಪನಿಯಲ್ಲಿ ಕನ್ವರ್ ಮೇಲೆ ನಿಂತು ನಿಮಿಷಕ್ಕೆ ಒಂದರಂತೆ ನಾಲ್ಕೈದು ನೂರು ಕಾರ್ಗಳನ್ನು ಪ್ರತಿದಿನ ಜೋಡಿಸಲು ಶಕ್ತಿ ಸಾಮರ್ಥ್ಯ ಬರುತ್ತದೆ ಎಂದು ತನ್ನ ಸಹ ಉದ್ಯೋಗಿ ಜೊತೆಗೆ ಮಾತನಾಡಿಕೊಳ್ಳುತ್ತಿದ್ದರು. ಪ್ರಕೃತಿ ನಿಯಮದ ಪ್ರಕಾರ ದೈಹಿಕವಾಗಿ ಕಷ್ಟ ಇರುವ ಕೆಲಸಗಳನ್ನು ಮಾಡಲು ಮಾಂಸಾಹಾರಿ ಪ್ರಾಣಿಗಳಿಂದ ಸಾಧ್ಯವಿಲ್ಲ. ನಾಯಿ, ಕರಡಿ, ತೋಳ, ನರಿ, ಹುಲಿ, ಚರತೆ ಮುಂತಾದ ಯಾವುದೇ ಮಾಂಸಾಹಾರಿ ಪ್ರಾಣಿಗಳು ದೈಹಿಕವಾದ ಕೆಲಸವನ್ನು ಮಾಡಲಾರವು. ಆದರೆ ಕೇವಲ ಸಸ್ಯಾಹಾರಿ ಪ್ರಾಣಿಗಳಾದ ಹಸು, ಎಮ್ಮೆ, ಎತ್ತು, ಕುದುರೆ, ಕತ್ತೆ, ಒಂಟೆ, ಮಂಗ ಹಾಗೂ ಆನೆಯಿಂದ ದೈಹಿಕವಾಗಿ ಕಷ್ಟ ಇರುವ ಕೆಲಸಗಳನ್ನು ಮಾಡಿಸಲು ಸಾಧ್ಯವಾಗುತ್ತದೆ. ಶ್ರೀಲಂಕಾ, ಇಂಡೋನೇಷಿಯಾ ಹಾಗೂ ತೆಂಗಿನ ಮರಗಳನ್ನು ಹೇರಳವಾಗಿ ಬೆಳೆಯುವ ದೇಶಗಳಲ್ಲಿ ಮಂಗಗಳಿಗೆ ತರಬೇತಿ ನೀಡಿ ತೆಂಗಿನಕಾಯಿಗಳನ್ನು ಮರದಿಂದ ಕೆಳಗಿಳಿಸಲು ಮಂಗಗಳನ್ನು ಉಪಯೋಗಿಸುತ್ತಾರೆ. ಇಂತಹ ಪ್ರಕೃತಿ ನಿಯಮವು ಮೂಲತಹ ಸಸ್ಯಾಹಾರಿ ಆಗಿರುವ ಮನುಷ್ಯನಿಗೂ ಕೂಡ ಅನ್ವಯವಾಗುತ್ತದೆ. ಮೂಲತಹ ಸಸ್ಯಾಹಾರಿ ಆಗಿರುವ ಮನುಷ್ಯನು ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ನಿಯಮಿತವಾಗಿ ಮಾಂಸಾಹಾರವನ್ನು ಸೇವಿಸಿ ದೈಹಿಕವಾಗಿ ಕಷ್ಟವಿರುವ ಕೆಲಸಗಳನ್ನು ಮಾಡಲು ವಿಪರೀತವಾಗಿ ಬಳಲಬೇಕಾಗುತ್ತದೆ ಹಾಗೂ ನಾವು ತಿನ್ನುವ ಆಹಾರ ಕೇವಲ ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿಯೂ ಪ್ರಭಾವ ಬೀರುತ್ತದೆ. ಮಾಂಸಾಹಾರ ಸೇವನೆಯಿಂದ ಮನಸ್ಸು ಹೆಚ್ಚು ಒತ್ತಡಕ್ಕೆ, ಖಿನ್ನತೆಗೆ, ಲೋಭಕ್ಕೆ, ಮೋಹಕ್ಕೆ, ಮತ್ಸರಕ್ಕೆ, ಕೋಪೋದ್ರೇಕಕ್ಕೆ, ಹಟಕ್ಕೆ, ಚಂಚಲತೆಗೆ ಹಾಗೂ ಅನಿಯಂತ್ರಿತ ಕಾಮಕ್ಕೆ ಒಳಗಾಗುತ್ತದೆ. ಹೀಗಾಗಿ ಮಾಂಸಾಹಾರವನ್ನು ಸೇವಿಸುವದರಿಂದ ಮನಸ್ಸು ಪ್ರಕ್ಷುಬ್ಧಗೊಂಡು ಏಕಾಗ್ರತೆಯನ್ನು ಕಳೆದುಕೊಳ್ಳುತ್ತದೆ ಜೊತೆಗೆ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಉದ್ಭವವಾಗುತ್ತವೆ. ಹೀಗೆ ಉದ್ಭವವಾದ ಋಣಾತ್ಮಕ ಆಲೋಚನೆಗಳು ಕ್ರಿಯೆಯಾಗಿ ಪರಿವರ್ತನೆ ಹೊಂದುತ್ತವೆ. (Thoughts become action) ಇಂತಹ ಹಲವಾರು ಕಾರಣಗಳಿಂದ ಮಾಂಸಾಹಾರ ಸೇವನೆ ಮಾಡಿ ದೈಹಿಕವಾದ ಕೆಲಸವನ್ನಾಗಲಿ ಅಥವಾ ಮಾನಸಿಕವಾದ ಕೆಲಸವನ್ನಾಗಲಿ ಕಾರ್ಯದಕ್ಷತೆಯಿಂದ ಮಾಡಲು ಕಷ್ಟವಾಗುತ್ತದೆ.
ದುರಾದೃಷ್ಟಕರವಾಗಿ ಅನೇಕ ತಪ್ಪು ಮನೋಭಾವಗಳಿಂದ ಮಾಂಸಾಹಾರದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಹಾಗೂ ಅದೇ ರೀತಿ ವಿಪರೀತ ಮಾಂಸಾಹಾರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಕೂಡಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿವೆ. ಅನಂತವಾದ ಮನೋಚೈತನ್ಯ ಹಾಗೂ ದೇಹದ ನರಮಂಡಲವನ್ನು ವಜ್ರದಂತೆ ಮಾಡಿ ದೀರ್ಘಾಯುಷ್ಯವನ್ನು ಪ್ರಾಪ್ತಿ ಮಾಡಬಲ್ಲ ಅನೇಕ ಸಸ್ಯಾಹಾರಗಳ ಅರಿವು ಇವತ್ತು ಇಲ್ಲದಾಗಿರುವುದು ಒಂದು ದುರಾದೃಷ್ಟಕರ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಆದರೆ ಅದೃಷ್ಟವಶಾತ್ ರಾಗಿ, ಬಿಳಿಜೋಳ, ಮೆಕ್ಕೆಜೋಳ, ಸಜ್ಜೆ, ಹಾರಕ, ನವಣಕ್ಕಿ, ಸವಿ ಅಕ್ಕಿ, ಕೊರಲೆ, ಬರಗು, ಆಳ್ವಿ, ಊದಲು ಮುಂತಾದ ಕೆಲವೇ ಕೆಲವು ಆಹಾರ ಧಾನ್ಯಗಳ ಅರಿವು ತಕ್ಕ ಮಟ್ಟಿಗೆ ಪ್ರಸ್ತುತವಾಗಿ ಜಾಗೃತವಾಗುತ್ತಿದೆ. ಈ ಆಹಾರ ಧಾನ್ಯಗಳ ಸೇವನೆಯಿಂದ ಶತಾಯುಷ್ಯ ಪ್ರಾಪ್ತಿಯಾಗುತ್ತದೆ ಹಾಗೂ ಜೀವ ಇರುವ ಕಟ್ಟ ಕಡೆಯ ತನಕ ದೇಹವು ವಜ್ರದಂತಿರುತ್ತದೆ. ಇಂತಹ ಆಹಾರ ಧಾನ್ಯಗಳ ಸೇವನೆಯಿಂದ ಅನಾರೋಗ್ಯ ಹತ್ತಿರಕ್ಕೂ ಸುಳಿಯಲಾರದು ಹಾಗೂ ಆಸ್ಪತ್ರೆಗೆ ಹೋಗುವ ಸಂದರ್ಭ ಜೀವಮಾನದಲ್ಲೇ ಒದಗಿ ಬರಲಾರದು. ಪ್ರಸ್ತುತವಾಗಿ ಉಪಯೋಗಿಸಲ್ಪಡುವ ಈ ಹತ್ತನ್ನೆರಡು ಆಹಾರ ಧಾನ್ಯಗಳನ್ನು ಬಿಟ್ಟರೆ ಪ್ರಾಚೀನ ಭಾರತದ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಅನೇಕ ಬೇರೆ ಬೇರೆ ಆಹಾರ ಧಾನ್ಯಗಳ ಹೆಸರುಗಳು ಇವತ್ತು ನಮಗೆ ಗೊತ್ತೇ ಇಲ್ಲದಾಗಿದೆ ಹಾಗೂ ಅನೇಕ ಆಹಾರ ಧಾನ್ಯಗಳ ಬೆಳೆಗಳು ಇವತ್ತು ಸರ್ವನಾಶವಾಗಿ ಹೋಗಿವೆ. ರಾಮಾಯಣ ಮತ್ತು ಮಹಾಭಾರತದ ಕಾಲಘಟ್ಟದಲ್ಲಿ ಉತ್ತರಾಣಿ ಗಿಡದ ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿ ಊಟ ಮಾಡುತ್ತಿದ್ದರು ಎನ್ನಲಾಗುತ್ತದೆ. ಒಮ್ಮೆ ಉತ್ತರಾಣಿ ಅಕ್ಕಿಯ ಅನ್ನವನ್ನು ಊಟ ಮಾಡಿದರೆ ಹದಿನೈದು-ಇಪ್ಪತ್ತು ದಿನಗಳಿಗೆ ಬೇಕಾಗುವಷ್ಟು ಜೈವಿಕ ಶಕ್ತಿ ಸಾಮರ್ಥ್ಯವನ್ನು ಕೊಡುತ್ತದೆ. ಒಂದು ಸತಿ ಹೊಟ್ಟೆ ತುಂಬಾ ಉತ್ತಾರಣಿ ಅಕ್ಕಿಯ ಅನ್ನವನ್ನು ಊಟ ಮಾಡಿದರೆ ಹದಿನೈದು-ಇಪ್ಪತ್ತು ದಿನಗಳ ಕಾಲ ಅನ್ನ ಆಹಾರದ ಅವಶ್ಯಕತೆನೇ ಬೇಕಾಗುತ್ತಿರಲಿಲ್ಲ. ಇಂತಹ ಅಸಾಧಾರಣ ಪ್ರಮಾಣದ ಜೈವಿಕ ಶಕ್ತಿಯನ್ನು ಉತ್ತರಾಣಿ ಅಕ್ಕಿಯ ಅನ್ನವು ದೇಹಕ್ಕೆ ಕೊಡುವುದರಿಂದ ಪ್ರಾಚೀನ ಭಾರತದಲ್ಲಿ ಕೆಲವು ಸೈನಿಕರು ಯುದ್ಧಕ್ಕೆ ಹೊರಡುವುದಕ್ಕಿಂತ ಮೊದಲು ಇದನ್ನು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದರು. ಇದರಿಂದಾಗಿಯೇ ಆ ಸೈನಿಕರು ಕೆಲವು ದಿನಗಳ ಕಾಲ ಅನ್ನ ಆಹಾರವಿಲ್ಲದೆ ಯುದ್ಧಭೂಮಿಯಲ್ಲಿ ಹೋರಾಟ ಮಾಡುತ್ತಿದ್ದರು. ಇದೇ ಉತ್ತರಾಣಿ ಅಕ್ಕಿಯ ಅನ್ನವನ್ನು ವಾನರ ರಾಜ ಬಾಲಿ ಊಟ ಮಾಡುತ್ತಿದ್ದನು ಎಂದು ಹಿಂದಿನ ಪೀಳಿಗೆಯ ಹಿರಿಯರು ಹೇಳುತ್ತಿದ್ದರು.
ಇನ್ನು ದನ ಕರುಗಳು ಮೇಯುವ ಹುಲ್ಲಿನಲ್ಲಿ ಸೂಕ್ಷ್ಮವಾದ ಬೀಜಗಳು ಬೆಳೆಯುತ್ತವೆ. ಈ ಹುಲ್ಲುನಲ್ಲಿರುವ ಬೀಜಗಳನ್ನು ಸೇಖರಿಕೊಂಡು ಹಿಟ್ಟು ಮಾಡಿ ಅದರಿಂದ ರೊಟ್ಟಿ ಬೇಯಿಸಿಕೊಂಡು ನಮ್ಮ ಪೂರ್ವಜರು ತಿನ್ನುತ್ತಿದ್ದರು. ಹುಲ್ಲು ಬೀಜದ ಹಿಟ್ಟಿನಿಂದ ಬೇಯಿಸಿದ ರೊಟ್ಟಿಯಲ್ಲೂ ಕೂಡ ವಿಶಿಷ್ಟ ಶಕ್ತಿ ಸಾಮರ್ಥ್ಯಗಳು ಇವೆ. ರಜಪೂತ ರಾಜ ಮಹಾರಾಣಾ ಪ್ರತಾಪ ಸಿಂಹನು ಶತ್ರು ಸೈನ್ಯದಿಂದ ತಪ್ಪಿಸಿಕೊಂಡು ದಟ್ಟವಾದ ಕಾಡು ಸೇರಿಕೊಂಡು ದಿನಗಳನ್ನು ಕಳೆಯುತ್ತಿರುವಾಗ ಆತ ಇದೆ ಹುಲ್ಲು ಬೀಜಗಳನ್ನು ಸೇಕರಿಸಿಕೊಂಡು ಹಿಟ್ಟು ಮಾಡಿ ರೊಟ್ಟಿ ಬೇಯಿಸಿಕೊಂಡು ತಿನ್ನುತ್ತಿದ್ದ. ಇಂತಹ ಹಲವಾರು ಬೇರೆ ಬೇರೆ ರೀತಿಯ ಆಹಾರ ಧಾನ್ಯಗಳ ಸೇವನೆಯಿಂದಲೇ ನಮ್ಮ ಪೂರ್ವಜರು ಆದರ್ಶವಾದ ಆರೋಗ್ಯ, ವಜ್ರದಂತಹ ದೇಹ ಹಾಗೂ ದೀರ್ಘಾಯುಷ್ಯವನ್ನು ಹೊಂದಿದ್ದರು. ಆದರೆ ದುರದೃಷ್ಟಕರವಾಗಿ ಇಂತಹ ಅನೇಕ ಆಹಾರ ಪದಾರ್ಥಗಳ ಅರಿವು ಇವತ್ತಿನ ಪೀಳಿಗೆಗೆ ಗೊತ್ತೇ ಇಲ್ಲ. ಇವತ್ತಿನ ಪೀಳಿಗೆ ಕೇವಲ ಮಾಂಸಹಾರದಿಂದ ಮಾತ್ರ ದಷ್ಟ ಪುಷ್ಟವಾಗಿ ದೇಹವನ್ನು ಬೆಳೆಸಲು ಸಾಧ್ಯ ಎಂದು ಭಾವಿಸಿದೆ. ಆದರೆ ವಾಸ್ತವವಾಗಿ ಚಿಕ್ಕ ವಯಸ್ಸಿನಿಂದ ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿರಿಧಾನ್ಯಗಳ ಸೇವನೆಯನ್ನು ಅನುಷ್ಠಾನಗೊಳಿಸಿದರೆ ನೂರಕ್ಕೆ ನೂರರಷ್ಟು ಅನಂತವಾದ ಮನೋಚೈತನ್ಯ, ದಷ್ಟ ಪುಷ್ಟವಾದ ದೇಹ, ದೀರ್ಘಾಯುಷ್ಯ, ಆದರ್ಶವಾದ ಆರೋಗ್ಯ ಪ್ರಾಪ್ತಿಯಾಗುತ್ತದೆ. ಆಟೊಮೊಬೈಲ್ ಕಂಪನಿಯಲ್ಲಿ ಕನ್ವರ್ ಬೆಲ್ಟ್ ಮೇಲೆ ನಿಂತು ಕೆಲಸ ಮಾಡುವ ಉದ್ಯೋಗಿಗಳು ಇದೇ ಸಿರಿಧಾನ್ಯಗಳ ಸೇವನೆಯನ್ನು ಅನುಷ್ಠಾನಗೊಳಿಸಿದರೆ ಅತ್ಯಂತ ಕಾರ್ಯದಕ್ಷತೆಯಿಂದ ಹೆಚ್ಚು ದಿನಗಳ ಕಾಲ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲದೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಸಿರಿಧಾನ್ಯಗಳ ಸೇವನೆಯಿಂದ ಮನೋದೈಹಿಕವಾಗಿ ಚೈತನ್ಯ ದ್ವಿಗುಣಗೊಳ್ಳುತ್ತದೆ. ಮನೋದೈಹಿಕ ಆಯಾಸ ಹತ್ತಿರಕ್ಕೂ ಸುಳಿಯಲಾರದು.
ಆದರೆ ಈಗ ನಮ್ಮ ಆಹಾರ ಪದ್ಧತಿ ಸಂಪೂರ್ಣವಾಗಿ ತಪ್ಪಿಹೋಗದೆ. ಪ್ರಸ್ತುತವಾಗಿ ಮಾಂಸಾಹಾರಕ್ಕೆ ಜನರು ಬಹಳಷ್ಟು ಅಂಟಿಕೊಂಡಿದ್ದಾರೆ ಹಾಗೂ ಖಾರ, ಎಣ್ಣೆ, ಉಪ್ಪು, ಒಗ್ಗರಣೆ ಮಸಾಲೆ, ಹೇರಳ ಪ್ರಮಾಣದಲ್ಲಿ ತಿನ್ನುತ್ತಿದ್ದಾರೆ. ಪ್ರತಿನಿತ್ಯ ಸೇವಿಸುವ ಇನ್ನುಳಿದ ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಕಲಬೇರಿಕೆ ಇದೆ ಹಾಗೂ ಬಿಳಿ ಅಕ್ಕಿಯಿಂದ ಬೇಯಿಸಿದ ಅನ್ನವನ್ನು ಪ್ರತುತವಾಗಿ ನಾವು ಹೇರಳವಾಗಿ ತಿನ್ನುತ್ತಿದ್ದೆವೆ. ಬಿಳಿ ಅಕ್ಕಿಯ ಅನ್ನ ಊಟ ಮಾಡುವುದರಿಂದ ತ್ರಿದೋಷಗಳಲ್ಲಿ ಒಂದಾದ ವಾತ ದೋಷ ಹೆಚ್ಚಾಗುತ್ತದೆ ಹಾಗೂ ಇದರಿಂದ ಅತ್ಯಂತ ಕ್ಷಿಪ್ರವಾಗಿ ಮನೋದೈಹಿಕ ಆಯಾಸ, ಮೈ ಕೈ ನೋವು, ಕಾಲು ನೋವು, ಬೆನ್ನು ನೋವು, ಸಂಧಿ ನೋವುಗಳು ಉಲ್ಬನಗೊಳ್ಳುತ್ತವೆ ಹಾಗೂ ಗ್ಲೈಸೆಮಿಕ್ ಇಂಡೆಕ್ಸ್ ಅಂದ್ರೆ ರಕ್ತದಲ್ಲಿ ಸಕ್ಕರೆ ಪ್ರಮಾಣದ ಮಟ್ಟವನ್ನು ಕ್ಷಿಪ್ರವಾಗಿ ಹೆಚ್ಚು ಮಾಡುವ ಒಂದು ಅಂಶ ಬಿಳಿ ಅನ್ನದಲ್ಲಿ ಸುಮಾರು 74ರಷ್ಟು ಇರುತ್ತದೆ. ಹೀಗಾಗಿ ಬಿಳಿ ಅಕ್ಕಿಯಿಂದ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಚಿಕ್ಕ ವಯಸ್ಸಿನಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಅಂಶಗಳ ಕಾರಣಕ್ಕಾಗಿ ಬಿಳಿ ಅಕ್ಕಿಯ ಅನ್ನವನ್ನು ಸೇವಿಸುವುದರಿಂದ ಕಾರ್ಯದಕ್ಷತೆ ಕಡಿಮೆ ಆಗುತ್ತದೆ. ಆಟೊಮೊಬೈಲ್ ಕಂಪನಿಯಲ್ಲಿ ಕನ್ವರ್ ಬೆಲ್ಟ್ ಮೇಲೆ ನಿಂತು ಕೆಲಸ ಮಾಡುವ ಉದ್ಯೋಗಿಗಳು ಬೆಳಿ ಅಕ್ಕಿಯ ಅನ್ನ ಸೇವಿಸದೇ ಇರುವುದು ಒಳ್ಳೆಯದು. ಬಿಳಿ ಅಕ್ಕಿಯ ಅನ್ನ ಊಟ ಮಾಡುವುದರಿಂದ ಕ್ಷೀಪ್ರವಾಗಿ ಮನೋದೈಹಿಕ ಆಯಾಸವಾಗುತ್ತದೆ ಹಾಗೂ ಚಿಕ್ಕ ವಯಸ್ಸಿನಲ್ಲಿ ಮೈಕೈ ನೋವು, ಕಾಲು ನೋವು, ಬೆನ್ನ ನೋವಿನ ಸಮಸ್ಯೆಗಳು, ಸಂದಿ ನೋವುಗಳು ಉಲ್ಬಣಗೊಳ್ಳುತ್ತವೆ. ಹೀಗಾಗಿ ಬಿಳಿ ಅಕ್ಕಿಯ ಅನ್ನವನ್ನು ಊಟ ಮಾಡುವ ಆಟೊಮೊಬೈಲ್ ಕಂಪನಿಯ ಉದ್ಯೋಗಿಗಳು ಕನ್ವರ್ ಬೆಲ್ಟ್ ಮೇಲೆ ನಿಂತು ಕೆಲಸ ಮಾಡಲು ವಿಪರೀತ ಬಳಲಾಬೇಕಾಗುತ್ತದೆ. ಆದ್ದರಿಂದ ಬಿಳಿ ಅಕ್ಕಿಯ ಅನ್ನ ಸೇವಿಸುದನ್ನು ನಿಲ್ಲಿಸಬೇಕು ಹಾಗೂ ತ್ರಿದೋಷಗಳಾದ ವಾತ, ಪಿತ್ತ, ಮತ್ತು ಕಪವನ್ನು ಸಮತೋಲನಗೊಳಿಸುವ ಖಾರ, ಎಣ್ಣೆ, ಉಪ್ಪು, ಒಗ್ಗರಣೆ ಹಾಗೂ ಮಸಾಲೆ ಪದಾರ್ಥಗಳನ್ನು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಸೇವನೆ ಮಾಡಬೇಕು ಹಾಗೂ ಎಲ್ಲಕಿಂತಲೂ ಮುಖ್ಯವಾಗಿ ಮಾಂಸಹಾರ ಸೇವನೆ ಕಟ್ಟುನಿಟ್ಟಾಗಿ ನಿಲ್ಲಿಸಬೇಕು. ಆ ನಂತರ ಗರಿಷ್ಠ ಪ್ರಮಾಣದಲ್ಲಿ ಸಿರಿಧಾನ್ಯಗಳ ಮತ್ತು ಹಸಿರು ತರಕಾರಿಗಳ ಸೇವನೆಯನ್ನು ಅನುಷ್ಠಾನಗೊಳಿಸಿದರೆ ಮನೋದೈಹಿಕವಾಗಿ ನೂರಕ್ಕೆ ನೂರರಷ್ಟು ಕಾರ್ಯದಕ್ಷತೆ ಬಂದುಬಿಡುತ್ತದೆ ಹಾಗೂ ಜೊತೆಗೆ ದೀರ್ಘಾಯುಷ್ಯ ಮತ್ತು ಆದರ್ಶವಾದ ಆರೋಗ್ಯ ಪ್ರಾಪ್ತಿಯಾಗಿಬಿಡುತ್ತದೆ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ. ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲೇ ಇದೆ. ಖಾರ, ಎಣ್ಣೆ, ಉಪ್ಪು, ಮಸಾಲೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕೋ ಬೇಡವೋ ಅದೇ ರೀತಿ ಮಾಂಸಾಹಾರ ಸೇವಿಸಬೇಕೊ ಅಥವಾ ಸಸ್ಯಹಾರ ಸೇವಿಸಬೇಕೊ ಎನ್ನುವುದು ಅವರವರ ವಿವೇಚನೆಗೆ ಬಿಟ್ಟುಕೊಟ್ಟದ್ದು. ಆದರ್ಶವಾದ ಆರೋಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವುದು ಕೂಡ ಒಂದು ತಪಸ್ಸು ಹಾಗೂ ಸರಿಯಾದ ಆಹಾರ ಪದ್ಧತಿಯನ್ನು ಅನುಷ್ಠಾನಗೊಳಿಸಿ ತಪಸ್ಸಿನ ಮೂಲಕ ಆರೋಗ್ಯ ಸಿದ್ಧಿಯನ್ನು ಮಾಡಿಕೊಳ್ಳುವುದು ಕೇವಲ ಸುದೈವಿಗಳಿಗೆ ಮಾತ್ರ ಸಾಧ್ಯ. (ಸಸ್ಯಹಾರ VS ಮಾಂಸಹಾರ ಪದ್ಧತಿ – Veg vs nonveg foods)
Sun light heals the disease 👇
https://anveshana.in/powerofsunlight/
ಯುಗಸಂಧ್ಯಾ ಸಮಯದಲ್ಲಿ ಧ್ವಂಸವೆಂಬುದು ಪ್ರಕೃತಿ ನಿಯಮ 👇