Kali Yuga ending – ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭ – 18 February 3102 BCE ಅಂದು ಸೌರಮಂಡಲದಲ್ಲಿ ಒಂದು ಕೌತುಕ ನಡಿಯಿತು. Mercury, Venus, earth, Mars, Jupiter, Saturn ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬಂದಿದ್ದವು. ಆ ಒಂದು ಕ್ಷಣದಲ್ಲಿ ದ್ವಾಪರ ಯುಗದಿಂದ ಕಲಿಯುಗಕ್ಕೆ ಕಾಲಘಟ್ಟ ಬದಲಾವಣೆಯಾಯಿತು. ಇದರ ಕುರಿತು ಗೂಗಲ್ ಅಲ್ಲಿ ಅಥವಾ ಯಾವುದಾದರೂ ಹಳೆಯ ಗ್ರಂಥಗಳಲ್ಲಿ cross verify ಮಾಡಿಕೊಳ್ಳಬಹುದು. ದ್ವಾಪರ ಯುಗದಿಂದ ಕಲಿಯುಗಕ್ಕೆ ಶಿಫ್ಟ್ ಆಗುವ ಸಮಯದಲ್ಲಿ ಹೇಗೆ ಆರು ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬಂದಿದ್ದವು ಅದೇ ರೀತಿ ಮೊನ್ನೆ ಆರು ಗ್ರಹಗಳು ಮತ್ತೆ ಒಂದೇ ಸರಳ ರೇಖೆಯಲ್ಲಿ ಬಂದಿವೆ. ಬ್ರಹ್ಮಾಂಡದಲ್ಲಿ ಜರುಗುವ ಇಂತಹ ವಿದ್ಯಮಾನಗಳಿಂದ ಭೂಮಿ ಮೇಲೆ ದೊಡ್ಡ ಮಟ್ಟದ ಬದಲಾವಣೆಗಳಾಗುತ್ತವೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 2024 ಜೂನ್ 3ಕ್ಕೆ ಕೂಡ ಆರು ಗ್ರಹಗಳು ಮತ್ತೆ ಸರಳ ರೇಖೆಯಲ್ಲಿ ಬಂದವು ಇದರಿಂದ ಖಂಡಿತವಾಗಿ ಭೂಮಿಯ ಮೇಲೆ ದೊಡ್ಡ ಪರಿಣಾಮವಾಗುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರದಿಂದ ತಿಳಿದು ಬರುತ್ತದೆ. 18 February 3102 BCE ಅಂದು ಸೌರಮಂಡಲದಲ್ಲಿ ಒಂದೇ ಸರಳರೇಖೆಯಲ್ಲಿ ಆರು ಗ್ರಹಗಳು ಬಂದಿದ್ದವು ಅದರ ನಂತರ ಈಗ ಮತ್ತೆ ಆರು ಗ್ರಹಗಳು ಸರಳ ರೇಖೆಯಲ್ಲಿ ಬಂದಿವೆ. ಇದರ ಆಧಾರದ ಮೇಲೆ ನಾವು ಯುಗಸಂಧ್ಯಾ ಕಾಲಘಟ್ಟದಲ್ಲಿ ಇದ್ದೇವೆ ಎಂಬುದನ್ನು ಅರ್ಥವಾಗುತ್ತದೆ. ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಶಿಫ್ಟ್ ಆಗುವ ಸಮಯವನ್ನು ಯುಗಸಂಧ್ಯಾ ಎಂದು ಹೇಳಲಾಗುತ್ತದೆ.
Kali Yuga ending – ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭ
ಇನ್ನೊಂದು ಅತಿ ಮುಖ್ಯವಾದ ಅಂಶವೇನೆಂದರೆ ನಾವು physical world ಅಲ್ಲಿ ಇದ್ದೇವೆ. ಇದೇ ರೀತಿ Astral world ಪ್ರಪಂಚ ಕೂಡ ಇದೆ. physical world ಎಂಬುದು Astral world ದಿಂದ drive ಆಗುತ್ತದೆ. Astral world ಆಗುವ ವಿದ್ಯಮಾನಗಳು physical world ಮೇಲೆ ಆಗುತ್ತವೆ. ಇವತ್ತಿನ ದಿನ physical world ಅಲ್ಲಿ ಶೀತಲ ಸಮರ ತಾರಕಕ್ಕೇರಿದೆ. ಭಿನ್ನಾಭಿಪ್ರಾಯಗಳು ಉತ್ತುಂಗದ ಹಂತದಲ್ಲಿವೆ, ಜಗತ್ತಿನಾದ್ಯಂತ ಯುದ್ಧದ ವಾತಾವರಣ ಸೃಷ್ಟಿಯಾಗಿದೆ, ಒಬ್ಬರನ್ನು ಕಂಡರೆ ಇನ್ನೋಬರಿಗೆ ಆಗಲಾರದ ವಾತಾವರಣ ಸೃಷ್ಟಿಯಾಗಿದೆ. ನಂಬಿಕೆ, ಪ್ರೀತಿ, ವಿಶ್ವಾಸಗಳು, ಮಾಯವಾಗಿವೆ. ಈ ರೀತಿ physical world ಅಲ್ಲಿ ಏಕ್ ಆಗುತ್ತಿವೆ ಎಂಬುದನ್ನು ವಿಶ್ಲೇಷಣೆ ಮಾಡಿದಾಗ something is going on in astrol world ಎಂದು ಭಾವಿಸುತ್ತೇನೆ. ಈಗಾಗಲೇ astrol world ಅಲ್ಲಿ ದೈವೀ ಶಕ್ತಿ ಮತ್ತು ದುಷ್ಟ ಶಕ್ತಿಗಳ ನಡುವೆ ಯುದ್ದ ಆರಂಭವಾಗಿದೆ. Astrol world ಅಲ್ಲಿ ಕೂಡ ಅತಿ ಅಮಾನುಷ ಶಕ್ತಿಗಳನ್ನು ಹೊಂದಿದ ದುಷ್ಟರಿದ್ದಾರೆ ಈಗ ಅವರ ಸಂಹಾರ ನಡೆಯುತ್ತಿದೆ. ಅದರ ಪ್ರಭಾವ physical world ಮೇಲೆ ಆಗುತ್ತಿರುವ ಕಾರಣಕ್ಕೆ ಜಗತ್ತಿನಾದ್ಯಂತ ಹೀಗೆಲ್ಲ ನಡೆಯುತ್ತಿವೆ. Astrol world ಅಲ್ಲಿ ನಡೆಯುವ ಯುದ್ದ ಮುದಿಂದ ದಿನಗಳಲ್ಲಿ physical world ಗೆ ಆವರಿಕೊಳ್ಳುತ್ತದೆ ಆಗ ಕಲ್ಕಿ ಭಗವಾನ್ physical world ಗೆ ಬರುತ್ತಾನೆ. ಆ ಕಾಲ ಇನ್ನೂ ದೂರವಿಲ್ಲ. ಒಟ್ಟಿನಲ್ಲಿ something big is going on in astrol world ಎಂಬುದು ಅಂತೂ ಪಕ್ಕಾ.
Kali Yuga ending – ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭ
ಇನ್ನು ಯುಗದ ಕುರಿತು ನೋಡೋಣ. ವೈಕುಂಠ ಲೋಕದಲ್ಲಿ ಒಂದು ದಿನ ಕಳಿಯುವ ಹೊತ್ತಿಗೆ ಭೂಮಿಯಲ್ಲಿ ಒಂದು ಯುಗ ಕಳೆದಿರುತ್ತದೆ ಎಂದು ಎಲ್ಲ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅಂದ್ರೆ ವೈಕುಂಠ ಲೋಕದಲ್ಲಿ ಸಮಯ ಅತ್ಯಂತ ನಿಧಾನವಾಗಿ ಚಲಿಸುತ್ತದೆ ಹಾಗೂ ಭೂಮಿಯ ಮೇಲೆ ಸಮಯವು ಅತ್ಯಂತ ವೇಗವಾಗಿ ಚಲಿಸುತ್ತದೆ. ವೈಕುಂಠ ಲೋಕದಲ್ಲಿ ಒಂದು ದಿನ ಕಳೆಯುವ ಹೊತ್ತಿಗೆ ಭೂಮಿಯ ಮೇಲೆ ಅನೇಕ ವರ್ಷಗಳು ಉರಳಿ ಹೋಗಿರುತ್ತವೆ ಎಂಬುದು ಸತ್ಯವಾದದ್ದು ಆದರೆ ವೈಕುಂಠ ಲೋಕದ ಹಾಗೂ ಭೂಲೋಕದ ನಡುವಿನ ಕಾಲಗತಿಯ ವ್ಯತ್ಯಾಸ ಇಷ್ಟೇ ಎಂದು ಹೇಳಲು ಸಾಧ್ಯವೇ ಇಲ್ಲ. ಬ್ರಹ್ಮಾಂಡದಲ್ಲಿನ ಈ ಕೌತುಕವನ್ನು Albert Einstein ಅವರ Theory of relativity ಕೂಡ ಒಪ್ಪಿಕೊಳ್ಳುತ್ತದೆ. ವೈಕುಂಠ ಲೋಕದಲ್ಲಿನ ಕಾಲಗತಿಯ ಲೆಕ್ಕಾಚಾರವನ್ನು ಯಾವ ಸ್ಟ್ಯಾಂಡರ್ಡ್ ಮೂಲಕ ಮಾಡಲಾಗುತ್ತದೆ ಎಂಬುದರ ಕುರಿತು ಯಾವ ಧರ್ಮ ಗ್ರಂಥಗಳಲ್ಲಿ ಅಥವಾ ಹಿಂದೂ ಪುರಾಣಗಳಲ್ಲಿ ಇಲ್ಲ. ಮನುಸ್ಮೃತಿ ಅಥವಾ ಪುರಾಣಗಳ ಪ್ರಕಾರ ಕಲಿಯುಗದ ಅವಧಿ 432000 ವರ್ಷಗಳು. ಆದರೆ ಇಲ್ಲಿ ವಿಶ್ಲೇಷಣೆ ಮಾಡಬೇಕಾದ ಅಂಶ ಏನು ಅಂದ್ರೆ ಪ್ರಭು ಶ್ರೀ ರಾಮನ ಕಾಲಘಟ್ಟವನ್ನು ತೃತಯುಗ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂದ್ರೆ ಪುರಾಣಗಳ ಪ್ರಕಾರ ಶ್ರೀರಾಮನು ಸುಮಾರು 836000 ವರ್ಷಗಳಿಗಿಂತಲೂ ಹಿಂದೆ ಇದ್ದನು. ಆದರೆ ರಾಮಾಯಣದಲ್ಲಿ ಉಲ್ಲೇಖ ಇರುವ ಗ್ರಹಗಳ ಸ್ಥಾನದ ಪ್ರಕಾರ ಪ್ರಭು ಶ್ರೀ ರಾಮನು 10th January 5114 BC ರಂದು ಅಯೋಧ್ಯೆಯಲ್ಲಿ ಜನ್ಮ ತಾಳಿದನು ಹಾಗೂ ಇದನ್ನು planetarium software ಮೂಲಕ ವಿಜ್ಞಾನಿಕವಾಗಿ ನಿರೂಪಿಸಲು ಸಾಧ್ಯವಾಗುತ್ತದೆ. 10th January 5114 BC ಅಂದ್ರೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಎಂದು ಗೊತ್ತಾಗುತ್ತದೆ ಹಾಗೂ ಏಳು ಸಾವಿರ ವರ್ಷಗಳ ಹಿಂದಿನ ಕಾಲಘಟ್ಟವು ತೃತಯುಗ ಎಂದು ಅರ್ಥವಾಗುತ್ತದೆ. ಇದಕ್ಕೆಲ್ಲವೂ ಪುಷ್ಟಿಕೊಡುವಂತೆ ರಾಮ ಸೇತುವೆಯಲ್ಲಿರುವ ಕಲ್ಲುಗಳನ್ನು ಸಮುದ್ರಶಾಸ್ತ್ರ ವಿಭಾಗದವರು (oceanography) ಕಾರ್ಬನ್ ಡೇಟಿಂಗ್ ಮಾಡಿದಾಗ 7000 ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಸೇರಿದ್ದು ಎಂಬ ವೈಜ್ಞಾನಿಕವಾಗಿ ಸ್ಪಷ್ಟವಾಗಿದೆ.
ಇನ್ನು ಶ್ರೀಕೃಷ್ಣನು 21 July 3228 BCE ಅಂದು ಮಥುರಾದಲ್ಲಿ ಜನಿಸಿದ್ದು. ಕುರುಕ್ಷೇತ್ರ ಯುದ್ಧವು 3139 BC ಆಗಿದೆ. ಸಮುದ್ರದಲ್ಲಿ ಮುಳುಗಿ ಹೋದ ದ್ವಾರಕಾ ನಗರದ ಉತ್ಖನನ ನಡೆಸಿದಾಗ ಅದು ಕೂಡ 5000 ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಸೇರಿದ್ದು ಎಂದು ತಿಳಿದು ಬರುತ್ತದೆ. ಇಲ್ಲಿ ಗಮನಿಸಬೇಕಾದಂತ ಅತ್ಯಂತ ಮುಖ್ಯವಾದ ಅಂಶ ಅಂದ್ರೆ ಮಹಾಭಾರತ 5000 ವರ್ಷಗಳ ಹಿಂದೆ ನಡೆದರೆ ರಾಮಾಯಣ 7000 ವರ್ಷಗಳ ಹಿಂದೆ ನಡೆಯಿತು. ರಾಮಾಯಣ ಮತ್ತು ಮಹಾಭಾರತಕ್ಕೆ 2000 ವರ್ಷಗಳ ವ್ಯತ್ಯಾಸವಿದೆ ಎಂದು ವಿಜ್ಞಾನಿಕವಾಗಿಯೇ ತಿಳಿದು ಬರುತ್ತದೆ. ಹಾಗಾದರೆ ತ್ರೇತಾಯುಗ ಮತ್ತು ದ್ವಾಪರಯುಗದ ನಡುವಿನ ಕಾಲದ ವ್ಯತ್ಯಾಸ ಕೇವಲ ಎರಡು ಸಾವಿರ ವರ್ಷಗಳೇ? ಖಂಡಿತವಾಗಿಯೂ ಗೊತ್ತಿಲ್ಲ. ಆದರೆ ಪುರಾಣಗಳಲ್ಲಿ ತ್ರೇತಾಯುಗದ ಅವಧಿ 1296000 ವರ್ಷಗಳು, ದ್ವಾಪರ ಯುಗದ ಅವಧಿ 864000 ಹಾಗೂ ಕಲಿಯುಗದ ಅವಧಿ 432000 ವರ್ಷಗಳು ಎಂದು ಉಲ್ಲೇಖವಿದೆ. ಮನುಸ್ಮೃತಿ ಹಾಗೂ ಹಲವು ಪುರಾಣಗಳ ಪ್ರಕಾರ ಕಲಿಯುಗ ಆರಂಭವಾಗಿ ಈಗ ಕೇವಲ 5000 ವರ್ಷಗಳು ಕಳೆದಿವೆ. ಹಾಗಾದರೆ ತ್ರೇತಾಯುಗವು (ಕಲಿಯುಗ 5000 ವರ್ಷಗಳು + ದ್ವಾಪರ ಯುಗ 864000 ವರ್ಷಗಳು =869000 ವರ್ಷಗಳ) 869000 ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಸೇರಿದ್ದು ಎಂದಾಗುತ್ತದೆ. ಶ್ರೀರಾಮನು 869000 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಅಯೋಧ್ಯೆಯಲ್ಲಿ ಜನಿಸಿದನಾ? ಉತ್ತರ ಪ್ರದೇಶದ ಅಯೋಧ್ಯೆ ಪಟ್ಟಣ 869000 ವರ್ಷಗಳ ಹಿಂದಿನಿಂದ ಅಸ್ತಿತ್ವದಲ್ಲಿ ಇದೇನಾ? ಹಿಂದೂ ಮಹಾಸಾಗರದಲ್ಲಿ ಮುಳುಗಿ ಹೋದ ರಾಮ ಸೇತುವೆ 869000 ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಸೇರಿದ್ದಾ? ಎನ್ನುವ ಪ್ರಶ್ನೆಗಳು ಉದ್ಭವವಾಗಿ ಬಿಡುತ್ತವೆ. ಕಾರ್ಬನ್ ಡೇಟಿಂಗ್ ಪ್ರಕಾರ ರಾಮ ಸೇತುವೆ 7000 ವರ್ಷಗಳ ಹಿಂದಿನದು ಎಂದು ವೈಜ್ಞಾನಿಕವಾಗಿ ತಿಳಿದು ಬರುತ್ತದೆ. ರಾಮ ಸೇತುವೆಯು ವೈಜ್ಞಾನಿಕವಾಗಿ 7000 ವರ್ಷಗಳ ಹಿಂದಿನಾದ ಅಥವಾ ಮನುಸ್ಮೃತಿ ಪ್ರಕಾರ 869000 ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಸೇರಿದ್ದಾ ಅನ್ನುವುದನ್ನು ನಿರ್ಧರಿಸುವುದು ಓದುಗರಿಗೆ ಬಿಟ್ಟದ್ದು.
ಕಲಿಯುಗ ಮುಗಿಲಿಕ್ಕೆ ಬಂದಿದೇನೋ ಇಲ್ಲವೋ ಎಂಬುದರ ಕುರಿತು ವಿಶ್ಲೇಷಣೆ ಮಾಡಲು ಹೊರಟಾಗ ಒಬ್ಬಬ್ಬರು ಒಂದಂದು ಅಭಿಪ್ರಾಯವನ್ನು ವ್ಯಕ್ತಪಡಿಸಿಸುತ್ತಾರೆ. ಕಲಿಯುಗ ಆರಂಭವಾಗಿ ಈಗ ಕೇವಲ ಐದು ಸಾವಿರ ವರ್ಷಗಳು ಉರಳಿವೆ ಹಾಗೂ ಇನ್ನೂ ನಾಲ್ಕು ಲಕ್ಷ ಇಪ್ಪತ್ತು ಏಳು ಸಾವಿರ ವರ್ಷಗಳು ಬಾಕಿ ಇದೆ ಎಂದು ಹಲವು ಪುರಾಣಗಳಲ್ಲಿ, ಪುಣ್ಯ ಕಥೆಗಳಲ್ಲಿ ಉಲ್ಲೇಖವಾಗಿದೆ ಹೀಗಾಗಿ ಕಲಿಯುಗ ಮುಗಿಯಲಿಕ್ಕೆ ಇನ್ನೂ ತುಂಬಾ ವರ್ಷಗಳು ಇವೆ ಎಂದು ಬಹುತೇಕರು ಹೇಳುತ್ತಾರೆ. ಕಲಿಯುಗ ಮುಗಿಯಲಿಕ್ಕೆ ಇನ್ನೂ ತುಂಬಾ ವರ್ಷಗಳು ಬಾಕಿ ಇರಬಹುದು ಆದರೆ ಭೂಮಿಯ ಮೇಲಿ ಮನುಕುಲ ಬಾಳಿ ಬದುಕಲು ಬೇಕಾಗುವ ಸಂಪನ್ಮಲಗಳು ನೂರು ವರ್ಷಗಳುಗೆ ಆಗುವಷ್ಟು ಇಲ್ಲ! ಹೇರಳವಾದಂತ ಕಾಡುಗಳನ್ನು ನಾಶ ಮಾಡಿದ್ದೇವೆ. ಭೂಮಿಯ ಮೇಲಿನ ನಿಸರ್ಗ ಸಂಪತ್ತನ್ನು ಹೇರಳವಾಗಿ ದೋಚಿದೇವ ಹಾಗೂ ವಿಪರೀತ ಬೆಳೆದ ವಿಜ್ಞಾನದ ಮೂಲಕ ಅಪಾಯಕಾರಿ ಅಣು ಅಸ್ತ್ರಾಸ್ತ್ರಗಳನ್ನು ಸಂಶೋಧನೆ ಮಾಡಿದ್ದೇವೆ. ಮಧ್ಯ ಏಷ್ಯಾದಲ್ಲಿ ಯುದ್ಧ ಉಲ್ಬಣಗೊಳ್ಳುತ್ತಿದೆ ಹಾಗೂ ಅದು ಜಗತ್ತಿನಾದ್ಯಂತ ಹಬ್ಬುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಪರಸ್ಪರ ಅಣು ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿವೆಂದು ಬೆದರಿಕೆ ಹಾಕುತ್ತಾರೆ. ದೇಶ ದೇಶಗಳ ನಡುವೆ ಹೊಂದಾಣಿಕೆ ಉಳಿಯುತ್ತಿಲ್ಲ. ವಿಪರೀತ ಭಿನ್ನಾಭಿಪ್ರಾಯಗಳು ಉಂಟಾಗುತ್ತಿವೆ. ಹೀಗಾಗಿ ಮುಂದಿನ ಕೆಲವೇ ದಶಕಗಳ ಒಳಗೆ ಇಡೀ ಮನುಕುಲಕ್ಕೆ ಅತಿ ದೊಡ್ಡ ಗಂಡತರ ಒದಗುವುದು ಖಚಿತ. 2032ಕ್ಕೆ ಕಲಿಯುಗ ಅಂತ್ಯವಾಗಿ ಸತ್ಯಯುಗ ಆರಂಭವಾಗುತ್ತದೆ ಎಂದು ಭವಿಷ್ಯ ಮಾಲಿಕಾ ಪುರಾಣದಲ್ಲಿ ಉಲ್ಲೇಖವಿದೆ! ಭವಿಷ್ಯ ಮಾಲಿಕಾ ಪುರಾಣ ಪ್ರಕಾರ ಮುಂದಿನ 10 ವರ್ಷಗಳಲ್ಲಿ ಜಗತ್ತಿನಾದ್ಯಂತ ಸಾವು ನೋವುಗಳು ಸಂಖ್ಯೆ ಅತ್ಯಂತ ಗರಿಷ್ಠ ಮಟ್ಟ ತಲುಪುತ್ತವೆ. 2030 ಒಳಗೆ ನ್ಯೂಕ್ಲಿಯರ್ ಯುದ್ದವಾಗುತ್ತದೆ ಹಾಗೂ 2032ರ ನಂತರ ಸತ್ಯಯುಗ ಆರಂಭವಾಗುತ್ತದೆ. ಕಲಿಯುಗದಿಂದ ಸತ್ಯಯುಗಕ್ಕೆ ಶಿಫ್ಟ್ ಆಗುತ್ತಿರುವ ಈ ಸಮಯವನ್ನು ಯುಗಸಂಧ್ಯಾ ಎಂದು ಕರೆಯಲಾಗುತ್ತದೆ. ಯುಗಸಂಧ್ಯಾ ಸಮಯದಲ್ಲಿ ಧ್ವಂಸವೆಂಬುದು ಪ್ರಕೃತಿ ನಿಯಮ. ಮುಂದಿನ 10 ವರ್ಷಗಳಲ್ಲಿ ಕೆಳಗಿನ ಅಂಶಗಳಿಂದ ಜಗತ್ತು ಧ್ವಂಸಕೊಳ್ಳುತ್ತದೆ ಎಂದು ಭವಿಷ್ಯ ಮಾಲಿಕ ಪುರಾಣ ತಿಳಿಸುತ್ತದೆ👇
1)ಮೂರನೇ ಮಹಾಯುದ್ಧ
2)ಅನ್ನ ಸಂಕಟ
3) ವಾಯು ಪ್ರಳಯ
4) ಜಲಪ್ರಳಯ
5) ಅಗ್ನಿಪ್ರಳಯ
6) ಭೂಕಂಪ
7) ಪೌಷ್ಟಿಕ ಆಹಾರದ ಕೊರತೆ
8) ಗುರುತಿಸಲಾಗದಂತಹ ರೋಗಗಳು
9)ಮತೀಯ ದಂಗೆಗಳು
ಮನುಸ್ಮೃತಿ ಪ್ರಕಾರ ಕಲಿಯುಗ ಆರಂಭವಾಗಿ ಈಗ ಕೇವಲ 5000 ವರ್ಷಗಳು ಕಳೆದಿವೆಯೋ ಅಥವಾ ಭವಿಷ್ಯ ಮಾಲಿಕ ಪುರಾಣ ಪ್ರಕಾರ ಕಲಿಯುಗ ಅಂತ್ಯವಾಗಿ 2032ರಿಂದ ಸತ್ಯಯುಗ ಆರಂಭವಾಗುತ್ತದೋ ಎಂಬ ಎರಡೂ ಸಿದ್ದಾಂತಗಳನ್ನು ಪಕ್ಕಕ್ಕಿಟ್ಟು ಪ್ರಸ್ತುತವಾಗಿ ಮನುಷ್ಯ ನಡೆಯುವಂತಹ ಪಾಪ ಕೃತ್ಯಗಳನ್ನು ಗಮನಿಸಿದರೆ ಕರ್ಮಕ್ಕೆ ಅನುಗುಣವಾಗಿ ಮನುಕುಲಕ್ಕೆ ಮಹಾದುರಂತ ಹತ್ತಿರದಲ್ಲಿ ಇದೆ ಎಂದು ಪ್ರತಿಯೊಬ್ಬರಿಗೂ ಅನಿಸುತ್ತದೆ. ಆದರೆ ಜಗತ್ತು ದ್ವಂಸಗೊಳ್ಳುವ ಸಮಯದಲ್ಲಿ ಏನೆಲ್ಲಾ ಅನಾಹುತಗಳು ನಡೆಯುತ್ತವೆಯೋ, ಏನೆಲ್ಲ ವಿದ್ಯಮಾನಗಳು ನಡೆಯುತ್ತವೆಯೋ ಎಂಬುದರ ಕುರಿತು ಭವಿಷ್ಯ ಮಾಲಿಕ ಪುರಾಣದಲ್ಲಿ ನಿಖರವಾಗಿ ಉಲ್ಲೇಖ ಮಾಡಲಾಗಿದೆ. ಭವಿಷ್ಯ ಮಾಲಿಕ ಪುರಾಣದಲ್ಲಿ ಹೇಳಲಾಗದ ಎಲ್ಲ ವಿದ್ಯಮಾನಗಳು, ಅನಾಹುತಗಳು, ವಿಚಿತ್ರ ಲಕ್ಷಣಗಳು ಪ್ರಪಂಚಾದ್ಯಂತ ಕಾಣಿಸಿಕೊಳ್ಳುತ್ತಿವೆ. ಹೊಸ ಯುಗ ಆರಂಭವಾಗುವುದಕ್ಕಿಂತ ಮೊದಲು ಹಳೆಯದೆಲ್ಲವೂ ದ್ವಂಸಗೊಳ್ಳುವುದು ಪ್ರಕೃತಿ ನಿಯಮ. ವಿಷ್ಣುವಿನ 10ನೇ ಅವತಾರವಾದ ಕಲ್ಕಿ ಜಗತ್ತಿನ ಎಲ್ಲ ದುಷ್ಟರನ್ನು ಸಂಹಾರ ಮಾಡಿ ಸತ್ಯಯುಗವನ್ನು ಸ್ಥಾಪಿಸುತ್ತಾನೆ ಎಂದು ಭವಿಷ್ಯ ಮಾಲಿಕ ಪುರಾಣದಲ್ಲಿ ತಿಳಿಸಲಾಗಿದೆ. ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು.
ಬಾಕಿ ಇರುವ ಕರ್ಮಗಳು 👇
ಕಲಿಯುಗ ಅಂತ್ಯದಲ್ಲಿನ ಕರ್ಮಗಳ ಫಲಾಫಲಗಳು https://anveshana.in/law-of-karma-3/
ಒಂದು ಶಕ್ತಿ ಇದ್ದದ್ದು ಮತ್ತೊಂದು ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ 👇