ಮನೆ ಕಟ್ಟಲಿಕ್ಕೆ ವೈಜ್ಞಾನಿಕ ವಾಸ್ತು ಸಲಹೆಗಳು. ಐಹಿಕ ಪ್ರಪಂಚದಲ್ಲಿ ಪ್ರತಿಯೊಂದು ವಸ್ತು ಹಾಗೂ ಪ್ರಾಣಿ-ಪಕ್ಷಿ ಮತ್ತು ಮನುಷ್ಯ ಜೀವಿ ಪಂಚಮಹಾಭೂತಗಳಾದ ನೀರು, ಗಾಳಿ, ಬೆಳಕು, ಆಕಾಶ ಮತ್ತು ಭೂಮಿಯಿಂದ ಆಗಲ್ಪಟ್ಟಿವೆ. ಈ ಪಂಚಮಹಾಭೂತಗಳ, ಪ್ರಕೃತಿಯ ಮತ್ತು ಮನುಷ್ಯನ ನಡುವೆ ಒಂದು ಪರಸ್ಪರ ಸಂಬಂಧ ಇರುವುದನ್ನು ಅಲ್ಲಗಳಿಯುವಂತಿಲ್ಲ. ಈ ಪಂಚಮಹಾಭೂತಗಳು ನಿಸರ್ಗದಲ್ಲಿ ಅಥವಾ ನಾವು ವಾಸಿಸುವ ನಿವೇಶನದಲ್ಲಿ ಸರಿಯಾಗಿ ಹಂಚಿಕೆಯಾಗಲ್ಪಡಬೇಕು. ಇಲ್ಲದಿದ್ದರೆ ತದ್ವಿರುದ್ಧ ಪ್ರಭಾವ ಆಗಲ್ಪಡುತ್ತದೆ. ಈ ಪಂಚಮಹಾಭೂತಗಳನ್ನು ನಿವೇಶನದಲ್ಲಿ ಅಥವಾ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡುವಂತಹ ತಂತ್ರಜ್ಞಾನವೇ ವಾಸ್ತುಶಾಸ್ತ್ರ. ಅಥವಾ ಮನೆಯಲ್ಲಿ ಧನಾತ್ಮಕ ಶಕ್ತಿಗಳ ಸಂಚಲನ ಉಂಟು ಮಾಡುವ ವಿಧಾನವೇ ವಾಸ್ತುಶಾಸ್ತ್ರ.

19 ನೇ ಶತಮಾನದಲ್ಲಿ ಇಡೀ ಜಗತ್ತು ಅನೇಕ ಯುದ್ಧಗಳಲ್ಲಿ ಮತ್ತು ಕೈಗಾರಿಕಾ ಕ್ರಾಂತಿಯಲ್ಲಿ ತೊಡಗಿತು ಇದರಿಂದ ಆಧ್ಯಾತ್ಮಿಕ ಜ್ಞಾನ ಮತ್ತು ಪ್ರಾಚೀನ ಕಾಲದ ಋಷಿಗಳು ಮನಕುಲಕ್ಕೆ ಪರಿಚಯಿಸಿದ ಹಾಗೂ ವಿಜ್ಞಾನಕ್ಕೆ ನಿಲುಕದ ಅನೇಕ ಗೌಪ್ಯ ವಿದ್ಯೆಗಳು ನಿಧಾನವಾಗಿ ಕಣ್ಮರೆಯಾಗಲು ಆರಂಭವಾದವು. ಎರಡನೇ ಮಾಹಾಯುದ್ಧ ಮುಗಿದ ಮೇಲೆ ಮನುಷ್ಯ ಆಧುನಿಕತೆಯ ಕಡೆಗೆ ಆಕರ್ಶಿಸಲ್ಪಟ್ಟ ಮತ್ತು ಹೊಸ ಹೊಸ ಸಂಶೋಧನೆಗಳ ಕಡೆಗೆ ಗಮನ ಹರಿಸಿದ. ಅಷ್ಟೇ ಅಲ್ಲ ಮನೆಗಳನ್ನು ಕಟ್ಟುವ ವಿಧಾನಗಳಲ್ಲೂ ತೀವ್ರವಾಗಿ ಬದಲಾವಣೆಗಳಾದವು. ವಾಸ್ತುಶಾಸ್ತ್ರದ ಎಲ್ಲ ನಿಯಮಗಳನ್ನು ಮಾನವ ಗಾಳಿಗೆ ತೂರಿ ಅತಿ ಕಡಿಮೆ ಸ್ಥಳದಲ್ಲಿ ಅತಿ ಹೆಚ್ಚಿನ ಸೌಲಭ್ಯಗಳನ್ನು ಜೋಡಿಸುವ ವಿಧಾನದಲ್ಲಿ ಮನೆಗಳನ್ನು ಕಟ್ಟಲಾರಂಭಿಸಿದ. ಮನೆಗಳು ಅತ್ಯಂತ ಸುಂದರವಾಗಿ ಕಾಣಬೇಕೆಂಬ ದ್ರಷ್ಟಿಕೋನದಿಂದ ವೃತ್ತಾಕಾರವಾಗಿ, ತ್ರಿಕೋನಾಕಾರ, ಷಡ್ಭುಜಾಕೃತಿಯ, ಅಷ್ಟಭುಜಾಕೃತಿಯ, ಗಗನಚುಂಬಿಯ ಹಾಗೂ ವಿಚಿತ್ರ ವಿನ್ಯಾಸವುಳ್ಳ ಕಟ್ಟಡಗಳನ್ನು ಕಟ್ಟಲು ಆರಂಭಿಸಿದ.

ಹೀಗೆ ವಾಸ್ತುಶಾಸ್ತ್ರದ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಿದ ಮನೆಗಳಲ್ಲಿ ವಾಸಿಸುವ ನಿವಾಸಿಗಳ ಮೇಲೆ ಪಂಚಮಹಾಭೂತಗಳ ತದ್ವಿರುದ್ಧ ಪ್ರಭಾಗಳು ಆಗಲಾರಂಭಿಸಿದವು. ಇದರಿಂದಾಗಿ ನಿವಾಸಿಗಳು ಕಷ್ಟ-ನಷ್ಟ, ಅನಾರೋಗ್ಯ, ಆರ್ಥಿಕ ನಷ್ಟ, ಮಾನಸಿಕ ಒತ್ತಡ, ಕಿನ್ನತೆ, ಅಕಾಲಿಕ ಮರಣ, ದುಃಖ, ಮುಂತಾದ ಋಣಾತ್ಮಕ ಅಂಶಗಳನ್ನು ಅನುಭವಿಸುವ ಸ್ಥಿತಿ ಆರಂಭವಾಯಿತು. ಇಲ್ಲಿ ಒಂದು ಉದಾಹರಣೆ ಕೊಡಲ್ಪಡಲಾಗುತ್ತದೆ. ಏನೆಂದ್ರೆ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಕಾಲಿ ಸ್ಥಳವಿಲ್ಲದೆ ಇರುವ ಅಥವಾ ಪೂರ್ವ ಮತ್ತು ಉತ್ತರದ ದಿಕ್ಕು ಸಂಪೂರ್ಣವಾಗಿ ಮುಚ್ಚಿಹೋಗಿರುವ ಮನೆಯಲ್ಲಿರುವ ನಿವಾಸಿಗಳ ಕುರಿತು ಅಧ್ಯಯನ ನಡೆಸಿದಾಗ ಆ ನಿವಾಸಿಗಳು ಹೆಚ್ಚು ಮಾನಸಿಕ ಒತ್ತಡ ಮತ್ತು ದೈಹಿಕ ಅನಾರೋಗ್ಯ ಹೊಂದಿರುತ್ತಾರೆ. ಇದು ಏಕೆ ಹೀಗೆ ಆಗುತ್ತದೆ ಎಂದು ವೈಜ್ಞಾನಿಕ ದ್ರಷ್ಟಿಕೋನದಿಂದ ನೋಡಿದಾಗ ತಿಳಿದು ಬಂದದ್ದು ಏನೆಂದ್ರೆ ಪೂರ್ವ ದಿಕ್ಕಿನಲ್ಲಿ ಕಾಲಿ ಸ್ಥಳವಿಲ್ಲದ ಅಥವಾ ಮುಚ್ಚಿಹೋದ ಮನೆಗಳಲ್ಲಿ ಸೂರ್ಯ ಬೆಳಕಿನ ಹಾಗೂ ಉತ್ತರ ದಿಕ್ಕಿನಲ್ಲಿ ಸ್ಥಳವಿಲ್ಲದ ಅಥವಾ ಉತ್ತರ ಮುಚ್ಚಿದ ಮನೆಗಳಲ್ಲಿ ಕಾಸ್ಮಿಕ್ ಕಿರಣಗಳ ಕೊರತೆ ಉಂಟಾಗುತ್ತದೆ.

ಸೂರ್ಯನ ಬೆಳಕು 7 ಬಣ್ಣಗಳ (Violet, Indigo, Blue, Orange, Green, Yellow, Red) ಮಿಶ್ರಣದಿಂದ ಆದ ಸಂಗತಿ ನಮಗೆಲ್ಲರಿಗೂ ಗೊತ್ತು. ಸೂರ್ಯನ ಬೆಳಕಿನಲ್ಲಿರುವ 7 ಬಣ್ಣಗಳು ಭೂಮಿ ಮೇಲೆ ಮತ್ತು ಜೀವರಾಶಿಗಳ ಮೇಲೆ 7 ಬೇರೆಬೇರೆ ಪ್ರಭಾವಗಳನ್ನು ಮಾಡುತ್ತವೆ. ಸೂರ್ಯನ ಬೆಳಕಿನಲ್ಲಿ ‘D’ ವಿಟಮಿನ್ ಇರುವ ಸಂಗತಿ ನಮಗೆಲ್ಲರಿಗೂ ವೈಜ್ಞಾನಿಕವಾಗಿ ತಿಳಿದುಬಂದಿದೆ ಅಷ್ಟೇ ಅಲ್ಲ ಸೂರ್ಯನ ಬೆಳಕಿನಿಂದ ಅನೇಕ ರೋಗಗಳು ಗುಣವಾಗುತ್ತವೆ ಎಂಬ ಸಂಗತಿಯು ನಮಗೆ ಸೌರ ಚಿಕಿತ್ಸಾ ವಿಧಾನದಿಂದ ತಿಳಿದುಬಂದಿದೆ. ಆದ್ದರಿಂದ ಸೂರ್ಯನ ಬೆಳಕಿನಲ್ಲಿ ಒಂದು ವಿಶೇಷವಾದ ಶಕ್ತಿ ಇದೆ ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಹಾಗೂ ಕಾಸ್ಮಿಕ್ ಕಿರಣಗಳಿಂದ ನಮಗೆ ಜೈವಿಕ ಶಕ್ತಿ ಸಿಗುತ್ತದೆ ಎಂದು ವೈಜ್ಞಾನಿಕವಾಗಿ ಧೃಡಪಟ್ಟಿದೆ.

ಆದ್ದರಿಂದ ಪೂರ್ವ ಮತ್ತು ಉತ್ತರದ ಭಾಗ ಕಾಲಿ ಇಲ್ಲದ ಅಥವಾ ಮುಚ್ಚಿಹೋಗಿರುವ ಮನೆಗಳಲ್ಲಿ ಸೂರ್ಯನ ಬೆಳಕಿನ ಮತ್ತು ಕಾಸ್ಮಿಕ್ ಕಿರಣಗಳ ಕೊರತೆ ಉಂಟಾಗಿ ನಿವಾಸಿಗಳ ಮೇಲೆ ಋಣಾತ್ಮಕ ಪ್ರಭಾವಗಳು ಆಗಿ ದೈಹಿಕ ಅನಾರೋಗ್ಯ ಮತ್ತು ಮಾನಸ್ಸಿಕ ಒತ್ತಡ ಉಂಟಾಗುವದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ನಾಸ್ತಿಕರು ಇದರ ಕುರಿತು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿಕೊಳ್ಳಬಹುದು. ಗಾಳಿ, ಸೂರ್ಯನ ಬೆಳಕು, ಗಿಡ ಮರಗಳು, ಶಬ್ದ, ನೀರು, ಕಟ್ಟಿಗೆ, ಬೆಂಕಿ, ಸ್ಮಶಾನ ಭೂಮಿ, ಕಾಸ್ಮಿಕ್ ಶಕ್ತಿ, ಭೂಮಿಯ ಕಾಂತ ಶಕ್ತಿ, ಭೂಮಿಯ ಕೈನೆಟಿಕ್ ಶಕ್ತಿ, ದಿಕ್ಕುಗಳು, ಅಕ್ಷಾಂಶ ಮತ್ತು ರೇಖಾಂಶ, ಮುಂತಾದ ಅಂಶಗಳು ನಿರಂತರವಾಗಿ ಮನುಷ್ಯನ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪ್ರಭಾವವನ್ನು ಮಾಡುತ್ತಾ ಇರುತ್ತವೆ. ಇಂಥ ಅಂಶಗಳು ಹೇಗೆ ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ ಎಂದು ತಿಳಿಯಲು ವಾಸ್ತು ಶಾಸ್ತ್ರವನ್ನು ಅಧ್ಯಾಯ ಮಾಡಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಬೇಕಾಗುತ್ತದೆ. ಆಗ ಮಾತ್ರ ನಾಸ್ತಿಕರು ಆಸ್ತಿಕರು ಆಗಲು ಸಾಧ್ಯ.

ಮನೆಯ ವಾಸ್ತು ಎಲ್ಲವೂ ಸರಿಯಾಗಿ ಇದ್ದರೆ ನಾವು ಕೋಟ್ಯಾಧಿಪಗಳಾಗಿ ಸುಖ, ಶಾಂತಿ, ಸಂತೋಷ, ಆರೋಗ್ಯ, ಅಭಿವೃದ್ಧಿಗಳು ಲಭಿಸುತ್ತವೆ ಅಂತ ಅಲ್ಲ. ನಾವು ಮಾಡುವ ಕರ್ಮವೂ ಕೂಡ ನಮ್ಮ ಜೀವನ ಮೇಲೆ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರು ಕರ್ಮಸಿದ್ಧಾಂತಕ್ಕೆ ಅನುಗುಣವಾಗಿ ಒಳ್ಳೆಯ ಕೆಲಸ ಮಾಡಬೇಕಾಗುತ್ತದೆ. ಹಾಗೂ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕಾಗುತ್ತದೆ. ಆಗ ಮಾತ್ರ ವಾಸ್ತುಶಾಸ್ತ್ರದ ತತ್ವಗಳಿಗೆ ಅನುಗುಣವಾಗಿ ಕಟ್ಟಿದ ಮನೆಯಲ್ಲಿರುವ ನಿವಾಸಿಗಳು ವಾಸ್ತುವಿನ ಸಂಪೂರ್ಣ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಅಧರ್ಮಿಯು, ಕೆಟ್ಟ ಕೆಲಸಗಳನ್ನು ಮಾಡುವವನು, ವೆಂಚಕನು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವವನು, ಅಪ್ರಾಮಾಣಿಕನು ಎಷ್ಟೇ ಶಕ್ತಿಯುತವಾದ ವಾಸ್ತು ಹೊದಿಂದ ಮನೆಯಲ್ಲಿ ಇರುತ್ತಾನೆ ಅಂದರೂ ಎಳ್ಳಷ್ಟು ಪ್ರಯೋಜನವಿಲ್ಲ.

ಪ್ರಾಚೀನ ಕಾಲದ ಋಷಿಗಳು ವಾಸ್ತುಶಾಸ್ತ್ರವನ್ನು ಮನಕುಲಕ್ಕೆ ಪರಿಚಯಿಸಿದರು. ಅಗ್ನಿಪುರಾಣ, ವಾಯುಪುರಾಣ, ಸ್ಕಂದ ಪುರಾಣ, ಗರುಡ ಪುರಾಣ, ಮತ್ಸ್ಯ ಪುರಾಣ, ಸೂರ್ಯ ಪುರಾಣ ಈ ಗ್ರಂಥಗಳಲ್ಲಿ ವಾಸ್ತುಶಾಸ್ತ್ರದ ವಿವರವಾದ ಉಲ್ಲೇಖವಿದೆ. ಅಷ್ಟೇ ಅಲ್ಲ ಯಜುರ್ವೇದವೂ ಕೂಡ ಪ್ರಾಚೀನ ಕಾಲದ ವಾಸ್ತುಶಾಸ್ತ್ರದ ಗ್ರಂಥ. ಇಂತಹ ಪ್ರಾಚೀನ ಗ್ರಂಥಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿದಾಗ ಎಂತಹ ನಾಸ್ತಿಕನು ಆಸ್ತಿಕನ ಆಗುವುದರಲ್ಲಿ ಎರಡು ಮಾತಿಲ್ಲ. ನಾಸ್ತಿಕನು ಆಸ್ತಿಕನು ಆದರೂ ಕೂಡ ಆತ ವಾಸ್ತುವಿನ ಫಲಿತಾಂಶವನ್ನು ಪಡೆಯಬೇಕೆಂದರೆ ಒಳ್ಳೆಯ ಕರ್ಮಗಳನ್ನು ಮಾಡಿರಬೇಕಾಗುತ್ತದೆ. ಕೇವಲ ಸುದೈವಿಗಳು ಮಾತ್ರ ವಾಸ್ತುವಿನ ಸಂಪೂರ್ಣ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ವಾಸ್ತುವಿನ ಸಂಪೂರ್ಣ ಫಲಿತಾಂಶವನ್ನು ಪಡೆಯಬೇಕೆಂದರೆ ಕರ್ಮವೂ ಕೂಡ ಮಹತ್ವದ ಪಾತ್ರವನ್ನು ವಹಿಸುತ್ತದೆ.

Scientific Based Vastu 👇

ವಾಸ್ತು ವೈಜ್ಞಾನಿಕವಾದದ್ದ. ಸಮೃದ್ಧಿಗಾಗಿಯೇ ವಾಸ್ತು.

Vimana shastra 👇

https://www.facebook.com/484882461916912/posts/1221341231604361/

Share.
Leave A Reply

You cannot copy content of this page

error: Content is protected !!
Anveshana
Exit mobile version