ಮೂಲತಃ ಸೊಗಲ ಸೋಮೇಶ್ವರನನ್ನು ರಾವಣನ ಬಂಟರು ಸ್ಥಾಪಿಸಿದ್ದು. ಇನ್ನೂ ಸೊಗಲ ಕ್ಷೇತ್ರವು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಹಾಗೂ ದೈವೀ ಶಕ್ತಿಗಳ ಸ್ಥಳ. ಇದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಹೋಬಳಿಯಿಂದ 8 ಕಿಲೋಮೀಟರ್ ದೂರದಲ್ಲಿ ಇರುವ ಒಂದು ಪುಣ್ಯ ಕ್ಷೇತ್ರ. ಇದು ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ಶಿಕ್ಷಣ ಕೇಂದ್ರವಾಗಿತ್ತು. ಈ ಸೊಗಲ ಕ್ಷೇತ್ರದಲ್ಲಿ ಪ್ರಾಚೀನ ಕಾಲದಲ್ಲಿ ಸೊಗಲ ಎಂಬ ಋಷಿಮುನಿ ವಾಸವಾಗಿದ್ದರು. ಈ ಕಾರಣಕ್ಕಾಗಿ ಈ ಕ್ಷೇತ್ರಕ್ಕೆ ಸೊಗಲ ಎಂಬ ಹೆಸರು ಬಂದಿತು. ಈ ಕ್ಷೇತ್ರವನ್ನು ರಾಷ್ಟ್ರಕೂಟರು 6ರಿಂದ 10ನೇ ಶತಮಾನದಲ್ಲಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಸೊಗಲ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳಿದ್ದು ಇದರಲ್ಲಿ ಸೋಮೇಶ್ವರ ದೇವಸ್ಥಾನ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.

 

ದಟ್ಟವಾದ ಕಾಡು ಹಾಗೂ ಪರ್ವತದಲ್ಲಿ ಈ ಸೋಮೇಶ್ವರ ದೇವಸ್ಥಾನ ಇದೆ. ಇಲ್ಲಿನ ಪ್ರಕೃತಿ ಸೌಂದರ್ಯವು ಜನರನ್ನು ತೀವ್ರವಾಗಿ ಆಕರ್ಷಿಸುತ್ತದೆ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ನಿರಂತರವಾಗಿ ಜನರು ಪ್ರತಿನಿತ್ಯ ಸೋಮೇಶ್ವರನ ದರ್ಶನ ಪಡೆಯಲು ಬರುತ್ತಿರುತ್ತಾರೆ. ಇಲ್ಲಿ ಒಂದು ನೀರಿನ ಪ್ರವಾಹ ಇದ್ದು ಅದು ಎರಡು ಸಣ್ಣ ಜಲಪಾತಗಳಾಗಿ ಧುಮುಕುತ್ತದೆ. ಪ್ರತಿನಿತ್ಯ ಬರುವ ಪ್ರೇಕ್ಷಕರು ಈ ಜಲಪಾತದಲ್ಲಿ ಸ್ನಾನ ಮಾಡಿ ಸೊಗಲ ಸೋಮೇಶ್ವರನ ದರ್ಶನವನ್ನು ಪಡೆಯುತ್ತಾರೆ. ದಟ್ಟವಾದ ಕಾಡಿನ ಮಧ್ಯೆ ಭಾಗದಲ್ಲಿ ನೀರಿನ ಪ್ರವಾಹವು ಹುಟ್ಟಿ ಮುಂದೆ ಜಲಪಾತವಾಗಿ ಹರಿದು ಬರುವುದರಿಂದ ಅನೇಕ ವನಸ್ಪತಿಗಳ ಮಿಶ್ರಣ ನೀರಿನಲ್ಲಿ ಆಗುತ್ತದೆ. ಇದರಿಂದಾಗಿ ಈ ಜಲಪಾತದ ಕೆಳಗೆ ನಿಂತು ಸ್ನಾನ ಮಾಡುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಅನ್ನೋ ನಂಬಿಕೆ ಪ್ರಾಚೀನ ಕಾಲದಿಂದಲೂ ಜನರಲ್ಲಿ ಇದೆ. ಚರ್ಮರೋಗ ಉಳ್ಳವರು ಈ ಜಲಪಾತದ ಕೆಳಗಡೆ ನಿಂತು ಸ್ನಾನ ಮಾಡಿ ಸೊಗಲ ಸೋಮೇಶ್ವರ ದರ್ಶನ ಪಡೆದರೆ ಅಂತವರಿಗೆ ಚರ್ಮರೋಗ ವಾಸಿಯಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿ ಎರಡು ಜೋಡಿ ಶಿವನ ವಿಗ್ರಹಗಳಿದ್ದು ಅದರಲ್ಲಿ ಒಂದು ಜಲಪಾತದ ಕಡೆ ನೋಡುತ್ತದೆ. ಬೇಸಿಗೆ, ಮಳೆಗಾಲ, ಚಳಿಗಾಲ, ಎಂಬ ತಾರತಮ್ಯವಿಲ್ಲದೆ ಜಲಪಾತ ವರ್ಷವಿಡಿ ತುಂಬಿ ಹರಿಯುತ್ತಿತ್ತು. ಪ್ರಪಂಚ ಹುಟ್ಟಿದಾಗಿಂದಲೂ ಇಲ್ಲಿ ನೀರು ಹರಿಯುತ್ತದೆ.  ಆದರೆ ಇತ್ತೀಚಿನ ದಿನಗಳಲ್ಲಿ ಜಲಪಾತದಲ್ಲಿ ನೀರು ಸ್ವಲ್ಪ ಕಡಿಮೆಯಾಗುತ್ತಿದೆ. ಇದು ಒಂದು ದೊಡ್ಡ ದುರದೃಷ್ಟಕರ ಸಂಗತಿ. ಪ್ರಪಂಚ ಹುಟ್ಟಿದಾಗಿಂದಲೂ ಹರಿಯುತ್ತಿರುವ ನೀರು ಇವತ್ತು ಕ್ಷೀಣಿಸಿದೆ ಅಂದ್ರೆ ಇದು ಮುಂದಿನ ಕೆಡಗಾಲು ಸೂಚಿಸುತ್ತದೆ.

ಸೊಗಲ ಸೋಮೇಶ್ವರನನ್ನು ರಾವಣನ ಬಂಟರು ಸ್ಥಾಪಿಸಿದ್ದು.

ಇಲ್ಲಿ ಶಿವ ಮತ್ತು ಪಾರ್ವತಿಯ ಸುಂದರವಾದ ವಿಗ್ರಹಗಳಿದ್ದು ಅವರು ವಿವಾಹವಾದ ಸ್ಥಳ ಎಂದು ಹೇಳಲಾಗುತ್ತದೆ. ಇಲ್ಲಿ ಅವಿವಾಹಿತ ಹೆಣ್ಣುಮಕ್ಕಳು ಭಕ್ತಿಯಿಂದ ಪಾರ್ವತಿ ದೇವಿಯ ವಿಗ್ರಹಕ್ಕೆ ಪೂಜೆ ಮಾಡಿದರೆ ಅವರಿಗೆ ಕಂಕಣ ಭಾಗ್ಯ ಕೂಡಿ ಬರುವುದು ಎಂಬ ನಂಬಿಕೆ ಇದೆ. ಈ ಪುಣ್ಯ ಕ್ಷೇತ್ರವು ದಕ್ಷಿಣ ಕಾಶಿ ಎಂದು ಕರೆಯಲ್ಪಡುತ್ತದೆ. ಇಲ್ಲಿರುವ ಸೋಮೇಶ್ವರನನ್ನು ರಾವಣನ ಬಂಟರಾದ ಮಾಲಿ ಮತ್ತು ಸುಮಾಲಿ ಎಂಬ ರಾಕ್ಷಸರು ಸ್ಥಾಪಿಸಿದರು ಎಂದು ಇಲ್ಲಿರುವ ಶಿಲಾಲೇಖಗಳು ಹೇಳುತ್ತವೆ. ಇಲ್ಲಿ ಸೋಮೇಶ್ವರನ ದೇವಾಲಯದ ಜೊತೆಗೆ ಅಜ್ಜಪ್ಪನ ಗುಡಿ ಹಾಗೂ ಸೂರ್ಯ, ಚಂದ್ರನ ದೇವಾಲಯಗಳಿವೆ. ಇಲ್ಲಿ ಬೆಟ್ಟಿ ಕೊಡುವ ಭಕ್ತರ ಸಲುವಾಗಿ ಜಿಂಕೆ ವನವನ್ನು ನಿರ್ಮಿಸಲಾಗಿದೆ. ವನದಲ್ಲಿ ಅನೇಕ ಜಿಂಕೆಗಳಿದ್ದು ಇವು ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುತ್ತವೆ ಹಾಗೂ ಪ್ರೇಕ್ಷಕರನ್ನು ಆಕರ್ಷಿಸುತ್ತವೆ.

ಈ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಸಾಧು-ಸಂತರು, ಸಿದ್ಧಿಪುರುಷರು ಪ್ರಾಚೀನ ಕಾಲದಲ್ಲಿ ತಪಸ್ಸುಗಳನ್ನು ಮಾಡಿದ್ದಾರೆ. 1969ರ ದಶಕದಲ್ಲಿ ಇಲ್ಲಿ ಮಾತಾನಂದ ಎಂಬ ಒಬ್ಬ ತಪಸ್ವಿ ನೆಲೆಸಿದ್ದನು. ಮನುಷ್ಯನಿಗೆ ಕಚ್ಚಿದ ಹಾವಿನ ವಿಷವನ್ನು ತೆಗೆಯುವುದರಿಂದ ಹಿಡಿದು ಅನೇಕ ರಹಸ್ಯ ವಿದ್ಯೆಗಳು ಈತನಿಗೆ ಸಿದ್ಧಿಸಿದ್ದವು ಎಂದು ಸ್ಥಳೀಯರು ಹೇಳುತ್ತಾರೆ. ಜಿಂಕೆ ವನವನ್ನು ದಾಟಿಕೊಂಡು ಸ್ವಲ್ಪ ಮುಂದಕ್ಕೆ ಹೋದರೆ ಎಡಗಡೆಗೆ ಇರುವ ಆಶ್ರಮದಲ್ಲಿ ಇವತ್ತಿಗೂ ಈ ತಪಸ್ವಿಯ ಫೋಟೋ ಕಾಣಸಿಗುತ್ತದೆ. ಆಹಾ! ಮುಖದ ಮೇಲೆ ಅದೆಂತಹ ತೇಜಸ್ಸು, ಕಳೆ, ಶುಭ್ರವಾದ ಹೊಳಪು. ಕಲ್ಪನೆಗೆ ಏಟುಕದ ದೈಹಿಕ ವ್ಯಕ್ತಿತ್ವ. ಇಂಥ ದೊಡ್ಡ ದೊಡ್ಡ ತಪಸ್ವಿಗಳು ಇವತ್ತು ನಮಗೆಲ್ಲ ಕೇವಲ ನೆನಪು ಮಾತ್ರ.

ನೈಸರ್ಗಿಕ ಬೆಟ್ಟಗುಡ್ಡಗಳಿಂದ ಹಾಗೂ ಹಚ್ಚುಹಸಿರಾದ ಗಿಡಮರಗಳಿಂದ ಕುಡಿದ ಸೊಗಲ ಕ್ಷೇತ್ರದ ಪ್ರಕೃತಿ ಸೌಂದರ್ಯವನ್ನು ವರ್ಣಿಸಲು ಶಬ್ದಗಳಲ್ಲಿ. ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕು ಅಂದ್ರೆ ಸೊಗಲ ಕ್ಷೇತ್ರಕ್ಕೆ ಹೋಗಿ ಜಲಪಾತ ಸ್ನಾನವನ್ನು ಮಾಡಿ ಸೋಮೇಶ್ವರನ ದರ್ಶನ ಪಡೆಯುಬೇಕು. ಆಗ ಮಾನಸಿಕ ಒತ್ತಡ, ಖಿನ್ನತೆ, ಉದ್ವೇಗ ಕಡಿಮೆ ಆಗಿ ಏನೋ ಒಂದು ನೆಮ್ಮದಿ, ಉತ್ಸಾಹ, ಶಕ್ತಿ, ಚೈತನ್ಯ ಮನೋ ದೈಹಿಕವಾಗಿ ಬಂದು ಬಿಡುತ್ತವೆ.

Law of Karma 👇

ಕರ್ಮಸಿದ್ಧಾಂತ ಹಾಗೂ ಮನುಷ್ಯ ಜನ್ಮ

👇

https://www.facebook.com/share/p/15aph8xLyN/

Share.
Leave A Reply

You cannot copy content of this page

error: Content is protected !!
Exit mobile version