ಅಷ್ಟಾಂಗ ಯೋಗದ ಪರಿಚಯ

ಅಷ್ಟಾಂಗ ಎನ್ನುವುದು ಸಂಸ್ಕ್ರುತದ ಎರಡು ಶಬ್ದಗಳ ಸಂಯೋಗದಿಂದ ಆಗಿದೆ. ಅಷ್ಟ + ಅಂಗ = ಅಷ್ಟಾಂಗ. ಅಷ್ಟ ಎಂದರೆ ಎಂಟು ಹಾಗೂ ಅಂಗ ಎಂದರೆ ಭಾಗ ಎಂದು ಅರ್ಥವಾಗುತ್ತದೆ. ಆದ್ದರಿಂದ ಅಷ್ಟಾಂಗ ಯೋಗವನ್ನು ಎಂಟು ಬೇರೆ ಬೇರೆ ಪಥಗಳ ಮೂಲಕ ಏಕಕಾಲಕ್ಕೆ ಸೇರುವ ಮೋಕ್ಷದ ಗಮ್ಯವೆಂದು ಪರಿಗಣಿಸುಬಹುದು. ಅಷ್ಟಾಂಗ ಯೋಗವು ಯೋಗದ ತತ್ವಶಾಸ್ತ್ರದ ಆಧಾರ ಮೇಲೆ ಇದ್ದು ಅದನ್ನು ಕ್ರಿಪೂ 200 ರಲ್ಲಿ ಪತಂಜಲಿ ಋಷಿಗಳು ತಮ್ಮ ಯೋಗ ಸೂತ್ರ ಗ್ರಂಥದಲ್ಲಿ ಬರೆದಿದ್ದಾರೆ. ಈ ಯೋಗ ಸೂತ್ರ ಗ್ರಂಥವು ಯೋಗ ಭಂಗಿಗಳ ಮೇಲೆ, ಧ್ಯಾನದ ಮೇಲೆ, ಐಹಿಕ ಜಗತ್ತಿನಿಂದ ಆಕರ್ಶಿಸಲ್ಪಡುವ ಇಂದ್ರಿಯಗಳನ್ನು ಹೇಗೆ ನಿಗ್ರಹಿಸಬೇಕು ಎಂಬುವದರ ಮೇಲೆ ಬೆಳಕು ಚೆಲ್ಲುತ್ತದೆ. ಮನಕುಲದ ಜೀವನವನ್ನು ಉತ್ಕೃಷ್ಟಗೊಳಿಸುವ ಸಲುವಾಗಿ ಯೋಗ ಶಾಸ್ತ್ರದ ಬೇರುಗಳು ಇಡೀ ಪ್ರಪಂಚಾದ್ಯಂತ ಹಬ್ಬಿವೆ. ಪ್ರಪಂಚದ ಅನೇಕ ಬೇರೆ ಬೇರೆ ರಾಷ್ಟ್ರಗಳು ಐಹಿಕ ಜೀವನದ ಅಂತರಂಗ ಶುದ್ಧಿಗಾಗಿ ಮತ್ತು ಬಹಿರಂಗ ಶುದ್ಧಿಗಾಗಿ ಯೋಗ ಶಾಸ್ತ್ರವನ್ನು ಅನುಸರಿಸುತ್ತಿವೆ.

ಅಷ್ಟಾಂಗ ಯೋಗದ ಪರಿಚಯ

ಅಷ್ಟಾಂಗ ಯೋಗದ ಎಂಟು ಅಂಗಗಳು.

  • ಯಮ( ನೈತಿಕ ಅಂಶಗಳು)
  • ಅಹಿಂಸೆ – ಯಾವುದೇ ಜೀವಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಮಾಡತಕದ್ದಲ್ಲ.
  • ಸತ್ಯ –ವೈಯಕ್ತಿಕವಾಗಿ  ತೊಂದರೆ ಆದರೂ ಪರವಾಗಿಲ್ಲ ಅಥವಾ ನಷ್ಟವಾದರೂ ಪರವಾಗಿಲ್ಲ ಆದರೆ ಅಪ್ಪಟ ಸತ್ಯವಂತನಾಗಿ ಬದುಕಬೇಕು. ನೂರಕ್ಕೆ ನೂರರಷ್ಟು ಪ್ರಾಮಾಣಿಕ ಹಾಗೂ ಸತ್ಯವಂತನು ಆಗಿರುವ ಯೋಗ್ಯಯ ಚಿಂತನೆ ಹಾಗೂ ಅವನು ಆಡುವ ಮಾತುಗಳು ತ್ರಿಕಾಲದಲ್ಲೂ ನಿಜ ಹಾಗೂ ಸತ್ಯವೇ ಆಗುತ್ತವೆ.
  • ಆಸ್ಥೆಯ – ಕಳ್ಳತನ ಮಾಡತಕ್ಕದಲ್ಲ.
  • ಬ್ರಹ್ಮಚರ್ಯ – ಅದರ್ಶವಾದ ದಾಂಪತ್ಯ ಜೀವನ ಶೈಲಿ ಇರತಕದ್ದು.  ಪರಸ್ತ್ರೀ ಸಂಗ ಮಾಡತಕ್ಕದು ಅಲ್ಲ.
  • ನಿಯಮ (ಆತ್ಮಶುದ್ಧಿಗಾಗಿ ಹಾಕಿಕೊಂಡಿರುವ ಸೂತ್ರಗಳು)
  • ಶೌಚ – ಶುದ್ಧತೆಯಿಂದ ಇರುವುದು. ಬಾಹ್ಯ ಮತ್ತು ಆಂತರ್ಯ ಶುದ್ದತೆಯನ್ನು ಪಾಲನೆ ಮಾಡುವ ಮೂಲಕ ಬಾಹ್ಯವಾಗಿ ನಡವಳಿಕೆ, ಅಭ್ಯಾಸ, ಪರಿಸರ, ಮಾನವ ಸಂಬಂಧಗಳು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು. ಹಾಗೂ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ತು ಮತ್ಸರಗಳೆಂಬ ಆರು ವಿಧದ ಶತ್ರುಗಳನ್ನು ಉಚ್ಚಾಟನೆ ಮಾಡಿಕೊಂಡು ಆಂತರ್ಯ ಶುದ್ದಿ ಕಾಪಾಡಿಕೊಳ್ಳುವುದು.
  • ಸಂತೋಷ – ಆಸೆಯೇ ದುಃಖಕ್ಕೆ ಕಾರಣ. ಇರುವದರಲ್ಲಿ ತೃಪ್ತಿಯನ್ನು ಹೊಂದುವ ಮೂಲಕ ಮನಸ್ಸನ್ನು ಏಕಾಗ್ರತೆಯಿಂದ ಹಾಗೂ ಉತ್ಸಾಹದಿಂದ ಇಡುವುದು.
  • ತಪಸ್ಸು – ದೇಹವನ್ನು ಹತ್ತೋಟೆಯಲ್ಲಿ ಇಡುವ ಮೂಲಕ ಕಷ್ಟಗಳನ್ನು ಎದುರಿಸಬಲ್ಲ ಧೈರ್ಯ ಮಾತ್ತು ಸ್ಥೈರ್ಯ.
  • ಸ್ವಾಧ್ಯಾಯ – ಉತಮ ಗ್ರಂಥಗಳ ಅಭ್ಯಾಸ
  • ಈಶ್ವರ ಪ್ರಾಣಧಾನ – ಪರಮ ಪ್ರಭುವಿನ ಕಮಲ ಚರಣಗಳಲ್ಲಿ ಆಶ್ರಯ ಪಡೆಯುವುದು.
  • ಆಸನ (ಯೋಗಾ ಭಂಗಿಗಳು)
  • ಯೋಗ ಭಂಗಿಗಳನ್ನು ಅಭ್ಯಾಸ ಮಾಡುವುದರ ಮೂಲಕ ಮಾನಸ್ಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳುವುದು.
  • ಪ್ರಾಣಾಯಾಮ (ಪೂರಕ, ಕುಂಭಕ, ಮತ್ತು ರೇಚಕಗಳ ಅಭ್ಯಾಸ)
  • ಪೂರಕ – ಗಾಳಿಯನ್ನು ಒಳತೆಗೆದುಕ್ಕೊಳುವುದರ ಮೂಲಕ ವಾತಾವರಣದಲ್ಲಿರುವ ಚೈತನ್ಯವನ್ನು ಹೀರಿಕೊಳ್ಳುವ ಕಲೆ.
  • ಕುಂಭಕ – ಒಳ ತೆಗೆದುಕೊಂಡ ಚೈತನ್ಯವನ್ನು ತಡೆಹಿಡಿಯುವ ಕಲೆ.
  • ರೇಚಕ – ಗಾಳಿಯನ್ನು ಹೊರ ಹಾಕುವುದರ ಮೂಲಕ ಕೆಟ್ಟ ಆಲೋಚನೆಗಳನ್ನು ಉಚ್ಚಾಟನೆ ಮಾಡುವ ಕಲೆ. ಪ್ರಾಣಾಯಾಮದಿಂದ ಪ್ರಚಂಡ ಆತ್ಮಶಕ್ತಿ ಜೀವಿಗೆ ದೊರಕುತ್ತದೆ.
  • ಪ್ರತ್ಯಾಹಾರ (ಇಂದ್ರಿಯಗಳ ನಿಗ್ರಹ)
  • ಇಂದ್ರಿಯಗಳ ಮೂಲಕ ಐಹಿಕ ಸುಖಭೋಗಗಳಿಗೆ ಆಕರ್ಷಣೆಯಾಗುವ ಮನಸ್ಸನ್ನು ಸಾಧಕನು ಹತ್ತೋಟೆಯಲ್ಲಿಟ್ಟುಕೊಳ್ಳಲು ಹಾಗೂ ಆತನನ್ನು ದೈವತ್ವದೆಡೆಗೆ ಕರೆದೊಯ್ಯಲು ಪ್ರತ್ಯಾಹಾರ ಸಹಾಯಕ.
  • ಧಾರಣ ( ಏಕಾಗ್ರತೆ)
  • ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲ ಹಾಗೂ ತಿಕ್ಕಾಟಕ್ಕೊಳಗಾಗದೆ ಏಕಾಗ್ರತೆ ಸ್ಥಿತಿಯಲ್ಲಿ ಮುಂದುವರೆಯಲ್ಪಡುವುದು.
  • ಧ್ಯಾನ
  • ಮನಸ್ಸನ್ನು ಸಂಪೂರ್ಣವಾಗಿ ವಿಚಾರ ರಹಿತ ತರುವ ಕಲೆಯೇ ಧ್ಯಾನ.
  • ಸಮಾಧಿ
  • ಧ್ಯಾನದ ಸ್ಥಿತಿಗೆ ಅಡತಡೆಗಳು ಬಾರದಂತೆ ಮುಂದುವರೆದಾಗ ತಲುಪುವ ಸ್ಥಿತಿಯೇ ಸಮಾಧಿ.

Yoga for purification of mind and soul 👇

https://anveshana.in/yoga/

👇

https://www.facebook.com/share/p/1Jez5B1roV

Share.
Leave A Reply

You cannot copy content of this page

error: Content is protected !!
Exit mobile version