ಕುರುಕ್ಷೇತ್ರದಲ್ಲಿ ಬದುಕುಳಿದವರ ಪೀಳಿಗೆ ಹಾಗೂ 3ನೇ ಮಹಾಯುದ್ಧ- ಕುರುಕ್ಷೇತ್ರದಂತಹ ಮಹಾಯುದ್ಧದಿಂದಲೇ ಹಿಂದೂ ಧರ್ಮದ ಕೊಂಡಿಗಳು ಭಾರತದಿಂದ ಕಳಚಿ ಪ್ರಪಂಚದ ಅನೇಕ ರಾಷ್ಟ್ರಗಳಿಗೆ ಹೋಗಿ ನೆಲೆಗೊಂಡವು. ಕುರುಕ್ಷೇತ್ರದಂತಹ ಯುದ್ಧದಿಂದ ಅನೇಕ ಜನರ ಜೀವನ ಅಸ್ತವ್ಯಸ್ತವಾಗಿತ್ತು. ಅಣ್ಣ-ತಮ್ಮ ಹಾಗೂ ಬಂಧು ಬಳಗದವರು ಯುದ್ಧದಲ್ಲಿ ಮಡಿದಿದ್ದರು. ಯುದ್ಧದಲ್ಲಿ ಬದುಕುಳಿದವರು ತಮ್ಮ ಬಂಧು ಬಳಗದವರುನ್ನು, ಮಿತ್ರರನ್ನು ಕಳೆದುಕೊಂಡು ಮನಸ್ಸಿಗೆ ಅಘಾತವಾಗಿತ್ತು. ಕುರುಕ್ಷೇತ್ರ ಯುದ್ಧದಲ್ಲಿ ಬದುಕುಳಿದವರು ಮಹಾಯುದ್ಧದಿಂದ ಬೇಸತ್ತು ಹೋಗಿದ್ದರು ಹಾಗೂ ಯುದ್ಧದಿಂದ ಆದ ಮಾನಸಿಕ ಆಘಾತವನ್ನು ಮರೆಯಲು ಭಾರತದಿಂದ ಪ್ರಪಂಚದ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ನೆಲೆಸಿದರು. ಹೀಗೆ ನೆಲೆಸಿದ ನಾಗರಿಕತೆಯು ತನ್ನ ವಿಕಸನದಲ್ಲಿ ಅನೇಕ ತಿರುವುಗಳನ್ನು ಕಂಡಿತು. ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಅಳಿದುಳಿದ ಕೆಲವು ಕೃಷ್ಣನ ವಂಶಸ್ಥರಾದ ಯಾದವರು ಕೂಡ ಭಾರತ ಬಿಟ್ಟು ಹೊರಟುಹೋಗಿ ಮಧ್ಯ ಏಷ್ಯಾದಲ್ಲಿ ನೆಲೆಗೊಂಡಿದ್ದರು. ಹೀಗೆ ನೆಲೆಗೊಂಡ ಯಾದವ ಜನಾಂಗದ ಆಚಾರ-ವಿಚಾರ, ಧಾರ್ಮಿಕ ಆಚರಣೆಗಳು, ಸಂಸ್ಕೃತಿ, ಹಬ್ಬ ಹರಿದಿನಗಳು ಶತಮಾನಗಳು ಉರುಳಿದಂತೆ ಬದಲಾವಣೆ ಹೊಂದುತ್ತಾ ಹೋದವು. ಪೀಳಿಗೆಯಿಂದ ಪೀಳಿಗೆಗೆ ಯಾದವ ಬೇರುಗಳು ಕಳುಚುತ್ತಾ ಹೋದವು. ಕಟ್ಟ ಕಡೆಗೆ ಯಾದವರು ಯಹೂದಿಯಾಗಿ ಬದಲಾವಣೆಯಾದರು! ಆವತ್ತಿನ ಕೃಷ್ಣ ವಂಶಸ್ಥರಾದ ಯಾದವ ಜನಾಂಗದ ಬೇರುಗಳೇ ಇವತ್ತಿನ ಯಹೂದಿ ಧರ್ಮ! ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಕೇವಲ ಯಾದವರು ಅಷ್ಟೇ ಹೋಗಿ ಮಧ್ಯ ಏಷ್ಯಾದಲ್ಲಿ ನೆಲೆಸಲಿಲ್ಲ. ಯಾದವರ ಜೊತೆಗೆ ಅವರ ಜೊತೆಗೆ ಮತ್ತೆ ಬೇರೆ ಬೇರೆ ಜನಾಂಗದವರು ಹೋಗಿ ಅಲ್ಲಿ ನೆಲೆಸಿದರು ಕಾಲಕ್ರಮೇಣ ಅವರೆಲ್ಲರೂ ಗ್ರೀಕರಾಗಿ, ರೋಮನ್ನರಾಗಿ, ಮೆಸಪಟೋಮಿಯನ್ನರಾಗಿ, ಬೆಬಿಲೋನಿಯನ್ನರಾಗಿ, ಪೀಲಿಸ್ತಾನಿಗಳಾಗಿ ಬದಲಾವಣೆ ಆದರು! ಇವರೆಲ್ಲರ ಮೂಲ ಬೇರುಗಳು ಭಾರತದೆ ಆಗಿರುತ್ತವೆ! ಆದ್ದರಿಂದಲೇ ಗ್ರೀಕರು, ರೋಮನ್ರೂ ಮೆಸಪಟೋಮಿಯನ್ರು, ಬೆಬಿಲೋನಿಯನ್ರು ಮೂರ್ತಿ ಪೂಜಕರಾಗಿದ್ದರು. ಆದರೆ ಪೀಳಿಗೆಯಿಂದ ಪೀಳಿಗೆ ಹತ್ತು ಹಲವುಗಳನ್ನು ತಿರುವು ಪಡೆದು ಬದಲಾವಣೆಗಳು ಆದಂತೆ ಮೂರ್ತಿಗಳ ಹೆಸರುಗಳು ಹಾಗೂ ಮೂರ್ತಿಗಳ ರೂಪ ಸ್ವಲ್ಪ ಬದಲಾವಣೆಯಾದವು. ಈ ರೀತಿ ಹಿಂದೂ ಪರಂಪರೆ, ಸಂಸ್ಕೃತಿ, ಆಚಾರ ವಿಚಾರ, ಹಬ್ಬ ಹರಿದಿನಗಳು, ಸಂಪ್ರದಾಯಗಳು ಮೂಲ ರೂಪ ಕಳೆದುಕೊಂಡು ಬಿಟ್ಟವು. ಮುಂದೆ ಯಹೂದಿ ಧರ್ಮದಿಂದ ಎರಡು ಕವಲು ಒಡೆದು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಹುಟ್ಟಿಕೊಂಡವು! ಆವತ್ತು ಕುರುಕ್ಷೇತ್ರ ಯುದ್ಧ ನಡೆಯದಿದ್ದರೆ ಇವತ್ತು ಪ್ರಪಂಚದ ಸ್ವರೂಪ ಬೇರೆ ರೀತಿಯಲ್ಲಿ ಇರುತ್ತಿತ್ತು. ಆದರೆ ಯುಗಗಳು ಬದಲಾವಣೆಯಾಗುವ ಸಮಯದಲ್ಲಿ ಒಂದು ದೊಡ್ಡ ಯುದ್ಧ ನಡೆಯುತ್ತದೆ. ಅದು ಪ್ರಕೃತಿ ನಿಯಮ. (ಕುರುಕ್ಷೇತ್ರದಲ್ಲಿ ಬದುಕುಳಿದವರ ಪೀಳಿಗೆ ಹಾಗೂ 3ನೇ ಮಹಾಯುದ್ಧ)
ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಕಾಲಘಟ್ಟ ದ್ವಾಪರಯುವದಿಂದ ಕಲಿಯುಗಕ್ಕೆ ಶಿಫ್ಟ್ ಆಯ್ತು ಹಾಗೂ ಕಲಿ ಪುರುಷನ ಪ್ರಭಾವದಿಂದ ಜಗತ್ತು ಅಧರ್ಮದ ಕಡೆಗೆ ಸಾಗಿತು. ಕಲಿ ಪುರುಷನ ಪ್ರಭಾವಕ್ಕೆ ಒಳಪಟ್ಟು ಭೂಮಿ ಮೇಲೆ ಅಧರ್ಮ ಹೆಚ್ಚುತ್ತಾ ಹೋಯಿತು. ಕಲಿಯುಗದಲ್ಲಿ ಮನುಷ್ಯ ಮಾಡಬಾರದಂತಹ ಪಾಪ ಕರ್ಮಗಳನ್ನು ಮಾಡತೊಡಗಿದ. ಅಧರ್ಮ ಅನ್ನುವಂತಹದ್ದು ಉತ್ತುಂಗದ ಹಂತವನ್ನು ತಲುಪಿದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ವಿಷ್ಣು ರೂಪ ತಾಳಿ ಬರುತ್ತಾನೆ. 2032 ಕ್ಕೆ ಮತ್ತೆ ಕಾಲಘಟ್ಟವು ಕಲಿಯುಗದಿಂದ ಸತ್ಯಯುಗಕ್ಕೆ ಶಿಫ್ಟ್ ಆಗುತ್ತದೆ ಎಂದು ಭವಿಷ್ಯ ಮಾಲಿಕ ಪುರಾಣ ಹೇಳುತ್ತದೆ. 2032ಕ್ಕೆ ಸತ್ಯ ಯುಗ ಆರಂಭ ಆದರೆ ಅದಕ್ಕಿಂತ ಮೊದಲು ಈ ಅಧರ್ಮ ತೊಳೆದು ಹಾಕುವುದಕ್ಕಾಗಿ ಮಹಾ ವಿಷ್ಣು ಕಲ್ಕಿ ಅವತಾರ ತಾಳಿ ಬರುತ್ತಾನೆ ಹಾಗೂ ಒಂದು ದೊಡ್ಡ ಯುದ್ಧ ಹಾಗೂ ಪ್ರಕೃತಿ ವಿಕೋಪಗಳು ನಡೆದು ಹೋಗುತ್ತವೆ ಎಂದು ಭವಿಷ್ಯ ಮಾಲಿಕ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ. ಕುರುಕ್ಷೇತ್ರ ಯುದ್ಧದ ನಂತರ ಬದುಕಿ ಉಳಿದವರು ಭಾರತ ಬಿಟ್ಟು ಮಧ್ಯ ಏಷ್ಯಾ ಆಕೆ ಹೋಗಿ ಬದುಕು ಕಟ್ಟಿಕೊಂಡಿದ್ರಲ್ವಾ ಅವರ ಸಂತತಿಗಳೇ ಇವತ್ತು ಮತ್ತೆ ಯುದ್ಧದ ತಯಾರಿ ನಡೆಸುತ್ತಿದ್ದಾರೆ! ಮಧ್ಯ ಏಷ್ಯಾದಲ್ಲಿ ಹತ್ತಿಕೊಂಡಂತಹ ಒಂದು ಕಿಡಿ ಮೂರನೇ ಮಹಾಯುದ್ಧಕ್ಕೆ ಕಾರಣವಾವಾಗುತ್ತದೆ! ಮೂರನೇ ಮಹಾಯುದ್ಧ ಹಾಗೂ ಕಲ್ಕಿ ಆಗಮನ ನಿಶ್ಚಿತ ಎಂದು ಭವಿಷ್ಯ ಮಾಲಿಕಾ ಪುರಾಣ ಹೇಳುತ್ತದೆ. ಸಮಸ್ತ ಮನುಕುಲಕ್ಕೆ ಮೂಲ ಭಾರತ ಹಾಗೂ ಹಿಂದೂ ಧರ್ಮ. ರಾಮಾಯಣ ಹಾಗೂ ಮಹಾಭಾರತ ಕಾಲಕ್ಕೂ ಇವತ್ತಿನ ಮೂರನೇ ಮಹಾಯುದ್ಧಕ್ಕೂ ನಿಕಟ ಸಂಬಂಧವಿದೆ!! ಮೂರನೇ ಮಹಾಯುದ್ಧದಲ್ಲಿ ಭಾರತದ ವಿರುದ್ಧ ನಿಲ್ಲುವ ರಾಷ್ಟ್ರಗಳು ಯಾವು ಎಂದರೆ 1) ಅಮೇರಿಕಾ 2) ಬ್ರಿಟನ್ 3) ಕೆನೆಡಾ 4) ಚೀನಾ 5) ಪಾಕಿಸ್ತಾನ 6) ಟರ್ಕಿ 7) ಇರಾನ್ ಸೇರಿದಂತೆ 13 ಮುಸ್ಲಿಂ ರಾಷ್ಟ್ರಗಳು 8) ಆಫ್ರಿಕಾದ ಖಂಡದ ಅನೇಕ ರಾಷ್ಟ್ರಗಳು ಭಾರತದ ವಿರುದ್ಧ ಯುದ್ದ ಮಾಡುತ್ತವೆ. ಇನ್ನು ಭಾರತದ ಪರವಾಗಿ ನಿಲ್ಲುವ ರಾಷ್ಟ್ರಗಳು 1) ರಷ್ಯಾ 2) ಜಪಾನ್ 3) ಪ್ರಾನ್ಸ್ 4)ಜರ್ಮನಿ. ಮೂರನೇ ಮಹಾಯುದ್ಧ ಉತ್ತುಂಗದ ಹಂತದಲ್ಲಿರುವಾಗ ಕಲ್ಕಿ ಆಗಮನವಾಗುತ್ತದೆ ಹಾಗೂ ಕಲ್ಕಿ ಅವತಾರ ಬಂದಾಕ್ಷಣ ಬಹುತೇಕ ಎಲ್ಲಾ ದೇಶದವರಿಗೂ ತಾವು ಮಹಾಭಾರತ ಕಾಲದಲ್ಲಿ ಯಾರಾಗಿದ್ದೆವು ಎಂದು ನೆನಪು ಬರಲಿದೆ !! ಯಾವ್ಯಾವ ದೇಶಗಳು ಭಾರತದ ವಿರುದ್ಧ ನಿಲ್ಲುತ್ತವೆ? ಹಾಗೂ ಭಾರತದ ಪರವಾಗಿ ಪರವಾಗಿ ನಿಲ್ಲುತ್ತವೆ ಹಾಗೂ ಹಿಂದಿನ ಯುಗದಲ್ಲಿ ಯಾವ ದೇಶದವರು ಯಾರಾಗಿದ್ದರು ನೋಡೋಣ ಬನ್ನಿ!!
ರಷ್ಯಾ – ಭಾರತದ ಯುಗ ಯುಗದ ಮಿತ್ರ ರಾಷ್ಟ್ರ. ಆ ದೇಶದವರು ಪಾಂಡವರು ಹಾಗೂ ಶ್ರೀ ಕೃಷ್ಣನ ಮಿತ್ರರಾಗಿದ್ದರು. ಯುದ್ದದಲ್ಲಿ ಸಹಾಯ ಕೂಡ ಮಾಡಿದ್ದರು. ಶ್ರೀ ಕೃಷ್ಣನ ಅನುಗ್ರಹ ಬಲದಿಂದ ಮುಂದೆ ರಷ್ಯಾ ವಿಶ್ವ ವಿಜಯವಾಗಲಿದೆ. ಮುಂದೆ ನೂರಾರು ರಾಷ್ಟ್ರಗಳು ಏಕಕಾಲದಲ್ಲಿ ರಷ್ಯಾ ಮೇಲೆ ದಾಳಿ ಮಾಡಿದರು ಅಜೇಯವಾಗಿ ಉಳಿಯುತ್ತದೆ !! ಅಂತ್ಯದಲ್ಲಿ ಭಾರತಕ್ಕೂ ಕೂಡ ಸಹಾಯ ಮಾಡಲಿದೆ. ಇಸ್ಕಾನ್ ಹಾಗೂ ಕೃಷ್ಣ ಪಂತದವರು ರಷ್ಯಾದಲ್ಲಿ ಅತೀ ಹೆಚ್ಚಿರುವುದನ್ನ ಇಂದು ನೋಡಬಹುದಾಗಿದೆ. ಮುಂದೆ ರಷ್ಯಾ ಹಿಂದೂ ರಾಷ್ಟ್ರ ಕೂಡ ಆಗಲಿದೆ. ಓರಿಸ್ಸಾದ ಪುರಿ ಜಗನ್ನಾಥ ಮಂದಿರದ ಮೇಲೆ ವಿದೇಶಿಯರು ದಾಳಿ ಮಾಡಿದಾಗ ರಷ್ಯಾ ರಕ್ಷಣೆಗೆ ಬರುವುದೆಂದು ಭವಿಷ್ಯ ಮಾಲಿಕಾದಲ್ಲಿ ಹೇಳಲಾಗಿದೆ.
ಇನ್ನು ಚೀನಾ ಕ್ಷೀಣ ದೇಶ. ಕಲಿಯುಗದಲ್ಲಿ ನಿನ್ನದೆ ಸಾಮ್ರಾಜ್ಯ ಕಟ್ಟಿ ಮೆರೆಯುವಂತೆ ಎಂದು ರಾಕ್ಷಸನಿಗೆ ವರಬಲವಿದ್ದ ಕಾರಣ ಆ ರಾಕ್ಷಸನೇ ಮಾವೋ ಝೆಡಾಂಗ್ ಆಗಿ ಹುಟ್ಟಿ 1949 ರಲ್ಲಿ ತನ್ನದೇ ದೇಶ ಕಟ್ಟಿದನು ಆ ದೇಶವೇ ಚೀನಾ ದೇಶವಾಗಿದೆ. ಡ್ರಾಗನ್ ಚೀನಾ ರಾಜ ಸಾಮ್ರಾಜ್ಯದ ಚಿಹ್ನೆ ಆಗಿತ್ತು. ಆದ್ದರಿಂದ ಇವತ್ತಿಗೂ ಚೀನಾದವರು ಡ್ರಾಗನ್ ಪವಿತ್ರ ಎಂದು ಭಾವಿಸುತ್ತಾರೆ. ಡ್ರಾಗನ್ (Reptiles/ಸರ್ಪ ಜಾತಿಯವು ) ಪಾತಾಳ ಲೋಕದ ಅಸುರರ ಚಿಹ್ನೆಯಾಗಿದೆ. ಚೀನಾದವರು ಅಸುರರಂತೆ ಪಶು ಪಕ್ಷಿ ಪ್ರಾಣಿ ಕ್ರಿಮಿ ಕೀಟ ತಿನ್ನುತ್ತಾರೆ. ಚೀನಿಯರು ತಿನ್ನದ ಜೀವಿಯೇ ಬಹುಶಃ ಇಲ್ಲ ! ಹೀಗಾಗಿ ಚೀನಿಯರು ಅಸುರರ ಸಂಕೇತವನ್ನು ತೋರಿಸುತ್ತಾರೆ.
ಮನಕುಲದ ರಕ್ತ ಹರಿಸಿದ ಜೆಂಗಿಸ್ ಖಾನ್ ಈತ ಹಿಂದೆ ಮಂಗೋಲಿಯಾ ಚೀನಾ ವಶಪಡಿಸಿಕೊಂಡು ಮಿಲಿಯನ್ ಗಟ್ಟಲೆ ಜನರನ್ನು ಹತ್ಯೆ ಮಾಡಿದ್ದನು. ಈತ ಕೂಡ ಪಾತಾಳದಿಂದ ಹುಟ್ಟಿ ಬಂದ ರಾಕ್ಷಸನೆಂದು ತಿಳಿಯಬೇಕು. ಇನ್ನು ಮೊಹಮ್ಮದ್ ಘೋರಿ ಮತ್ತು ಘಜ್ನಿ ಹಿಂದೂ ದೇಶ ಲೂಟಿ ಮಾಡುವುದಕ್ಕಾಗಿಯೇ ಹುಟ್ಟಿ ಬಂದಿದ್ದ. ಮೊಹಮ್ಮದ್ ಘೋರಿ ಮತ್ತು ಘಜ್ನಿ ದೇಶದ ಅನೇಕ ದೇವಸ್ಥಾನ ಕೊಳ್ಳೆ ಹೊಡೆದರು. ಹಿಂದೂ ದೇವಸ್ಥಾನ ನಾಶ ಮಾಡುವುದೇ ಇವರ ಪ್ರಮುಖ ಆದ್ಯತೆ ಆಗಿತ್ತು. ಇವರು ಕೂಡ ರಾಕ್ಷಸರಾಗಿದ್ದರು! ಅದರಂತೆ ದೇವಸ್ಥಾನ ಲೂಟಿ ಹೊಡೆದ ಅನೇಕ ದಾಳಿಕೋರರು ಕೂಡ ಪಾತಾಳದಿಂದ ಬಂದ ರಾಕ್ಷಸರೇ ಆಗಿದ್ದರು ಇದರ ಬಗ್ಗೆ ವ್ಯಾಸ ಮಹರ್ಷಿಗಳು ಬರೆದ ಭವಿಷ್ಯ ಪುರಾಣದಲ್ಲಿ ಅನೇಕ ಮಾಹಿತಿ ಇದೆ.
ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯ(Middle east) ದೇಶಗಳು. ಇವು ಶುಕ್ರಾಚಾರ್ಯ, ರಾವಣ ಹಾಗೂ ಕಲಿಪುರುಷ ಕಾರ್ಯಕ್ಷೇತ್ರವಾಗಿದೆ. ರಾವಣನ ಶಪಿಸಿದ ಪರಿಣಾಮ ಸಹರಾ ಮರುಭೂಮಿ ನಿರ್ಮಾಣ ಆಗಿದೆ ಎಂದು ಋಷಿಗಳು ತಿಳಿಸುತ್ತಾರೆ. ಕಲಿಪುರುಷ ಕೂಡ ಕಲಿಯುಗದ ಆದಿಯಲ್ಲಿ ಇಲ್ಲೇ ತಪಸ್ಸು ಮಾಡಿದ್ದನು. ಆದ್ದರಿಂದ ಇಲ್ಲಿಂದಲೇ ಹೊಸ ಹೊಸ ಧರ್ಮಗಳು ಸ್ಥಾಪನೆಯಾಗಿವೆ ಎಂದು ತಿಳಿಯಬಹುದು!
ಯುರೋಪ್ – ಮಹಾಭಾರತ ಕಾಲದಲ್ಲಿ ಯಾದವರ ಕೆಲವು ವಂಶ ವಲಸೆ ಹೋದ ಸ್ಥಳ. ಮಹಭಾರತ ಕಾಲದ ನಂತರ ಭಾರತದಲ್ಲಿ ಮಹಾ ಸಾಮ್ರಾಜ್ಯಗಳು ಪತನ ಹೊಂದಿದ ನಂತರ ಬೇರೆ ದೇಶಗಳಿಗೆ ವಲಸೆ ಹೋಗಿ ಸಾಮ್ರಾಜ್ಯ ಕಟ್ಟುವ ಪರಿಪಾಠ ಆರಂಭವಾಯಿತು !! ಯುರೋಪ್ ನ ಮೂಲ ಇದೆಯೇ ಆಗಿದೆ !! ಮಹಾಭಾರತ ಕಾಲದಿಂದಲೇ ಜನ ಇಲ್ಲಿ ವಾಸವಾಗಿದ್ದಾರೆ.
ಜರ್ಮನಿ – ಕಲಿಯುಗದಲ್ಲಿ ಅಶ್ವತ್ಥಾಮ ಪುನಃ ಹುಟ್ಟುವ ದೇಶ. ಅಶ್ವತ್ಥಾಮನ ಪ್ರಭಾವದಿಂದಾಗಿ ಈ ರಾಷ್ಟ್ರ ಮೂರನೇ ಮಹಾಯುದ್ಧದಲ್ಲಿ ಭಾರತಕ್ಕೆ ಸಹಾಯ ಮಾಡುತ್ತದೆ. ಮಹಾಭಾರತದ ಕಾಲದಲ್ಲಿ ಯಾದವರು ಯುರೋಪ್ ನ ಹಲವು ಭಾಗಗಳಿಗೆ ಹೋಗಿದ್ದರು ಆದ ಕಾರಣ ಅಶ್ವತ್ಥಾಮ ಇಲ್ಲಿ ಹುಟ್ಟಲಿದ್ದಾನೆ.
ಅಮೇರಿಕಾ ಬ್ರಿಟನ್ –
ಇವರ ಮೂಲ ವಂಶಸ್ಥರು ಮಹಾಭಾರತ ಕಾಲದಲ್ಲಿ ವಲಸೆ ಹೋದ ಹಿಂದುಗಳೇ ಆಗಿರುತ್ತಾರೆ. ಈಗಿರುವವರು ಆವತ್ತಿನ ಹಿಂದೂಗಳ ಮಕ್ಕಳು ಹಾಗೂ ಮರಿಮೊಮ್ಮಕ್ಕಳೇ ಆಗಿದ್ದಾರೆ. ಭಾರತದಿಂದ ವಲಸೆ ಹೋದಾಗ ಅವರೊಂದಿಗೆ ಅನೇಕ ಧರ್ಮ ಗ್ರಂಥಗಳನ್ನು ಹಾಗೂ ವಿಗ್ರಹಗಳನ್ನು ತೆಗೆದುಕೊಂಡು ಹೋಗಿದ್ದರು ಹಾಗೂ ಪೂಜೆ ಪುನಸ್ಕಾರ ಹವನಗಳನ್ನು ಮಾಡುತ್ತಿದ್ದರು. ದೈವಿಶಕ್ತಿ ಬಲದಿಂದಾಗಿ ಇವರು ಬಲಶಾಲಿಗಳಾದರು. ಸಾಮ್ರಾಜ್ಯ ಕಟ್ಟಿದ್ದರು. ಆದರೆ ಈ ದೇಶಗಳಲ್ಲಿ ಇತ್ತೀಚಿಗೆ ಹುಟ್ಟಿದ ಬಹುತೇಕರು ಕಲಿಯುಗದಲ್ಲಿ ಭೂಲೋಕಕ್ಕೆ ಹೊಸದಾಗಿ ಬಂದ ಆತ್ಮಗಳು ಆಗಿರುತ್ತವೆ. ಹೊಸದಾಗಿ ಕಲಿಯುಗಕ್ಕೆ ಬಂದಿಳಿದ ಕೆಳಮಟ್ಟದ ಆತ್ಮಗಳು ರಾಮಾಯಣ ಮಹಾಭಾರತ ಕಾಲವನ್ನು ಹೆಚ್ಚು ನಂಬುವುದಿಲ್ಲ. ಕಲಿಯುಗದಲ್ಲಿ ಇವರ ಸಂಖ್ಯೆಯೇ ಹೆಚ್ಚಿರುವ ಕಾರಣ ಹಿಂದಿನ ಯುಗದ ಸಂಪರ್ಕ ತಪ್ಪಿ ಹೋಗಿದೆ !! & USA is materialistic capital of world. ಲೌಕಿಕ ವ್ಯಾಮೋಹದ ಕಾರಣ ಶುಕ್ರ ರಾಹು ಕೇತುಗಳ ಪ್ರಭಾವದಿಂದಾಗಿ ಈ ದೇಶಗಳು ಮುಂದೆ ಭಾರತದ ವಿರುದ್ಧ ನಿಲ್ಲುವರು. ಅಮೇರಿಕಾ ಒಟ್ಟಾರೆಯಾಗಿ ಒಂದು ಕಲಬೆರಕೆ ದೇಶ ಎಲ್ಲಾ ಸಂತಾನುಗಳು ಇಲ್ಲಿ ಒಟ್ಟು ಸೇರಿವೆ.
(ಮಿಶ್ರ ತಳಿ)
ಜಪಾನ್ ಕೋರಿಯಾ ಆಸ್ಟ್ರೇಲಿಯಾ ಇಂಡೋನೇಷ್ಯಾ ಇತ್ಯಾದಿ
ಸುಗ್ರೀವನ ವಾನರರು ಈ ದಿಕ್ಕಿನ ಕಡೆ ಅನೇಕ ದೇಶಗಳಿಗೆ ಹೋಗಿ ಉಳಿದುಕೊಂಡಿದ್ದರು. ಹಾಗೂ ಬೇರೆ ಬೇರೆ ವಿಶಿಷ್ಟ ಹಿಂದೂ ದೇವತೆಗಳನ್ನ ಆರಾಧನೆ ಮಾಡಿದ ಜನ ಕೂಡ ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಹೋಗಿದ್ದರು. ಕಾಡುಮೇಡುಗಳಲ್ಲಿ ಮಹಾಭಾರತ ಕಾಲದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗ ಕೂಡ ಜಪಾನ್, ಕೋರಿಯಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮಲೇಷ್ಯಾ ಕಡೆಗಳಲ್ಲಿ ಹೋಗಿ ನೆಲೆಸಿದರು. ಇಂತಿಂಥ ಪ್ರದೇಶಗಳಲ್ಲಿ ನೀವು ವಾಸಿಸಿಕೊಂಡು ಇರಿ ಎಂದು ಬೇರೆ ಬೇರೆ ಜನಾಂಗಗಳನ್ನು ವರ ಪ್ರಸಾದಿಸಿ ಇಲ್ಲಿನ ಋಷಿಮುನಿಗಳು ಕಳಿಸಿದ್ದರು. ಇವತ್ತು ಪೌರಾತ್ಯ ರಾಷ್ಟ್ರಗಳಲ್ಲಿ ಇರುವವರು ಆವತ್ತು ಭಾರತದಿಂದ ಹೋಗಿ ನೆಲಿಸಿದ ಜನಾಂಗೀಯ ವಂಶಸ್ಥರು. ಅನೇಕ ಪೀಳಿಗೆಯ ನಂತರ ಬೇರೆ ಬೇರೆ ಹಿಂದೂ ದೇವತೆಗಳ ದರ್ಶನ ಪಡೆದ ಇವರು ಬೇರೆ ಬೇರೆ ಹೆಸರಿನಿಂದ ಕರೆಯಲಾರಂಭಿಸಿದರು. ಆದ್ದರಿಂದ ಥೈಲ್ಯಾಂಡ್, ಜಪಾನ್ ನಲ್ಲಿ ಅನೇಕ ಹಿಂದೂ ದೇವತೆಗಳನ್ನ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಇದೇ ವಿಧವಾಗಿ ಹಿಂದೂ ದೇವತೆಗಳನ್ನ ಬೇರೆ ಬೇರೆ ಹೆಸರಿನಿಂದ ಗ್ರೀಕ್ ರೋಮನ್ ಸಂಸ್ಕೃತಿಯಲ್ಲೂ ಕರೆಯುತ್ತಾರೆ. ಮಹಾಭಾರತ ಕಾಲದ ಅಂದಿನ ಹಿಂದೂ ರಾಜರುಗಳಿಗೆ ಅನೇಕ ಮಕ್ಕಳಿದ್ದ ಕಾರಣ ಒಬ್ಬೊಬ್ಬ ಮಕ್ಕಳು ಅಣ್ಣ ತಮ್ಮ ಬಂಧು ಬಳಗ ವೈಮನಸ್ಸು ಅಥವಾ ಆಸ್ತಿ ಪಾಲು ಮಾಡುವ ಸಲುವಾಗಿ ಬೇರೆ ಬೇರೆ ದೇಶಕ್ಕೆ ಹೋಗಿ ಸಾಮ್ರಾಜ್ಯ ಕಟ್ಟಿದ್ದರು. ಬಂಧು ಬಳಗ ಅಥವಾ ಅಣ್ಣ ತಮ್ಮ ವೈಮನಸ್ಸು ಅವರನ್ನು ಭಾರತದಿಂದ ದೂರ ಇಟ್ಟಿತು. ಬೆಟ್ಟ ಗುಡ್ಟಗಳಲ್ಲಿ ಹೋಗಿ ಹೊಸ ಜೀವನ ಕಂಡುಕೊಂಡ ಇವರಿಗೆ ಬದುಕುವುದೇ ದುಸ್ತರವಾಗಿತ್ತು ಆದ್ದರಿಂದ ಇವರಿಗೆ ದೇವರೊಡನೆ ಹೆಚ್ಚಿನ ಸಂಪರ್ಕ ಬಿಟ್ಟು ಹೋಗಿದೆ.
ಕಲ್ಕಿ ಅವತಾರದಿಂದಾಗಿ ಸಮಸ್ತ ವಿಶ್ವಕ್ಕೆ ಹಿಂದಿನ ನೆನಪು
ಕಲ್ಕಿ ಸಮಸ್ತ ಮನುಕುಲಕ್ಕೂ ಮೂಲ ಪುರುಷ ಆದ ಕಾರಣ ಕಲ್ಕಿ ಬಂದಾಗ ಪುನಃ ಭಾರತ ಹಾಗೂ ಹಿಂದೂ ಧರ್ಮದ ಸಂಬಂಧಗಳು ನೆನಪಾಗಲಿವೆ. ಕಲ್ಕಿ ಪ್ರಭಾವದಿಂದ ರಾಮಾಯಣ ಮಹಾಭಾರತದ ನೆನಪುಗಳು ಕೂಡ ವಿದೇಶಿಯರಿಗೆ ಬಂದು ಪುನಃ ಅನೇಕರು ಭಾರತಕ್ಕೆ ಬರಲಿದ್ದಾರೆ. ಈ ಮೂಲಕ ವಿಶ್ವದಲ್ಲಿ ಹೊಸಯುಗ ಸ್ಥಾಪನೆಗೆ ಕಲ್ಕಿ ನಾಂದಿ ಹಾಡಲಿದ್ದಾನೆ. 2025 ಮಾರ್ಚ್ ತಿಂಗಳಲ್ಲಿ ಶನಿ ಮಿನ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಅದರ ನಂತರ ಹಿಂದೂ ಧರ್ಮ ಪ್ರಬಲವಾಗಿ ಬೆಳೆಯುತ್ತದೆ ಎಂದು ಭವಿಷ್ಯ ಮಾಲಿಕ ಪುರಾಣದಲ್ಲಿ ಉಲ್ಲೇಖವಾಗಿದೆ. ಮಹಾಪರಿವರ್ತನೆಯ ವೃತ ಕೈಗೊಂಡಿರುವ ಕಲ್ಕಿ ಅವತಾರ ಹಂತ ಹಂತವಾಗಿ ವಿಶ್ವದಲ್ಲಿ ಬದಲಾವಣೆ ತಂದು ರಾಮರಾಜ್ಯ ಸ್ಥಾಪಿಸಲಿದ್ದಾನೆ.
Kali yuga 👇
https://anveshana.in/kali-yuga-ending/
kalki Avatar 👇