ಮಹಾಕಾಳೇಶ್ವರ ದೇವಸ್ತಾನ ಜಗತ್ತಿನ ಅದ್ಭುತಗಳಲ್ಲಿಒಂದು. ಸಮಯ ಮತ್ತು ಸಾವಿನ ಅಧಿಪತಿ ಎಂದು ಉಜ್ಜಯಿನಿಯ ಮಹಾಕಾಳೇಶ್ವರನನ್ನು ಪೂಜಿಸಲಾಗುತ್ತದೆ! ಇಡೀ ಜಗತ್ತಿನ ಸಮಯವನ್ನು ಉಜ್ಜಯಿನದ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಜ್ಯೋತಿರ್ಲಿಂಗ ನಿರ್ಧರಿಸಬಲ್ಲದು ಎಂಬುದು ಇವತ್ತಿನ ಪೀಳಿಗೆಗೆ ಸರಿಯಾಗಿ ಗೊತ್ತಿಲ್ಲ. ಏಕೆಂದ್ರೆ ಬ್ರಿಟಿಷ ಸರ್ಕಾರ ಭಾರತದಲ್ಲಿದ್ದಾಗ ಉಜ್ಜಯಿನ ಮೇಲೆ ಹಾದು ಹೋಗಿರುವ 0° ರೇಖಾಂಶವನ್ನು ಲಂಡನ್ ನಗರದ ಗ್ರೀನ್‌ವಿಚ್ಗೆ ವರ್ಗಾವಣೆ ಮಾಡುವ ಮೂಲಕ ತಮಗೆ ಹೇಗೆ ಬೇಕೋ ಹಾಗೆ ಜಾಗತಿಕ ಸ್ಥಾನೀಕರಣ (Global positioning) ಮಾಡಿಕೊಂಡರು. ಭಾರತದ ಅತ್ಯಂತ ಪುರಾತನ ಖಗೋಳ ಶಾಸ್ತ್ರದ ಗ್ರಂಥವಾದ ಸೂರ್ಯ ಸಿದ್ಧಾಂತದ ಪ್ರಕಾರ 0° ರೇಖಾಂಶವು ಉಜ್ಜಯನದ ಮೇಲೆ ದಾಟಿ ಹೋಗುತ್ತದೆ ಹಾಗೂ ಈ 0° ರೇಖಾಂಶವು ಕರ್ಕಾಟಕ ಸಂಕ್ರಾಂತಿ ವೃತ್ತವನ್ನು (ಉತ್ತರದ 23.5° ಅಕ್ಷಾಂಶ) ಉಜ್ಜಯನದ ಮೇಲೆ ಛೇದಿಸುತ್ತದೆ. ಹೀಗಾಗಿ ‘ಸೂರ್ಯ ಸಿದ್ಧಾಂತ’ ಗ್ರಂಥದ ಪ್ರಕಾರ ಉಜ್ಜಯನದ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಭಾರತದ ಹಾಗೂ ಇಡೀ ಜಗತ್ತಿನ ಕೇಂದ್ರ ಬಿಂದು ಎಂದು ಪರಿಗಣಿಸಲಾಗುತ್ತದೆ. ಆದ್ದರಿದಲೇ ಜಾಗತಿಕ ಸ್ಥಾನೀಕರಣವನ್ನು (Global positioning) ಮಹಾಕಾಳೇಶ್ವರ ಜ್ಯೋತಿರ್ಲಿಂಗವನ್ನು ಆಧಾರವಾಗಿಟ್ಟುಕೊಂಡು ಮಾಡಬೇಕು ಮತ್ತು ಮಹಾಕಾಳೇಶ್ವರ ಜ್ಯೋತಿರ್ಲಿಂಗದ ನಡು ನೆತ್ತೆಯ ಮೇಲೆ ಸೂರ್ಯ ಬಂದಾಗ ಮಧ್ಯಾಹ್ನ 12 ಗಂಟೆ ಎಂದು ಪರಿಗಣಿಸಬೇಕು ಹಾಗೂ ಇದನ್ನೇ ಆಧಾರವಾಗಿ ಇಟ್ಟುಕೊಂಡು ಇಡೀ ಪ್ರಪಂಚದ ಎಲ್ಲ ದೇಶಗಳು ತಮ್ಮ ತಮ್ಮ ಟೈಮ್ ಸೆಟ್ ಮಾಡಿಕೊಳ್ಳಬೇಕು. ಆದರೆ ದುರಾದೃಷ್ಟಕರವಾಗಿ ಖಗೋಳಶಾಸ್ತ್ರದ ಪುರಾತನ ‘ಸೂರ್ಯ ಸಿದ್ಧಾಂತ’ ಗ್ರಂಥ ಬ್ರಿಟಿಷರ ಕೈಗೆ ಸಿಕ್ಕಿತು. ಅದನ್ನು ಅವರು ಆಳವಾಗಿ ಅಧ್ಯಯನ ಮಾಡದರು ಹಾಗೂ ಉಜ್ಜನದ ಮೇಲೆ ದಾಟಿ ಹೋದ 0° ರೇಖಾಂಶವನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಲಂಡನ್ ನಗರದ ಗ್ರೀನ್‌ವಿಚ್ಗೆ ವರ್ಗಾವಣೆ ಮಾಡಿ ಅದನ್ನೇ ಇಡೀ ಪ್ರಪಂಚಾದ್ಯಂತ ಸ್ಟ್ಯಾಂಡರ್ಡ್ ಮಾಡಿದರು. ಹೀಗಾಗಿ ಗ್ರೀನ್‌ವಿಚನ ನಡು ನೆತ್ತೆಯ ಮೇಲೆ ಸೂರ್ಯ ಬಂದಾಗ 12 ಗಂಟೆಯನ್ನು ಪರಿಗಣಿಸಲಾಗುತ್ತದೆ ಹಾಗೂ ಅದನ್ನೇ ಆಧಾರವಾಗಿಟ್ಟುಕೊಂಡು ಪ್ರಪಂಚದ ಇತರ ರಾಷ್ಟ್ರಗಳು ತಮ್ಮ ತಮ್ಮ ದೇಶದ ಟೈಮ್ ಸೆಟ್ ಮಾಡಿಕೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಭಾರತದ ಏರ್ಪೋರ್ಟ್ಗಳಲ್ಲಿ ಹಾಗೂ ರೈಲ್ವೆ ಸ್ಟೇಷನ್ಗಳಲ್ಲಿ GMT +5.5 ಎಂದು ಡಿಸ್ಪ್ಲೇ ಮಾಡಿರುತ್ತಾರೆ. ದುರಾದೃಷ್ಟಕರವಾಗಿ ನಾವು ಶಾಲೆ ಕಾಲೇಜುಗಳಲ್ಲಿ ಭೌಗೋಳಿಕ ಶಾಸ್ತ್ರ ಅಧ್ಯಯನ ಮಾಡುವಾಗ 0° ರೇಖಾಂಶ ಲಂಡನ್ ನಗರದ ಗ್ರೀನ್‌ವಿಚ್ ಮೇಲೆ ದಾಟಿ ಹೋಗಿದೆ ಎಂದು ಅಧ್ಯಯನ ಮಾಡಲೇಬೇಕಾದ ಅನಿವಾರ್ಯತೆ ಇದೆ. ಬ್ರಿಟಿಷರು ಭಾರತದಿಂದ ಅಪಾರವಾದ ಸಂಪತ್ತಿನ ಜೊತೆಗೆ ವಿದ್ಯೆಯನ್ನು ಕೂಡ ಕೊಳ್ಳೆ ಹೊಡೆದುಕೊಂಡ ಹೋದರು.

ಮಹಾಕಾಳೇಶ್ವರ ದೇವಸ್ತಾನ : ಲಂಡನ್ ನಗರದ ಗ್ರೀನ್‌ವಿಚ್ ಮೇಲೆ ಈಗ ದಾಟಿ ಹೋದ 0° ರೇಖಾಂಶವನ್ನು ಆಧಾರವಾಗಿಟ್ಟುಕೊಂಡು ಪಶ್ಚಿಮದ ಭಾಗವನ್ನು ಪಶ್ಚಿಮ ಗೋಳಾರ್ಧವೆಂದು ಅದೇ ರೀತಿ ಪೂರ್ವ ಭಾಗವನ್ನು ಪೂರ್ವ ಗೋಳಾರ್ಧವೆಂದು ವಿಭಜಿಸಲಾಗುತ್ತದೆ. 0° ರೇಖಾಂಶದಿಂದ ಪಶ್ಚಿಮ ಭಾಗಕ್ಕೆ 180 ರೇಖಾಂಶಗಳು ಹಾಗೂ ಪೂರ್ವ ಭಾಗಕ್ಕೆ 180 ರೇಖಾಂಶಗಳನ್ನು ರಚಿಸಲಾಗಿದೆ. ಭೂಮಿ ಗೋಳಾಕಾರವಾಗಿರುವುದರಿಂದ ಒಟ್ಟು 360 ರೇಖಾಂಶಗಳನ್ನು ರಚಿಸಲಾಗಿದೆ. ಭೂಮಿ 360° ತನ್ನ ಅಕ್ಷದ ಮೇಲೆ ಸುತ್ತಿದಾಗ ಒಂದು ಸುತ್ತು ಪೂರ್ಣಗೊಂಡು 24 ಗಂಟೆ ಜರಗುತ್ತದೆ. ಅಥವಾ ಭೂಮಂಡಲ ತನ್ನ ಸುತ್ತಲೂ ಒಂದು ಸುತ್ತು ತಿರುಗಿದಾಗ ಸೂರ್ಯನ ಕಿರಣಗಳು 360°ವರೆಗೆ ಚಲಿಸುತ್ತವೆ ಎಂದು ಹೇಳಬಹುದು. ಆದ್ದರಿಂದ ಸೂರ್ಯನ ಕಿರಣಗಳು 1° ವರೆಗೆ ಚಲಿಸಲು ತೆಗೆದುಕೊಳ್ಳಲು ಬೇಕಾಗುವ ಸಮಯ 24/360 × 60 = 4 ನಿಮಿಷವಾಗಿರುತ್ತದೆ. ಅಂದ್ರೆ ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶದ ನಡುವೆ 4 ನಿಮಿಷ ಟೈಮ್ ವ್ಯತ್ಯಾಸ ಉಂಟಾಗುತ್ತದೆ. ನಮ್ಮ ಭಾರತ ದೇಶ 68°7′ ಪೂರ್ವ ರೇಖಾಂಶದಿಂದ 97°25′ ಪೂರ್ವ ರೇಖಾಂಶದ ವರೆಗೆ ಹಬ್ಬಿದೆ. ಇದನ್ನು ಸರಾಸರಿ ತೆಗೆದಾಗ 68°7 + 97°25/2 = 82°975′ ಬರುತ್ತದೆ. ಈ 82°975 ಪೂರ್ವ ರೇಖಾಂಶವನ್ನು ನಾವು ಟೈಂ ಝೋನ್ ಆಗಿ ಸ್ಟ್ಯಾಂಡರ್ಡ್ ಮಾಡಿಕೊಂಡಿದ್ದೇವೆ. ಈ 82°975 ಪೂರ್ವ ರೇಖಾಂಶದ ನಡು ನೆತ್ತಿಯ ಮೇಲೆ ಸೂರ್ಯ ಬಂದಾಗ ಮಧ್ಯಾಹ್ನ 12 ಗಂಟೆ ಎಂದು ಭಾರತೀಯರು ಪರಿಗಣಿಸತಕ್ಕದ್ದು. ಭಾರತದ ಟೈಂ ಝೋನ್ ಆದ ಪೂರ್ವ ರೇಖಾಂಶವು ಗ್ರೀನ್ ವಿಚ್ ರೇಖಾಂಶದಿಂದ 82°975′ ಅಷ್ಟು ದೂರವಿದೆ. ಸೂರ್ಯನ ಕಿರಣಗಳು ಭೂಮಿಯ ಸುತ್ತ 1° ಅಷ್ಟು ಚಲಿಸಲು 4 ನಿಮಿಷ ಸಮಯ ಬೇಕಾಗುತ್ತದೆ ಆದ್ದರಿಂದ 4 × 82°975 = 5.5 ಗಂಟೆಗಳು. ಅಂದ್ರೆ ಗ್ರೀನ್ ವಿಚ್ ಟೈಂ ಝೋನ್ ಹೋಲಿಸಿದಾಗ ನಮ್ಮ ಭಾರತದ ಟೈಂ 5.5 ಗಂಟೆ ಮುಂದೆ ಇರುತ್ತದೆ. ಇದೇ ಕಾರಣಕ್ಕೆ ಏರ್ಪೋರ್ಟಗಳಲ್ಲಿ ಹಾಗೂ ರೈಲ್ವೆ ಸ್ಟೇಷನ್ಗಳಲ್ಲಿ GMT +5.5 ಎಂದು ಬರೆಯಲಾಗುತ್ತದೆ. ಪೂರ್ವಕ್ಕೆ ಪ್ರಯಾಣ ಮಾಡಿದ ಹಾಗೆ ಟೈಂ ಮುಂದಕ್ಕೆ ಹೋಗುತ್ತದೆ. ಜಪಾನ್ ಅಲ್ಲಿ GMT+9 ಇರುತ್ತದೆ. ಇನ್ನು 0° ಗ್ರೀನ್ ವಿಚ್ ರೇಖಾಂಶದಿಂದ ಪಶ್ಚಿಮಕ್ಕೆ ಹೋದರೆ ಟೈಮ್ ಹಿಂದಕ್ಕೆ ಬೀಳುತ್ತದೆ. ಉದಾಹರೆಗಾಗಿ ವಾಷಿಂಗ್ಟನ್ ಮೇಲೆ 77.0369° ರೇಖಾಂಶ ಇದೆ. ಹೀಗಾಗಿ 4 ನಿಮಿಷ × 77.0369 = 5.1 ಗಂಟೆ ಟೈಂ ವ್ಯತ್ಯಾಸ ಉಂಟಾಗುತ್ತದೆ. ಆದರೆ ಇಲ್ಲಿ ಟೈಂ ಗ್ರೀನ್ ವಿಚ್ ರೇಖಾಂಶಕ್ಕೆ ಹೋಲಿಸಿದಾಗ 5.1 ಗಂಟೆ ಹಿಂದಕ್ಕೆ ಇರುತ್ತದೆ. ಆದ್ದರಿಂದ ವಾಷಿಂಗ್ಟನ್ ಏರ್ಪೋರ್ಟ್ಗಳಲ್ಲಿ GMT -5.1 ಎಂದು ಬರೆಯಲಾಗುತ್ತದೆ. ಇದನ್ನು ಅತ್ಯಂತ ಸರಳವಾಗಿ ಹೇಳಬೇಕೆಂದರೆ ಗ್ರೀನ್‌ವಿಚ್ ರೇಖಾಂಶದಿಂದ ಪೂರ್ವಕ್ಕೆ ಪ್ರಯಾಣ ಮಾಡಿದರೆ ಟೈಮ್ ಮುಂದ ಇರುತ್ತದೆ ಹಾಗೂ ಪಶ್ಚಿಮಕ್ಕೆ ಪ್ರಯಾಣ ಮಾಡಿದರೆ ಟೈಮ್ ಹಿಂದೆ ಇರುತ್ತದೆ. ಇಂತಹ ಭೌಗೋಳಿಕ ಪವಾಡಕ್ಕೆ ಅರಿವಿನ ಕೊರತೆ ಇರುವ ಅನೇಕರು ಭಾರತದಲ್ಲಿ ಬೆಳಕು ಇದ್ದಾಗ ಅಮೆರಿಕದಲ್ಲಿ ಕತ್ತಲಾಗಿರುತ್ತದೆ ಎಂದು ಹೇಳುತ್ತಿರುತ್ತಾರೆ!

ಮಹಾಕಾಳೇಶ್ವರ ದೇವಸ್ತಾನ : ಭೂಮಿ ಗೋಳಾಕಾರವಾಗಿರುವುದರಿಂದ ಭೂಮಧ್ಯ ರೇಖೆಯಿಂದ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಹೋದಂತೆ ಎರಡು ರೇಖಾಂಶಗಳ ನಡುವಿನ ದೂರ ಕಡಿಮೆಯಾಗುತ್ತಾ ಹೋಗುತ್ತದೆ. ಭೂಮಿಯ ಸುತ್ತಳತೆಯನ್ನು ಲೆಕ್ಕಾಚಾರ ಮಾಡುವಾಗ ಭೂಮಧ್ಯ ರೇಖೆಯನ್ನು ಪರಿಗಣಿಸಬೇಕಾಗುತ್ತದೆ. ಭೂಮಧ್ಯ ರೇಖೆಯ ಮೇಲೆ ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶದ ನಡುವಿನ ದೂರ 111.9 ಕಿಲೋ ಮೀಟರ್ ಇರುತ್ತದೆ ಮತ್ತು ಭೂಮಿಯ ಮೇಲೆ ಒಟ್ಟು 360 ರೇಖಾಂಶಗಳ ಇವೆ. ಆದ್ದರಿಂದ ಭೂಮಿಯ ಸುತ್ತಳತೆ = 360×111.9 = 40284 ಕಿಲೋ ಮೀಟರ್ ಆಗಿರುತ್ತದೆ. ಇನ್ನು ಭೂಮಿಯ ವ್ಯಾಸ (Diameter) ಕಂಡುಹಿಡಿಯಲು ಭೂಮಿಯ ಸುತ್ತಳತೆ ÷ π ಮಾಡಬೇಕು. ಆದ್ದರಿಂದ ಭೂಮಿಯ ವ್ಯಾಸ = 40284÷π = 12822.79 ಕಿಲೋ ಮೀಟರ್ ಆಗುತ್ತದೆ. ಇನ್ನು ಭೂಮಿ ತನ್ನ ಸುತ್ತ ಸುತ್ತುವ ವೇಗವನ್ನು ಹೇಗೆ ಕಂಡುಹಿಡಿಯಬೇಕು ಅನ್ನೋದನ್ನು ನೋಡೋಣ. 40284 ಕಿಲೋಮೀಟರ್ ಭೂಮಿಯ ಸುತ್ತಳತೆ ಇದೆ. ಅಂದ್ರೆ ಭೂಮಿಯ 40284 ಕಿಲೋಮೀಟರ್ ಸುತ್ತಿದಾಗ ಒಂದು ಸುತ್ತು ಪೂರ್ಣಗೊಳ್ಳುತ್ತದೆ ಹಾಗೂ ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ ಕಾಲ 24 ಗಂಟೆ. ಆದ್ದರಿಂದ ಭೂಮಿ ತನ್ನ ಸುತ್ತ ಸುತ್ತುವ ವೇಗ = 40284 ಕಿಲೋಮೀಟರ್ (ಭೂಮಿಯ ಸುತ್ತಳತೆ) ÷ 24 ಗಂಟೆ (ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ ಕಾಲ) = 1678.5 ಕಿಲೋಮೀಟರ್ ಪ್ರತಿ ಗಂಟೆಗೆ ಇರುತ್ತದೆ.

: ಇನ್ನು ಭೂಮಧ್ಯ ರೇಖೆ ಅಥವಾ ಸಮಭಾಜಕ ವೃತ್ತವನ್ನು ಪರಿಗಣಿಸಿ ಒಟ್ಟು ಅಕ್ಷಾಂಶಗಳ ಲೆಕ್ಕಾಚಾರ ಮಾಡಿದಾಗ ಅವು 181 ಇವೆ. ಭೂಮಧ್ಯ ರೇಖೆಯಿಂದ ಉತ್ತರಕ್ಕೆ 90 ಅಕ್ಷಾಂಶಗಳು ಹಾಗೂ ದಕ್ಷಿಣಕ್ಕೆ 90 ಅಕ್ಷಾಂಶಗಳು ಇವೆ. ಅಕ್ಷಾಂಶಗಳ ನಡುವಿನ ದೂರ ಕೂಡ 111.9 ಕಿಲೋಮೀಟರ್ ಆಗಿದೆ. ಭೂಮಿಯ ಮೇಲಿನ ಸಮಯವನ್ನು ಲೆಕ್ಕಾಚಾರ ಮಾಡಲು ರೇಖಾಂಶಗಳ ಪಾತ್ರ ವಹಿಸಿದರೆ ಅಕ್ಷಾಂಶಗಳು ಭೂಮಿಯ ಮೇಲಿನ ಹವಾಮಾನವನ್ನು ಹಾಗೂ ಋತುಮಾನಗಳನ್ನು ಲೆಕ್ಕ ಹಾಕಲು ಮಹತ್ವದ ಪಾತ್ರ ವಹಿಸುತ್ತವೆ. ಭೂಮಧ್ಯ ರೇಖೆಯಿಂದ ಉತ್ತರಕ್ಕೆ 5 ಡಿಗ್ರಿ ಹಾಗೂ ದಕ್ಷಿಣಕ್ಕೆ 5 ಡಿಗ್ರಿ ವರೆಗೆ ಇರುವ ಪ್ರದೇಶದಲ್ಲಿ ವರ್ಷದ 12 ತಿಂಗಳುಗಳ ಕಾಲ ಮಳೆಗಾಲವಿರುತ್ತದೆ ಹಾಗೂ ಇಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ. ಸಮಭಾಜಕ ವೃತ್ತ ಅಥವಾ ಭೂಮಧ್ಯ ರೇಖೆಯಿಂದ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಪ್ರಯಾಣಿಸಿದಂತೆ ಮಳೆಗಾಲದ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ ಹಾಗೂ ಮಳೆಯ ಹನಿಯ ದಪ್ಪ ಕಡಿಮೆಯಾಗುತ್ತಾ ಹೋಗುತ್ತದೆ. ಉದಾಹರಣೆಗೆ ಶ್ರೀಲಂಕಾದಲ್ಲಿ ಹೆಚ್ಚು ಕಡಿಮೆ ಒಂಭತ್ತು ತಿಂಗಳು ಮಳೆಗಾಲವಿರುತ್ತದೆ ಹಾಗೂ ಮಳೆ ಹನಿಯ ದಪ್ಪ ತುಂಬಾ ದೊಡ್ಡದಾಗಿರುತ್ತದೆ. ಹೀಗಾಗಿ ಶ್ರೀಲಂಕಾದಲ್ಲಿ ಕಲ್ಲು ಬಿದ್ದ ಹಾಗೆ ಮಳೆಯಾಗುತ್ತದೆ. ಶ್ರೀಲಂಕಾದಿಂದ ಉತ್ತರಕ್ಕೆ ಬಂದರೆ ಮಳೆಗಾಲದ ಅವಧಿ ಕಡಿಮೆಯಾಗುತ್ತದೆ ಹಾಗೂ ಮಳೆಯ ಹನಿಯ ದಪ್ಪ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ನಮ್ಮ ಭಾರತದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹೋದಂತೆ ಮಳೆ ಹನಿಯ ದಪ್ಪ ಹಾಗೂ ಮಳೆಗಾಲದ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ. ಭೂಮಧ್ಯ ರೇಖೆ ಅಥವಾ ಸಮಭಾಜಕ ವೃತ್ತದಿಂದ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಅಕ್ಷಾಂಶಗಳನ್ನು ದಾಟುತ್ತಾ ಪ್ರಯಾಣ ಬೆಳೆಸಿದರೆ ಸೂರ್ಯ ಕಿರಣಗಳು ಓರೆಯಾಗಿ ಬೀಳುತ್ತಾ ಹೋಗುತ್ತವೆ. ಸೂರ್ಯನ ಬೆಳಕು ತನ್ನ ಪ್ರಕರತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗೂ ಇದರಿಂದ ಮಳೆಗಾಲದ ಅವಧಿ ಕಡಿಮೆ ಆಗುತ್ತದೆ. ಮಳೆಯ ದಪ್ಪ ಕ್ಷೀಣಿಸುತ್ತಾ ಹೋಗುತ್ತದೆ ಹಾಗೂ ಹವಾಮಾನದ ಉಷ್ಣಾಂಶ ಕಡಿಮೆಯಾಗಿ ತಂಪು ಹೆಚ್ಚಾಗುತ್ತದೆ. ಉದಾಹರಣೆಗೆ ಜಮ್ಮು ಕಾಶ್ಮೀರದಿಂದ ಚೀನಾ ಹಾಗೂ ಚೀನಾ ದಾಟಿಕೊಂಡು ಮುಂದೆ ರಷ್ಯಾಗೆ ಹೋದರೆ ವಾತಾವರಣದ ಉಷ್ಣಾಂಶ ಕಡಿಮೆಯಾಗಿ ತಂಪು ಹೆಚ್ಚಾಗುತ್ತಾ ಹೋಗುತ್ತದೆ. ಉತ್ತರಕ್ಕೆ ಹೋದಂತೆ ಸೂರ್ಯ ನಡು ನೆತ್ತಿಯ ಮೇಲೆ ಬರುವುದಿಲ್ಲ ಹೀಗಾಗಿ ಸೂರ್ಯಕಿರಣಗಳು ಓರೆಯಾಗಿ ಬೀಳುತ್ತವೆ. ಸೂರ್ಯನ ಬೆಳಕಿನ ಪ್ರಕರತೆ ಕ್ಷೀಣಿಸುತ್ತದೆ. ಇದರಿಂದ ತಂಪು ಹೆಚ್ಚುತ್ತಾ ಹೋಗುತ್ತದೆ. ರಷ್ಯಾದಲ್ಲಿ ಒಂದು ಮೂಲೆಯಲ್ಲಿ ಸೂರ್ಯೋದಯವಾಗಿ ಮತ್ತೊಂದು ಮೂಲೆಯಲ್ಲಿ ಸೂರ್ಯಸ್ತವಾಗಿದೆ. ಇಲ್ಲಿ ಸೂರ್ಯ ಯಾವತ್ತೂ ನಡು ನೆತ್ತಿಯ ಮೇಲೆ ಬರುವುದಿಲ್ಲ. ಇದರಿಂದಾಗಿ ದಿನದ ಕಾಲಘಟ್ಟ ಕೂಡ ಕಡಿಮೆ ಇರುತ್ತದೆ. ಸಂಜೆ 5 ಗಂಟೆ ಹೊತ್ತಿಗೆ ಸೂರ್ಯಸ್ತವಾಗಿ ಕತ್ತಲಾಗಿ ಬಿಡುತ್ತದೆ. ಹಾಗೆ ರಷ್ಯಾ ದಾಟಿಕೊಂಡು ಉತ್ತರ ಧ್ರುವದ ಕೇಂದ್ರ ಭಾಗಕ್ಕೆ ಹೋದರೆ ಹಾಗೂ ದಕ್ಷಿಣ ಗೋಳಾರ್ಧದಲ್ಲಿ ಆಸ್ಟ್ರೇಲಿಯಾ ದಾಟಿಕೊಂಡು ದಕ್ಷಿಣ ಧ್ರುವದ ಕೇಂದ್ರ ಭಾಗಕ್ಕೆ ಹೋದರೆ ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತವಾಗುವುದಿಲ್ಲ. ಧ್ರುವದ ಕೇಂದ್ರ ಭಾಗದಲ್ಲಿ ಆರು ತಿಂಗಳು ಕತ್ತಲು ಹಾಗೂ ಆರು ತಿಂಗಳು ಸೂರ್ಯನ ಮಂದ ಬೆಳಕು ಇರುತ್ತದೆ. ಭೂಮಿ ತನ್ನ ಅಕ್ಷದ ಮೇಲೆ 23.5° ವಾಲಿದೆ ಹೀಗಾಗಿ ಭೂಮಿಯ ಭ್ರಮಣ ಮತ್ತು ಪರಿಭ್ರಮಣ ಚಲನೆಯಿಂದ ಸೂರ್ಯಕಿರಣಗಳು ಮಕರ ಸಂಕ್ರಾಂತಿ ವೃತ್ತದ ತನಕ ಹಾಗೂ ಕರ್ಕ ಸಂಕ್ರಾಂತಿ ವೃತ್ತದ ತನಕ ಲಂಬವಾಗಿ ಬೀಳುತ್ತವೆ.

ಮಹಾಕಾಳೇಶ್ವರ ದೇವಸ್ತಾನ : ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ಹೀಗೆ ಭೂಮಿಯ ಮೇಲಿನ ಸಮಯವನ್ನು, ಹವಾಮಾನವನ್ನು, ಜಾಗತಿಕ ಸ್ಥನೀಕರಣವನ್ನು (Global positioning), ಲೆಕ್ಕಾಚಾರ ಮಾಡಲು ಸಾಧ್ಯವಾಗುತ್ತದೆ. ಮಹಾಸಾಗರದಲ್ಲಿ ಹಡಗು ಒಂದು ಅಪಘಾತಕ್ಕೆ ಒಳಗಾದಾಗ ಇಷ್ಟು ಡಿಗ್ರಿ ಅಕ್ಷಾಂಶ ಮತ್ತು ಇಷ್ಟು ಡಿಗ್ರಿ ರೇಖಾಂಶದ ಮೇಲೆ ಹಡಗು ಅಪಘಾತಕ್ಕೆ ಒಳಗಾಗಿದೆ ಎಂದು ರಕ್ಷಣಾ ತಂಡಕ್ಕೆ ಮಾಹಿತಿ ನೀಡುತ್ತಿದ್ದರು. ಈಗ ಸೆಟಲೈಟ್ ಜಿಪಿಎಸ್ ಬಂದಿದೆ ಅದು ಬೇರೆ ಮಾತು. ಆದರೆ ಈಗಿರುವ ಸೆಟಲೈಟ್ ಜಿಪಿಎಸ್ ಅಲ್ಲಿ ಕೂಡ ಅಕ್ಷಾಂಶ ರೇಖಾಂಶಗಳ ಆಧಾರದ ಸಾಫ್ಟ್ವೇರ್ ಇರುತ್ತದೆ. ಅಕ್ಷಾಂಶ ಮತ್ತು ರೇಖಾಂಶಗಳ ಕುರಿತು 8800 ವರ್ಷಗಳ ಹಿಂದೆ ರಚಿಸಲ್ಪಟ್ಟ ಸೂರ್ಯ ಸಿದ್ಧಾಂತ ಪುಸ್ತಕದಲ್ಲಿ ಸಂಪೂರ್ಣವಾಗಿ ಉಲ್ಲೇಖವಿದೆ. 8800 ವರ್ಷಗಳ ಹಿಂದೆ ರಚಿಸಲ್ಪಟ್ಟ ಈ ಸೂರ್ಯ ಸಿದ್ಧಾಂತ ಪುಸ್ತಕದಲ್ಲಿ 0° ರೇಖಾಂಶವು ಮಧ್ಯಪ್ರದೇಶದ ಉಜ್ಜಯಿನ ಮೇಲೆ ದಾಟಿ ಹೋಗುತ್ತದೆ ಎಂದು ವಿವರಿಸಲಾಗಿದೆ. ಕೇವಲ ಅಕ್ಷಾಂಶ ರೇಖಾಂಶಗಳ ಕುರಿತು ಅಷ್ಟೇ ಅಲ್ಲ ಭೂಮಿಯ ಭ್ರಮನ ಹಾಗೂ ಪರಿಬ್ರಮನ ಚಲನೆ, ಸೌರವ್ಯೂಹದಲ್ಲಿರುವ ಎಲ್ಲ ಗ್ರಹಗಳ ಚಾಲನೆ ಕುರಿತಾದ ಮಾಹಿತಿ, ಸೂರ್ಯ ಗ್ರಹಣ, ಚಂದ್ರ ಗ್ರಹಣ ಹಾಗೂ ಬ್ರಹ್ಮಾಂಡದ ಅನೇಕ ರಹಸ್ಯಗಳ ಕುರಿತಾದ ಮಾಹಿತಿ ಸೂರ್ಯ ಸಿದ್ಧಾಂತ ಪುಸ್ತಕದಲ್ಲಿ ಇದೆ. ಇಂತಹ ಅಮೂಲ್ಯ ಸಮಯವನ್ನು ಒಳಗೊಂಡ ಭಾರತದ ಪ್ರಾಚೀನ ಪುಸ್ತಕ ಬ್ರಿಟಿಷರ ಕೈಗೆ ಸಿಕ್ಕಿತು ಹಾಗೂ ಬ್ರಿಟಿಷರು ಅದನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದರು. ಹೀಗೆ ಕೇವಲ ಸಂಪತ್ತನ್ನು ಅಷ್ಟೇ ಅಲ್ಲ ವಿದ್ಯಾ ಸಂಪತ್ತನ್ನು ಕೂಡಾ ಸದ್ದಿಲ್ಲದೆ ಕದ್ದುಬಿಟ್ಟರು ಹಾಗೂ ತಮಗೆ ಹೇಗೆ ಬೇಕೋ ಹಾಗೆ ತಿರುಚಿಬಿಟ್ಟರು. ಇದಕ್ಕೆ ಉದಹರಣೆಯೆಂದರೆ ಉಜ್ಜಯಿನ ಮೇಲೆ ದಾಟಿ ಹೋದ 0° ರೇಖಾಂಶ. ಇದನ್ನು ಗ್ರೀನ್ವಿಚ್ಗೆ ವರ್ಗಾವಣೆ ಮಾಡುವ ಮೂಲಕ ಎಲ್ಲವನ್ನೂ ತಿರುವು ಮುರುವು ಮಾಡಿ ಜಗತ್ತಿನ ತುಂಬಾ ಸ್ಟ್ಯಾಂಡರ್ಡ್ ಮಾಡಿದರು. ಇದುವೇ ಲಾರ್ಡ್ ಮೆಕಾಲೆ ಶಿಕ್ಷಣ ಅಂತ ಅನ್ನಿಸೋಲ್ವ? ಅದನ್ನು ನಾವು ಇವತ್ತಿಗೂ ನಮ್ಮ ನಮ್ಮ ಪಠ್ಯಪುಸ್ತಕಗಳಲ್ಲಿ ಓದುತ್ತಿದ್ದೇವೆ ಹಾಗೂ ಇದು ಅಂತರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟಿದೆ. ಹೀಗಾಗಿ 0° ರೇಖಾಂಶ ಲಂಡನ್ ನಗರದ ಗ್ರೀನ್ವಿಚ್ ಮೇಲೆ ದಾಟಿ ಹೋಗುತ್ತದೆ ಎಂದು ಇಡೀ ಪ್ರಪಂಚ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ 0° ರೇಖಾಂಶ ಮೂಲತಃ ಉಜ್ಜಯನಿ ಮೇಲೆ ದಾಟಿ ಹೋಗುತ್ತದೆ ಹಾಗೂ ಇದು ಜಗತ್ತಿನ ಸಮಯವನ್ನು ನಿರ್ಧರಿಸಬಲ್ಲದು. ಸಮಯ ಕಳೆದ ಹಾಗೆ ನಾವು ಸಾವಿಗೆ ಹತ್ತಿರ ಆಗುತ್ತೇವೆ ಆದ್ದರಿಂದ ಉಜ್ಜಯನಿ ಮಹಾಕಾಳೇಶ್ವರನನ್ನು ಸಮಯ ಮತ್ತು ಸಾವಿನ ಅಧಿಪತಿ ಎಂದು ಪೂಜಿಸಲಾಗುತ್ತದೆ. ಸಮಯ ಮತ್ತು ಸಾವಿನ ಅಧಿಪತಿಯಾದ ಮಹಾಕಾಳೇಶ್ವರನನ್ನು ಜಗತ್ತು ಒಪ್ಪಿಕೊಳ್ಳುವ ಸಮಯ ಮತ್ತೆ ಬಂದೇ ಬರುತ್ತದೆ.

similar article

ಆರೋಗ್ಯ ಮತ್ತು ಪ್ರಾಚೀನ ಚಿಕಿತ್ಸಾ ವಿಧಾನ

https://www.facebook.com/share/p/15WtTkBHPy/

Share.
Leave A Reply

You cannot copy content of this page

error: Content is protected !!
Exit mobile version