Vastu in kannada
ಜಗತ್ತಿನ ಕೆಲವು ಭಾಗದಲ್ಲಿ ಶಿಲಾಯುಗದ ಕಾಲಘಟ್ಟ ಇದ್ದ ಸಮಯದಲ್ಲಿ ಭಾರತದಲ್ಲಿ ಅತ್ಯಂತ ಉನ್ನತವಾದ ಹಾಗೂ ಅಷ್ಟೇ ರಹಸ್ಯವಾದ ಜ್ಞಾನ ಹೊಂದಿದ ನಾಗರಿಕತೆ ಇತ್ತು. ಆದರೆ ನಮ್ಮ ಪೂರ್ವಜರು ಶತ ದಡ್ಡರು, ನಮ್ಮ ಪೂರ್ವಜರಿಗೆ ಯಾವುದೇ ವಿಜ್ಞಾನ, ಖಗೋಳಶಾಸ್ತ್ರ,ಭೂಗೋಳಶಾಸ್ತ್ರ, ಭೂಗರ್ಭ ಶಾಸ್ತ್ರ, ತಂತ್ರಜ್ಞಾನ, ಜ್ಯೋತಿಷ್ಯ, ವಾಸ್ತು, ವೈದ್ಯಕೀಯ, ಗೊತ್ತಿರಲಿಲ್ಲ ಎಂದು ಇವತ್ತಿನ ಯುವಕರಿಗೆ ಶಾಲೆ ಕಾಲೇಜುಗಳಲ್ಲಿ ಕಲಿಸಿ ನಮ್ಮ ಪೂರ್ವಜರು ಜ್ಞಾನ ಭಂಡಾರದ ಕುರಿತು ತಪ್ಪು ಅಭಿಪ್ರಾಯಗಳು ಮೂಡುವ ಹಾಗೆ ಅತ್ಯಂತ ವ್ಯವಸ್ಥೆಯಾಗಿ ಬ್ರೈನ್ ವಾಶ್ ಮಾಡಲಾಗುತ್ತಿದೆ. ಇವತ್ತು ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿರುವುದು ಎಡಪಂಥೀಯರ ಇತಿಹಾಸ. ಶಿಲಾಯುಗದ ಕಾಲಘಟ್ಟದಲ್ಲಿ ಯುರೋಪ್ ಖಂಡದ ಕೆಲವು ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದ ಎಡಪಂಥೀಯರು ಮೈ ಮೇಲೆ ಪ್ರಾಣಿಗಳ ಚರ್ಮವನ್ನು ಹಾಕಿಕೊಂಡು ಕಲ್ಲಿನಿಂದ ತಯಾರಿಸಿದ ಮೊಂಡಾದ ಆಯುಧಗಳನ್ನು ಹಿಡಿದು ಕಾಡುಮೇಡುಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ತಿಂದು ಜೀವನ ನಡೆಸುತ್ತಿದ್ದರು ಎಂಬುದು ಪಕ್ಕಾ ಎಡಪಂತಿಯರ ಇತಿಹಾಸ! ಬ್ರಿಟಿಷರು ಭಾರತದಲ್ಲಿ ಆಡಳಿತ ನಡೆಸುವಾಗ ಭಾರತದ ಪ್ರಾಚೀನ ಇತಿಹಾಸ, ಇಲ್ಲಿನ ಪರಂಪರೆ, ಸಂಸ್ಕೃತಿ, ಕಲೆ ಎಲ್ಲವನ್ನೂ ತಿರುಚಿ ತಮ್ಮದೇ ಆದ ಸಂಸ್ಕೃತಿ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಬಲವಂತವಾಗಿ ಹೇರಿದರು. ಇನ್ನು 19ನೇ ಶತಮಾನದಲ್ಲಿ ಇಡೀ ಪ್ರಪಂಚದ ಜನ ಮಹಾಯುದ್ದಗಳಲ್ಲಿ ತೊಡಗಿಕೊಂಡರೆ ಭಾರತೀಯರು ಬ್ರಿಟಿಷರಿಂದ ಸ್ವತಂತ್ರ ಕಿತ್ತುಕೊಳ್ಳಲು ತೀವ್ರವಾದ ಸ್ವಾತಂತ್ರ ಹೋರಾಟದಲ್ಲಿ ತೊಡಗಿಕೊಂಡರು. ಮಹಾಯುದ್ಧಗಳು ಮುಗಿದ ನಂತರ ಕೈಗಾರಿಕೀಕರಣಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಪಂಚದ ಜನ ತೊಡಗಿಕೊಂಡು ಬಿಟ್ಟೆರು. ಇನ್ನು ಭಾರತೀಯರಾದ ನಾವು ಸ್ವಾತಂತ್ರ್ಯ ಬಂದ ನಂತರ ಬ್ರಿಟಿಷರ ಶಿಕ್ಷಣ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಬಂದೆವು ಹೀಗಾಗಿ ಪ್ರಾಚೀನ ಭಾರತದ ಜ್ಞಾನ ಭಂಡಾರಕ್ಕೂ ನಮಗೂ ಇರುವ ಕೊಂಡಿ ಕಳುಚಿಕೊಂಡು ಬಿಟ್ಟಿದೆ. ಇನ್ನೂ ಮುಸಲ್ಮಾನರ ಬರ್ಬರ ಆಕ್ರಮಣದಿಂದ ಭಾರತದಲ್ಲಿದ್ದ ಪ್ರಾಚೀನ ತಕ್ಷಶಿಲೆ, ನಳಂದಾ ಹಾಗೂ ಬನಾರಸ್ ವಿಶ್ವವಿದ್ಯಾನಿಲಯಗಳು ನಾಶವಾದವು. ಈ ಪ್ರಾಚೀನ ವಿಶ್ವವಿದ್ಯಾನಿಲಯಗಳಲ್ಲಿ ಅನಂತವಾದ ಜ್ಞಾನ ಭಂಡಾರವಿತ್ತು. ಪ್ರಪಂಚದ ನಾನಾ ದೇಶದಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ವಿಶ್ವವಿದ್ಯಾನಿಲಯಗಳಲ್ಲಿ ಅನೇಕ ರಹಸ್ಯ ವಿದ್ಯೆಗಳನ್ನು ಕಲಿಸಲಾಗುತ್ತಿತ್ತು. ಇಲ್ಲಿ ಮುಖ್ಯವಾಗಿ ವೇದ, ವೇದಾಂಗ, ಇತಿಹಾಸ, ಆಗಮ, ನ್ಯಾಯ, ಕಾವ್ಯ, ಅಲಂಕಾರ, ನಾಟಕ, ಗಾನ, ಕವಿತ್ವ, ಕಾಮಶಾಸ್ತ್ರ, ದೂತನೈಪುಣ್ಯ, ದೇಶಭಾಷಾಜ್ಞಾನ, ಲಿಪಿಕರ್ಮ, ವಾಚನ, ಸಮಸ್ತಾವಧಾನ, ಸ್ವರಪರೀಕ್ಷಾ, ಶಾಸ್ತ್ರಪರೀಕ್ಷಾ, ಶಕುನಪರೀಕ್ಷಾ, ಸಾಮುದ್ರಿಕಪರೀಕ್ಷಾ, ರತ್ನಪರೀಕ್ಷಾ, ಸ್ವರ್ಣಪರೀಕ್ಷಾ, ಗಜಲಕ್ಷಣ, ಅಶ್ವಲಕ್ಷಣ, ಮಲ್ಲವಿದ್ಯಾ, ಪಾಕಕರ್ಮ, ದೋಹಳ, ಗಂಧವಾದ, ಧಾತುವಾದ, ಖನಿವಾದ, ರಸವಾದ, ಅಗ್ನಿಸ್ತಂಭ, ಜಲಸ್ತಂಭ, ವಾಯುಸ್ತಂಭ, ಖಡ್ಗಸ್ತಂಭ, ವಶ್ಯಾ,ಆಕರ್ಷಣ, ಮೋಹನ, ವಿದ್ವೇಷಣ, ಉಚ್ಛಾಟನ, ಮಾರಣ, ಕಾಲವಂಚನ, ವಾಣಿಜ್ಯ, ಪಶುಪಾಲನ, ಕೃಷಿ, ಸಮಶರ್ಮ, ಲಾವುಕಯುದ್ಧ, ಮೃಗಯಾ, ಪುತಿಕೌಶಲ, ದೃಶ್ಯಶರಣಿ, ದ್ಯೂತಕರಣಿ, ಚಿತ್ರಲೋಹ, ಚೌರ್ಯ, ಔಷಧಸಿದ್ಧಿ, ಮಂತ್ರಸಿದ್ಧಿ, ಸ್ವರವಂಚನಾ, ದೃಷ್ಟಿವಂಚನಾ, ಅಂಜನ, ಜಲಪ್ಲವನ, ವಾಕ್ ಸಿದ್ಧಿ, ಘಟಿಕಾಸಿದ್ಧಿ, ಪಾದುಕಾಸಿದ್ಧಿ, ಇಂದ್ರಜಾಲ, ಮಹೇಂದ್ರಜಾಲ, ಯೋಗ, ಧ್ಯಾನ, ಜೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ ಮುಂತಾದ ಹಲವು ವಿದ್ಯೆಗಳನ್ನು ಇಲ್ಲಿ ಪ್ರಪಂಚದ ನಾನಾ ಕಡೆಯಿಂದ ಬಂದ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿತ್ತು. ಮನುಕುಲವನ್ನು ಬೆಳಗಿಸುವ ಇಂತಹ ವಿಶ್ವವಿದ್ಯಾನಿಲಯಗಳು ಮುಸಲ್ಮಾನ ಆಕ್ರಮಣಕಾರರಿಂದ ಸರ್ವನಾಶವಾಗಿದ್ದರಿಂದ ಜ್ಞಾನ ಭಂಡಾರ ಕೂಡ ನೆಲಕಚ್ಚಿತು. ದಿನಗಳು ಕಳೆದ ಹಾಗೆ ಪ್ರಾಚೀನ ಕಾಲದ ಎಲ್ಲ ವಿದ್ಯೆಗಳು ಕಣ್ಮರೆ ಆಗುತ್ತಾ ಆಗುತ್ತಾ ಬಂದವವು. ಆದರೆ ವಾಸ್ತು ಶಾಸ್ತ್ರ, ಜೋತಿಷ್ಯ, ಅಧ್ಯಾತ್ಮ, ಹೋಮ-ಹವನ, ಆಯುರ್ವೇದದ ಕೊಂಡಿ ಕಲಾಚಿಕೊಳ್ಳದೆ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಇವತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಹಾಗೂ ಇವತ್ತು ಮತ್ತೆ ಪ್ರಾಚೀನ ಕಾಲದ ವಿದ್ಯೆಗಳ ಅನ್ವೇಷಣೆಯಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ.
Vastu in kannada
ತಲೆಮಾರಿನಿಂದ ತಲೆಮಾರಿಗೆ ಹರಿದುಕೊಂಡ ಬಂದ ವಾಸ್ತು ಶಾಸ್ತ್ರ ಮತ್ತು ಜೋತಿಷ್ಯ ಶಾಸ್ತ್ರಕ್ಕೆ ಅತಿ ಕಡಿಮೆ ಅಂದರೂ ಕೂಡ 10 ಸಾವಿರ ವರ್ಷಗಳ ಇತಿಹಾಸವಿದೆ ಹಾಗೂ ಈ ಎರಡು ಶಾಸ್ತ್ರಕ್ಕೂ ಪರಸ್ಪರ ಸಂಬಂಧವುದೆ. 10 ಸಾವಿರ ವರ್ಷಗಳ ಹಿಂದೆ ಕಟ್ಟಲಾಗಿರಬಹುದು ಎಂದು ಅಂದಾಜು ಮಾಡಲಾದ ಈಜಿಪ್ಟಿನ ಪಿರಮಿಡ್ಗಳನ್ನು ವಸ್ತು ಶಾಸ್ತ್ರದ ಪ್ರತಿಯೊಂದು ನಿಯಮಗಳಿವೆ ಅನುಗುಣವಾಗಿ ಕಟ್ಟಿಲಾಗಿದೆ. ವಾಸ್ತು ಶಾಸ್ತ್ರದ ನಿಯಮಗಳಿಗೆ ಅನುಗುಣವಾಗಿ ಕಟ್ಟಲಾದ ಜಗತ್ತಿನ ಅತ್ಯಂತ ಪುರಾತನ ಕಟ್ಟಡ ಅಂದ್ರೆ ಅದು ಪಿರಮಿಡ್. ಪಿರಮಿಡ್ ಪೂರ್ವ ಭಾಗದಲ್ಲಿ ಇರುವ ನೈಲ್ ನದಿ ದಕ್ಷಿಣದಿಂದ ಉತ್ತರಕ್ಕೆ ಹರಿದು ಹೋಗುತ್ತದೆ. ಈ ರೀತಿ ಪೂರ್ವ ಭಾಗದಲ್ಲಿ ನೀರಿನ ಪ್ರವಾಹವು ದಕ್ಷಿಣದಿಂದ ಉತ್ತರಕ್ಕೆ ಹರಿದು ಹೋಗುತ್ತಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಬಹಳಷ್ಟು ಒಳ್ಳೆಯದು. ಪಿರಮಿಡ್ಗಳನ್ನು ಪ್ರಪಂಚದ ಕೇಂದ್ರ ಭಾಗದಲ್ಲಿ ನಿರ್ಮಿಸಲಾಗಿದೆ. ಅಂದರೆ ಸುಮಾರು 10000 ವರ್ಷಗಳ ಹಿಂದೆಯೇ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಿರುವ ಬ್ರಹ್ಮಸ್ಥಳದ ಮಹತ್ವವನ್ನು ಅರಿತಿದ್ದರು. ಸಮುದ್ರಮಟ್ಟದಿಂದ ಪಿರಮಿಡ್ ಸರಾಸರಿ 455 ಅಡಿ ಇದೆ ಹಾಗೂ ಅತ್ಯಂತ ಕೌತುಕವಾದದ್ದು ಅಂದ್ರೆ ಪಿರಮಿಡ್ಡಿನ ಎತ್ತರ ಕೂಡ 455 ಅಡಿ ಇದೆ! ಇನ್ನು ಮನೆ ಕಟ್ಟುವಾಗ ಮನೆಯ ನಾಲ್ಕು ಗೋಡೆಗಳ ದಿಕ್ಕುಗಳಿಗೆ ಸಮಾನಾಂತರವಾಗಿ ಇರ್ಬೇಕು ಅನ್ನುವ ವಾಸ್ತು ಶಾಸ್ತ್ರ ನಿಯಮವಿದೆ. ದಿಕ್ಕುಗಳಿಗೆ ಗೋಡೆಗಳು ಸಮಾನಾಂತರವಾಗಿರಬೇಕು ಅನ್ನುವ ಈ ವಸ್ತು ನಿಯಮವು ಪುರಾತನ ಕಾಲದ ಈಜಿಪ್ಟಿನ ಜನರಿಗೆ ಗೊತ್ತಿದ್ದ ಕಾರಣಕ್ಕಾಗಿಯೇ ಪಿರಮಿಡಿನ ನಾಲ್ಕು ಬದಿಗಳು ಮೈಕ್ರೋ ಡಿಗ್ರಿ ಕೂಡ ವ್ಯತ್ಯಾಸವಾಗದ ಹಾಗೆ ಪರಿಪೂರ್ಣವಾಗಿ ಭೌಗೋಳಿಕ ಧ್ರುವಗಳ ಜೊತೆಗೆ ಸಮಾನಾಂತರವಾಗಿ ಫೈನ್ ಟ್ಯೂನಿಂಗ್ ಆಗಿವೆ. ದುರಾದೃಷ್ಟಕರವಾಗಿ ಇವತ್ತಿನ ಕಾಲದಲ್ಲಿ ಹುಟ್ಟಿಕೊಂಡ ಎಡಪಂಥೀಯ ಜನಾಂಗವು ವಾಸ್ತು ಶಾಸ್ತ್ರ ಸುಳ್ಳು ಎಂದು ಬಿಂಬಿಸುತ್ತಿದೆ. ಈ ಎಡಪಂಥೀಯ ಮಹಾನುಭಾವರು ವಾಸ್ತು ಶಾಸ್ತ್ರದ, ಜೋತಿಷ್ಯ ಶಾಸ್ತ್ರದ ಉಪಯೋಗ ಪಡದುಕೊಳ್ಳಲಾರರು. ಇವರು ಎಷ್ಟರಮಟ್ಟಿಗೆ ವಿರೋಧ ವ್ಯಕ್ತಪಡಿಸುತ್ತಾರೆ ಅಂದರೆ ಆಯುರ್ವೇದ ಶಾಸ್ತ್ರವನ್ನು ಕೂಡ ನಿರಾಕರಿಸುವ ಭಾವವನ್ನು ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಪ್ರಾಚೀನ ಭಾರತದ ಜ್ಞಾನ ಭಂಡಾರ, ಸಂಸ್ಕೃತಿ, ಪರಂಪರೆಯನ್ನು ಒಪ್ಪಿಕೊಳ್ಳಲಾರರು ಹಾಗೂ ಎಲ್ಲವನ್ನೂ ತಿರುಚಿ ತಮ್ಮದೇ ಆದ ರೀತಿಯಲ್ಲಿ ಹೊಸ ಪದ್ಧತಯೊಂದನ್ನು ಹುಟ್ಟು ಹಾಕಬೇಕು ಎನ್ನುವ ಹುನ್ನಾರವನ್ನು ಮಾಡುತ್ತಿದ್ದಾರೆ. ಇನ್ನು ಯಾರಾದರೂ ಮತ್ತೊಬ್ಬರು ಇಂತಹ ಪುರಾತನ ಕಾಲದ ವಿದ್ಯೆಗಳನ್ನು ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕೆಂದರೆ ಅವರಿಗೂ ಕೂಡ ಋಣಾತ್ಮಕ ಹಾಗೂ ಕಪೋಲಕಲ್ಪಿತ ವಿಚಾರಗಳನ್ನು ತುಂಬಿ ಬಹಳಷ್ಟು ಜನರನ್ನು ನಾಸ್ತಿಕರನ್ನಾಗಿ ಮಾಡುತ್ತಿದ್ದಾರೆ. ಇನ್ನು ಇವರೆಲ್ಲರ ನಡುವೆ ನಕಲಿ ಜೋತಿಷ್ಯರ ಹಾಗೂ ವಾಸ್ತು ತಜ್ಞರ ಸಂಖ್ಯೆ ಕೂಡ ಹೆಚ್ಚಾಗಿದೆ ಹೀಗಾಗಿ ಪ್ರಾಚೀನ ಕಾಲದಲ ರಹಸ್ಯ ವಿದ್ಯೆಗಳ ಮೇಲಿರುವ ನಂಬಿಕೆಯನ್ನು ಜನ ಕಳೆದುಕೊಳ್ಳುತ್ತಿದ್ದಾರೆ.
Vastu in kannada
ರಾಮಾಯಣಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಮೊಹೆಂಜೊ-ದಾರೋ ಹಾಗೂ ಹರಪ್ಪ ಪಟ್ಟಣಗಳನ್ನು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಲಾಗಿತ್ತು ಎನ್ನುವ ಸಂಗತಿ ಪುರಾತತ್ವ ಇಲಾಖೆ ನಡೆಸಿರುವ ಉತ್ಖನನದ ಮೂಲಕ ತಿಳಿದು ಬರುತ್ತದೆ. ಮೊಹೆಂಜೊ-ದಾರೋ ಹಾಗೂ ಹರಪ್ಪ ಪಟ್ಟಣಗಳಲ್ಲಿ ಕಟ್ಟಲಾದ ಪ್ರತಿಯೊಂದು ಮನೆಯ ಉತ್ತರಕ್ಕೆ ಮತ್ತು ಪೂರ್ವಕ್ಕೆ ಹೆಚ್ಚು ಕಾಲಿ ಸ್ಥಳವನ್ನು ಬಿಡಲಾಗಿತ್ತು. ಒಳಚರಂಡಿ ವ್ಯವಸ್ಥೆ, ರಸ್ತೆ, ಪಟ್ಟಣದಲ್ಲಿ ಇದ್ದ ಈಜುವ ಕೊಳ, ಸಾರ್ವಜನಿಕ ಕಟ್ಟಡಗಳನ್ನು ವಾಸ್ತು ಶಾಸ್ತ್ರದ ನಿಯಮಗಳಿಗೆ ಅನುಗುಣವಾಗಿ ಕಟ್ಟಲಾಗಿತ್ತು ಎಂಬುದಕ್ಕೆ ಪುರಾತತ್ವ ಸಾಕ್ಷಿಗಳು ಸಿಗುತ್ತವೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಮೊಹೆಂಜೊ-ದಾರೋ ಹಾಗೂ ಹರಪ್ಪ ಅತ್ಯಂತ ಮುಂದುವರೆದ ನಾಗರಿಕತೆ ಎಂದು ಅರ್ಥವಾಗುತ್ತದೆ. ಇನ್ನು ರಾಮಾಯಣದ ಕಾಲದಲ್ಲಿ ಅಯೋಧ್ಯ ಪಟ್ಟಣವನ್ನು ಕಟ್ಟಲಾಗಿತ್ತು ಎಂಬುದಕ್ಕೆ ಧರ್ಮಗ್ರಂಥಗಳಲ್ಲಿ ಆಧಾರಗಳು ಸಿಗುತ್ತವೆ. 70 ಅಧ್ಯಾಯ ಹಾಗೂ 10 ಸಾವಿರ ಶ್ಲೋಕಗಳನ್ನು ಒಳಗೊಂಡ ಮನಸಾರ ಶಿಲ್ಪ ಶಾಸ್ತ್ರವೆಂಬ ಪ್ರಾಚೀನ ವಾಸ್ತು ಜ್ಞಾನವನ್ನು ಒಳಗೊಂಡ ಗ್ರಂಥವನ್ನು ಅನುಸರಿಸಿ ಅಯೋಧ್ಯ ಪಟ್ಟಣವನ್ನು ಕಟ್ಟಲಾಗಿತ್ತೆಂದು ಎಂದು ಹೇಳಲಾಗುತ್ತದೆ. ಇದೇ ರೀತಿ ಲಂಕಾ ನಗರವುನ್ನು ವಿಶ್ವಕರ್ಮನ ಸಹಾಯ ಪಡೆದು ಪರಮೇಶ್ವರನ ಇಚ್ಛೆಯಂತೆ ಕಟ್ಟಲಾಗಿತ್ತು ಎಂದು ಹಿಂದೂ ಪುರಾಣದಲ್ಲಿ ಹೇಳಲಾಗುತ್ತದೆ. ಪರಮೇಶ್ವರನ ಮದುವೆಯ ನಂತರ ಪಾರ್ವತಿಯ ಜೊತೆಗೆ ಲಂಕಾ ನಗರದಲ್ಲಿ ವಾಸಿಸಬೇಕೆಂಬ ಇಚ್ಛೆಯಿಂದ ವಿಶ್ವಕರ್ಮನ ಸಹಾಯ ಪಡೆದು ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಲಾಗಿತ್ತು ಎಂದು ಪುರಾಣಗಳು ಹೇಳುತ್ತವೆ. ಹೋಮ-ಹವನ, ಯಜ್ಞ-ಯಾಗಾದಿಗಳನ್ನು ಮಾಡಿ ಲಾಂಕದಲ್ಲಿ ಕಟ್ಟಲಾಗಿದ್ದ ಅರಮನೆಯ ಪ್ರವೇಶವನ್ನು ಮಾಡಬೇಕೆಂದು ಪ್ರಚಂಡ ಜ್ಞಾನವನ್ನು ಹೊಂದಿದ ಬ್ರಾಹ್ಮಣನೊಬ್ಬನನ್ನು ಕರೆಸಲಾಗಿತ್ತು. ಪ್ರವೇಶದ ಆಚರಣೆ ಮುಗದ ಮೇಲೆ ಆ ಬ್ರಾಹ್ಮಣ ಲಂಕಾ ಸೌಂದರ್ಯವನ್ನು ನೋಡಿ ಶಿವನ ಹತ್ತಿರ ಲಂಕಾ ನಗರವನ್ನೇ ದೀಕ್ಷೆಯನ್ನಾಗಿ ಕೊಡಬೇಕೆಂದು ಕೇಳಿಬಿಟ್ಟ! ಪರಶಿವನ ಕೂಡ ಅನುಗ್ರಹಿಸಿಬಿಟ್ಟ! ಲಂಕಾ ನಗರದ ಪ್ರವೇಶ ಆಚರಣೆ ಮಾಡಿ ಲಂಕಾ ನಗರವನ್ನೇ ಈ ರೀತಿ ದೀಕ್ಷೆಯನ್ನಾಗಿ ಪಡೆದ ಆ ಬ್ರಾಹ್ಮಣ ಮುಂದೆ ರಾಕ್ಷಸನಾಗಿ ಪರಿವರ್ತನೆಯಾಗಿ ಲಂಕಾ ನಗರವನ್ನು ತನ್ನದಾಗಿಸಿಕೊಂಡು ಲಂಕಾ ನಗರದ ರಾಜ್ಯಬಾರ ನಡೆಸುತ್ತಾನೆ ಆತನ ಹೆಸರೇ ರಾವಣ! ಹೀಗೆ ರಾವಣನ ಲಂಕಾ ಕೂಡ ವಿಶ್ವಕರ್ಮ ವಾಸ್ತುವಿಗೆ ಅನುಗುಣವಾಗಿ ನಿರ್ಮಿಸಲಾಗಿದ್ದು ಎಂದು ಹಿಂದೂ ಪುರಾಣಗಳಿಂದ ತಿಳಿದುಬರುತ್ತದೆ. ಇದೇ ರೀತಿ ಮಹಾಭಾರತದ ಕಾಲದಲ್ಲೂ ಕೂಡ ವಾಸ್ತು ಶಾಸ್ತ್ರದ ಪುರಾವೆಯನ್ನು ಸಿಗುತ್ತದೆ. ಪಾಂಡವರು ಇಂದ್ರಪ್ರಸ್ಥ ನಗರಿಯನ್ನು ಯಜ್ಞ ಯಾಗಾದಿಗಳನ್ನು ಮಾಡುವುದಕ್ಕಾಗಿ ನಿರ್ಮಿಸಿರುತ್ತಾರೆ. ತ್ರಿಕಾಲ ಜ್ಞಾನಿಯಾದ ಶ್ರೀ ಕೃಷ್ಣ ಪರಮಾತ್ಮನಿಗೆ ಕೌರವರು ಇಂದ್ರಪ್ರಸ್ಥ ನಗರವನ್ನು ಪಗಡಿ ಆಟದಲ್ಲಿ ಗೆಲ್ಲುತ್ತಾರೆ ಎಂಬುದು ಮೊದಲೇ ಗೊತ್ತಿತ್ತು. ಹೀಗಾಗಿ ಮಹಾಭಾರತ ಕಾಲದಲ್ಲಿ ಪ್ರಖ್ಯಾತಿ ಹೊಂದಿದ ವಾಸ್ತು ತಜ್ಞನಾದ ಮಯನ ಸಲಹೆ ಪಡೆದು ಶ್ರೀ ಕೃಷ್ಣ ಪರಮಾತ್ಮನು ಉದ್ದೇಶಪೂರ್ವಕವಾಗಿ ಒಂದು ಸುಸಜ್ಜಿತವಾದ ದೊಡ್ಡ ನೀರಿನ ಹೊಂಡವನ್ನು ಇಂದ್ರಪ್ರಸ್ಥ ನಗರದ ಮಧ್ಯಭಾಗದಲ್ಲಿ ಮಾಡಿಸಿದ್ದ. ಮಧ್ಯಭಾಗ ಅಂದ್ರೆ ಅದು ಬ್ರಹ್ಮಸ್ಥಾನವಾಗಿರುತ್ತದೆ. ಇದಕ್ಕೆ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ ಬ್ರಹ್ಮಸ್ಥಾನದಲ್ಲಿ ಯಾವುದೇ ನೀರಿನ ಹೊಂಡ ಇರುವಹಾಗೆ ಇಲ್ಲ. ಬ್ರಹ್ಮಸ್ಥಾನದಲಿದ್ದ ಈ ನೀರಿನ ಹೊಂಡ ಇರುವ ಕಾರಣಕ್ಕಾಗಿಯೇ ಮುಂದೆ ಕೌರವರು ಸಂಪೂರ್ಣವಾಗಿ ನಿರ್ನಾಮವಾಗಬೇಕಾಗುತ್ತದೆ.
Vastu in kannada
ಮನುಕುಲದ ಇತಿಹಾಸದ ಪುಟಗಳನ್ನು ತೆಗೆದು ನೋಡಿದರೆ, ಸಾರ್ವಜನಿಕವಾಗಿ ಹಾಗೂ ಸ್ವಂತ ಕಟ್ಟಡ ಕಟ್ಟುವ ಸಮಯದಲ್ಲಿ ವಾಸ್ತು ಶಾಸ್ತ್ರದ ಪ್ರಯೋಜನವನ್ನು ಅನಾದಿ ಕಾಲದಿಂದಲೂ ನಾವು ಪಡೆದುಕೊಳ್ಳುತ್ತಾ ಬಂದಿದ್ದೇವೆ. ಈಗಲೂ ಕೂಡ ಸ್ವಂತ ಕಟ್ಟಡ ಕಟ್ಟುವಾಗ ಬಹುತೇಕ ಜನ ವಾಸ್ತು ಶಾಸ್ತ್ರವನ್ನು ಅನುಸರಿಸುತ್ತೇವೆ ಆದರೆ ಸಾರ್ವಜನಿಕ ಕಾಮಗಿರಿಗಳನ್ನು ಮಾಡುವಾಗ ವಾಸ್ತು ಶಾಸ್ತ್ರದ ಕುರಿತು ತತ್ಸಾರ ಮಾಡಿ ಬಿಡುತ್ತೇವೆ. ಪ್ರಾಚೀನ ಭಾರತದ ಈ ವಾಸ್ತು ಜ್ಞಾನವನ್ನು ಇತ್ತೀಚಿಗೆ ಅಮೆರಿಕ, ಹಲವು ಯುರೋಪ್ ರಾಷ್ಟ್ರಗಳು, ಪಕ್ಕದ ನೇಪಾಳ, ರಷ್ಯಾ ಹಾಗೂ ಸಿಂಗಪುರದಲ್ಲಿ ಬಹಳಷ್ಟು ಅನುಸರಿಸುತ್ತಿದ್ದಾರೆ. ನೇಪಾಳದಲ್ಲಿ ಕಾಲೇಜುಗಳ್ಳಿ ವಾಸ್ತು ಹಾಗೂ ಜೋತಿಷ್ಯ ಶಾಸ್ತ್ರವನ್ನು ಕಲಿಸಲಾಗುತ್ತಿದೆ. ಆದರೆ ದುರಾದೃಷ್ಟಕರವಾಗಿ ಅರಿವಿನ ಕೊರತೆಯಿಂದ ಹಾಗೂ ಸಾರ್ವಜನಿಕ ಕೆಲಸ ಎನ್ನುವ ಕಾರಣಕ್ಕೆ ವಾಸ್ತು ಶಾಸ್ತ್ರದ ಕುರಿತು ತತ್ಸಾರ ಮಾಡಲಾಗುತ್ತದೆ. ಇಡೀ ದೇಶಾದ್ಯಂತ ಬಹುತೇಕ ಎಲ್ಲಾ ಪಟ್ಟಣಗಳಲ್ಲಿ ಕಾಲಘಟ್ಟಕ್ಕೆ ತಕ್ಕಂತೆ ಹಾಗೂ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಹತ್ತು ಹಲವು ಮಾರ್ಪಾಟುಗಳಾಗುತ್ತಿವೆ. ಇಲ್ಲಿ ನಮ್ಮ ಕರ್ನಾಟಕವನ್ನೇ ಉದಾರಣೆಯಾಗಿ ಇಟ್ಟುಕೊಂಡು ವಿಶ್ಲೇಷಣೆ ಮಾಡೋಣ. ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಪಟ್ಟಣಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಾಂಬರ್ ರಸ್ತೆ ಬದಲಾಗಿ ಸಿಮೆಂಟ್ ರಸ್ತೆ ಕಾಮಗಾರಿಯಾಗಿವೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಹತ್ತು ಹಲವು ಕಡೆಗಳಲ್ಲಿ ಫ್ಲೈ ಓವರ್ ಮತ್ತು ಅಂಡರ್ ಪಾಸ್ ನಿರ್ಮಾಣಗೊಂಡಿವೆ. ಇನ್ನು ವಾಸಿಸಲು ಕಟ್ಟಿಕೊಂಡ ಮನೆಯ ಅಕ್ಕ ಪಕ್ಕ ಎತ್ತರವಾದ ಮೊಬೈಲ್ ಟವರ್ ಗಳನ್ನು ಮಾಡಿಬಿಡುತ್ತಾರೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಚಿಕ್ಕ ಮನೆಗಳ ಅಕ್ಕ ಪಕ್ಕ ಗಗನಚುಂಬಿ ಕಟ್ಟಡಗಳು ನಿರ್ಮವಾಗುತ್ತವೆ. ಇನ್ನೂ ಬೆಂಗಳೂರಿನಲ್ಲಿ ಮೆಟ್ರೋ ರೈಲು ಕಾಮಗಾರಿಯಾಗಿದೆ. ನಾಗರಿಕ ಕೆಲಸದಲ್ಲಿ ಹೀಗೆ ಆಗುವ ದೊಡ್ಡ ದೊಡ್ಡ ಮಾರ್ಪಾಟಗಳು ನಮ್ಮ ದಿನನಿತ್ಯದ ಬದುಕಿನ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ. ಈಗಿರುವ ಜನಪ್ರತಿನಿಧಿಗಳು ಅಧಿಕಾರಿಗಳು ಮತ್ತು ಎಂಜಿನಿಯರುಗಳು ಸಾರ್ವಜನಿಕ ಯೋಜನೆಯೊಂದನ್ನು ಮಾಡಲು ಹೊರಟರೆ ಕೇವಲ ವೆಚ್ಚ ಕಡಿತಕ್ಕೆ, ಸುಲಭೀಕರಣಕ್ಕೆ, ಆಧುನೀಕರಣಕ್ಕೆ, ಆರಾಮದಾಯಕ ಬದುಕಿಗೆ ಹಾಗೂ ಕಮಿಷನ್ ಪಡೆಯುವುದಕ್ಕೆ ಹೆಚ್ಚು ಒತ್ತು ಕೊಟ್ಟು ವಾಸ್ತು ಶಾಸ್ತ್ರ ಮರೆತು ಬಿಡುತ್ತಾರೆ!!
Vastu in kannada
ಉದಾಹರಣೆಗೆ ಡಾಂಬರ್ ರಸ್ತೆಗೆ ಬದಲಾಗಿ ಎಲ್ಲ ಕಡೆಗಳಲ್ಲೂ ಸಿಮೆಂಟ್ ರಸ್ತೆಗಳು ಆಗುತ್ತಿವೆ. ಸಿಮೆಂಟ್ ರಸ್ತೆ ಸಹಜವಾಗಿ ತುಂಬಾ ದಪ್ಪವಾಗಿ ಮಾಡಬೇಕಾಗುತ್ತದೆ. ಇದರಿಂದ ಸಿಮೆಂಟ್ ರಸ್ತೆ ಬದಿಯಲ್ಲಿ ಇರುವ ಮನೆಗಳ ಅಥವಾ ಅಂಗಡಿಗಳ ಒಳಗೆ ಇರುವ ಗ್ರೌಂಡ್ ಲೆವೆಲ್ ಮೈನ್ ರೋಡ್ ಕಿಂತಲೂ ಕೆಳಗಡೆ ಹೋಗಿ ಬಿಡುತ್ತದೆ. ಅಥವಾ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೇಳ್ಬೇಕು ಅಂದ್ರೆ ಮನೆ ಒಳಗಿನ ಗ್ರೌಂಡ್ ಲೆವೆಲ್ ಕಿಂತಲೂ ರೋಡ್ ಎತ್ತರವಾಗಿ ಬಿಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಡದ ಒಳಗೆ ಇರುವ ಗ್ರೌಂಡ್ ಲೆವೆಲ್ ಮುಖ್ಯ ರಸ್ತೆಗಿಂತಲೂ ಎತ್ತರವಾಗಿರತಕ್ಕದ್ದು. ಇಲ್ಲ ಅಂದ್ರೆ ಖಂಡಿತವಾಗಿಯೂ ಅಲ್ಲಿ ವ್ಯಾಪಾರ ವ್ಯವಹಾರ ಕುಂಠಿತಗೊಳ್ಳುತ್ತದೆ. ಬೇಕಿದ್ದರೆ ಮಲ್ಲೇಶ್ವರಂ ಮೇನ್ ರೋಡ್ ಕುರಿತು ಒಂದು ಸತಿ ವಿಶ್ಲೇಷಣೆ ಮಾಡಿಕೊಳ್ಳಬಹುದು. ಅಲ್ಲಿ ಮೊದಲು ಡಾಂಬರ ರಸ್ತೆ ಇತ್ತು. ಆಗ ವ್ಯಾಪಾರ ವ್ಯವಹಾರ ಹೇರಳವಾಗಿ ಆಗುತ್ತಿತ್ತು ಆದರೆ ಕಾಲಘಟ್ಟಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾವಣೆ ಆದ ಹಾಗೆ ಮಲ್ಲೇಶ್ವರಂ ಮೇನ್ ರೋಡ್ ಸಿಮೆಂಟ್ ರಸ್ತೆ ಆಯ್ತು. ಸಿಮೆಂಟ್ ರಸ್ತೆ ಆದ ನಂತರ ಅದು ಅಕ್ಕ ಪಕ್ಕ ಅಂಗಡಿಗಳ ಒಳಗಿರುವ ಗ್ರೌಂಡಿಂಗ್ ಲೆವೆಲಿಗಿಂತಲೂ ಎತ್ತರವಾಯಿತು. ಇದರಿಂದ ಮಲ್ಲೇಶ್ವರಂ ಮೈನ್ ರೋಡ್ ನಲ್ಲಿರುವ ವ್ಯಾಪಾರ ವ್ಯವಹಾರ ಕುಂಠಿತಗೊಂಡಿತು. ಇದೇ ರೀತಿ ರಾಜರಾಜೇಶ್ವರಿ ನಗರದಲ್ಲಿ, ಕೆಂಗೇರಿ ಉಪನಗರದಲ್ಲಿ, ವಿಜಯನಗರದಲ್ಲಿ ಸಿಮೆಂಟ್ ರಸ್ತೆ ಆಯ್ತು ಹಾಗೂ ರಸ್ತೆ ಬದಿಯಲ್ಲಿರುವ ಅಂಗಡಿಗಳ ಒಳಗಿರುವ ಫ್ಲೂರಿಂಗ್ ಲೆವೆಲ್ ಗಿಂತಲೂ ಹೊರಗಿನ ರಸ್ತೆ ಮಟ್ಟ ಎತ್ತರವಾಯಿತು ಹಾಗೂ ಇದರಿಂದ ವಾಸ್ತು ದೋಷ ಉಂಟಾಗಿ ವ್ಯಾಪಾರ ವ್ಯವಹಾರ ಕುಂಟಿತಗೊಂಡಿತು. ಆಗಿರುವ ಈ ವಿದ್ಯಮಾನದ ಕುರಿತು ಯಾರಾದರೂ ವಿಶ್ಲೇಷಣೆ ಮಾಡಿಕೊಳ್ಳಬಹುದು!
Vastu in kannada
ಬೆಂಗಳೂರಿನ ಹಲವು ಮುಖ್ಯ ರಸ್ತೆಗಳು ಸಿಮೆಂಟ್ ರಸ್ತೆಗಳಾಗಿ ಮಾರ್ಪಾಟುಗೊಂಡಿವೆ. ಎಲ್ಲೆಲ್ಲಿ ಸಿಮೆಂಟ್ ರಸ್ತೆ ಆಗಿದೆನೋ ಅಲ್ಲಿ ರಸ್ತೆ ಮಟ್ಟ ಮೇಲೇರಿದೆ ಹಾಗೂ ಇದರಿಂದ ಅಲ್ಲಿನ ವ್ಯಾಪಾರ ವ್ಯವಹಾರ ಕುಂಟಿತಗೊಂಡಿದೆ. ಅತ್ಯಂತ ದಪ್ಪಾಗಿರುವ ಸಿಮೆಂಟ್ ರಸ್ತೆಗಳು, ಮೆಟ್ರೋ ಕಾಮಗಾರಿ, ಅಂಡರ್ ಪಾಸ್, ಫ್ಲೈ ಓವರ್ಗಳು ಇವೆಲ್ಲವೂ ವ್ಯಾಪಾರ ವ್ಯವಹಾರದ ಮೇಲೆ ಪ್ರಭಾವ ಬೀರುತ್ತವೆ. ಇದೇ ರೀತಿ ಏಕಾಏಕಿ ಫ್ಲೈ ಓವರಗಳು ನಿರ್ಮಾಣವಾಗುತ್ತವೆ ಹಾಗೂ ಇದರಿಂದ ವ್ಯಾಪಾರ ವ್ಯವಹಾರದ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಬೆಂಗಳೂರು-ಮೈಸೂರು express highy way ಆದ ನಂತರ ಕೆಂಗೇರಿಯಿಂದ ಬಿಡದಿ ತನಕ ರಸ್ತೆಯ ಎರಡೂ ಬದಿಯಲ್ಲಿ ನಡೆಯುವ ವ್ಯಾಪಾರ ವ್ಯವಹಾರ ಕುಂಟಿತಗೊಂಡಿರುವುದನ್ನು ಗಮನಿಸಬಹುದು. ಇನ್ನು ರಾತ್ರೋರಾತ್ರಿ ಮನೆ ಅಕ್ಕ ಪಕ್ಕ ಏಕಾಏಕಿ ಮೊಬೈಲ್ ಟವರ್ ನಿರ್ಮಾಣವಾಗಿ ಬಿಡುತ್ತವೆ. ಮೊಬೈಲ್ ಟವರ್ ಗಳಿಂದ ಬರುವ ವಿದ್ಯುತ್ಕಾಂತೀಯ ರೇಡಿಯೋ ತರಂಗಗಳು ಮನುಷ್ಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಇದೇ ರೀತಿ ಲೇಔಟ್ ಗಳಲ್ಲಿ ಹೈ ವೋಲ್ಟೇಜ್ ತಂತಿಗಳು ಹಾಯ್ದು ಹೋಗುತ್ತವೆ. ಹೈ ವೋಲ್ಟೇಜ್ ಇರುವ ತಂತಿಗಗಳ ಸುತ್ತಲೂ ಬಲವಾದ ಕಾಂತೀಯ ಶಕ್ತಿ ಇರುತ್ತದೆ. ಇದರಿಂದ ನಮ್ಮ ಅರೋಗ್ಯದ ಮೇಲೆ ಪ್ರಭಾವ ಉಂಟಾಗುತ್ತದೆ. ಕಾಲಘಟ್ಟಕ್ಕೆ ಅನುಗುಣವಾಗಿ ಹೀಗೆ ಬದಲಾವಣೆಯಾಗುವ ಭೌಗೋಳಿಕ ಅಂಶಗಳಿಂದ ವಾಸ್ತು ತಪ್ಪಿ ಹೋಗಿ ನಮ್ಮ ಮೇಲೆ ಋಣಾತ್ಮಕ ಪ್ರಭಾವವಾಗುತ್ತದೆ. ಆದ್ದರಿಂದ ಮನೆ ಕಟ್ಟುವುದಕ್ಕಿಂತ ಮನೆ ಕಟ್ಟಲು ಬೇಕಾಗುವ ನಿವೇಶನ ಕೊಂಡುಕೊಳ್ಳುವುದು ಬಲುಮುಖ್ಯ ಆಗಿರುತ್ತದೆ. ಎಷ್ಟೇ ಒಳ್ಳೆಯ ವಾಸ್ತು ಬಲ ಹೊಂದಿದ ನಿವೇಶನ ಕೊಂಡು ಮನೆ ಕಟ್ಟಿದರೂ ಕೂಡ ಕೆಲವು ಸಂದರ್ಭದಲ್ಲಿ ಕಾಲಘಟ್ಟಕ್ಕೆ ಅನುಗುಣವಾಗಿ ಅನೇಕ ಭೌಗೋಳಿಕ ಬದಲಾವಣೆಗಳಾಗುತ್ತವೆ ಹಾಗೂ ಇದರಿಂದ ಮನೆಯ ವಾಸ್ತು ತಪ್ಪಿ ಹೋಗುತ್ತದೆ. ಹೊಸ ಹೊಸ ಬಡಾವಣೆ ನಿರ್ಮಾಣವಾಗುತ್ತವೆ ಹಾಗೂ ಹಳೆ ಬಡಾವಣೆಗಳು ಕಾಲಘಟ್ಟಕ್ಕೆ ಅನುಗುಣವಾಗಿ ತಮ್ಮ ಮೂಲ ವಿನ್ಯಾಸ ಕಳೆದುಕೊಂಡು ಬಿಡುತ್ತವೆ.
Similar Article on Vastu👇
ಸೈಟ್ ಖರೀದಿಸುವಾಗ ವಾಸ್ತು ವಿಶ್ಲೇಷಣೆ.
ಉಜ್ಜೇನಿಯ ಮಹಾಕಾಳೇಶ್ವರ ದೇವಸ್ಥಾನ👇