ಸೂರ್ಯನು ಕ್ಷಿತಿಜದಿಂದ ಉದಯವಾಗುವ ಸಮಯದಲ್ಲಿ ಸೂರ್ಯನ ಮೊಟ್ಟ ಮೊದಲ ಕಿರಣಗಳು ಭೂಮಿಯ ತುಂಬ ಪಸರಿಸುವಾಗ ಸೂರ್ಯನ ಕಿರಣಗಳಲ್ಲಿ ಡಿ ವಿಟಮಿನ್ ಇರುತ್ತದೆ ಹಾಗೂ ಇಂತಹ ಎಳೆಬಿಸಿಲಿಗೆ ಅನೇಕ ರೋಗಗಳನ್ನು ಗುಣಪಡಿಸುವ ಪ್ರಚಂಡ ಸಾಮರ್ಥ್ಯ ಇದೆ ಎಂಬುದು ವೈಜ್ಞಾನಿಕಾಗಿ ಸಾಬೀತಾಗಿದೆ. ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಿ ಸ್ವಲ್ಪ ಹೊತ್ತಿನ ತನಕ ಕುಳಿತುಕೊಂಡರೆ ಎಂಥಹ ರೋಗಗ್ರಸ್ತ ಮನುಷ್ಯನಿಗೂ ಏನೋ ಒಂದು ಮನೋದೈಹಿಕ ಚೈತನ್ಯ ಪ್ರವಹಿಸಿದ ಅನುಭವ ಉಂಟಾಗುತ್ತದೆ. ಬೆಳ್ಳಂಬೆಳಿಗ್ಗೆ ಮೈತುಂಬ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಅರ್ಧ ಗಂಟಯವರೆಗೆ ಎಳೆ ಬಿಸಿಲಿಗೆ ಮೈಯೊಡ್ಡಿದ ನಂತರ ಸ್ನಾನ ಮಾಡಿದರೆ ಮಾನಸಿಕ ಒತ್ತಡ, ಖಿನ್ನತೆ, ಕ್ರೋಧ, ನಿರುತ್ಸಾಹ, ಕಾಲ್ಪನಿಕ ಭಯ, ಮುಂತಾದ ಮನೋರೋಗಗಳು ನಿಯಂತ್ರಣಕ್ಕೆ ಬಂದುಬಿಡುತ್ತವೆ. ಸೂರ್ಯ ಕಿರಣಗಳ ಸಹಾಯದಿಂದ ಭೂಮಿಯ ಮೇಲಿನ ಪ್ರತಿಯೊಂದು ಸಸ್ಯ ಸಮೂಹ ತಮಗೆ ಬೇಕಾದ ಆಹಾರವನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ತಯಾರು ಮಾಡಿಕೊಳ್ಳುತ್ತವೆ ಅಂದ್ರೆ ಸೂರ್ಯನ ಬೆಳಕಿನಲ್ಲಿ ನಿಗೂಢವಾದ ಒಂದು ಶಕ್ತಿ ಇದೆ ಎಂಬುದನ್ನು ನಾಸ್ತಿಕರೂ ಅಷ್ಟೇ ಅಲ್ಲ ಎಡಪಂಥೀಯ ಚಿಂತಕರು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ. ಪ್ರತಿ ದಿನ ಬೆಳ್ಳಂಬೆಳಿಗ್ಗೆ ಕಣ್ಣು ಮುಚ್ಚಿ ಸೂರ್ಯನಿಗೆ ಅಭಿಮುಖವಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ಉಸಿರಾಟ ಕ್ರಿಯೆಯನ್ನು ದೀರ್ಘಗೊಳಿಸಿದರೆ ಹದಿಹರೆಯರಲ್ಲಿ ಉಲ್ಬಣಗೊಳ್ಳುವ ಮನೋದೈಹಿಕ ರೋಗಗಳಾದ ಸ್ವಪ್ನ ದೋಷ ಹಾಗೂ ಸ್ವಪ್ನ ಸ್ಖಲನ ಎರಡು ಕ್ಷಿಪ್ರವಾಗಿ ಗುಣಮುಖ ಹೊಂದುವುದರ ಜೊತೆಗೆ ಪ್ರಕ್ಷುಬ್ಧಗೊಂಡ ಮನಸ್ಸು ಶುದ್ಧೀಕರಣವಗಿ ಏಕಾಗ್ರತೆ, ಸ್ಪಷ್ಟತೆ, ಆತ್ಮವಿಶ್ವಾಸ, ಶಾಂತಿ, ಧೈರ್ಯ, ಸ್ಥೈರ್ಯ, ಲಭಿಸುತ್ತವೆ ಹಾಗೂ ಇದರಿಂದ ಆರೋಗ್ಯ ವೃದ್ದಿಗೊಂಡು ನಿದ್ರಾಹೀನತೆ ದೂರವಾಗಿ ರಾತ್ರಿ ಸಮಯದಲ್ಲಿ ಒಳ್ಳೆಯ ನಿದ್ರೆ ಬರುತ್ತದೆ. (ರೋಗಗಳು ಮತ್ತು ಸೂರ್ಯನ ಎಳೆಬಿಸಿಲು)

ಸೂರ್ಯನ ಎಳೆಬಿಸಿಲಿನಲ್ಲಿ ರೋಗಗಳನ್ನು ಗುಣಪಡಿಸುವ ಇಂತಹ ಚಿಕಿತ್ಸಾಕಾರಕ ಶಕ್ತಿ ಇದೆ ಅಂತ ಗೊತ್ತಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳವ ಅದೃಷ್ಟ ಹೆಚ್ಚಿನ ಜನಕ್ಕೆ ಇಲ್ಲ. ಆರೋಗ್ಯ ಕಾಪಾಡಿಕೊಳ್ಳುವುದು ಕೂಡಾ ಒಂದು ದೊಡ್ಡ ತಪಸ್ಸು! ನಿಸರ್ಗ ನಿಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಆದರ್ಶ ಆರೋಗ್ಯ ಪ್ರಾಪ್ತಿಯಾಗುತ್ತದೆ. ಅಧುನಿಕ ಯುಗದಲ್ಲಿ ಮಾನವನಿಗೆ ನಿಸರ್ಗ ನಿಯಮಗಳ ಜೊತೆಗೆ ಬದುಕಲು ಸಮಯವಿಲ್ಲ, ತಾಳ್ಮೆ ಇಲ್ಲಿವೆ ಇಲ್ಲ ಹಾಗೂ ಇನ್ನು ಮುಖ್ಯವಾಗಿ ಪ್ರಕೃತಿ ನಿಯಮಗಳ ಜೊತೆಗೆ ಹೇಗೆ ಬದುಕಬೇಕು ಎಂಬ ಅರಿವು ಅಧುನಿಕ ಮಾನವನಿಗೆ ಗೊತ್ತೇ ಇಲ್ಲದಂತೆ ಆಗಿಹೋಗಿದೆ. ಸೂರ್ಯ ಅಸ್ತಂಗತವಾಗುತ್ತಿದ್ದಂತೆ ನಿಸರ್ಗ ನಿಯಮಗಳ ಪ್ರಕಾರ ಪಕ್ಷಿಗಳು ಗೂಡು ಸೇರಿ ನಿದ್ರೆ ಮಾಡಲಾರಂಭಿಸಿದರೆ ಮನುಷ್ಯನು ರಾತ್ರಿ 11 ಗಂಟೆಗೆ ಅಥವಾ 12 ಗಂಟೆಯವರೆಗೆ ಐಹಿಕ ಕಷ್ಟಗಳನ್ನು ಅಥವಾ ಸುಖಭೋಗಗಳನ್ನು ಅನುಭವಿಸಿ ಊಟಾ ಮಾಡಿ ಮಲಗುತ್ತಾನೆ ಹಾಗೂ ಬೆಳಿಗ್ಗೆ ಎದ್ದಾಗ 10 ಗಂಟೇನೋ ಅಥವಾ 11 ಗಂಟೇನೋ ಆಗಿರುತ್ತದೆ. ಇನ್ನು ಮಲ್ಟನ್ಯಾಷನಲ್ ಕಂಪನಿಯ ಉದ್ಯೋಗಿಗಳಿಗಂತೂ ಸೂರ್ಯನ ಎಳೆ ಬಿಸಿಲು ಅಂದ್ರೆ ಗೊತ್ತೇ ಇಲ್ಲದಂತೆ ಆಗಿ ಹೋಗಿದೆ. ಬೆಳ್ಳಂಬೆಳಗ್ಗೆ ಇನ್ನು ಸೂರ್ಯೋದಯವಾಗುವದಕ್ಕಿಂತ ಮೊದಲು ಪಿಕಪ್ ಇರುತ್ತದೆ ಹಾಗೂ ಸೂರ್ಯ ಅಸ್ತಂಗತವಾದ ನಂತರ ಡ್ರಿಪ್ ಇರುತ್ತದೆ. ಮಲ್ಟನ್ಯಾಷನಲ್ ಕಂಪನಿಗಳಲ್ಲಿ ನೈಸರ್ಗಿಕ ಗಾಳಿಯೂ ಇರುವುದಿಲ್ಲ ಬೆಳಕೂ ಇರುವುದಿಲ್ಲ. ಟುಬೇಲೈಟಿನ ಪ್ರಕರವಾದ ಬೆಳಕಿನ ಮಧ್ಯ ಏರ್ ಕಡೀಷನರ್ ಹೊಂದಿದ ಆಫೀಸಿನ ಕೊಠಡಿಯೊಳಗೆ ಕಂಪ್ಯೂಟರಿನ ಬ್ರೈಟ್ ಸ್ಕ್ರೀನ್ ಮುಂದೆ ಕಣ್ಣು ಪಿಳಕಿಸದೆ ಕುಳಿತು ಹತ್ತು ಹನ್ನೆರಡು ಗಂಟೆ ಕಾಲ ಕೆಲಸ ಮಾಡುವ ವ್ಯವಸ್ಥೆಗೆ ಒಳಪಟ್ಟಿದ್ದೇವೆ. ಒಟ್ಟಿನಲ್ಲಿ ಅಧುನಿಕ ಮಾನವ ತನ್ನನ್ನು ನಿಸರ್ಗಕ್ಕೆ ಎಕ್ಸ್ಪೋಸ ಮಾಡಿಕೊಳ್ಳದೆ ಸಂಪೂರ್ಣ ತಂತ್ರಜ್ಞಾನದಲ್ಲಿ ಮುಳುಗಿ ತಾನೇ ನಿರ್ಮಿಸಿದ ಕೃತಕ ಪರಿಸರದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾನೆ. ಹೀಗೆ ನಿಸರ್ಗದ ನಿಯಮಗಳನ್ನು ಉಲ್ಲಂಗಿಸುವುದರಿಂದ ಮಾನಸಿಕ ಒತ್ತಡಕ್ಕೆ ಮತ್ತು ನಿದ್ರಾಹೀನತೆಗೆ ಒಳಪಟ್ಟು ಆರೋಗ್ಯದಲ್ಲಿ ದೊಡ್ಡ ಮಟ್ಟದ ಏರು ಪೇರುಗಳಗಿ ರೋಗಗಳು ಕಾಣಿಸಿಕೊಳ್ಳುವುದು ಸಹಜ. ಹೀಗೆ ರೋಗಗಳು ಕಾಣಿಸಿಕೊಂಡಾಗ ನಾವು ಚಿಕಿತ್ಸೆಗೆಂದು ಅಧುನಿಕ ಹಾಸ್ಪಿಟಲ್ಗಳಿಗೆ ಧಾವಿಸಿ ಹೋಗಿಬಿಡುತ್ತವೆ.

ರೋಗಗಳು ಮತ್ತು ಸೂರ್ಯನ ಎಳೆಬಿಸಿಲು

ಪ್ರಕೃತಿ ನಿಯಮಗಳನ್ನು ಪಾಲಿಸುವುದರಿಂದ ಅನೇಕ ರೋಗಗಳು ತನ್ನಿಂತಾನೇ ವಾಸಿಯಾಗುತ್ತವೆ ಎಂಬ ಅರಿವು ಮಾನವನಲ್ಲಿ ಮೂಡಬೇಕು ಹಾಗೂ ಪ್ರಕೃತಿಯ ಎಲ್ಲ ನಿಯಮಗಳನ್ನು ಪಾಲಿಸುವುದನ್ನು ಮಾನವ ಕಾರ್ಯಗತಗೊಳಿಸಬೇಕು ಆಗ ರೋಗಗಳಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರಿನಲ್ಲಿ ತೊಯ್ಯಬೇಕು, ಬೇಸಿಗೆಯಲ್ಲಿ ಬೇವರಬೇಕು, ಮಧ್ಯಾನದ ಸುಡು ಬಿಸಿಲಿನ ತಾಪದಲ್ಲಿ ಗದ್ದೆಯೊಳಗೆ ಮೈ ಮತ್ತು ಮನಸ್ಸು ಎರಡನ್ನೂ ಬಗ್ಗಿಸಿ ಕೆಲಸ ಮಾಡಬೇಕು. ಚಳಿಗಾಲದಲ್ಲಿ ದೇಹಕ್ಕೆ ಚಳಿ ತಾಗಬೇಕು. ಮುಸ್ಸಂಜೆಯ ಇಂಪಾದ ಗಾಳಿ ಸುಕುವುದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ಖುಷಿ ಅನಿಸಬೇಕು. ಪ್ರತಿದಿನ ಬೆಳ್ಳಂಬೆಳಿಗ್ಗೆ ನಿಗೂಢ ಶಕ್ತಿಯ ಚಿಕಿತ್ಸಾಕಾರಿ ಗುಣವುಳ್ಳ ಎಳೆಬಿಸಿಲು ದೇಹಕ್ಕೆ ತಾಗಬೇಕು ಹಾಗೂ ಬೆಳ್ಳಂ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅಭಿಮುಖವಾಗಿ ನಿಂತು ಹರಿಯುವ ನೀರಿನಲ್ಲಿ ಅಥವಾ ಬಾವಿಯ ಸ್ನಾನ ಮಾಡಬೇಕು. ಸೂರ್ಯನ ಬೆಳಕು ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ ಇಂಡಿಗೋ (ಕಡು ನೀಲಿ) ಮತ್ತು ನೇರಳೆ ಎಂಬ ಏಳು ಬಣ್ಣಗಳ ಮಿಶ್ರಣದಿಂದ ಆಗಿದೆ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ. ಆದ್ದರಿಂದ ಸೂರ್ಯನ ಬೆಳಕಿನಲ್ಲಿ ಇರುವ ಈ ಏಳು ಬಣ್ಣಗಳು ಏಳು ಬೇರೆ ಬೇರೆ ರೀತಿಯ ಪ್ರಭಾವವನ್ನು ಇಡೀ ಭೂಮಂಡಲದ ಮೇಲೆ ಹಾಗೂ ಸಕಲ ಜೀವರಾಶಿಯ ಮೇಲೆ ಬೀರುತ್ತವೆ. ಬೆಳ್ಳಂಬೆಳಿಗ್ಗೆ ಸೂರ್ಯನಿಗೆ ಅಭಿಮುಖವಾಗಿ ನಿಂತು ಹರಿಯುವ ನೀರಿನಲ್ಲಿ ಅಥವಾ ಬಾವಿಯ ಸ್ನಾನ ಮಾಡುವಾಗ ಮೈಮೇಲೆ ಸುರಿದುಕೊಳ್ಳುವ ನೀರಿನ ಮುಖಾಂತರ ಸೂರ್ಯನ ಬೆಳಕು ಚದುರಿ ಏಳು ಬಣ್ಣಗಳಾಗಿ ಮೈಮೇಲೆ ಬೀಳುತ್ತವೆ. ಸೂರ್ಯನ ಪ್ರತಿ ಬಣ್ಣಕ್ಕೂ ಅಷ್ಟೇ ಅಲ್ಲ ನದಿಯಲ್ಲಿ ಹರಿಯುವ ನೀರಿಗೂ ಹಾಗೂ ಬಾವಿಯಲ್ಲಿನ ನೀರಿಗೂ ಅದ್ಭುತವಾದ ನಿಗೂಢ ಧನಾತ್ಮಕ ಶಕ್ತಿ ಇದೆ. ಹೀಗಾಗಿ ಪ್ರತಿನಿತ್ಯ ಸೂರ್ಯನಿಗೆ ಅಭಿಮುಖವಾಗಿ ನಿಂತು ಹರಿಯುವ ನೀರಿನಲ್ಲಿ ಅಥವಾ ಬಾವಿಯ ಸ್ನಾನ ಮಾಡಿದರೆ ಆತಾನ ಮನೋದೈಹಿಕ ಚೈತನ್ಯ ದ್ವಿಗುಣಗೊಳ್ಳುತ್ತಿದೆ, ಮನಸ್ಸು ಸೂಪರ್ ಸ್ಪೀಡ್ ಆಗುತ್ತದೆ. ಯಾವುದೇ ದೈಹಿಕ ರೋಗ ಮತ್ತು ಮಾನಸಿಕ ಒತ್ತಡ ಆತನ ಹತ್ತಿರಕ್ಕೂ ಸುಳಿಯಲಾರವು ಹಾಗೂ ಆತ ಕಟ್ಟಕಡೆಗೆ ಶತಾಯುಷಿ ಕೂಡ ಆಗಿಬಿಡುತ್ತಾನೆ.

ಕೇವಲ ಮೂರ್ನಾಲ್ಕು ಅಥವಾ ನಾಲ್ಕೈದು ದಶಕಗಳ ಹಿಂದೆ ಜನರು ಬಾವಿ, ಕೆರೆ, ಸಣ್ಣಪುಟ್ಟ ನೀರಿನ ಪ್ರವಾಹ ಹರಿಯುವಲ್ಲಿ ಹಾಗೂ ನದಿ ದಡದಲ್ಲಿ ಬೆಳ್ಳಂಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಪ್ರತಿದಿನ ಸ್ನಾನವನ್ನು ಮಾಡುತ್ತಿದ್ದರು. ಬಾವಿಯ ದಡದಲ್ಲಿ ನಿಂತು ಹಗ್ಗದ ಮೂಲಕ ಬಕೆಟ್ ಬಿಟ್ಟು, ಬಕೆಟ್ ತುಂಬಾ ಬಾವಿಯಿಂದ ನೀರನನ್ನು ಸೇದುತ್ತಾ, ನೀರು ತುಂಬಿದ ಹದಿನೈದಿಪ್ಪತ್ತು ಬಕೆಟ್ಗಳನ್ನು ತಲೆ ಮೇಲೆ ಎತ್ತಿ ನೀರನ್ನು ಮೈಮೇಲೆ ಸುರಿದುಕೊಳ್ಳುತ್ತಿದ್ದರೆ ಸೂರ್ಯನ ಎಳೆಬಿಸಿಲಿನಲ್ಲಿರುವ ಅಷ್ಟೂ ಕಿರಣಗಳು ಚದುರಿ ಏಳು ಬಣ್ಣಗಳಗಿ ಮೈಮೇಲೆ ಬಿದ್ದುಬಿದುತ್ತಿದ್ದವು. ಹೀಗೆ ಸ್ನಾನ ಮಾಡುತ್ತಿರುವುದನ್ನು ಬಾವಿಯ ಮತ್ತೊಂದು ದಡದಲ್ಲಿ ನಿಂತು ಒಂದು ನಿರ್ದಿಷ್ಟವಾದ ಕೋನದಲ್ಲಿ ನೋಡಿದಾಗ ಸೂರ್ಯನ ಎಳೆಬಿಸಿಲಿನ ಕಿರಣಗಳು ಚದುರಿ ಸೂಕ್ಷ್ಮವಾದ ಬಣ್ಣಗಳ ಛಾಯೆ ಮೈಯಿಗೆ ಅಂಟಿಕೊಂಡಿರುವ ಸಣ್ಣ ಸಣ್ಣ ನೀರಿನ ಹನಿಗಳ ಮಧ್ಯೆ ಭಾಗದಿಂದ ತೂರಿ ಬರುತ್ತಿತ್ತು. ಹೀಗೆ ಬಾವಿಯ ದಡದಲ್ಲಿ ಅಥವಾ ನದಿ ದಡದಲ್ಲಿ ಸ್ನಾನಮಾಡುವುದರಿಂದ ಸೂರ್ಯನ ಬೆಳಕಿನಲ್ಲಿ ಇರುವ ಏಳು ಬಣ್ಣಗಳು ಚದುರಿ ಮೈಮೇಲೆ ಬೀಳುತ್ತಿದ್ದವು. ಇದರಿಂದಾಗಿ ಏಳು ಬೇರೆ ಬೇರೆ ರೀತಿಯ ಧನಾತ್ಮಕ ಶಕ್ತಿಗಳ ಪ್ರಭಾವ ಶರೀರದ ಮೇಲೆ ಆಗುತಿತ್ತು ಹಾಗೂ ಏಳು ಬಣ್ಣಗಳಿಗೆ ಚಿಕಿತ್ಸಕಾರಿ ಗುಣವುವಿರುವುದರಿಂದ ದೇಹದಲ್ಲಿ ಏನಾದರೂ ರೋಗಗಳು ಇದ್ದರೆ ಉಪಶಮನವಾಗಲ್ಪಡುತ್ತಿದ್ದವು ಜೊತೆಗೆ ಆರೋಗ್ಯ ಕೂಡಾ ಸದಾ ನಿಯಂತ್ರಣದಲ್ಲಿ ಇರುತ್ತಿತ್ತು.

ಹೀಗೆ ಸೂರ್ಯನ ಬೆಳಕಿನಲ್ಲಿ ಅದ್ಭುತ ಚಿಕಿತ್ಸಾಕಾರಿ ಗುಣಗಳು ಇದ್ದರೂ ಕೂಡ ಈಗಿನ ಜೀವನ ಶೈಲಿ ಹಾಗೂ ಇವತ್ತಿನ ಕಾಲ ಎರಡು ಸಂಪೂರ್ಣವಾಗಿ ಬದಲಾವಣೆ ಆಗಿರುವ ಕಾರಣಕ್ಕೆ ಸೂರ್ಯನ ಬೆಳಕಿನಲ್ಲಿ ಇರುವ ಆ ಅದ್ಭುತ ಚಿಕಿತ್ಸಾಕಾರಿ ಗುಣಗಳನ್ನು ಸದುಪಯೋಗಪಡಿಸಿಕೊಳ್ಳುವ ಅದೃಷ್ಟ ಹೆಚ್ಚಿನ ಜನಕ್ಕೆ ಇಲ್ಲ. ಈಗಿನ ಕಾಲದಲ್ಲಿ ಏನಿದ್ರೂ ಹತ್ತು-ಹನ್ನೊಂದು ಗಂಟೆಗೆ ಸೂರ್ಯ ನಡು ನೆತ್ತಿಯ ಮೇಲೆ ಬರುತ್ತಿದ್ದಂತೆ ನಿದ್ರೆಯಿಂದ ಎದ್ದು ಎಲೆಕ್ಟ್ರಿಕ್ ಹೀಟರ್ನಿಂದ ಅಥವಾ ಸೋಲಾರ್ ವಾಟರ್ ಹೀಟರ್ನಿಂದ ಕಾಯಿಸಿದ ನೀರನ್ನು ಸ್ನಾನ ಮಾಡುತ್ತಾರೆ. ಎಲೆಕ್ಟ್ರಿಕ್ ಹೀಟರ್ನಿಂದ ಕಾಯಿಸಿದ ನೀರು ಎಲೆಕ್ಟ್ರಿಕ್ ರೇಡಿಯೇಷನ್ಗೆ ಒಳಪಟ್ಟರೆ ಸೋಲಾರ್ ವಾಟರ್ ಹೀಟರ್ನಿಂದ ಕಾಯಿಸಿದ ನೀರು ಕೆಮಿಕಲ್ ಆಕ್ಷನ್ಗೆ ಒಳಪಡುತ್ತದೆ. ಈ ಎರಡೂ ವಿಧಾನದ ಮೂಲಕ ಕಾಯಿಸಲ್ಪಟ್ಟ ನೀರು ಆರೋಗ್ಯಕ್ಕೆ ಒಳ್ಳೆಯದು ಅಲ್ಲವೇ ಅಲ್ಲ. ಕೇವಲ ಮಾತ್ರೆಗಳಿಂದ ಮತ್ತು ಇಂಜೆಕ್ಷನಗಳಿಂದ ಸಂಪೂರ್ಣವಾಗಿ ರೋಗಗಳನ್ನು ಬೇರು ಸಮೇತ ಗುಣಪಡಿಸುಲು ಸಾಧ್ಯವಾಗುವುದಾಗಿದ್ದರೆ ಡಾಕ್ಟರ್ಗಳು ಏಕೆ ಬೆಳ್ಳಬೆಳಗ್ಗೆ ಸೂರ್ಯನ ಎಳೆಬಿಸಿಲಿನಲ್ಲಿ ಒಂದು ವಾಕ್ ಹೋಗಿ, ಯೋಗ, ಪ್ರಾಣಾಯಾಮ, ಧ್ಯಾನ ಮಾಡಿ, ಮೈಂಡ್ಗೆ ಸ್ಟ್ರೆಸ್ ಮಾಡ್ಕೋಬೇಡಿ ಅಂತ ಏಕೆ ಹೇಳುತ್ತಾರೆ ಎಂಬುದನ್ನು ಒಂದು ಸತಿ ವಿಶ್ಲೇಷಣೆ ಮಾಡಿಕೊಳ್ಳಬೇಕು ಅಲ್ವಾ? ಹಾಗಂತ ಡಾಕ್ಟರನ್ನು ಕನ್ಸಲ್ಟ್ ಮಾಡಿ ಮಾತ್ರೆಗಳನ್ನು ಮತ್ತು ಇಂಜೆಕ್ಷನಗಳನ್ನು ತುಗೊಳ್ಳೆಬಾರ್ದು ಅಂತ ಅಲ್ಲವೇ ಅಲ್ಲ. ಅವಸ್ಕತೆ ಅನಿಸಿದ್ರೆ ಮತ್ತು ತುರ್ತು ಪರಿಸ್ಥಿತಿ ಇದ್ರೆ ತಕ್ಷಣ ಹಾಸ್ಪಿಟಲ್ಗಳಿಗೆ ಹೋಗಿ ಡಾಕ್ಟರನ್ನು ಕನ್ಸಲ್ಟ್ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆದರೆ ರೋಗಗಳಿಗೆ ತುತ್ತಾದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗಗಳೆ ಬರದ ಹಾಗೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಆದ್ದರಿಂದ ಆದರ್ಶವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ನಿಸರ್ಗವನ್ನು ಅವಲಂಬಿಸಿ. ಹೆಚ್ಚಿನ ಸಮಯವನ್ನು ನಿಸರ್ಗದ ಮಡಿಲಿನಲ್ಲಿ ಕಳೆಯಲು ಪ್ರಯತ್ನಿಸಿ. ನಿಸರ್ಗದ ಮಡಿಲಿನಲ್ಲಿ ನಮಗೋಸ್ಕರ ಎಲ್ಲವೂ ಉಂಟು ಆದರೆ ತಂತ್ರಜ್ಞಾನದಿಂದ ಕಳಚಿಕೊಂಡು ಜೀವನ ಶೈಲಿಯನ್ನು ಬದಲಾಯಿಸಿಕೊಂಡು ನಿಸರ್ಗದ ಮಡಿಲಿನಲ್ಲಿ ಬೆರೆತು ಬಾಳಬೇಕು. ಆಗ ಸುಖ, ಶಾಂತಿ, ನೆಮ್ಮದಿ, ಉತ್ಸಾಹ, ಆರೋಗ್ಯ, ಆಯುಷ್ಯ, ಎಲ್ಲವೂ ಲಭಿಸುತ್ತವೆ.

Health 👇

https://anveshana.in/stress-and-health/

 

Health 👇

https://www.facebook.com/share/p/19bNDem8W3/

Share.
Leave A Reply

You cannot copy content of this page

error: Content is protected !!
Exit mobile version