ವಾಸ್ತು ಶಾಸ್ತ್ರದ ಇತಿಹಾಸ.

ಪ್ರಾಚೀನ ಕಾಲದ ಋಷಿಮುನಗಳು ಹಾಗೂ ಸಂತರು ಪಂಚಮಹಾಭೂತಗಳನ್ನು ಮತ್ತು ಅವುಗಳಿಂದ ಮನುಷ್ಯನ ಜೀವನದ ಮೇಲಾಗುವ ಪ್ರಭಾವಗಳನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ಹಾಗೂ ಅನೇಕ ವೀಕ್ಷಣೆಗಳನ್ನು ಮಾಡುವುದರ ಮೂಲಕ ರಚಿಸಿದ ವಿಜ್ಞಾನವೇ ವಾಸ್ತು ಶಾಸ್ತ್ರ. ವಾಸ್ತು ಶಾಸ್ತ್ರಕ್ಕೆ ಅನೇಕ ಸಾವಿರ ವರ್ಷಗಳ ಇತಿಹಾಸವಿದ್ದು ಶತಮಾನದಿಂದ ಶತಮಾನಕ್ಕೆ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಾ ಇವತ್ತು ಈ ವೈಜ್ಞಾನಿಕ ಯುಗವನ್ನು ತಲುಪಿಬಿಟ್ಟಿದೆ. ಈ ರೀತಿ ವಾಸ್ತು ಶಾಸ್ತ್ರವು ಶತಮಾನದಿಂದ ಶತಮಾನಕ್ಕೆ ನಮ್ಮ ಪೂರ್ವಜರಿಂದ ಹರಿದುಬರುವ ಸಮಯದಲ್ಲಿ ಅನೇಕ ಕಡೆಗಳಲ್ಲೂ ತನ್ನ ಪ್ರಾಚೀನ ಕುರುಹುವಿನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವಾಸ್ತು ಶಾಸ್ತ್ರದ ಕುರುಹುಗಳು ನಮಗೆ ಮಣ್ಣಿನಲ್ಲಿ ಹುಗಿದು ಹೋದ ಪ್ರಾಚೀನ ಕಾಲದ ಮೊಹೆಂಜೋದಾರೋ ಮತ್ತು ಹರಪ್ಪ ಪಟ್ಟಣಗಳಲ್ಲಿ ಕಾಣಸಿಗುತ್ತದೆ. ಪ್ರಾಚೀನ ಕಾಲದ ಈ ಎರಡೂ ಪಟ್ಟಣಗಳಲ್ಲಿರುವ ನಿವಾಸಿಗಳು ತಮ್ಮ ಮನೆಗಳನ್ನು, ಉದ್ಯಾನ ವನಗಳನ್ನು, ಈಜು ಕೊಳಗಳನ್ನು, ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ನಿರ್ಮಿಸಿರುವುದಕ್ಕೆ ಅನೇಕ ಕುರುಹುಗಳು ಇಂದಿಗೂ ಸಿಗುತ್ತವೆ. ವಾಸ್ತುವಿನ ಪ್ರಕಾರ ಮನೆಯನ್ನು ಕಟ್ಟುವಾಗ ಪೂರ್ವ ಮತ್ತು ಉತ್ತರಕ್ಕೆ ಹೆಚ್ಚಿನ ಕಾಲಿ ಸ್ಥಳ ಬಿಡಬೇಕೆಂಬ ನಿಯಮವಿದೆ. ವಾಸ್ತುವಿನ ಈ ನಿಯಮಕ್ಕೆ ಅನುಗುಣವಾಗಿ ಮೊಹೆಂಜೋದಾರೋ ಮತ್ತು ಹರಪ್ಪ ಪಟ್ಟಣದಲ್ಲಿರುವ ಪ್ರತಿ ಮನೆಯನ್ನು ಕಟ್ಟಲಾಗಿತ್ತು. ಸಮುದ್ರ ತಳದಲ್ಲಿ ಮುಳಗಿದ ಶ್ರೀ ಕೃಷ್ಣನ ದ್ವಾರಕಾ ನಗರವನ್ನು, ವಾಸ್ತುವಿನಲ್ಲಿ ಜ್ಞಾನಿ ಆದ ವಿಶ್ವಕರ್ಮನ ಸಲಹೆಯಂತೆ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಕಟ್ಟಲಾಗಿತ್ತು ಎಂಬುದು ನಮಗೆ ದ್ವಾರಕಾ ನಗರದ ಉತ್ಖನನ ಮಾಡುವುದರ ಮೂಲಕ ತಿಳಿದು ಬಂದಿದೆ. ರಾಮಾಯಣ ಕಾಲದ ಅಯೋಧ್ಯ ಪಟ್ಟಣದಲ್ಲಿದ್ದ ಮನೆಗಳನ್ನು, ನೀರಿನ ಟ್ಯಾಂಕಗಳನ್ನು , ತೋಟಗಳನ್ನು, ದೇವಸ್ಥಾನಗಳನ್ನು, ಕಟ್ಟುವಾಗ ವಾಸ್ತು ಶಾಸ್ತ್ರವನ್ನು ಅನುಸರಿಸಲಾಗಿತ್ತು. ಹಾಗೂ ಕೌರವರು ಜೂಜಿನ ಪಂದ್ಯದಲ್ಲಿ ಪಾಂಡವರನ್ನು ಸೋಲಿಸಿ ಇಂದ್ರಪ್ರಸ್ಥ ಪಟ್ಟಣವನ್ನು ಗೆಲ್ಲುತ್ತಾರೆ ಎಂಬ ಸಂಗತಿ ತ್ರಿಕಾಲ ಜ್ಞಾನಿ ಆದ ಶ್ರೀ ಕೃಷ್ಣನಿಗೆ ಮೊದಲೇ ಗೊತ್ತಿದ್ದ ಕಾರಣ ಶ್ರಿ ಕೃಷ್ಣನು ಆಗಿನ ಕಾಲದ ಮಯ ಎಂಬ ವಾಸ್ತು ಶಿಲ್ಪಿಯ ಸಲಹೆನ್ನು ಪಡೆದಿದ್ದ. ಪಾಂಡವರು ಇಂದ್ರಪ್ರಸ್ಥ ಪಟ್ಟಣವನ್ನು ಕಟ್ಟುತ್ತಿರುವ ಸಮಯದಲ್ಲಿ ಶ್ರಿ ಕೃಷ್ಣನು ವಾಸ್ತು ಶಿಲ್ಪಿಯಾದ ಮಯನ ಸಲಹೆಯಂತೆ ಇಂದ್ರಪ್ರಸ್ಥ ಪಟ್ಟಣದ ಮಧ್ಯ ಭಾಗದಲ್ಲಿ ಒಂದು ದೊಡ್ಡ ನೀರಿನ ಕೊಳಾಯಿಯನ್ನು ಕಟ್ಟಿಸಲು ಪಾಂಡವರಿಗೆ ಹೇಳಿದ್ದ. ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಮನೆಯ ಅಥವಾ ನಿವೇಶನದ ಮಧ್ಯ ಭಾಗದಲ್ಲಿ ನೀರಿನ ಟ್ಯಾಂಕ್ ಅಥವಾ ತಗ್ಗು ಇರಕೂಡದು. ಇಂದ್ರಪ್ರಸ್ಥ ಪಟ್ಟಣದ ಮಧ್ಯ ಭಾಗದಲ್ಲಿ ನೀರಿನ ಕೊಳಾಯಿ ಇರುವ ಕಾರಣಕ್ಕೆ ಕೌರವರು ಪಂಡವರಿಗೆ ಮೋಸ ಮಾಡಿ ಜೂಜಿನ ಆಟದಲ್ಲಿ ಇಂದ್ರಪ್ರಸ್ಥ ಪಟ್ಟಣವನ್ನು ಗೆದ್ದರೂ ಕಟ್ಟ ಕಡೆಗೆ ಕೌರವರು ಸಂಪೂರ್ಣವಾಗಿ ಅವನತಿ ಹೊಂದಬೇಕಾಯಿತು. ಹೀಗೆ ವಾಸ್ತು ಶಾಸ್ತ್ರವು ಅನಾದಿ ಕಾಲದಿಂದಲೂ ಒಂದು ದೀರ್ಘವಾದ ಪರಂಪರೆಯನ್ನು ಹೊಂದಿದೆ. ಭಾರತದಲ್ಲಿರುವ ಯಾವುದೇ ಪ್ರಾಚೀನ ದೇವಸ್ಥಾನದೊಳಗೆ ಹೋಗಿ ದಿಕ್ಸೂಚಿಯಿಂದ ದೇವಸ್ಥಾನದ ಗೋಡೆಗಳನ್ನು ಪರೀಕ್ಷಿಸಿದರೆ ಪೂರ್ವ ಮತ್ತು ಪಶ್ಚಿಮದ ಗೋಡೆಗಳು ಸಂಪುರ್ಣವಾಗಿ ಉತ್ತರ ಮತ್ತು ದಕ್ಷಿಣ ದಿಕ್ಕಿಗೆ ಸಮಾನಾಂತರವಾಗಿಯೂ ಹಾಗೂ ಉತ್ತರ ಮತ್ತು ದಕ್ಷಿಣದ ಗೋಡೆಗಳು ಸಂಪೂರ್ಣವಾಗಿ ಪೂರ್ವ ಮತ್ತು ಪಶ್ಚಿಮ ದಿಕ್ಕಿಗೆ ಸಮಾನಾಂತರವಾಗಿಯೂ ಇರುತ್ತವೆ. ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ವಾಸ್ತು ಶಾಸ್ತ್ರವನ್ನು ಅನುಸರಿಸುತ್ತಿದ್ದರು ಎಂಬುದು ನಮಗೆ ಈ ಎಲ್ಲ ಅಂಶಗಳ ಮೂಲಕ ಸ್ಪಷ್ಟವಾಗಿ ತಿಳಿದು ಬರುತ್ತದೆ. ನಮ್ಮ ಪೂರ್ವಜರು ತಿಳಿಸಿಕೊಟ್ಟ ವಾಸ್ತು ಶಾಸ್ತ್ರದ ನಿಯಮಗಳನ್ನು ಇವತ್ತು ನಾವು ನಮ್ಮ ಮನೆಗಳನ್ನು ಕಟ್ಟುವ ಸಮಯದಲ್ಲಿ ಅಳವಡಿಸಿಕೊಂಡಿದ್ದ ಆದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಸಂಚಲನವವಾಗಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯ, ಆಯುಸ್ಸು, ಅಭಿವೃದ್ಧಿ ದೊರಕುವುದರಲ್ಲಿ ಎರಡು ಮಾತಿಲ್ಲ. (ವಾಸ್ತು ಶಾಸ್ತ್ರದ ಇತಿಹಾಸ)

Similar Article on Vastu👇

ವಾಸ್ತು ವೈಜ್ಞಾನಿಕವಾದದ್ದ. ಸಮೃದ್ಧಿಗಾಗಿಯೇ ವಾಸ್ತು.

ಹರೆ ಕೃಷ್ಣ 👇

https://www.facebook.com/share/p/18ByVaiVdS/

Share.
Leave A Reply

You cannot copy content of this page

error: Content is protected !!
Exit mobile version