ಯೋಗ ಪದವು ಸಂಸ್ಕ್ರುತದ ಯುಜ್ ಎಂಬ ಪದದಿಂದ ಹುಟ್ಟಿದೆ. ಯುಜ್ ಎಂದರೆ ಜೋಡಿಸುವುದು, ಎಳೆಯುವುದು ಹಾಗೂ ಸೇರಿಸುವುದು ಎಂಬ ಅರ್ಥವನ್ನು ಕೊಡುತ್ತದೆ. ಸಾಧಕನು ಯೋಗದಿಂದ ಧ್ಯಾನದಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯ. ಇವತ್ತಿನ ಆಧುನಿಕ ಸಮಾಜದಲ್ಲಿ ಮನುಷ್ಯ ಪ್ರಾಪಂಚಿಕ ಸುಖ ಭೋಗದಲ್ಲಿ ತೇಲಿ ಮುಳುಗುತ್ತಿದ್ದಾನೆ. ಇದರಿಂದಾಗಿ ದ್ವೇಷ, ಹಿಂಸೆ, ದುರ್ಗುಣ, ಕೆಡಕು, ಸುಖ, ಸೂಲುಗೆ, ಕಳ್ಳತನ, ದುಃಖ, ಪ್ರೀತಿ-ಪ್ರೇಮ, ಶಾಶ್ವತ-ಕ್ಷಣಿಕ, ಕಾಮಪ್ರಚೋದಕ ಮನಸ್ಸು, ಕ್ರೋಧ, ಲೋಭ, ಮೋಹ, ಮತ್ಸರ ಮುಂತಾದ ಭಾವನೆಗಳಿಗೆ ಮಾನವ ದಾಸನಾಗಿದ್ದಾನೆ. ಇಂತಹ ಭಾವನೆಗಳಿಗೆ ದಾಸನಾದ ಮಾನವನಿಗೆ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಇರಲು ಸಾಧ್ಯವೇ? ದುಡ್ಡು ಒಂದು ಇದ್ರೆ ಏನನ್ನಾದರೂ ಪಡೆದುಕೊಳ್ಳಬಹುದೆಂಬ ಕಲ್ಪನೆ ನಮಗೆ ನಾವೇ ಮಾಡಿಕೊಂಡಿರುವುದು ಒಂದು ದೊಡ್ಡ ದುರದೃಷ್ಟಕರ ಸಂಗತಿ. ದುಡ್ಡಿನಿಂದ ನಾವು ಕೇವಲ ಐಹಿಕ ಸೌಕರ್ಯಗಳನ್ನು ಮಾಡಿಕೊಳ್ಳಬಹುದು. ಆದರೆ ಆದರ್ಶವಾದ ಮಾನವ ಸಂಬಂಧಗಳು, ಪರಸ್ಪರ ವಿಶ್ವಾಸ, ಆರೋಗ್ಯ, ನಿದ್ರೆ, ಮಾನಸಿಕ ಶಾಂತಿ ಮುಂತಾದ ಅಂಶಗಳನ್ನು ದುಡ್ಡಿನಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆಧುನಿಕ ಮಾನವ ಅನೇಕ ವಿರುದ್ಧ ಅಭ್ಯಾಸಗಳಿಗೆ ದಾಸನಾಗಿರುವುದರಿಂದ ಯಾವುದು ಸರಿ ಯಾವುದು ತಪ್ಪು, ಸದ್ಗುಣ- ದುರ್ಗುಣಗಳ ನಡುವಿನ ವ್ಯತ್ಯಾಸ ಹಾಗೂ ಧರ್ಮ ಮತ್ತು ಅಧರ್ಮಗಳ ನಡುವಿನ ವ್ಯತ್ಯಾಸ ಅರ್ಥವಾಗದಷ್ಟು ರೋಸಿಹೋಗಿದ್ದಾನೆ. ಜವಾಬ್ದಾರಿ ಮತ್ತು ಕರ್ತವ್ಯಪ್ರಜ್ಞೆ ದಿನಂಪ್ರತಿ ಕ್ಷೀಣಿಸುತ್ತಿದೆ. ಸಾರಥಿ ಇಲ್ಲದೆ ಇರುವ ರಥದ ಹಾಗೆ ಆಗಿದೆ ಆಧುನಿಕ ಮನುಷ್ಯನ ಚಿತ್ತ!(Consciousness) ಪರಿಸ್ಥಿತಿ ಹೀಗಿರುವಾಗ ಆದರ್ಶವಾದ ಆರೋಗ್ಯ, ಮಾನಸಿಕ  ಶಾಂತಿ ಹಾಗೂ ನೆಮ್ಮದಿ ಬರಲು ಸಾಧ್ಯವೇ ಇಲ್ಲ. (ಪ್ರಕ್ಷಿಪ್ತಗೊಂಡ ಮನಸ್ಸನ್ನು ಯೋಗವು ಶಾಂತಗೊಳಿಸುತ್ತದೆ)

ಈ ಚಿತ್ತವು(consciousness) ಮನಸ್ಸು, ಬುದ್ದಿ ಹಾಗೂ ಅಹಂಕಾರಗಳೆಂಬ ಮೂರು ಅಂಶಗಳ ಸಂಯೋಗದಿಂದ ಆಗಿರುತ್ತದೆ. ಮನಸ್ಸು, ಬುದ್ದಿ ಹಾಗೂ ಅಹಂಕಾರಗಳು ಒಟ್ಟಿಗೆ ಸೇರಿಸದಾಗ ಉದ್ಭವಿಸುವುದೇ ಚತ್ತ. ಈ ಚಿತ್ತ ಎಷ್ಟು ಶುದ್ಧವಾಗಿರುತ್ತದೋ ಅಷ್ಟು ನಮ್ಮ ನಡೆ ನುಡಿಗಳು, ತಿಳವಳಿಕೆ, ಆಲೋಚನಾ ಶಕ್ತಿಗಳು ಶುದ್ಧವಾಗಿರುತ್ತವೆ. ಮನುಷ್ಯನ ಜೀವನ ಚಕ್ರ ತಿರುಗಲಾರಂಭಿಸಿದೊಡನೆ ಅವನ ಚತ್ತಕ್ಕೆ ಅಜ್ಞಾನ, ಸ್ವಾರ್ಥ, ಅನುರಕ್ತತೆ, ದ್ವೇಷ, ಮತ್ತು ಸಾವಿನ ಭಯಗಳೆಂಬ ಅಜ್ಞಾದ ಅಡೆತಡೆಗಳು ಬಂದೊದಗುತ್ತವೆ . ಇದರಿಂದಾಗಿ ಮನುಷ್ಯನ ಚಿತ್ತವು ಕಲ್ಮಶಗೊಳ್ಳುತ್ತದೆ. ಇದರಿಂದಾಗಿ ಚತ್ತವು ಚಂಚಲಗೊಳ್ಳುತ್ತದೆ, ಮಂಕಾಗುತ್ತದೆ, ಎರಚಾಡುತ್ತದೆ, ಗೊಂದಲಕ್ಕೊಳಗಾಗುತ್ತದ, ಚಡಪಡಿಸುತ್ತದೆ, ತಾಳ್ಮೆ ಕಳೆದುಕೊಳ್ಳುತ್ತದೆ. ಚಿತ್ತವು ಬಿರುಗಾಳಿಯ ಹಾಗೆ ಚಲಿಸುವ ಸ್ವಭಾವದ್ದು.

ಪ್ರಕ್ಷಿಪ್ತಗೊಂಡ ಮನಸ್ಸನ್ನು ಯೋಗವು ಶಾಂತಗೊಳಿಸುತ್ತದೆ

ಬಿರುಗಾಳಿಯಂತೆ ಚಲಿಸುವ ಚಿತ್ತನ್ನು ಸುದ್ಧಿಕರಣಗೊಳಿಸಿ ಪ್ರಕ್ಷುಬ್ಧಗೊಂಡ ಮನಸ್ಸನ್ನು ಸ್ಥಿರ ಹಾಗೂ ಶಾಂತ ಸ್ಥಿತಿಗೆ ತರುವ ಕಲೆಯನ್ನು ಯೋಗ ಶಾಸ್ತ್ರವೆಂದು ಹೇಳಲಾಗುತ್ತದೆ. ಮನುಷ್ಯನು ತನ್ನ ಆತ್ಮವನ್ನು ಪರಮಾತ್ಮನಲ್ಲಿ ಐಕ್ಯಗೊಳಿಸುವ ಕಲೆಯೇ ಯೋಗ ಶಾಸ್ತ್ರ . ಅಂಧಕಾರದಿಂದ ಜ್ಞಾನದತ್ತ, ಕತ್ತಲೆಯಿಂದ ಬೆಳಕಿನತ್ತ ಹಾಗೂ ಮರಣದಿಂದ ಚಿರಂಜೀವತ್ವದೆಡೆಗೆ ಯೋಗವು ಸಾಧಕನನ್ನು ಕರೆದುಕೊಂಡು ಹೋಗುತ್ತದೆ. ಯೋಗ ಶಾಸ್ತ್ರವು 8 ಆಯಾಮಗಳಾಗಿ ವಿಭಜನೆ ಹೊಂದಿದೆ. ಅವು 1) ಯಮ 2)ನಿಯಮ 3)ಆಸನ 4)ಪ್ರಾಣಾಯಾಮ, 5)ಪ್ರತ್ಯಾಹಾರ 6)ಧಾರಣ 7)ಧ್ಯಾನ ಮತ್ತು 8) ಸಮಾಧಿ. ಈ 8 ಆಯಾಮಗಳ ಸಂಯೋಗದಿಂದ ಯೋಗಶಾಸ್ತ್ರ ಆಗಲ್ಪಟ್ಟಿದೆ. ಈ 8 ಆಯಾಮಗಳ ಸಂಯೋಗವೇ ಅಸ್ಟಾಂಗ ಯೋಗ. ಯೋಗದ ಪೂರ್ಣಪ್ರಮಾಣದ ಫಲಿತಾಂಶ ಪಡೆಯಬೇಕು ಅಂದ್ರೆ ಈ ಎಲ್ಲಾ 8 ಆಯಾಮಗಳನ್ನು ಸಾಧಕನು ಅನುಷ್ಠಾನಗೊಳಿಸಬೇಕು. ದುರದೃಷ್ಟಕರ ಸಂಗತಿ ಏನೆಂದರೆ ಆಸನಗಳಿಗೆ ಮಾತ್ರ ಆದ್ಯತೆ ನೀಡುವದರಿಂದ ಹೆಚ್ಚಿನ ಜನರಿಗೆ ಯೋಗದ ಪೂರ್ಣವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಚಿತ್ತವನ್ನು ಸುದ್ಧಿಕರಣಗೊಳಿಸಬೇಕು ಅಂದ್ರೆ ಈ 8 ಆಯಾಮಗಳನ್ನು ಸಾಧಕನು ಅನುಷ್ಠಾನಗೊಳಿಸಬೇಕು. ಯಮ, ನಿಯಮ, ಆಸನಗಳು ಮನಸ್ಸನ್ನು ಚುರುಕುಗೊಳಿಸುತ್ತವೆ. ಆಸನ ಮತ್ತು ಪ್ರಾಣಾಯಾಮ ಪ್ರಕ್ಷುಬ್ಧಗೊಂಡ ಮನಸ್ಸನ್ನು ಸ್ಥಿರಗೊಳುಸುತ್ತವೆ. ಪ್ರಾಣಾಯಾಮ ಮತ್ತು ಪ್ರತ್ಯಾಹಾರಗಳು ಚಿತ್ತನ್ನು ಎಚ್ಚರವಾಗಿಟ್ಟು ಅದರ ಚೈತನ್ಯವನ್ನು ಜಾಗೃತಗೊಳಿಸುತ್ತವೆ. ಧ್ಯಾನ ಹಾಗೂ ಸಮಾಧಿಗಳು ಜಾಗೃತಗೊಂಡಿರುವ ಸ್ಥಿತಿಯನ್ನು ದೃಢಗೊಳಿಸಲು ಸಹಾಯಕವಾಗಿರುತ್ತವೆ. ಈ ಮಾರ್ಗದಲ್ಲಿ ದೃಢ ಹೆಜ್ಜೆ ಇಟ್ಟಿರುವ ಸಾಧಕನಿಗೆ ಯೋಗದ ಉಚ್ಚಸ್ಥಿತಿ ಕರಗತವಾಗುತ್ತದೆ.

ಪ್ರಕ್ಷಿಪ್ತಗೊಂಡ ಮನಸ್ಸನ್ನು ಯೋಗವು ಶಾಂತಗೊಳಿಸುತ್ತದೆ

Power of sun light 👇

Share.
Leave A Reply

You cannot copy content of this page

error: Content is protected !!
Exit mobile version