18th February 3102 ರಂದು ಸೌರವ್ಯೂಹದಲ್ಲಿನ ಗ್ರಹಗಳು ಒಂದೇ ಸರಳರೇಖೆಯಲ್ಲಿ ಬಂದಿದ್ದವೂ ಹಾಗೂ ಆ ಕ್ಷಣದಲ್ಲಿ ದ್ವಾಪರ ಯುಗದಿಂದ ಕಲಿಯುಗಕ್ಕೆ ಕಾಲಘಟ್ಟ ಬದಲಾವಣೆ ಆಯಿತು ಎಂದು ಹೇಳಲಾಗುತ್ತದೆ. ಅಂದ್ರೆ ಸುಮಾರು 5000 ವರ್ಷಗಳ ಹಿಂದೆ ಕಲಿಯುಗ ಆರಂಭವಾಯಿತು. ಕಲಿಯುಗ ಆರಂಭವಾದ ನಂತರ ಧರ್ಮ ಹಾಗೂ ದೇವರನ್ನು ಮನುಷ್ಯ ಮರೆಯುತ್ತಾ ಪಾಪ ಕರ್ಮಗಳಲ್ಲಿ ತೊಡಗಿದ. ಕಲಿಯುಗದಲ್ಲಿ ಮನುಷ್ಯನು ಮಾಡಬಾರದ ಪಾಪಗಳನ್ನು ಮಾಡಿದ. ಮಾಡಿದ ಪಾಪಗಳಿಗೆ ಅನುಗುಣವಾಗಿ ಮನುಷ್ಯ ಶಾಪಗ್ರಸ್ತನಾಗುತ್ತ ಹೋದ. ಮಾಡಿದ ಪಾಪಗಳಿಗೆ ತಕ್ಕ ಪ್ರಾಯಶ್ಚಿತ ಹಾಗೂ ಶಿಕ್ಷೆ ಪ್ರಕೃತಿ ನಿಯಮದ ಪ್ರಕಾರ ಆಗಿಯೇ ಆಗುತ್ತದೆ. ಮಾಡಿದ ಎಲ್ಲಾ ಪಾಪಗಳಿಗೆ ಅನುಗುಣವಾಗಿ ಅತ್ಯಂತ ಘೋರವಾದಂತಹ ಶಿಕ್ಷೆಯನ್ನು ಮನುಷ್ಯ ಕಲಿಯುಗದ ಅಂತ್ಯದಲ್ಲಿ ಅನುಭವಿಸಬೇಕಾಗುತ್ತದೆ ಎಂಬುದು ಸೃಷ್ಟಿ ಕರ್ತನ ನಿಯಮ . ಕಲಿಯುಗದ ಕಾಲಘಟ್ಟವು 432,000 ವರ್ಷಗಳು ಎಂದು ಪುರಾಣ ಹಾಗೂ ಪುಣ್ಯ ಕಥೆಗಳಲ್ಲಿ ಬಣ್ಣಿಸಲಾಗಿದೆ. ಆದರೆ ಭವಿಷ್ಯ ಮಾಲಿಕ ಪುರಾಣ ಪ್ರಕಾರ 2032ರ ಹೊತ್ತಿಗೆ ಕಲಿಯುಗ ಅಂತ್ಯವಾಗಿ ಮತ್ತೆ ಸತ್ಯಯುಗ ಆರಂಭವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಭವಿಷ್ಯ ಮಾಲಿಕ ಪುರಾಣದಲ್ಲಿ ಉಲ್ಲೇಖಿಸಿದ ಕಲಿಯುಗದ ಅಂತ್ಯದ ಎಲ್ಲ ಲಕ್ಷಣಗಳು ಪ್ರಸ್ತುತವಾಗಿ ಜಗತ್ತಿನಾದ್ಯಂತ ಕಾಣುತ್ತಿವೆ. ಅಥವಾ ಮಾಡುವ ಪಾಪ ಕರ್ಮಗಳಿಗೆ ಅನುಗುಣವಾಗಿ ಕಲಿಯುಗದ ಅವಧಿಯು ಸಂಕೋಚನ ಹೊಂದಿ 432,000 ವರ್ಷಗಳು ಇದ್ದದ್ದು 5 ಸಾವಿರ ವರ್ಷಗಳಿಗೆ ಇಳಿಮುಖವಾಗಿರಬಹುದು! ಪ್ರಸ್ತುತವಾಗಿ ಭವಿಷ್ಯ ಮಾಲಿಕಾ ಪುರಾಣದಲ್ಲಿ ಉಲ್ಲೇಖಿಸಲಾದ ಎಲ್ಲಾ ವಿದ್ಯಮಾನಗಳು ಜಗತ್ತಿನಾದ್ಯಂತ ನಡೆಯುತ್ತಿವೆ. 2032 ರ ಹೊತ್ತಿಗೆ ಕಲಿಯುಗ ಮುಗಿದು ಸತ್ಯಯುಗ ಆರಂಭವಾಗುತ್ತದೆ ಅನ್ನುವುದೇ ಆದರೆ ಈ ಯುಗ ಪರಿವರ್ತನಾ ಕಾಲಘಟ್ಟದಲ್ಲಿ ಕಳೆದ ಐದು ಸಾವಿರ ವರ್ಷದಲ್ಲಿ ಬಾಕಿ ಉಳಿದ ಕರ್ಮದ ಲೆಕ್ಕಾಚಾರ ಈ ಯುಗ ಬದಲಾವಣೆಯ ಕೊನೆಯ 10 ವರ್ಷದಲ್ಲಿ ಇತ್ಯರ್ಥವಾಗಲಿದೆ !! ಕಲಿಯುಗ ಅಂತ್ಯದಲ್ಲಿನ ಕರ್ಮಗಳ ಫಲಾಫಲಗಳು ಚುಕ್ತಾ ಆಗಲೇಬೇಕು.

ಕಲಿಯುಗ ಅಂತ್ಯದಲ್ಲಿನ ಕರ್ಮಗಳ ಫಲಾಫಲಗಳು

ಕಳೆದ 5 ಸಹಸ್ರ ವರ್ಷಗಳಿಂದ ಭೂಮಿಯಲ್ಲಿ ಕಲಿಯುಗವಿತ್ತು. ಈ ಸಮಯದಲ್ಲಿ ನಾವು ಅನೇಕ ಜನ್ಮಗಳನ್ನೆತ್ತಿದ್ದೇವೆ. ಆತ್ಮದ ವಿಕಸನದ ಹಾದಿಯಲ್ಲಿ ನಾವು ಸರೀಸೃಪಗಳಾಗಿ ಜನ್ಮವನ್ನೆತ್ತಿದ್ದೇವೆ, ಪ್ರಾಣಿ ಪಕ್ಷಿಗಳಾಗಿ ಜನ್ಮವನ್ನೆತ್ತಿದ್ದೇವೆ ಹಾಗೂ ಕಟ್ಟ ಕಡೆಗೆ ಮನುಷ್ಯ ಜನ್ಮ ಪಡೆದಿದ್ದೇವೆ. ಈ ಆತ್ಮದ ವಿಕಸನದ ಹಾದಿಯಲ್ಲಿ ಮಾಡಿದ ಅನೇಕ ಪಾಪ ಕರ್ಮಗಳ ಶಾಪವು ಬಾಕಿಯಿದೆ. ಯುಗ ಪರಿವರ್ತನಾ ಸಮಯದಲ್ಲಿ ಅಂತಹ ಬಾಕಿ ಇರುವ ಪಾಪ ಕರ್ಮಗಳಿಗೆ ಪ್ರಾಯಶ್ಚಿತ ಹಾಗೂ ಶಿಕ್ಷೆಯನ್ನು ಮನುಷ್ಯ ಕುಲ ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ. ಇನ್ನು ಪುಣ್ಯ ತೂಕ ಹೆಚ್ಚಿಗೆ ಇದ್ದವರು ಸತ್ಯಯುಗಕ್ಕೆ ಹೋಗುತ್ತಾರೆ. ಹಿಂದಿನ ಸಹಸ್ರಾರು ವರ್ಷದ ಬಾಕಿ ಉಳಿದ ಪುಣ್ಯ ಪಾಪದ ಮೂಟೆಗಳೆಲ್ಲ ಈ ಯುಗ ಪರಿವರ್ತನಾ ಸಮಯದಲ್ಲಿ ಕರಗಿ ಹೋಗುತ್ತವೆ. ಯುಗದ ಬದಲಾವಣೆ ಹಿನ್ನೆಲೆಯಲ್ಲಿ ಹಿಂದಿನ ಯುಗದ ಹಾಗೂ ಜನ್ಮದ ಎಲ್ಲಾ ಕರ್ಮಗಳು ಈಗಲೇ ಖಾಲಿ ಆಗಬೇಕಿದೆ ! ಯುಗ ಪರಿವರ್ತನಾ ಸಮಯದಲ್ಲಿ ಕರ್ಮಗಳು ಖಾಲಿ ಆಗುವುದು ಸೃಷ್ಟಿಕರ್ತನ ನಿಯಮ! ಸುಮಾರು 2020-2037 ರ ಕಾಲಘಟ್ಟದ ನಡುವೆ ಇಡೀ ಕಲಿಯುಗದಲ್ಲಿನ ಕರ್ಮವೂ ಇತ್ಯರ್ಥವಾಗುತ್ತದೆ ಹಾಗೂ ವೈಯಕ್ತಿಕವಾಗಿ ಬಾಕಿ ಉಳಿದ ಕರ್ಮಗಳು ಕೂಡ ಇತ್ಯರ್ಥವಾಗಲಿವೆ. ಬಹುಷಃ ಕಾರಣಕ್ಕೆ ಜಗತ್ತಿನ 50% ಗಿಂತ ಹೆಚ್ಚಿನ ರಾಷ್ಟ್ರಗಳಲ್ಲಿ ಹಿಂಸಾಚಾರ ಮುಗಿಲುಮುಟ್ಟಿದೆ.

ಹಿಂದಿನ ಸಹಸ್ರಾರು ವರ್ಷದಿಂದ ಪುಣ್ಯ ಬಾಕಿ ಉಳಿಸಿಕೊಂಡವರಿಗೆ ಒಂದೇ ಸಮನೆ ಅದೃಷ್ಟ ಮನೆ ಬಾಗಲಿಗೆ ಬಂದು ಇದ್ದಕಿದ್ದಂತೆ ಲಕ್ಷಾಧಿಪತಿಯ ಹಾಗೂ ಕೋಟ್ಯಾಧಿಪತಿ ಆಗಬಹುದು ಅಥವಾ ದೊಡ್ಡ ವ್ಯಕ್ತಿಗಳಾಗಬಹುದು. ಅದೇ ರೀತಿ ಹಿಂದಿನ ಸಹಸ್ರಾರು ವರ್ಷದಿಂದ ಪಾಪಗಳನ್ನು ಬಾಕಿ ಉಳಿಸಿಕೊಂಡಂತವರಿಗೆ ಇದ್ದಕಿದ್ದಂತೆ ಅಪಮೃತ್ಯು, ಇದ್ದಕಿದ್ದಂತೆ ಗುರುತಿಸಲಾಗದಂತಹ ರೋಗಗಳು, ಇದ್ದಕಿದ್ದಂತೆ ಜೀವನದಲ್ಲಿ ಬಾರಿ ಅನಾಹುತ, ತೀವ್ರ ಆರ್ಥಿಕ ನಷ್ಟ, ಅತಿಯಾದ ಒತ್ತಡ ಹಾಗೂ ಚಿಂತೆ ಮುಂತಾದ ಉಗ್ರವಾದ ಕಷ್ಟ, ನಷ್ಟ, ನೋವುಗಳನ್ನು ಅನುಭವಿಸಬೇಕಾಗುತ್ತದೆ . ಇದೇ ರೀತಿ ಮೂರನೇ ಮಹಾಯುದ್ಧ, ಅನ್ನ ಸಂಕಟ, ವಾಯು ಪ್ರಳಯ, ಜಲಪ್ರಳಯ, ಅಗ್ನಿಪ್ರಳಯ, ಭೂಕಂಪ, ಪೌಷ್ಟಿಕ ಆಹಾರದ ಕೊರತೆ, ಗುರುತಿಸಲಾಗದಂತಹ ರೋಗಗಳು, ಮತೀಯ ದಂಗೆಗಳಿಂದ ಒಂದೇ ಸಮನೆ ಘೋರ ಕಷ್ಟಗಳು ಬರುತ್ತವೆ ಹಾಗೂ ಮುಂದಿನ ದಶಕ ಮುಗಿಯುವುದರೊಳಗೆ ವಿಶ್ವದ ಪಾಪವು ಪೂರ್ತಿಯಾಗಿ ಕರಗಿ ಸತ್ಯಯುಗ ಸ್ಥಾಪನೆ ಆಗಲಿದೆ. ಕರ್ಮ ಫಲದಿಂದ ಮುಂದಿನ ದಶಕದೊಳಗೆ ಭಾರತವು ವಿಪರೀತ ಮುಂದೆ ಹೋಗಿ ವಿಶ್ವ ಗುರುವಾಗಲಿದೆ. ಹಾಗೂ ಜಗತ್ತಿನ ಅನೇಕ ದೇಶಗಳ ಸರ್ವನಾಶವಾಗಿ ಧರ್ಮ ಪ್ರತಿಷ್ಠಾಪನೆ ಆಗಲಿದೆ ಎಂಬುದನ್ನು ಭವಿಷ್ಯ ಮಾಲಿಕ ಪುರಾಣದಲ್ಲಿ ಹೇಳಲಾಗಿದೆ!

Law of Karma 👇

ಕರ್ಮಸಿದ್ಧಾಂತ ಹಾಗೂ ಮನುಷ್ಯ ಜನ್ಮ

ದೇವಿಯು ವಿನಾಶಕಾರಿ ಮತ್ತು ಪರೋಪಕರಿ ಶಕ್ತಿಯನ್ನು ಹೊಂದಿದ್ದಾಳೆ 👇

https://www.facebook.com/share/p/15c6ush8Rb/

Share.
Leave A Reply

You cannot copy content of this page

error: Content is protected !!
Exit mobile version